ಡಿಸೆಂಬರ್ ಮಧ್ಯರಾತ್ರಿ ನಡೆದ ಸೋಜಿಗ; ಅವಳಿ ಮಕ್ಕಳ ಜನನ, ನಿಮಿಷ ಲೇಟಾಗಿದ್ದಕ್ಕೆ ವರ್ಷವೇ ಬದಲು
ಸಾಮಾನ್ಯವಾಗಿ ಅವಳಿಗಳು ಒಂದೇ ದಿನ, ಒಂದೇ ವರ್ಷ ಜನಿಸುತ್ತಾರೆ. ಆದರೆ, ನ್ಯೂಜೆರ್ಸಿಯ ಹಂಫ್ರಿ ದಂಪತಿಗೆ ಜನಿಸಿರುವ ಗಂಡು ಅವಳಿ ಮಕ್ಕಳ ನಡುವೆ ಜನ್ಮದಿನಾಂಕವಷ್ಟೇ ಅಲ್ಲ, ಜನನ ವರ್ಷದಲ್ಲೂ ಭಾರೀ ವ್ಯತ್ಯಾಸವಾಗಿದೆ.
ಮಗು ಜನಿಸುವುದು ಖುಷಿ ಕೊಡುವ ವಿಚಾರ. ಅದೊಂದು ಸುಂದರ ಕ್ಷಣವೂ ಹೌದು. ಅದರಲ್ಲೂ ಅವಳಿಗಳ ಜನನಕ್ಕೆ ಕಾದಿದ್ದರಂತೂ ಇನ್ನಷ್ಟು ಸಂತಸ, ಆತಂಕ ಇರುವುದು ಸಹಜ. ಅವಳಿಗಳ ಜನನವಾಗುವುದು ಅಚ್ಚರಿಯ ವಿದ್ಯಮಾನಗಳಲ್ಲಿ ಒಂದು. ಅವಳಿಯಷ್ಟೇ ಅಲ್ಲ, 7-8 ಮಕ್ಕಳು ಒಟ್ಟಿಗೆ ಜನಿಸುವ ಅಪರೂಪದ ವಿದ್ಯಮಾನಗಳು ಸಹ ಜಗತ್ತಿನಲ್ಲಿ ಸಾಕಷ್ಟಿವೆ. ಆದರೆ, ಅವಳಿಗಳ ಜನನವಾಗುವುದು ಎಲ್ಲೆಡೆ ಸಾಮಾನ್ಯ. ಈ ಮಕ್ಕಳ ಬಗೆಗೆ ಎಲ್ಲರಿಗೂ ಒಂದು ರೀತಿಯ ಕುತೂಹಲ ಸಾಮಾನ್ಯ. ಅವು ಹೇಗಿವೆ? ನೋಡಲು ಒಂದೇ ರೀತಿಯಲ್ಲಿವೆಯೇ? ಎಂದೆಲ್ಲ ಪ್ರಶ್ನೆಗಳು ಮೂಡುತ್ತವೆ. ಕೆಲವೊಮ್ಮೆ ಅವಳಿಗಳ ರೂಪದಲ್ಲಿ ವ್ಯತ್ಯಾಸವಿರುತ್ತದೆ, ಆದರೆ, ಬಹಳಷ್ಟು ಬಾರಿ ಅವು ಒಂದೇ ರೀತಿಯಲ್ಲಿರುತ್ತವೆ. ಇಂತಹ ಅವಳಿಗೆ ಅನುರೂಪದ ಅವಳಿ ಎನ್ನಲಾಗುತ್ತದೆ. ಸಾಮಾನ್ಯವಾಗಿ ಅವಳಿಗಳ ಜನನ ಕೆಲವೇ ನಿಮಿಷಗಳ ಅಂತರದಲ್ಲಿ ಜರುಗುತ್ತದೆ. ಆದರೆ, ಅಮೆರಿಕದ ನ್ಯೂಜೆರ್ಸಿಯ ಈ ದಂಪತಿಯ ಅವಳಿ ಮಕ್ಕಳು ಬೇರೆ ಬೇರೆ ದಿನ, ಸಮಯದಲ್ಲಿ ಜನಿಸಿದ್ದಾರೆ. ಅಷ್ಟೇ ಅಲ್ಲ, ಇವರ ನಡುವೆ ಬರೋಬ್ಬರಿ ಒಂದು ವರ್ಷಗಳ ಅಂತರವೂ ಇದೆ! ಗಾಬರಿ ಆಗ್ತಾ ಇದ್ಯಾ? ಈ ಬಾರಿಯ ಹೊಸ ವರ್ಷದ ಸಮಯದಲ್ಲಿ ಈ ಚಮತ್ಕಾರ ಜರುಗಿದೆ.
ಡಿಸೆಂಬರ್ ಅಂತ್ಯದ (December End) ವೇಳೆಗೆ ಹೆರಿಗೆ (Delivery) ಸಮಯ (Time) ಎದುರಾಗಿದ್ದರೆ ಅದೊಂದು ರೀತಿಯ ನಿರೀಕ್ಷೆ ಇರುತ್ತದೆ. ಮಗು (Baby) ಡಿಸೆಂಬರ್ ನಲ್ಲೇ ಜನಿಸುತ್ತದೆಯೇ ಅಥವಾ ಕೇವಲ ಕೆಲವೇ ಕ್ಷಣಗಳ ಅಂತರದಲ್ಲಿ ಜನಿಸಿ ಜನವರಿಯಲ್ಲಿ ಜನಿಸುತ್ತದೆಯೇ ಎನ್ನುವ ಕುತೂಹಲ ಮನೆ ಮಾಡಿರುತ್ತದೆ. ನ್ಯೂಜೆರ್ಸಿಯ (New Jersey) ಈ ಬಿಲ್ಲಿ ಹಂಫ್ರಿ ದಂಪತಿಯೂ ಇಂಥದ್ದೊಂದು ಕುತೂಹಲವನ್ನು ಅನುಭವಿಸಿರಲು ಸಾಕು. ಇದೀಗ, ಈ ದಂಪತಿ ಅವಳಿ (Twins) ಗಂಡುಮಕ್ಕಳನ್ನು ಪಡೆದಿದ್ದಾರೆ. ಮೊದಲ ಮಗು ಎಜ್ರಾ ಹಂಫ್ರಿ ಡಿಸೆಂಬರ್ 31ರಂದು ರಾತ್ರಿ 11.48ಕ್ಕೆ ಜನಿಸಿದೆ. ಆಕಸ್ಮಿಕವೆಂದರೆ, ಅದೇ ದಿನ ಮಗುವಿನ ತಂದೆ (Father) ಬಿಲ್ಲಿ ಹಂಫ್ರಿಯ ಜನ್ಮದಿನವೂ ಅಂದೇ ಆಗಿದೆ!
ಆಮೀರ್ ಖಾನ್ ಮೊದಲ-ಎರಡನೇ ವಿಚ್ಛೇದಿತ ಪತ್ನಿಯಂದಿರಿಗೆ ಮದ್ವೆ ಮನೆಯಲ್ಲೇ ಕ್ಲ್ಯಾಷ್: ವಿಡಿಯೋ ವೈರಲ್
ಎರಡನೇ ಅವಳಿ ಎಜೆಕೀಲ್, ಅದೇ ದಿನ ರಾತ್ರಿ 12.28ಕ್ಕೆ ಜನಿಸಿದೆ. ಅವಳಿಗಳ ನಡುವೆ ಇರುವುದು ಕೆಲವೇ ಸಮಯದ ಅಂತರವಾಗಿದ್ದರೂ (Difference) ಇಬ್ಬರ ಜನ್ಮದಿನಾಂಕದಲ್ಲಿ (Birth Date) ಭಾರೀ ವ್ಯತ್ಯಾಸವಾಗಿದೆ. ಈ ಸಂಗತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಹಲವು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಂದು ದಿನದ ಮೊದಲೇ ನೋವು ಬಂದಿತ್ತು
ಅವಳಿ ಮಕ್ಕಳ ತಂದೆಯಾಗಿರುವ ಬಿಲ್ಲಿ ಹಂಫ್ರಿ, ತನ್ನ ಜನ್ಮದಿನದಂದು ಗಂಡು ಮಕ್ಕಳು ಹುಟ್ಟಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಈ ಅವಳಿಗಳ ಅಮ್ಮನಾಗಿರುವ ಈವ್ ಹಂಫ್ರಿಗೆ ಡಿಸೆಂಬರ್ 30ರಂದೇ ಹೆರಿಗೆ ನೋವು ಕಂಡುಬಂದಿತ್ತು. ಆದರೆ, ಅದು ಹೆಚ್ಚು ಸಮಯ ನಿಲ್ಲಲಿಲ್ಲ. ಹೆರಿಗೆ ನೋವು ಕಂಡುಬಂದಾಗ ಅವರು ಸಮೀಪದ ಆಸ್ಪತ್ರೆಗೆ (Hospital) ಧಾವಿಸಿದ್ದರು. ಆದರೆ, ಮಾರನೆಯ ದಿನ ರಾತ್ರಿ ಸಹಜ ಹೆರಿಗೆಯಾಗಿದೆ. ಅಷ್ಟೇ ಅಲ್ಲ, ಅವಳಿಗಳ ಜನ್ಮದಿನಾಂಕ, ಜನನ ವರ್ಷದಲ್ಲೂ (Year) ವ್ಯತ್ಯಾಸ ಉಂಟಾಗಿರುವುದು ವಿಶೇಷವಾಗಿದೆ.
ಭಾರತೀಯ ಸ್ಟ್ರೀಟ್ ಫುಡ್ ಗೇಲಿ ಮಾಡಿದ ಆಫ್ರಿಕನ್! ವೈರಲ್ ಆಯ್ತು ವೀಡಿಯೋ
ಇಬ್ಬರು ಗಂಡುಮಕ್ಕಳ ಜನನವಾಗಿರುವುದನ್ನು ಹಂಚಿಕೊಂಡಿರುವ ಈವ್ ಹಂಫ್ರಿ, ತಮಾಷೆಯಾಗಿ ಬರೆದುಕೊಂಡಿದ್ದಾರೆ. “ಹ್ಯಾಪಿ ಬರ್ತ್ ಡೇ, ನಾನೀಗ ಬಹುಶಃ ಆಸ್ಪತ್ರೆಗೆ ಹೋಗಬೇಕು’ ಎಂದು ಹೇಳಿದ್ದಾರೆ. ಒಟ್ಟಾರೆ, ಹಂಫ್ರಿ ಕುಟುಂಬಕ್ಕೆ ಮಕ್ಕಳ ಜನನದ ಸಮಯ ಸೋಜಿಗವನ್ನು ತಂದಿದೆ. ವಿಶೇಷ ಅನುಭೂತಿ ನೀಡಿದೆ.