Relationship Tips: ಮಹಿಳೆಯರ ಈ ಗುಣಗಳನ್ನು ಪುರುಷರು ಭಾರೀ ಲೈಕ್‌ ಮಾಡ್ತಾರೆ

ಸಂಗಾತಿಯ ಕುರಿತಾದ ಕಲ್ಪನೆ ಎಲ್ಲ ಯುವಕ-ಯುವತಿಯರಲ್ಲೂ ಇರುತ್ತದೆ. ತಮ್ಮ ಸಂಗಾತಿ ಸುಂದರವಾಗಬೇಕು ಎನ್ನುವುದು ಪುರುಷರ ಸಾಧಾರಣ ಭಾವನೆ. ಆದರೆ, ಪ್ರಬುದ್ಧ ಪುರುಷರು ಸೌಂದರ್ಯದಿಂದ ಹೊರತಾಗಿಯೂ ತಮ್ಮ ಸಂಗಾತಿಯಲ್ಲಿ ಕೆಲವು ಉತ್ತಮ ಗುಣಗಳನ್ನು ಬಯಸುತ್ತಾರೆ. 
 

Men likes these qualities in woman

“ತನ್ನ ಸಂಗಾತಿಯಾಗುವ ಯುವತಿ ಹೀಗಿರಬೇಕುʼ ಎನ್ನುವ ಕನಸು ಕಾಣದ ಪುರುಷನಿಲ್ಲ. ಅದು ಮಹಿಳೆಯರಿಗೂ ಅನ್ವಯಿಸುತ್ತದೆ. ಪ್ರತಿ ಮಹಿಳೆ ತನ್ನ ಗಂಡ ಹೇಗಿರಬೇಕು ಎನ್ನುವ ಬಗ್ಗೆ ಅಸ್ಪಷ್ಟವಾದರೂ ಒಂದಿಷ್ಟು ವಿಚಾರ ಹೊಂದಿರುತ್ತಾಳೆ. ಎಲ್ಲರೂ ಈ ವಿಚಾರದಲ್ಲಿ ಒಂದೇ ರೀತಿಯಲ್ಲಿ ಚಿಂತನೆ ಮಾಡಬೇಕೆಂದಿಲ್ಲ. ಕೆಲವರು ಕ್ರೇಜಿ ಎನ್ನಿಸುವ ಸಂಗಾತಿಯನ್ನೂ ಬಯಸಬಹುದು. ಆದರೆ, ಪ್ರಬುದ್ಧ ಪುರುಷನೊಬ್ಬ ತನ್ನ ಕೈ ಹಿಡಿಯುವ ಮಹಿಳೆಯಲ್ಲಿ ಕೆಲವು ಗುಣಗಳನ್ನು ನಿರೀಕ್ಷೆ ಮಾಡುತ್ತಾನೆ. ನೋಡಲು ಚೆನ್ನಾಗಿರಬೇಕು ಎನ್ನುವುದೊಂದು ಸಾಮಾನ್ಯ ಆಶಯವಾದರೆ, ಅದರಾಚೆಗೂ ತನ್ನ ಪತ್ನಿಯಾಗುವವಳ ಬಗ್ಗೆ ಪ್ರಬುದ್ಧವಾಗಿ ಕೆಲವು ಸಂಗತಿಗಳನ್ನು ನಿರೀಕ್ಷೆ ಮಾಡುತ್ತಾರೆ. ಬಹಳಷ್ಟು ಪುರುಷರು ತಮ್ಮ ಸಂಗಾತಿ ಆಗುವವಳು ತಮಗೆ ಒಳ್ಳೆಯ ಸ್ನೇಹಿತೆಯೂ ಆಗಬೇಕೆಂದು ಬಯಸುತ್ತಾರಂತೆ. ಸ್ನೇಹಮಯ ವ್ಯಕ್ತಿತ್ವದ ಮಹಿಳೆಯನ್ನು ಇಷ್ಟಪಡುತ್ತಾರೆ. ಏಕೆಂದರೆ, ಜೀವನ ಸಂಗಾತಿ ಉತ್ತಮ ಸ್ನೇಹಿತೆಯೂ ಆಗಿದ್ದರೆ ಬದುಕು ಚೆನ್ನಾಗಿರುತ್ತದೆ ಎನ್ನುವ ವಿಚಾರ ಅವರದ್ದು. ಅಷ್ಟೇ ಅಲ್ಲ, ಕುಟುಂಬಕ್ಕೆ ಆದ್ಯತೆ ನೀಡುವಂತಹ, ಎಲ್ಲರೊಂದಿಗೆ ಬೆರೆಯುವಂತಹ ಮನೋಧರ್ಮ ಇರಬೇಕು ಎಂದೂ ಬಯಸುತ್ತಾರಂತೆ. 

ಪರಸ್ಪರ ಗೌರವ (Respect), ಬದ್ಧತೆ (Commitment): ಸಂಗಾತಿ (Partner) ಆಗುವವಳು ತನ್ನ ಬಗ್ಗೆ ಗೌರವ ಹೊಂದಿರಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆಯಾದರೆ, ಪರಸ್ಪರದ ಗೌರವವನ್ನು ಗೌರವಿಸಬೇಕು ಎನ್ನುವುದು ಸೂಕ್ಷ್ಮ ಸಂಗತಿ. ಎಲ್ಲರಿಗೂ ಇದು ಅರ್ಥವಾಗುವುದಿಲ್ಲ. ಆದರೆ, ಪ್ರಬುದ್ಧ ಪುರುಷ (Matured Male) ಮತ್ತು ಮಹಿಳೆ (Female) ಪರಸ್ಪರರಲ್ಲಿ ಗೌರವ ಇರಬೇಕು ಎಂದು ಪ್ರತಿಪಾದಿಸುತ್ತಾರೆ. ಅಂಥವರನ್ನೇ ಇಷ್ಟಪಡುತ್ತಾರೆ. ಹಾಗೆಯೇ, ಸಂಬಂಧದಲ್ಲಿ ಬದ್ಧತೆ ಇರಬೇಕೆಂದು ಆಶಿಸುತ್ತಾರೆ. ನಂಬಿಕೆ ಮೂಡಿಸುವಂತಹ ಮನೋಧರ್ಮ ಹೊಂದಿರಬೇಕು ಎನ್ನುತ್ತಾರೆ.

ಪ್ರೀತಿ ಅಥವಾ ಸೆಕ್ಸ್‌; ಪುರುಷರ ಪ್ರಕಾರ ಜೀವನದಲ್ಲಿ ಯಾವುದು ಮುಖ್ಯ ?

ತನ್ನೊಂದಿಗೆ ಹೆಜ್ಜೆ ಹಾಕ್ತಾಳಾ?: ಎಷ್ಟೋ ಪುರುಷರು “ನಾನು ಚೆನ್ನಾಗಿ ದುಡಿಯುತ್ತೇನೆ, ಹಾಗಾಗಿ ಪತ್ನಿ ದುಡಿಯಬೇಕಾಗಿಲ್ಲʼ ಎನ್ನುವ ಸಿಲ್ಲಿ ವಾದ ಮುಂದಿಡುತ್ತಾರೆ. ಆದರೆ, ಆತ ಪ್ರಬುದ್ಧನಾಗಿದ್ದರೆ ಹೀಗೆ ಯೋಚನೆ ಮಾಡುವುದಿಲ್ಲ. ಬದಲಿಗೆ, ಜೀವನದ ಯಾವುದೇ ಹಂತದಲ್ಲಿ ಸಂಕಷ್ಟ ಎದುರಾದರೂ ತನ್ನೊಂದಿಗೆ ಅಷ್ಟೇ ದೃಢವಾಗಿ ಹೆಜ್ಜೆ ಹಾಕುತ್ತಾಳೆಯೇ ಇಲ್ಲವೇ ಎಂದು ಚಿಂತನೆ ಮಾಡುತ್ತಾರೆ. ಏಕೆಂದರೆ, ಸಮಸ್ಯೆ ಜೀವನದ ಅವಿಭಾಜ್ಯ ಅಂಗ. ಆ ಸಮಯದಲ್ಲಿ ದಂಪತಿ (Couples) ಹೇಗೆ ಪರಸ್ಪರರನ್ನು ಕಾಯ್ದುಕೊಳ್ಳುತ್ತಾರೆ ಎನ್ನುವುದು ಸಂಬಂಧದ ದೃಷ್ಟಿಯಿಂದ ಮುಖ್ಯವಾಗುತ್ತದೆ. ಅಲ್ಲದೇ, ಅನೇಕ ಸನ್ನಿವೇಶಗಳಲ್ಲಿ ಪತ್ನಿಯ (Wife) ಬೆಂಬಲ ಪತಿಗೆ (Husband) ಮುಖ್ಯವಾಗುತ್ತದೆ. ಯಾವುದೇ ಗುರಿ ಈಡೇರಿಕೆಗೆ ಪತ್ನಿಯ ಬೆಂಬಲ ಬೇಕಾಗುತ್ತದೆ. ಹೀಗಾಗಿ, ತನ್ನ ಪತ್ನಿ ಆಗುವವಳಲ್ಲಿ ಆ ಗುಣವಿರಲಿ ಎಂದು ಬಯಸುತ್ತಾನೆ. 

ಮುಕ್ತ ಮಾತುಕತೆಗೆ (Open Communication) ಆದ್ಯತೆ ನೀಡ್ತಾಳಾ?: ಎಷ್ಟೋ ದಂಪತಿ ಪರಸ್ಪರ ಮುಕ್ತವಾಗಿ ಮಾತನಾಡಿಕೊಳ್ಳುವುದೇ ಇಲ್ಲ. ಅಂದರಿಂದಾಗಿಯೇ ಅವರ ನಡುವೆ ಅದೆಷ್ಟೋ ಮಿಸ್‌ ಅಂಡರ್‌ ಸ್ಟ್ಯಾಂಡಿಗ್ಸ್‌ (Misunderstandings) ಇರುತ್ತವೆ. ಹಾಗಾಗದೇ ಇರಲು ತನ್ನ ಸಂಗಾತಿಯಲ್ಲಿ ಮುಕ್ತ ಮಾತುಕತೆ ನಡೆಸುವ ಧೋರಣೆ ಇರಲಿ ಎಂದು ಪ್ರಬುದ್ಧ ಪುರುಷನೋರ್ವ ಬಯಸುತ್ತಾನೆ.

Relationship Tips: ದಾಂಪತ್ಯ ಜೀವನ ಇತರರೊಂದಿಗೆ ಕಂಪೇರ್ ಮಾಡೋದನ್ನು ಬಿಟ್ಬಿಡಿ

ನ್ಯಾಯವಾದಿ (Judgement) ಅಲ್ಲದ ಸಂಗಾತಿ ಬೇಕು: ಬಹಳಷ್ಟು ಮಹಿಳೆಯರು “ತಮ್ಮ ಪತಿ ಹೀಗೆʼ ಎನ್ನುವ ನ್ಯಾಯತೀರ್ಮಾನ ಹೊಡೆದಂತೆ ವರ್ತಿಸುತ್ತಾರೆ. ಈ ಮನಸ್ಥಿತಿಯಲ್ಲಿ ಸಂಗಾತಿಯ ಮಾತುಗಳನ್ನು ಕೇಳಿಸಿಕೊಳ್ಳುವುದೂ ಇಲ್ಲ. ತನ್ನ ಪ್ರತಿ ನಡೆನುಡಿಯನ್ನು ಜಡ್ಜ್‌ ಮಾಡದ ಸಂಗಾತಿಯನ್ನು ಪುರುಷ ಇಷ್ಟಪಡುತ್ತಾನೆ. 

ಪ್ರೀತಿ (Compassion), ಪ್ರಾಮಾಣಿಕತೆ (Honesty): ಸಂಬಂಧದ ಭದ್ರ ಬುನಾದಿಯೇ ಪ್ರೀತಿ. ಕೆಲವು ಮಹಿಳೆಯರು ಸಂಬಂಧವನ್ನು, ಪತಿಯನ್ನು ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಥರ ಟ್ರೀಟ್‌ ಮಾಡುತ್ತಾರೆ. ಹೀಗೆ ವರ್ತಿಸುವುದು ತಮ್ಮ ಹಕ್ಕು ಎಂಬಂತೆ ಭಾವಿಸುತ್ತಾರೆ. ಆದರೆ, ಅದರ ಹಿಂದೆ ಪ್ರೀತಿ ಇರುವುದಿಲ್ಲ. ಅದರಿಂದ ಸಂಬಂಧ (Relation) ಪೊಳ್ಳಾಗುತ್ತದೆ. ಹೀಗಾಗಿ, ಸಂಗಾತಿಯಲ್ಲಿ ಪ್ರೀತಿ, ಸಹೃದಯತೆ ಹಾಗೂ ಪ್ರಾಮಾಣಿಕತೆ ಇರಬೇಕು ಎನ್ನುವುದು ಬಹುತೇಕ ಎಲ್ಲರ ಆಶಯ. ಹಾಗೆಯೇ ಆತ್ಮವಿಶ್ವಾಸ (Confidence) ಹೊಂದಿರುವ, ಬೇಕಾಬಿಟ್ಟಿ ವರ್ತನೆ ಇಲ್ಲದ ಮಹಿಳೆಯರೇ ಬೆಸ್ಟ್‌ ಎನಿಸುತ್ತಾರೆ. 

Latest Videos
Follow Us:
Download App:
  • android
  • ios