Asianet Suvarna News Asianet Suvarna News

ಇಂಥಾ ವಿಚಾರಗಳನ್ನು ಹೆಂಡ್ತಿ ಗಂಡನಿಂದ ಮುಚ್ಚಿಡೋದ್ರಲ್ಲಿ ತಪ್ಪೇನಿಲ್ವಂತೆ !

ಸೀಕ್ರೆಟ್ (Secret) ಅನ್ನೋದು ಯಾರ ಜೀವನದಲ್ಲಿ ಇಲ್ಲ ಹೇಳಿ. ಎಲ್ಲರ ಜೀವನ (Life)ದಲ್ಲೂ ಒಂದಲ್ಲಾ ಒಂದು ರಹಸ್ಯವಿರುತ್ತದೆ. ಆದ್ರೆ ಗಂಡ-ಹೆಂಡ್ತಿ (Husband-Wife) ಮಧ್ಯೆ ಹಾಗೆಲ್ಲಾ ಸೀಕ್ರೆಟ್ ಇರ್ಬಾದು ಅಂತಾರೆ. ಆದ್ರೆ ಈ ಕೆಲವೊಂದು ವಿಚಾರಗಳನ್ನು ಹೆಂಡ್ತಿ ಗಂಡನಿಂದ ಮುಚ್ಚಿಟ್ರೆ ತಪ್ಪೇನಿಲ್ವಂತೆ.

Things You Do Dot Have To Discuss With Your Husband Vin
Author
Bengaluru, First Published Mar 17, 2022, 5:37 PM IST

ದಾಂಪತ್ಯ (Married Life) ಎಂದಾಗ ಗಂಡ-ಹೆಂಡತಿಯ ಮಧ್ಯೆ ಸಾಮರಸ್ಯವಿರಬೇಕಾದುದು ಅತೀ ಮುಖ್ಯ. ಇಬ್ಬರ ನಡುವೆ ಅತಿಯಾದ ಪ್ರೀತಿ, ಅದಕ್ಕಿಂತ ಹೆಚ್ಚಾಗಿ ನಂಬಿಕೆ ಇರಲೇಬೇಕು. ಗಂಡ-ಹೆಂಡತಿ (Husband-Wife) ಯಾವ ವಿಷ್ಯವನ್ನೂ ಸೀಕ್ರೆಟ್ ಮಾಡಬಾರದು. ಅದು ಎಂಥಾ ವಿಚಾರವೇ ಆಗಿದ್ರೂ ಪರಸ್ಪರ ಶೇರ್ ಮಾಡಿಕೊಳ್ಬೇಕು ಅಂತ ಹಿರಿಯರು ಹೇಳ್ತಾರೆ. ಪರಸ್ಪರ ಸುಳ್ಳು ಹೇಳೋದ್ರಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಗಂಡ-ಹೆಂಡತಿ ದೂರವಾಗ್ತಾರೆ ಅಂತಾನೂ ಹೇಳ್ತಾರೆ. ಹೀಗಾಗಿಯೇ ಗಂಡ-ಹೆಂಡತಿ ತಮ್ಮ ಜೀವನದಲ್ಲಾಗುವ ಘಟನೆಗಳನ್ನು ಪರಸ್ಪರ ಶೇರ್ ಮಾಡಿಕೊಳ್ತಾರೆ.

ಆದ್ರೆ ಸೀಕ್ರೆಟ್ (Secret) ಅಥವಾ ಗುಟ್ಟು ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಇರುತ್ತೆ. ಕೆಲವೊಂದು ವಿಚಾರಗಳನ್ನು ಕೆಲವೊಬ್ಬರಿಗೆ ಹೇಳೋದು ಬೇಡ ಅನ್ಸುತ್ತೆ. ಆದ್ರೆ ಗಂಡ-ಹೆಂಡ್ತಿ ಎಂದಾಗ ಗುಟ್ಟು ಮಾಡೋದಿಕ್ಕೆ ಆಗೋದಿಲ್ಲ ಅಲ್ವಾಂತ ಶೇರ್ ಮಾಡಿಕೊಳ್ಬೇಕು. ಆದ್ರೆ ಯಾವಾಗ್ಲೂ ಕೆಲವೊಂದು ವಿಚಾರ ಗುಟ್‌ ಗುಟ್ಟಾಗಿರೋ ಅಂದ್ಕೊಳ್ಳೋ ಹೆಂಗಸರಿಗೆ ಖುಷಿ ವಿಚಾರ ಇದೆ ನೋಡಿ. ಈ ಕೆಲವು ವಿಚಾರಗಳನ್ನು ಹೆಂಡ್ತಿ ಗಂಡನಿಂದ ಮುಚ್ಚಿಟ್ಟೂ ತಪ್ಪೇನಿಲ್ಲಾಂತೆ ಬಿಡಿ. ಅದೇನೂಂತ ತಿಳ್ಕೊಳ್ಳೋಣ.

ಪತ್ನಿ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಿದ್ರೆ No Problem ಅಂತಾನೆ ಈ ಪತಿ ಮಹಾಶಯ!

ಕುಟುಂಬ ಸದಸ್ಯರು ಇಷ್ಟವಿಲ್ಲ
ಹೆಂಡತಿಗೆ ಗಂಡ ಇಷ್ಟವಾದಂತೆ, ಗಂಡನಿಗೆ ಹೆಂಡತಿ ಇಷ್ಟವಾದಂತೆ ಮನೆಯ ಇತರ ಸದಸ್ಯರೂ ಇಷ್ಟವಾಗಬೇಕೆಂದಿಲ್ಲ. ಅತ್ತೆ-ಮಾವ, ಓರಗಿತ್ತಿಯರ ವರ್ತನೆಗಳು ಕೆಲವೊಮ್ಮೆ ಅತಿರೇಕವೆನಿಸಬಹುದು. ಆದರೆ ಇದೆಲ್ಲವನ್ನೂ ಗಂಡನಿಗೆ ಹೇಳಿ ಅವರನ್ನು ನೋಯಿಸುವ ಅಗತ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸ್ವಭಾವ ಭಿನ್ನವಾಗಿರುತ್ತದೆ.  ಅದನ್ನು ಟೀಕಿಸಿ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಕುಟುಂಬ ಸದಸ್ಯರನ್ನು ಹೀಗಳೆಯುವ ಮೂಲಕ ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡಲು ಆಸ್ಪದ ಮಾಡಕೊಡಬೇಡಿ.

ಹಿಂದಿನ ಲೈಂಗಿಕ ಜೀವನ
ಮದುವೆಯಾದ ನಂತರ ಈ ಹಿಂದಿನ ಲೈಂಗಿಕ ಜೀವನ (Sex)ದ ಬಗ್ಗೆ ಗಂಡನೊಂದಿಗೆ ಮಾತನಾಡಬೇಕು ಎಂದೇನಿಲ್ಲ. ಈ ವಿಚಾರವನ್ನು ಇಷ್ಟವಿದ್ದರೆ ಮಾತ್ರ ಶೇರ್ ಮಾಡಿಕೊಳ್ಳಬಹುದು. ಮಾಜಿ ಬಾಯ್‌ಫ್ರೆಂಡ್ ಬಗ್ಗೆ, ಆತನ ಗುಣಗಳ ಬಗ್ಗೆ ಹೇಳಬೇಕಾಗಿಲ್ಲ. ಇದು ದಾಂಪತ್ಯದಲ್ಲಿ ಅಭದ್ರತೆಯನ್ನು ಮೂಡಿಸುವ ಸಾಧ್ಯತೆಯೇ ಹೆಚ್ಚು. 

ಹಣದ ಸಮಸ್ಯೆಗಳು
ಕುಟುಂಬವೆಂದಾಗ ಹಣಕಾಸಿನ ಸಮಸ್ಯೆಗಳು ಉಂಟಾಗುವುದು ಸಹಜ. ಹಾಗೆಂದು ನೀವು ನಿಮ್ಮ ಪ್ರತಿಯೊಂದು ಲೆಕ್ಕವನ್ನೂ ಗಂಡನಿಗೆ ಒಪ್ಪಿಸಬೇಕೆಂದಿಲ್ಲ. ಹಣಕಾಸಿನ ಬಗ್ಗೆ ಚರ್ಚಿಸಿ, ಜಂಟಿ ಬಜೆಟ್‌ಗಳನ್ನು ರಚಿಸಿ ಆದರೆ ನಿಮ್ಮಿಬ್ಬರ ನಡುವೆ ಹಣವನ್ನು ಸಮಸ್ಯೆಯಾಗಿ ಮಾಡಬೇಡಿ. ಹಣದ ವಿಷಯದಲ್ಲಿ ಅನೇಕ ಜನರು ವಿಭಿನ್ನ ಮನೋಭಾವಗಳನ್ನು ಹೊಂದಿರಬಹುದು. ಕೆಲವರು ಹೆಚ್ಚು ಹಣ ಉಳಿಸುವ ಮನೋಭಾವ ಹೊಂದಿರುತ್ತಾರೆ. ಇನ್ನು ಕೆಲವರು ಹಣವಿದ್ದಾಗ ಖರ್ಚು ಮಾಡಿ ಖುಷಿಯಾಗಿರುವ ಎಂದುಕೊಳ್ಳುತ್ತಾರೆ. ಹೀಗಾಗಿ ಒಂದು ಯೋಚನೆಯನ್ನು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ. 

First Night ಹಾಳು ಮಾಡುತ್ತೆ ಪುರುಷರ ಈ ಸಣ್ಣ ತಪ್ಪು

ಹೊಸ ಸಹೋದ್ಯೋಗಿಗಳು
ಪ್ರೀತಿ ಮೂಡಲು ಮದುವೆಯಾಗಿದೆ, ಮದುವೆಯಾಗಿಲ್ಲ ಎಂಬ ನಿರ್ಬಂಧವಿಲ್ಲ. ಆಕರ್ಷಕ ವ್ಯಕ್ತಿತ್ವವನ್ನು ನೋಡಿದಾಗ ಎಲ್ಲರಿಗೂ ಕ್ರಶ್ (Crush) ಉಂಟಾಗುತ್ತದೆ. ಹೀಗೆ ನಿಮಗೂ ಸಹೋದ್ಯೋಗಿಗಳನ್ನು ನೋಡಿದಾಗ ಅನಿಸಿದರೆ ಅದನ್ನು ಗಂಡನ ಜತೆ ಶೇರ್ ಮಾಡಿಕೊಳ್ಳದಿರಿ. ಇದು ತಪ್ಪಾದ ಅರ್ಥಕ್ಕೂ ಕಾರಣವಾಗಬಹುದು. ಈ ಸಣ್ಣ ವಿಚಾರವೇ ಕೆಲವೊಮ್ಮೆ ಜಗಳಾವಾದಾಗ ದೊಡ್ಡ ಜಗಳಕ್ಕೆ ಕಾರಣವಾಗಬಹುದು.

ಲೈಂಗಿಕತೆಯಲ್ಲಿ ಹೆಚ್ಚು ಆಸಕ್ತಿ
ಲೈಂಗಿಕತೆಯಲ್ಲಿ ಹೆಚ್ಚು ಆಸಕ್ತಿ ಇರುವ ಸ್ವಭಾವ ಕೇವಲ ಪುರುಷರಲ್ಲಿ ಮಾತ್ರವಲ್ಲ, ಮಹಿಳೆ (Women)ಯರಲ್ಲೂ ಕಂಡು ಬರುತ್ತದೆ. ರೋಮ್ಯಾಂಟಿಕ್‌ ಸೀನ್‌, ಸಿನಿಮಾಗಳನ್ನು ನೋಡುವ ಹಂಬಲ ಕಾಡುತ್ತದೆ. ಹಾಗೆಂದು ಈ ವಿಷಯವನ್ನು ಪತಿಯ ಬಳಿ ಹೇಳಿಕೊಳ್ಳಬೇಕೆಂದಿಲ್ಲ. ಆದರೆ ಹೇಳದೆಯೂ ಇಂಥಹಾ ವಿಚಾರ ಗಂಡನಿಗೆ ತಿಳಿಯುತ್ತದೆ ಎಂಬುದು ಬೇರೆ ವಿಷಯ. ಅದಲ್ಲದೆ ಸೆಕ್ಸ್ ಜೀವನದಲ್ಲಿ ಹೆಚ್ಚು ಆಸಕ್ತಿಯಿರುವ ಬಗ್ಗೆ ಹೆಂಡತಿ ಗಂಡನ ಬಳಿ ಮುಕ್ತವಾಗಿ ಹೇಳಿಕೊಳ್ಳಬೇಕಾಗಿಲ್ಲ.

Follow Us:
Download App:
  • android
  • ios