ಟೆಸ್ಲಾ ಕಂಪನಿಯ ಮೂಲಕ ಕ್ರಾಂತಿ ಸೃಷ್ಟಿಸುತ್ತಿರುವ ಬಿಲಿಯನೇರ್ ಎಲಾನ್ ಮಸ್ಕ್ ಅವರ ಹೊಸಾ ಗರ್ಲ್‌ಫ್ರೆಂಡ್ ಯಾರು ಅಂತ ನಿಮಗೆ ತಿಳಿದಿದೆಯಾ?
ಬಿಲಿಯನೇರ್ ಉದ್ಯಮಿ, ಟೆಸ್ಲಾ (Tesla) ಮತ್ತು ಸ್ಪೇಸ್‌ಎಕ್ಸ್‌ನ (SpaceX)ಮಾಲೀಕ ಎಲೋನ್ ಮಸ್ಕ್ (Elon Musk) ಅವರ ಜೀವನ ವರ್ಣರಂಜಿತವಾಗಿದೆ. ಅದರಲ್ಲಿ ಈಗ ಹೊಸ ಸೇರ್ಪಡೆ ಎಂದರೆ ಅವರ ಹೊಸಾ ಪ್ರೇಯಸಿ, 27 ವರ್ಷದ ಆಸ್ಟ್ರೇಲಿಯಾದ ನಟಿ ನತಾಶಾ ಬ್ಯಾಸೆಟ್ (Natasha Basett). ಇವರೊಂದಿಗೆ ಮಸ್ಕ್ ಡೇಟಿಂಗ್ (Dating) ಮಾಡುತ್ತಿರುವುದು ಖಚಿತವಾಗಿದೆ. ಇದೀಗ ಮಸ್ಕ್ ಜೊತೆ ಡೇಟಿಂಗ್ ಮಾಡುತ್ತಿರುವ ನತಾಶಾ ನಟಿ. ಆಕೆಯ ಪ್ರಕಾರ ಮಸ್ಕ್‌ನ ಬ್ಯಾಂಕ್ ಬ್ಯಾಲೆನ್ಸ್‌ಗಿಂತಲೂ ಅವನ ಬುದ್ಧಿಮತ್ತೆಯೇ ಹೆಚ್ಚು ಆಕರ್ಷಕವಂತೆ. ಈಕೆ ಆಸ್ಟ್ರೇಲಿಯನ್ ನಟಿ. ಇತ್ತೀಚಿಗೆ, ಲಾಸ್ ಏಂಜಲೀಸ್‌ನಲ್ಲಿ ಮಸ್ಕ್‌ನ ಖಾಸಗಿ ಜೆಟ್‌ನಿಂದ ಬ್ಯಾಸೆಟ್ ಹೊರ ಹೊರಡುವುದನ್ನು ನೋಡಿದವರು ಇದ್ದಾರೆ. "ಅವಳು ಹಿಂದೆ ಕೆಲವರನ್ನು ಡೇಟಿಂಗ್ ಮಾಡಿದ್ದುಂಟು. ಆದರೆ ಅವಳು ಎಲೋನ್ ಬಗ್ಗೆ ತುಂಬ ಪ್ರೀತಿ ಅಕೆಗೆ. ಆತನನ್ನು ಆರಾಧಿಸುತ್ತಾಳೆ,'' ಎಂದು ಹೇಳಲಾಗಿದೆ. ಬರಲಿರುವ ಎಲ್ವಿಸ್ ಪ್ರೀಸ್ಲಿ (Elvis Priesly) ಬಯೋಪಿಕ್‌ನಲ್ಲಿ (Biopick) ನತಾಶಾ ಬ್ಯಾಸೆಟ್ ಪ್ರೀಸ್ಲಿಯ ಗೆಳತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. "ಬ್ರಿಟ್ನಿ ಎವರ್ ಆಫ್ಟರ್" ಸಿನಿಮಾದಲ್ಲಿ ಈಕೆ ಬ್ರಿಟ್ನಿ ಸ್ಪಿಯರ್ಸ್ (Britney Spears) ಪಾತ್ರವನ್ನು ನಿರ್ವಹಿಸಿದ್ದಳು.
World Richest ಎಲಾನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತನಾದ ಯೂಟ್ಯೂಬರ್, ಆದರೆ 7 ನಿಮಿಷ ಮಾತ್ರ!
ಮಸ್ಕ್ ಇದುವರೆಗೂ ಮೂವರು ಪತ್ನಿಯರು, ನಾಲ್ಕು ಡೈವೋರ್ಸ್ ಹಿಸ್ಟರಿ ಹೊಂದಿದ್ದಾರೆ. ಮೂವರು ಪತ್ನಿಯರಲ್ಲಿ ನಾಲ್ಕು ಡೈವೋರ್ಸ್ (Divorce) ಹೇಗೆ ಅನ್ನುತ್ತೀರಾ? ಆ ಕುತೂಹಲಕರ ಕತೆ ಇಲ್ಲಿದೆ.
ಮಸ್ಕ್ ತನ್ನ ಮೊದಲ ಪತ್ನಿ ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಅವರನ್ನು ಕ್ವೀನ್ಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವಾಗ ಭೇಟಿಯಾದರು ಮತ್ತು ಅವರು 2000ರಲ್ಲಿ ವಿವಾಹವಾದರು. ಅವರು 2000ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ರಜೆಯಲ್ಲಿದ್ದಾಗ ಗಂಭೀರ ಮಲೇರಿಯಾಕ್ಕೆ ತುತ್ತಾದರು. 2002ರಲ್ಲಿ ಅವರ ಮೊದಲ ಮಗು, ಮಗ ನೆವಾಡಾ ಅಲೆಕ್ಸಾಂಡರ್ ಮಸ್ಕ್, 10 ವಾರಗಳ ವಯಸ್ಸಿನಲ್ಲಿ ಹಠಾತ್ ಮರಣ ಹೊಂದಿದ. ಅವನ ಮರಣದ ನಂತರ, ದಂಪತಿಗಳು ತಮ್ಮ ಕುಟುಂಬವನ್ನು ಮುಂದುವರಿಸಲು IVF ಬಳಸಲು ನಿರ್ಧರಿಸಿದರು. ಅವಳಿಗಳಾದ ಕ್ಸೇವಿಯರ್ ಮತ್ತು ಗ್ರಿಫಿನ್ ಏಪ್ರಿಲ್ 2004ರಲ್ಲಿ ಜನಿಸಿದರು. ನಂತರ ತ್ರಿವಳಿಗಳಾದ ಕೈ, ಸ್ಯಾಕ್ಸನ್ ಮತ್ತು ಡಾಮಿಯನ್ 2006ರಲ್ಲಿ ಜನಿಸಿದರು. ದಂಪತಿಗಳು 2008ರಲ್ಲಿ ವಿಚ್ಛೇದನ ಪಡೆದರು ಮತ್ತು ಅವರ ಐವರು ಪುತ್ರರ ಪಾಲನೆಯನ್ನು ಹಂಚಿಕೊಂಡರು.
2008 ರಲ್ಲಿ ಮಸ್ಕ್ ಇಂಗ್ಲಿಷ್ ನಟಿ ತಾಲುಲಾ ರಿಲೆಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು 2010ರಲ್ಲಿ ವಿವಾಹವಾದರು. 2012ರಲ್ಲಿ ಅವರು ರಿಲೇಯಿಂದ ವಿಚ್ಛೇದನ ಪಡೆದರು. 2013ರಲ್ಲಿ, ಮಸ್ಕ್ ಮತ್ತು ರಿಲೆ ಮರುಮದುವೆಯಾದರು. ಡಿಸೆಂಬರ್ 2014ರಲ್ಲಿ ಅವರು ರಿಲೇಯಿಂದ ಎರಡನೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು; ಅದನ್ನೂ ಹಿಂಪಡೆದರು! ಆದರೂ 2016ರಲ್ಲಿ ಮತ್ತೆ ಎರಡನೇ ವಿಚ್ಛೇದನ ನೀಡಿದರು!
Parenting Tips: ಮಕ್ಕಳನ್ನು ಹೇಗೆ ಬೆಳೆಸ್ಬೇಕು ? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ
ಮಸ್ಕ್ ನಂತರ 2017ರಲ್ಲಿ ಹಲವಾರು ತಿಂಗಳುಗಳ ಕಾಲ ಅಂಬರ್ ಹರ್ಡ್ ಜೊತೆ ಡೇಟಿಂಗ್ ಮಾಡಿದರು. ನಂತರ ಈಕೆ ನಟ ಜಾನಿ ಡೆಪ್ ಅವರನ್ನು ವಿವಾಹವಾದರು.
ಮೇ 2018ರಲ್ಲಿ, ಮಸ್ಕ್ ಮತ್ತು ಕೆನಡಾದ ಸಂಗೀತಗಾರ್ತಿ ಗ್ರಿಮ್ಸ್ ಅವರು ಡೇಟಿಂಗ್ ಮಾಡತೊಡಗಿದರು. ಗ್ರಿಮ್ಸ್ ಮೇ 2020ರಲ್ಲಿ ಮಗನಿಗೆ ಜನ್ಮ ನೀಡಿದರು. ಆತನಿಗೆ X Æ A-Xii ಎಂಬ ವಿಚಿತ್ರ ಹೆಸರನ್ನು ಇಟ್ಟಿದ್ದಾರೆ ಮಸ್ಕ್. "ನಾವು ಅರೆ-ಬೇರ್ಪಟ್ಟಿದ್ದೇವೆ. ಆದರೆ ಇನ್ನೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಒಬ್ಬರನ್ನೊಬ್ಬರು ಆಗಾಗ್ಗೆ ಭೇಟಿಯಾಗುತ್ತೇವೆ ಮತ್ತು ಉತ್ತಮ ಸಂಬಂಧದಲ್ಲಿದ್ದೇವೆ" ಎಂದು ಮಸ್ಕ್ ಹೇಳಿದ್ದರು. ಕಳೆದ ವರ್ಷ, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಗ್ರಿಮ್ಸ್ ಅವರು ತಮ್ಮ ಡೈವೋರ್ಸ್ ಬಳಿಕ ಮಸ್ಕ್‌ನೊಂದಿಗೆ 'ಇನ್ನೂ ವಾಸಿಸುತ್ತಿದ್ದೇನೆ' ಎಂದು ಉಲ್ಲೇಖಿಸಿದ್ದರು.
ಪ್ರಸ್ತುತ, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮಸ್ಕ್ ಅವರು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ವ್ಯಕ್ತಿ. ಇವರ ಸಂಪತ್ತಿನ ಮೌಲ್ಯ 212 ಶತಕೋಟಿ ಡಾಲರ್.
Celebrity Food: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ ?
