Asianet Suvarna News Asianet Suvarna News

Wedding Albumನಲ್ಲಿ ನಿಮ್ಮ ಲುಕ್ ಸಖತ್ತಾಗಿರ್ಬೇಕು ಅಂದ್ರೆ ಹೀಗ್ಮಾಡಿ..

ಮದುವೆಯ ಸನ್ನಿವೇಶಗಳು ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತಾಗಬೇಕು ಎನ್ನುವ ಜತೆಗೆ, ಮದುವೆ ಫೋಟೋ ಆಲ್ಬಮ್ ಕೂಡ ಸುಂದರವಾಗಿ ಮೂಡಿಬರಬೇಕು ಎನ್ನುವುದು ಎಲ್ಲರ ಬಯಕೆ. ಮದುವೆಯ ಫೋಟೋ ಚೆನ್ನಾಗಿ ಬರಬೇಕು ಎಂದಾದರೆ ಈ ಟಿಪ್ಸ್ ಅನುಸರಿಸಿ.
 

Tips to Looking Your Best in Wedding Pictures
Author
Bangalore, First Published Mar 17, 2022, 5:57 PM IST

ಮದುವೆ (Marriage) ಸಮಾರಂಭ ಸ್ಮರಣೀಯವಾಗಿರಬೇಕು ಎನ್ನುವುದು ಎಲ್ಲರ ಬಯಕೆ. ಅದಕ್ಕಾಗಿ ವಿಭಿನ್ನ ಶೈಲಿಯಲ್ಲಿ ಮದುವೆಯಾಗುವ ಟ್ರೆಂಡ್ (Trend) ಕೂಡ ಇದೆ. ಒಂದೊಮ್ಮೆ ವಿಭಿನ್ನವಾಗಿ ಮದುವೆಯಾಗದಿದ್ದರೂ ಮದುವೆಯ ಫೋಟೋ (Photo), ವಿಡಿಯೋಗಳಾದರೂ ನಾವಿರುವವರೆಗೆ ಚೆನ್ನಾಗಿರಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಜತೆಗೆ, ಮದುವೆಯ ಫೋಟೋಗಳಲ್ಲಿ ಎಂದಿಗಿಂತ ಚೆನ್ನಾಗಿ ಕಾಣಿಸಬೇಕು ಎನ್ನುವ ಆಸೆಯೂ ಇರುತ್ತದೆ. 

ಮದುವೆಯ ಫೋಟೋ ನೋಡಿದರೆ ಆಹಾ, ಮದುಮಕ್ಕಳು (Couples) ಎಷ್ಟು ಚೆನ್ನಾಗಿ ಕಾಣಿಸುತ್ತಾರೆ ಎಂದೆನಿಸಬೇಕು. ಆದರೆ, ಬಹಳಷ್ಟು ಬಾರಿ ಮದುವೆಯ ಫೋಟೋ ನಿರೀಕ್ಷಿಸಿದಷ್ಟು ಚೆನ್ನಾಗಿ ಬರುವುದಿಲ್ಲ. ಇತ್ತೀಚೆಗೆ ಅತ್ಯುತ್ತಮ ಕ್ಯಾಮರಾ(Camera)ಗಳು ಬಂದಿವೆ, ಫೋಟೋಶೂಟ್ (Photoshoot) ಗಳನ್ನೂ ಚೆನ್ನಾಗಿಯೇ ಮಾಡುತ್ತಾರೆ. ಆದರೂ ಮದುವೆ ಸಂದರ್ಭದಲ್ಲಿ ನಿದ್ದೆಗೆಟ್ಟ ಪರಿಣಾಮವಾಗಿ, ಆತಂಕ ಹಾಗೂ ಒಂದಿಷ್ಟು ಉದ್ವೇಗದ ಕಾರಣದಿಂದ ಫೋಟೋ ಚೆನ್ನಾಗಿ ಬಂದಿರುವುದಿಲ್ಲ. ಎಷ್ಟೋ ಫೋಟೋಗಳನ್ನು ನೋಡಿದಾಗ ನಮಗೆ ಬೇಸರವಾಗುತ್ತದೆ, ನಗುವೂ ಬರುತ್ತದೆ.

ಮದುವೆಯ ಫೋಟೋಗಳು ಚೆನ್ನಾಗಿರಬೇಕಾದರೆ ಕೆಲವು ಮಾರ್ಗಗಳನ್ನು ಅನುಸರಿಸಬಹುದು. ವೆಡ್ಡಿಂಗ್ ಆಲ್ಬಮ್ ಅದ್ಭುತವಾಗಿ ಮೂಡಿಬರಲು ಹೀಗೆ ಪ್ಲಾನ್ ಮಾಡಿಕೊಳ್ಳಿ.

•    ಫಸ್ಟ್ ಲುಕ್ (First Look)
ಮದುವೆಯ ದಿನ ಸಿಂಗಾರವಾಗಿ ಬಂದ ಮೊದಲ ಕೆಲವು ಕ್ಷಣಗಳು ಬಹಳ ಮುಖ್ಯ. ಮದುಮಕ್ಕಳಿಗೆ ಆ ಸಮಯದಲ್ಲಿ ಫೋಟೋಗ್ರಾಫರ್ (Photographer) ನೆನಪಾಗದೆ ಇರಬಹುದು. ಹೀಗಾಗಿ, ಅವರಿಗೆ ಮೊದಲೇ ತಿಳಿಸಿಡಬೇಕು. ಆ ಸಮಯದಲ್ಲಿ ಸಾಕಷ್ಟು ಫೋಟೋಗಳನ್ನು ತೆಗೆದುಬಿಡಿ ಎಂದು. ಭಾವನಾತ್ಮಕವಾಗಿಯೂ ಅದು ವಿಶಿಷ್ಟ ಕ್ಷಣಗಳಾಗಿರುತ್ತವೆ. ಅವುಗಳನ್ನು ಸೆರೆಹಿಡಿಯುವುದು ಅಗತ್ಯ. ಮುಹೂರ್ತಕ್ಕೆ ಸಮಯವಿದ್ದರೆ ಆಗಲೇ ಫೋಟೋಶೂಟ್ ಕೂಡ ಮಾಡಬಹುದು.

ಬರುತ್ತಿದೆ ಹೊಸ Corona ಅಲೆ! Stealth Omicron ಲಕ್ಷಣಗಳೇನು ಗೊತ್ತಾ?

•    ಅದ್ಭುತ ನಗು (Candid Laughter) 
ಕ್ಯಾಮರಾದಲ್ಲಿ ನೈಜವಾದ ನಗು (Smile) ತುಂಬ ಅದ್ಭುತವಾಗಿ ಮೂಡುತ್ತದೆ. ಫೋಟೋಗ್ರಾಫರ್ ಗಳು ಫೋಟೋಶೂಟ್ ಮಾಡುವಾಗ ನಗುವಂತೆ ಸೂಚಿಸುತ್ತಾರೆ. ಆದರೆ, ಉಳಿದ ಸಮಯಗಳಲ್ಲಿ ನಿಮ್ಮದೇ ಭಾವಲಹರಿಯಲ್ಲಿ ನೀವಿರುತ್ತೀರಿ. ಇದರಿಂದ ಎಷ್ಟೋ ಬಾರಿ ಫೋಟೋಗಳು ಚೆಂದ ಬರುವುದಿಲ್ಲ. ಹಾಗಾಗದಿರಲು ರಿಲ್ಯಾಕ್ಸ್ (Relax) ಆಗಿರಿ. ಮದುವೆಯ ಪ್ರಕ್ರಿಯೆಯ ಸಂದರ್ಭ ನಗುನಗುತ್ತಿರಿ. ಮದುಮಕ್ಕಳು ಚಿಕ್ಕ ಚಿಕ್ಕ ಜೋಕ್ ಕಟ್ (Joke) ಮಾಡಿಕೊಳ್ಳಿ. ಸಮೀಪದವರಲ್ಲಿ ಚೆನ್ನಾಗಿ ಮಾತನಾಡಿ. ಇವುಗಳನ್ನೆಲ್ಲ ಕೃತಕವಾಗಿ ಮಾಡಬೇಕೆಂದಲ್ಲ. ನೀವು ರಿಲ್ಯಾಕ್ಸ್ ಮೂಡಿನಲ್ಲಿದ್ದರೆ ಇವೆಲ್ಲ ಸಾಧ್ಯವಾಗುತ್ತವೆ. ನೀವು ಸಹಜವಾಗಿದ್ದಷ್ಟೂ ಫೋಟೋಗಳು ಕೂಡ ಸಹಜವಾಗಿ ಚೆನ್ನಾಗಿ ಮೂಡುತ್ತವೆ. 

•    ನಡಿಗೆಯ ಭಂಗಿ (Walking)
ಫೋಟೋಶೂಟ್ ಸಮಯದಲ್ಲಿ ದಂಪತಿ ನರ್ವಸ್ ಆಗಿದ್ದರೆ ಫೋಟೋಗಳು ಸುಂದರವಾಗಿ ಬರುವುದಿಲ್ಲ. ಆ ಸಮಯದಲ್ಲಿ ಜತೆಯಾಗಿ ವಾಕ್ ಮಾಡುವ ಫೋಟೋಗಳನ್ನು ತೆಗೆಸಿಕೊಳ್ಳಬಹುದು. ಫೋಟೋಗ್ರಾಫರ್ ಸ್ವತಃ ಈ ಬಗ್ಗೆ ಐಡಿಯಾ ನೀಡಿದರೆ ಸರಿ. ಇಲ್ಲವಾದಲ್ಲಿ ನೀವೇ ಅವರಿಗೆ ಸೂಚಿಸಿ. ನೀವು ವಾಕ್ ಮಾಡಿ, ಸಾಮೀಪ್ಯದಲ್ಲಿ ಮಾತನಾಡಿ. ಅವರಿಗೆ ಫೋಟೋ ತೆಗೆಯುವಂತೆ ತಿಳಿಸಿ. ಕೈಗಳನ್ನು ಒಬ್ಬರಿಗೊಬ್ಬರು ಬೆಸೆದುಕೊಂಡಿರಿ. ಅಕ್ಕಪಕ್ಕದಲ್ಲಿ ಖುಷಿಯಾಗಿ ಸಾಗಿ, ಸಣ್ಣದಾಗಿ ಡ್ಯಾನ್ಸ್ ಕೂಡ ಮಾಡಬಹುದು. ಪರಸ್ಪರ ರೇಗಿಸಿಕೊಳ್ಳಬಹುದು. ಫೋಟೋಗಳಲ್ಲೂ ಇವೆಲ್ಲ ಮೂಡಿ ನಿಮ್ಮ ಮದುವೆಯ ಆಲ್ಬಮ್ ಗೆ ಮತ್ತಷ್ಟು ಕಳೆ ನೀಡುತ್ತವೆ. 

ಇಂಥಾ ವಿಚಾರಗಳನ್ನು ಹೆಂಡ್ತಿ ಗಂಡನಿಂದ ಮುಚ್ಚಿಡೋದ್ರಲ್ಲಿ ತಪ್ಪೇನಿಲ್ವಂತೆ !

•    ಸಾಮೀಪ್ಯ (Nearness)
ಪ್ರೀತಿ ಬೆರೆತ ಸಾಮೀಪ್ಯದ ಫೋಟೋಗಳನ್ನು ತೆಗೆಸಿಕೊಳ್ಳಲು ಟ್ರೈ ಮಾಡಬಹುದು. ನರ್ವಸ್ ಆಗಿದ್ದರೆ ಚೆನ್ನಾಗಿ ಬರುವುದಿಲ್ಲ. ಕಿಸ್ ನೀಡುವಷ್ಟು ಸನಿಹದ ಚಿತ್ರಗಳನ್ನೂ ತೆಗೆಸಿಕೊಳ್ಳಬಹುದು. ಕ್ಲೋಸ್ ಅಪ್ ಹಾಗೂ ಇಡೀ ದೇಹ ಕಾಣಿಸುವಂತಹ ಫೋಟೋಗಳನ್ನು ಇಂತಹ ವಿವಿಧ ಭಂಗಿಗಳಲ್ಲಿ ತೆಗೆಸಿಕೊಳ್ಳುವುದು ಸೂಕ್ತ. 
ಮದುವೆಯ ಪ್ರತೀ ಫೋಟೋವೂ ಖಂಡಿತವಾಗಿ ಚೆನ್ನಾಗಿ ಬರಲಿಕ್ಕಿಲ್ಲ. ಆದರೆ, ಮದುವೆಯಲ್ಲಿ ಒತ್ತಡವಿಲ್ಲದೆ, ಆರಾಮದಾಯಕ ಮೂಡಿನಲ್ಲಿದ್ದರೆ, ಖುಷಿಯಾಗಿದ್ದರೆ, ನಗುನಗುತ್ತಿದ್ದರೆ ಬಹುತೇಕ ಎಲ್ಲ ಫೋಟೋಗಳೂ ಚೆನ್ನಾಗಿಯೇ ಬರುವುದು ಗ್ಯಾರೆಂಟಿ. 


 

Follow Us:
Download App:
  • android
  • ios