Asianet Suvarna News Asianet Suvarna News

ಆಮೀರ್​ ಖಾನ್​ ಮೊದಲ-ಎರಡನೇ ವಿಚ್ಛೇದಿತ ಪತ್ನಿಯಂದಿರಿಗೆ ಮದ್ವೆ ಮನೆಯಲ್ಲೇ ಕ್ಲ್ಯಾಷ್​: ವಿಡಿಯೋ ವೈರಲ್​

ನಟಿ ಇರಾ ಖಾನ್​ ಮದ್ವೆಯ ದಿನ ಆಮೀರ್​ ಖಾನ್​ ಮೊದಲ ಮತ್ತು ಎರಡನೆಯ ಪತ್ನಿಗೆ ಫೋಟೋ ಸೆಷನ್​ನಲ್ಲಿ ಕ್ಲ್ಯಾಷ್​ ಆಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ...
 

Aamir Khans first and second wives clashed in Ira Khans marriage photo session suc
Author
First Published Jan 4, 2024, 12:54 PM IST

ಕೆಲವು ಬಾಲಿವುಡ್ ನಟರಂತೆ ಆಮೀರ್​ ಖಾನ್​ ಕೂಡ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇಬ್ಬರು ಹಿಂದೂ ಯುವತಿಯರನ್ನು ಮದ್ವೆಯಾಗಿ ಇದೀಗ ಇಬ್ಬರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್​ ಮತ್ತು ಜುನೈದ್​ ಖಾನ್​ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್​ ರಾವ್​ ಅವರಿಂದ ಆಜಾದ್​ ರಾವ್​ ಖಾನ್​ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ.  ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ನಿನ್ನೆ ಅಂದರೆ ಡಿಸೆಂಬರ್​ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್​ ಅವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿದೆ. 
 
 ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ  ಇರಾ ಖಾನ್​ ಮತ್ತು  ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಮದುವೆ ಮಾಡಿಕೊಂಡರು. ಕಳೆದ ಒಂದು ವಾರದಿಂದ ಮದುವೆ ಕಾರ್ಯಕ್ರಮದ ಪೂರ್ವ ಶಾಸ್ತ್ರಗಳು ಜೋರಾಗಿ ನಡೆದಿತ್ತು. ಇದೀಗ ಮದುವೆಯಾಗಿದೆ. ಇದರ ಹಲವು ವಿಡಿಯೋಗಳು ವೈರಲ್​ ಆಗುತ್ತಿವೆ.  2020ರ ಇದೇ ದಿನದಂದು ಅಂದರೆ  ಜನವರಿ 3ರಂದು  ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್​ ಮಾಡಿದ ಬಳಿಕ ಇದೀಗ ಮದುವೆಯಾಗುತ್ತಿದೆ ಈ ಜೋಡಿ. ಇರಾ ಖಾನ್​ ಸ್ಟಾರ್​ ಕಿಡ್​ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.   ನೂಪುರ್ ಶಿಖರೆ  ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ದರು. ಶಿಕ್ರೆ ಫಿಟ್​ನೆಸ್​ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್​ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದು ಮದುವೆ ನೆರವೇರಿದೆ.

ಆಮೀರ್​ ಪುತ್ರಿ ಇರಾಗೆ ಮದ್ವೆ ದಿನನೇ ಆಂಟಿ ಶಾಕ್! ಈ ರೀತಿ ವೇಷ ಮಾಡ್ಕೊಂಡ್ರೆ ಇನ್ನೇನ್​ ಆಗತ್ತೆ ಕೇಳಿದ ನೆಟ್ಟಿಗರು

ಮದುವೆಯ ವಿಡಿಯೋಗಳು ವೈರಲ್​ ಆಗುತ್ತಲೇ ಒಂದೊಂದು ವಿಶೇಷತೆ ಕಂಡುಬರುತ್ತಿದೆ. ಅದೇನೆಂದರೆ ಮದುವೆಯ ದಿನ ನಡೆದ ಫೋಟೋ ಸೆಷನ್​ನಲ್ಲಿ ಮೊದಲಿಗೆ ಆಮೀರ್​ ಖಾನ್​ ಮತ್ತು ಎರಡನೆಯ ಪತ್ನಿ ಕಿರಣ್​ ರಾವ್​ ನಿಂತಿದ್ದರು. ಫೋಟೋ ಸೆಷನ್​ ನಡೆಯುತ್ತಿದ್ದಂತೆಯೇ ಮೊದಲ ಪತ್ನಿ ಅಂದರೆ ಮದುಮಗಳು ಇರಾ ಖಾನ್​ ತಾಯಿ ರೀನಾ ದತ್ತಾ ಹಾಜರಾದರು. ಅವರು ಅರಿವಿಲ್ಲದೇ ಮೊದಲು ಕಿರಣ್​ ಅವರ ಪಕ್ಕದಲ್ಲಿಯೇ  ನಿಂತರು. ನಂತರ ಆಮೀರ್​ ಖಾನ್​ ಇನ್ನೊಂದು ಮೂಲೆಗೆ ಹೋಗುತ್ತಿದ್ದಂತೆಯೇ ನಿಧಾನವಾಗಿ ಕಿರಣ್​ ರಾವ್​ ಪಕ್ಕದಿಂದ ತಪ್ಪಿಸಿಕೊಂಡ ರೀನಾ ದತ್ತಾ ಆಮೀರ್​ ಖಾನ್​ ಪಕ್ಕದಲ್ಲಿ ಹೋಗಿ ನಿಂತರು. ಆಗ ಕಿರಣ್​ ರಾವ್​ ಅವರ  ಮುಖ ಸಪ್ಪಗಾಯಿತು.

ಇದರ ವಿಡಿಯೋ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಇದಕ್ಕೂ ಮುನ್ನ ಆಮೀರ್​ ಖಾನ್​ ಕಿರಣ್​ ರಾವ್​ ಅವರನ್ನು ವೇದಿಕೆಯ ಮೇಲೆಯೇ ಕಿಸ್​ ಮಾಡಿದ್ದರು. ಹೀಗೆಲ್ಲಾ ಮಾಡಿದರೆ  ಮತ್ತೆ ರೀನಾ ಅವರಿಗೆ ಕೋಪ ಬರದೇ ಇರುತ್ತದೆಯೇ ಎಂದು ಕೆಲವು ನೆಟ್ಟಿಗರು ಕಾಲೆಳೆದಿದ್ದರೆ, ಇಬ್ಬರೂ ಮಾಜಿ ಆದ್ರೂ ಕ್ಲ್ಯಾಷ್​ ಆಗ್ತಿದೆ ಅಂತ ಮತ್ತೆ ಕೆಲವರು ತಮಾಷೆ ಮಾಡುತ್ತಿದ್ದಾರೆ. ಏನೇ ಹೇಳಿ ಇಬ್ಬರಿಗೂ ಡಿವೋರ್ಸ್​ ಕೊಟ್ರೂ ಇಬ್ಬರನ್ನೂ ಚೆನ್ನಾಗಿ ಹ್ಯಾಂಡಲ್​ ಮಾಡೋದು ಖಾನ್​ ಸಾಹೇಬರಿಗೆ ಚೆನ್ನಾಗಿ ಗೊತ್ತಿದೆ ಎಂದು ಮತ್ತೆ ಕೆಲವರು ಆಮೀರ್​ ಖಾನ್​ರ ಕಾಲೆಳೆಯುತ್ತಿದ್ದಾರೆ. ಆದರೆ ಇನ್ನು ಕೆಲವರು ಮೊದಲ ಪತ್ನಿಯ ಮಗಳ ಮದುವೆಯಾದರೂ ಕಿರಣ್​ ರಾವ್​ ಮದುವೆಗೆ ಹಾಜರು ಇರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಮಗಳ ಮದ್ವೆ ದಿನ ಆಮೀರ್​ ಖಾನ್​ ಕಿಸ್​ ಕೊಟ್ರೆ ಗುಟ್ಟಾಗಿ ​ಕೆನ್ನೆ ಒರೆಸಿಕೊಂಡ ಮಾಜಿ ಪತ್ನಿ! ಕ್ಯಾಮೆರಾ ಕಣ್ಣಿಗೆ ಬೀಳದೇ ಇರುತ್ತಾ?

 

Follow Us:
Download App:
  • android
  • ios