ಪತಿ ಬಿಟ್ಟೇನು…ಹಲ್ಲುಜ್ಜೋದು ಬಿಡಲ್ಲ! ಏನಿದು ವಿಚ್ಛೇದನ ಪ್ರಕರಣ

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ. ಆದ್ರೆ ಕೆಲವೊಂದು ವಿರಸ  ವಿಚಿತ್ರವಾಗಿರುತ್ತದೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ, ಅಧಿಕಾರಿಗಳ ಮುಂದೆ ಬಂದಾಗ ಅದನ್ನು ಬಗೆಹರಿಸಲು ಬಂದೋರಿಗೆ ತಲೆಕೆಡುತ್ತೆ. ಎತ್ತು ಏರಿಕೆ, ಕೋಣ ನೀರಿಗೆ ಎನ್ನುತ್ತಿರುವ ಈ ದಂಪತಿಗೆ ಏನು ಹೇಳ್ಬೇಕು ಗೊತ್ತಾಗದ ಸ್ಥಿತಿಯಲ್ಲಿದ್ದಾರೆ ಅಧಿಕಾರಿಗಳು. 
 

Tobacco Manjan Led To Divorce roo

 ಸಂಬಂಧಗಳು ಮಹತ್ವ ಕಳೆದುಕೊಳ್ತಿರುವ ಕಾಲ ಇದು. ದಂಪತಿ ಮಧ್ಯೆ ಹೊಂದಾಣಿಕೆ ಮರೀಚಿಕೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ದಾಂಪತ್ಯ, ಪ್ರೀತಿ, ವಿಶ್ವಾಸದ ಹಾಗೂ ಹೊಂದಾಣಿಕೆ ಮೇಲೆ ನಿಂತಿರುತ್ತದೆ. ಇಬ್ಬರ ಸ್ವಭಾವ ವಿರುದ್ಧವಾಗಿದ್ದರೂ ಅವರ ಜೊತೆ ಹೊಂದಿಕೊಂಡು ಜೀವನ ನಡೆಸಿದಾಗ್ಲೇ ದಾಂಪತ್ಯ ದೀರ್ಘಕಾಲ ಬಾಳಿಕೆ ಬರಲು ಸಾಧ್ಯ. ಈಗಿನ ಜನತೆಗೆ ತಾಳ್ಮೆ ಕಡಿಮೆಯಾಗಿದೆ. ತಮ್ಮಂತೆ ತಮ್ಮ ಸಂಗಾತಿ ಇರಬೇಕು ಅಥವಾ ಅವರಿಗಾಗಿ ನಾವು ಬದಲಾಗಲು ಸಾಧ್ಯವೇ ಇಲ್ಲ ಎನ್ನುವ ಜಿದ್ದಿನೊಂದಿಗೆ ಜೀವನ ನಡೆಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿಯೇ ಭಾರತದಲ್ಲಿ ವಿಚ್ಛೇದನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೌಟುಂಬಿಕ ಸಲಹಾ ಕೇಂದ್ರಕ್ಕೆ ಚಿತ್ರವಿಚಿತ್ರ ಪ್ರಕರಣಗಳು ಬರ್ತಿವೆ. ಕೆಲವೊಂದು ಸಮಸ್ಯೆ ಕೇಳಿದ ಅಧಿಕಾರಿಗಳೇ ದಂಗಾಗ್ತಿದ್ದಾರೆ. ದಂಪತಿ ಮಧ್ಯೆ ಹೊಂದಾಣಿಕೆ ತರುವ ಪ್ರಯತ್ನ ನಡೆಸಿ ಸೋಲ್ತಿದ್ದಾರೆ. ಆಗ್ರಾ ಕೌಟುಂಬಿಕ ಸಲಹಾ ಕೇಂದ್ರ ಸದ್ಯ ಸುದ್ದಿಯಲ್ಲಿದೆ. ಅಲ್ಲಿಗೆ ಬರ್ತಿರುವ ವಿಚ್ಛೇದನ ಪ್ರಕರಣಗಳು ಅಧಿಕಾರಿಗಳ ತಲೆ ಕೆಡಿಸಿದೆ. 

ಈಗ ಆಗ್ರಾ (Agra) ದ ಮಂಟೋಲಾ ಪ್ರದೇಶದ ಯುವಕನೊಬ್ಬ ಫತೇಪುರ್ ಸಿಕ್ರಿಯ ಹುಡುಗಿಯನ್ನು ಮದುವೆ (Marriage) ಯಾಗಿ 8 ತಿಂಗಳಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಇದಕ್ಕೆ ಹುಡುಗಿ ಚಟ ಕಾರಣ ಎನ್ನುವುದು ಅವನ ವಾದ. ಪತಿ (Husband) ಬಿಟ್ಟೇನು ನನ್ನ ಚಟ ಬಿಡಲೊಲ್ಲೆ ಅನ್ನೋದು ಹುಡುಗಿ ವಾದ.

ಹುಡುಗಿಗೆ ಪ್ರಪೋಸ್ ಮಾಡುವ ಮುಂಚೆ ಈ ವಿಷ್ಯ ತಿಳ್ಕೊಂಡ್ರೆ ರಿಜೆಕ್ಟ್ ಆಗೋ ಚಾನ್ಸ್ ಇರೋದಿಲ್ಲ

ಹುಡುಗಿಗೆ ಮದುವೆಗೆ ಮೊದಲೇ ಈ ಅಭ್ಯಾಸವಿತ್ತು. ಹುಡುಗಿ ನೇರವಾಗಿ ತಂಬಾಕನ್ನು ಸೇವನೆ ಮಾಡೋದಿಲ್ಲ. ತಂಬಾಕು ಬೆರೆಸಿದ  ಪುಡಿಯನ್ನು ಬಳಸಿ ಹಲ್ಲುಜ್ಜುತ್ತಿದ್ದಳು.  ದಿನಕ್ಕೆ ಎರಡು ಬಾರಿ, ತಂಬಾಕಿನ ಪುಡಿ ಇರುವ ಪೇಸ್ಟ್ ಬಳಕೆ ಮಾಡ್ತಿದ್ದಳು. ನಂತ್ರ ಪತ್ನಿ ಎಲ್ಲೆಂದರೆಲ್ಲಿ ಓಡಾಡ್ತಾಳೆ ಎಂಬುದು ಗಂಡನ ಆರೋಪ. ಮದುವೆಯಾದ ಕೆಲ ದಿನಗಳಲ್ಲೇ ಪತ್ನಿಯ ಈ ಕೆಲಸವನ್ನು ಪತಿ ವಿರೋಧಿಸಿದ್ದಾನೆ. ಆದ್ರೆ ಪತ್ನಿ ಚಟ ಬಿಡದ ಕಾರಣ ಎರಡು ತಿಂಗಳ ಹಿಂದೆ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. 

ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ಈ ವೇಳೆ ಪತಿ ಬಿಟ್ಟೇನು, ತಂಬಾಕು ಬಿಡೋದಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಪತ್ನಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಈ ಕೆಲಸ ಮಾಡ್ತಾಳೆ. ಆಕೆ ಈ ಚಟವನ್ನು ಬಿಟ್ಟರೆ ನಾನು ಅವಳನ್ನು ಮತ್ತೆ ಮನೆಗೆ ಕರೆದೊಯ್ಯುತ್ತೇನೆ ಎಂದು ಪತಿ ಹೇಳಿದ್ದಾನೆ. ಆದ್ರೆ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಪತ್ನಿ ತನ್ನ ಹಠ ಬಿಡಲಿಲ್ಲ. ಕೊನೆಯವರೆಗೂ ತನ್ನ ಪಟ್ಟು ಬಿಡಲಿಲ್ಲ. ಆಕೆಯ ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿ ಸೋತಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ಮುಂದುವರೆದಿದ್ದು, ನಿಗದಿತ ದಿನಾಂಕದಂದು ಮತ್ತೆ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮುಂದಿನ ಬಾರಿ ಪತಿ ಹಾಗೂ ಪತ್ನಿ ಕುಟುಂಬಸ್ಥರನ್ನೂ ಕರೆಯಲಾಗಿದೆ.

ವ್ಯಾಲಂಟೈನ್ಸ್ ಡೇ ದಿನ ಮ್ಯಾಜಿಕ್ ಮಾಡಲಿದೆ ಕ್ಯಾಡ್ಬರಿ 5 ಸ್ಟಾರ್ ಫೆ. 14ರ ಸ್ಪೆಷಲ್ ಇದು!

ಆಗ್ರಾ ಕೌಟುಂಬಿಕ ಸಲಹಾ ಕೇಂದ್ರದಲ್ಲಿ (Family Counselling Cener) ಇನ್ನೊಂದು ಪ್ರಕರಣ ಕೂಡ ಸುದ್ದಿ ಮಾಡಿತ್ತು. ಪತ್ನಿ ರಾಜಕೀಯದಲ್ಲಿ (Politics) ಆಸಕ್ತಿ ತೋರಿದ್ದು, ಮನೆ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವ ಕಾರಣಕ್ಕೆ ಪತಿಯೊಬ್ಬ ವಿಚ್ಛೇದನ (Divorce) ನೀಡಲು ಮುಂದಾದ ಪ್ರಕರಣ ಇದಾಗಿದೆ. ಹೋರ್ಡಿಂಗ್ಸ್ ನಲ್ಲಿ ರಾಜಕೀಯ ನಾಯಕರ ಜೊತೆ ಪತ್ನಿ ಫೋಟೋ ನೋಡಿ ಕೋಪಗೊಂಡಿರುವ ಪತಿ, ಪತ್ನಿ ರಾಜಕೀಯಬಿಡದೆ ಹೋದ್ರೆ ವಿಚ್ಛೇದನ ನೀಡುವ ಧಮಕಿ ಹಾಕಿದ್ದಾನೆ. ರಾಜಕೀಯವನ್ನು ವೃತ್ತಿ (Political Career) ಮಾಡಿಕೊಳ್ಳುವ ಕನಸುಕಂಡಿರುವ ಪತ್ನಿ, ರಾಜಕೀಯ ಬಿಡಲು ಸಾಧ್ಯವಿಲ್ಲ ಎನ್ನುತ್ತಿದ್ದಾಳೆ. ಮದುವೆಯಾಗಿ ಒಂದು ಮಗು ಹೊಂದಿರುವ ಈ ದಂಪತಿ ಸಮಸ್ಯೆ ಕೂಡ ಅಧಿಕಾರಿಗಳಿಗೆ ತಲೆನೋವು ತಂದಿದೆ.  

Latest Videos
Follow Us:
Download App:
  • android
  • ios