Relationships: ಪ್ರೀತಿಯಲ್ಲೂ ಇದೆ ಇಷ್ಟೊಂದು ವಿಧ: ನೀವು ಯಾವ ಪ್ರೀತಿಯಲ್ಲಿದ್ದೀರಿ ಗೊತ್ತಾ?

ಪ್ರೀತಿ, ಜೀವನದಲ್ಲಿ ಬಹಳ ಮುಖ್ಯ. ಪ್ರೀತಿಯಿಲ್ಲದ ಲೈಫ್ ನಲ್ಲಿ ಬದುಕೋದು ಕಷ್ಟ. ಬೇರೆಯವರ ಮೇಲೆ ನಿಮಗೆ ಪ್ರೀತಿ ಚಿಗುರದೆ ಇರಬಹುದು, ಆದ್ರೆ ನಿಮ್ಮ ಮೇಲೆ ನಿಮಗೆ ಲವ್ ಇದ್ರೆ ಸಾಕು. ನೀವೂ ಪ್ರೀತಿಯಲ್ಲಿದ್ದರೆ ಅದು ಯಾವ ರೀತಿ ಪ್ರೀತಿ ಅನ್ನೋದನ್ನು ಇಲ್ಲಿ ಪತ್ತೆ ಮಾಡಿ. 
 

Types Of Love Relationships

ಪ್ರೀತಿ ಎನ್ನುವುದು ಕೇವಲ ಪುರುಷ – ಮಹಿಳೆಗೆ ಸೀಮಿತವಾದದ್ದಲ್ಲ. ತಂದೆ – ತಾಯಿ ಪ್ರೀತಿ, ಸಹೋದರರ ಮೇಲೆ ಪ್ರೀತಿ, ಸ್ನೇಹಿತರ ಮೇಲೆ ಪ್ರೀತಿ, ಕುಟುಂಬಸ್ಥರ ಮೇಲೆ ಪ್ರೀತಿ, ಮಕ್ಕಳ ಮೇಲೆ ಪ್ರೀತಿ ಹೀಗೆ ನಮಗಿಷ್ಟವಾದ ಎಲ್ಲರನ್ನೂ ನಾವು ಪ್ರೀತಿಸುವ ಹಕ್ಕನ್ನು ಹೊಂದಿದ್ದೇವೆ. ಪ್ರೀತಿ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಯಾವುದೇ ಒತ್ತಡ (Stress) ಕ್ಕೆ ಬಿದ್ದು ಪ್ರೀತಿ (Love) ಮಾಡಿದ್ರೆ ಅದ್ರಿಂದ ಲಾಭವೇನಿಲ್ಲ. ಪ್ರೀತಿ ಯಾವಾಗ್ಲೂ ನಮಗೆ ಪ್ರೇರಣೆಯಾಗಬೇಕು. ಶಕ್ತಿ, ಚೈತನ್ಯವನ್ನು ತುಂಬಬೇಕು. ಪ್ರೀತಿಯು ನಮ್ಮ ಸಂಬಂಧ (Relationship) ವನ್ನು ಅರ್ಥಮಾಡಿಕೊಳ್ಳಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಪ್ರೀತಿಯನ್ನು ವಿವಿಧ ರೂಪಗಳಲ್ಲಿ ಕಾಣಬಹುದು. ಸ್ವಯಂ ಪ್ರೀತಿ, ನಿಸ್ವಾರ್ಥ ಪ್ರೀತಿ, ಅತಿರೇಕದ ಪ್ರೀತಿ, ದೀರ್ಘಾವಧಿಯ ಪ್ರೀತಿ, ಪರಿಣಾಮಕಾರಿ ಪ್ರೀತಿ, ಪ್ರಣಯ ಪ್ರೀತಿ ಮುಂತಾದ ಹಲವು ರೀತಿಯ ಪ್ರೀತಿಯನ್ನು ನಾವು ನೋಡಬಹುದಾಗಿದೆ. ನೀವು ಯಾವ ಪ್ರೀತಿಯಲ್ಲಿದ್ದೀರಿ ಎಂಬುದನ್ನು ಕೆಲ ಸಂಕೇತದ ಮೂಲಕ ಪತ್ತೆ ಮಾಡಬಹುದು. ನಾವಿಂದ ಪ್ರೀತಿಯ ವಿಧಗಳ ಬಗ್ಗೆ ನಿಮಗೆ ಹೇಳ್ತೆವೆ.

ನೀವು ಯಾವ ಪ್ರೀತಿಯಲ್ಲಿದ್ದೀರಿ ಗೊತ್ತಾ? :

ಸ್ವಯಂ ಪ್ರೀತಿ (Self Love) : ಹೆಸರೇ ಹೇಳುವಂತೆ ನಮ್ಮ ಮೇಲೆ ನಮಗಿರುವ ಪ್ರೀತಿಯನ್ನು ಸ್ವಯಂ ಪ್ರೀತಿ ಎನ್ನಲಾಗುತ್ತದೆ. ನಿಮ್ಮನ್ನು ನೀವು ಮೆಚ್ಚಿಕೊಳ್ಳುವುದು. ಇದ್ರಲ್ಲಿ ತಪ್ಪೇನಿಲ್ಲ. ಸ್ವಯಂ ಪ್ರೀತಿ ನಮ್ಮನ್ನು ಅರ್ಥ ಮಾಡಿಕೊಳ್ಳಲು ಮತ್ತು ನಮ್ಮನ್ನು ಆಂತರಿಕವಾಗಿ ಬಲಪಡಿಸಲು ನೆರವಾಗುತ್ತದೆ.

ನಿಮಗೆ ನಿಮ್ಮ ಭಾವನೆ ಬಗ್ಗೆ ಮತ್ತು ಯೋಚನೆ ಬಗ್ಗೆ ಚೆನ್ನಾಗಿ ತಿಳಿದಿದ್ದರೆ, ನಿಮಗಾಗಿ ನೀವು ಏನು ಮಾಡಬೇಕು ಎಂಬುದು ನಿಮಗೆ ತಿಳಿದಿದ್ದರೆ ಅದು ಸ್ವಯಂ ಪ್ರೀತಿಯ ಲಕ್ಷಣವಾಗಿದೆ. ತಮ್ಮನ್ನು ತಾವು ಪ್ರೀತಿಸುವ ಜನರು ಸ್ವಯಂ ಕಾಳಜಿಗೆ ಮಹತ್ವ ನೀಡ್ತಾರೆ. ತಮ್ಮ ಜೀವನಶೈಲಿಯಲ್ಲಿ ಸುಧಾರಣೆ ತರ್ತಾರೆ. ಪೌಷ್ಟಿಕ ಆಹಾರ ಸೇವನೆ ವ್ಯಾಯಾಮ ಸೇರಿದಂತೆ ಸಾಕಷ್ಟು ನಿದ್ರೆಗೆ ಅವರು ಮಹತ್ವ ನೀಡ್ತಾರೆ.  ಸ್ವಯಂ ಪ್ರೀತಿಯನ್ನು ಹೊಂದುವ ಜನರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹಾನಿಯಾಗುತ್ತೆ ಎಂಬ ವಿಷ್ಯವನ್ನು ತಮ್ಮಿಂದ ದೂರವಿಡ್ತಾರೆ. ಸ್ವಯಂ ಪ್ರೀತಿಸುವ ಜನರು ಯಾವಾಗ್ಲೂ ಸೋಲಿನ ನಂತ್ರ ಗೆಲುವಿದೆ ಎಂದು ಭಾವಿಸ್ತಾರೆ. ಸೋತಾಗ ತಮ್ಮನ್ನು ದೂಷಿಸುವುದಿಲ್ಲ. ತಮ್ಮನ್ನು ತಾವು ಮೋಟಿವೆಟ್ ಮಾಡಿಕೊಂಡು ಮುನ್ನುಗ್ಗುತ್ತಾರೆ.

ಪ್ರೀತಿ ಅಥವಾ ಸೆಕ್ಸ್‌; ಪುರುಷರ ಪ್ರಕಾರ ಜೀವನದಲ್ಲಿ ಯಾವುದು ಮುಖ್ಯ ?

ನಿಸ್ವಾರ್ಥ ಪ್ರೀತಿ (Selfless Love): ನಿಸ್ವಾರ್ಥ ಪ್ರೀತಿ ಎಂದರೆ ಯಾವುದೇ ನಿರೀಕ್ಷೆ ಇಲ್ಲದೆ ಪ್ರೀತಿ ನೀಡುವುದು. ಇವರ ಹೃದಯ ನಿಷ್ಕಲ್ಮಶವಾಗಿದ್ದು, ಶುದ್ಧ ಪ್ರೀತಿ ನೀಡುತ್ತಾರೆ. ದಯೆಗೆ ಹೆಚ್ಚು ಮಹತ್ವ ನೀಡ್ತಾರೆ. ತಾಯಿಯ ಪ್ರೀತಿಯನ್ನು ನೀವು ನಿರ್ವಾರ್ಥ ಪ್ರೀತಿ ಎನ್ನಲಾಗುತ್ತದೆ.  ಪ್ರೀತಿಸುವ ವ್ಯಕ್ತಿ ಗುರಿ ಸಾಧನೆಗೆ ಇವರು ಸಂಪೂರ್ಣ ಸಹಾಯ ಮಾಡುತ್ತಾರೆ. ಸಂಗಾತಿಯ ನಿರ್ಧಾರವನ್ನು ಅವರು ಗೌರವಿಸುತ್ತಾರೆ. ಪರಿಸ್ಥಿತಿ ಯಾವುದೇ ಇರಲಿ ಅವರು ಬೆಂಬಲಿಸುತ್ತಾರೆ. ಸಂಬಂಧ ಸುಧಾರಿಸಲು ಕೈಲಾದ ಪ್ರಯತ್ನ ಮಾಡ್ತಾರೆ. 

Relationship Tips: ಮಹಿಳೆಯರ ಈ ಗುಣಗಳನ್ನು ಪುರುಷರು ಭಾರೀ ಲೈಕ್‌ ಮಾಡ್ತಾರೆ

ಅತಿರೇಕದ ಪ್ರೀತಿ: ಇದು ಅಪಾಯಕಾರಿ ಪ್ರೀತಿ ಎನ್ನಬಹುದು. ಇದ್ರಲ್ಲಿ ಪ್ರೀತಿಯ ಎಲ್ಲೆ ಮೀರಿರುತ್ತದೆ. ತಮ್ಮನ್ನು ತಾವು ನಿರ್ಲಕ್ಷ್ಯ ಮಾಡುವ ಜನರು ಸಂಗಾತಿಗೆ ಅತಿ ಆದ್ಯತೆ ನೀಡ್ತಾರೆ. ಈ ಹುಚ್ಚು ಪ್ರೀತಿಯಲ್ಲಿ ಸಂಗಾತಿಗೆ ಕಿರಿಕಿರಿಯುಂಟು ಮಾಡ್ತಾರೆ.   ಸಂಗಾತಿ ಬಿಟ್ಟು ಹೋದ್ರೆ ಎಂಬ ಭಯವಿರುತ್ತದೆ. ಸಂಗಾತಿಯ ಕೆಲಸವನ್ನು ಟ್ರ್ಯಾಕ್ ಮಾಡಲು ಶುರು ಆಡ್ತಾರೆ. ಸಂಗಾತಿಯ ಮೇಲೆ ನಿಯಂತ್ರಣ ಹೇರಲು ಶುರು ಮಾಡ್ತಾರೆ. ಸದಾ ಸಂಗಾತಿ ಬಗ್ಗೆ ಆಲೋಚನೆ ಮಾಡಲು ಶುರು ಮಾಡ್ತಾರೆ. ಈ ಚಿಹ್ನೆ ನಿಮ್ಮಲ್ಲಿ ಕಂಡು ಬಂದ್ರೆ ನೀವು ಅತಿರೇಕದ ಪ್ರೀತಿಗೆ ಒಳಗಾಗಿದ್ದೀರಿ ಎಂದು ಅರ್ಥೈಸಿಕೊಳ್ಳಿ. 

Latest Videos
Follow Us:
Download App:
  • android
  • ios