ಜೀವನ ಸಂಗಾತಿ ವಿಷಯಕ್ಕೆ ಬಂದ್ರೆ ಹುಡ್ಗೀರು ಸೀರಿಯಸ್ಸಾಗಿ ಯೋಚಿಸ್ತಾರೆ. ಅವರಿಗೆ ಪ್ರಬುದ್ಧ, ಜವಾಬ್ದಾರಿಯುತ ಯುವಕನೇ ಇಷ್ಟವಾಗೋದು.ಆದ್ರೆ ಕೆಲವು ಯುವಕರಿಗೆ ದೇಹ ಬೆಳೆದಿದ್ರೂ ಬುದ್ಧಿ ಬೆಳೆದಿರೋದಿಲ್ಲ.ಇದನ್ನು ಗುರುತಿಸೋದು ಹೇಗೆ?
ಕೆಲವರಿಗೆ ವಯಸ್ಸಾಗಿರುತ್ತೆ.ಆದ್ರೆ ಬುದ್ಧಿ ಬೆಳೆದಿರೋದಿಲ್ಲ.ಗಡ್ಡ,ಮೀಸೆ ಬಂದ್ರೂ ಮಕ್ಕಳಾಟ ಬಿಡೋದಿಲ್ಲ.ಇಂಥವರುಲೈಫ್ ಅನ್ನುಸದಾ ಲೈಟ್ ಆಗಿಯೇ ತೆಗೆದುಕೊಳ್ತಾರೆ. ಮೋಜು, ಮಸ್ತಿ ಅಂದ್ರೆ ಇಷ್ಪಪಡೋ ಇವರು,ಯಾವುದೇ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳೋದಿಲ್ಲ.ಇಂಥ ಹುಡುಗರ ಜೊತೆ ಫ್ರೀ ಟೈಮ್ ಕಳೆಯಲು,ಪಾರ್ಟಿ ಮಾಡಲು ಹುಡುಗೀರು ಇಷ್ಟಪಡಬಹುದು.
ಆದ್ರೆ ಜೀವನ ಸಂಗಾತಿಯನ್ನಾಗಿ ಆರಿಸಲು ಹಿಂದೇಟು ಹಾಕುತ್ತಾರೆ.ಪ್ರತಿ ವಯಸ್ಸಿಗೂ ಅದರದ್ದೇ ಆದ ಪ್ರೌಢಿಮೆಯಿರುತ್ತೆ. ಆದ್ರೆ, ಅದನ್ನು ರೂಢಿಸಿಕೊಳ್ಳದೆ ಎಡಬಿಡಂಗಿ ರೀತಿ ಚೆಲ್ಲುಚೆಲ್ಲಾಗಿ ಆಡೋ ಪುರುಷನನ್ನು ನೋಡಿದ್ರೆ ಆತನ ಬಗ್ಗೆ ನಂಬಿಕೆ, ವಿಶ್ವಾಸ, ಪ್ರೀತಿ ಹುಟ್ಟೋದು ತುಸು ಕಷ್ಟವೇ. ಅದ್ರಲ್ಲೂ ಹುಡುಗೀರಂತೂ ಗಂಡ, ಮನೆ, ಮಕ್ಕಳು, ಉದ್ಯೋಗ ಎಂದು ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿರುತ್ತಾರೆ.
ಹೀಗಾಗಿ ಸಹಜವಾಗಿಯೇ ಹುಡುಗೀರು ಪ್ರೌಢ, ಜವಾಬ್ದಾರಿಯುತ ಸಂಗಾತಿಯನ್ನೇ ಬಯಸುತ್ತಾರೆ.ಆದ್ರೆ ಹುಡ್ಗ ಪ್ರಬುದ್ಧನಲ್ಲ,ದೇಹ ಮಾತ್ರ ಬೆಳೆದಿರೋ ಚಿಕ್ಕ ಹುಡುಗ ಅನ್ನೋದನ್ನ ಮೊದಲ ಭೇಟಿಯಲ್ಲೇ ನಿರ್ಧರಿಸೋದು ಸ್ವಲ್ಪ ಕಷ್ಟದ ಕೆಲ್ಸ.ಆದ್ರೆ ಈ ಕೆಳಗೆ ನೀಡಿರೋ ಕೆಲವು ಗುಣಗಳು ಆ ಹುಡ್ಗನಲ್ಲಿದ್ರೆ ಆತ ಅಪ್ರಬುದ್ಧನೆಂದು ನಿರ್ಧರಿಸಬಹುದು.
ಲೈಂಗಿಕ ಸಮಸ್ಯೆ ಮುಚ್ಚಿಟ್ಟಷ್ಟೂ ದಾಂಪತ್ಯ ಬದುಕಿಗೆ ಹಾನಿ.
ಆಂಗಿಕ ಭಾಷೆ ಅರ್ಥಮಾಡಿಕೊಳ್ಳಲಾರ
ಕೆಲವು ಸಂದರ್ಭಗಳಲ್ಲಿ ಕೆಲವು ವಿಷಯಗಳನ್ನು ಬಾಯಿಬಿಟ್ಟು ಹೇಳಲು ಸಾಧ್ಯವಾಗೋದಿಲ್ಲ.ಆದ್ರೆ ಅದನ್ನು ಆಂಗಿಕ ಭಾಷೆ ಅಥವಾ ವರ್ತನೆ ಮೂಲಕ ತೋರ್ಪಡಿಸಬಹುದು ಪ್ರಬುದ್ಧರು ಮಾತ್ರ ಈ ಸೂಕ್ಷ್ಮ ವಿಚಾರವನ್ನು ಗಮನಿಸಿ, ಅರ್ಥೈಸಿಕೊಳ್ಳಬಲ್ಲರು. ನೀವು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸೋ ಹುಡ್ಗನ ಜೊತೆ ಡೇಟಿಂಗ್‌ಗೆ ಹೋಗಿರುತ್ತೀರಿ ಎಂದು ಭಾವಿಸೋಣ.
ಈ ಸಮಯದಲ್ಲಿ ಆತ ಪದೇಪದೆ ನಿಮ್ಮನ್ನು ಮುಟ್ಟಿ ಮಾತನಾಡಿಸೋದು, ಅನಾವಶ್ಯಕವಾಗಿ ನಗೋದು ಮಾಡುತ್ತಿದ್ರೆ ನಿಮ್ಗೆ ಇರಿಸುಮುರಿಸು ಆಗೋದಂತೂ ಖಂಡಿತಾ. ಈ ಸಂದರ್ಭದಲ್ಲಿ ನೀವು ಆತನಿಂದ ಸ್ವಲ್ಪ ದೂರ ಸರಿದು ಕುಳಿತುಕೊಳ್ಳೋದು ಇಲ್ಲವೆ ಆತನ ವರ್ತನೆಯಿಂದ ಕಿರಿಕಿರಿಯಾಗುತ್ತಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಲು ಜೋರಾಗಿ ನಗುತ್ತೀರಿ. ಆದ್ರೆ ಆ ಮನುಷ್ಯನಿಗೆ ಇದು ಅರ್ಥವಾಗದೆ ಮತ್ತೆ ಮತ್ತೆ ಅದೇ ವರ್ತನೆ ತೋರುತ್ತಿದ್ದಾನೆ ಅಂದ್ರೆ ಆತ ಅಪ್ರಬುದ್ಧನೆಂದೇ ಅರ್ಥ. ಏಕೆಂದ್ರೆ ಭಾವನಾತ್ಮಕವಾಗಿ ಪ್ರಬುದ್ಧನಾಗಿರೋ ಪುರುಷ ಆಂಗಿಕ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ.
ಗಂಡಸರಿಗೆ ಮಾತ್ರವಲ್ಲ ಹೆಂಗಸರಿಗೂ ಇದೆ ಕಾಂಡೋಮ್, ಬಳಸೋದು ಹೇಗೆ..?
ಅನಗತ್ಯ ಒತ್ತಾಯ
ನೀವಿಬ್ಬರು ಹೋಟೆಲ್‌ಗೆ ಹೋದಾಗ ನಿಮ್ಗೆ ಸಾಕೆನಿಸಿದರೂ ಇನ್ನಷ್ಟು ತಿನ್ನುವಂತೆ ಒತ್ತಾಯ ಮಾಡೋದು. ನಿಮ್ಗೆ ಇಷ್ಟವಿಲ್ಲದ ತಿನಿಸು ಅಥವಾ ಜ್ಯೂಸ್ ಸೇವಿಸಲು ಒತ್ತಾಯ ಮಾಡೋದು,ಆರೋಗ್ಯ ಸರಿಯಿಲ್ಲದಿದ್ರೂ ಆತನೊಂದಿಗೆ ಸುತ್ತಾಡಲು ಬರುವಂತೆ ಒತ್ತಾಯಿಸೋದು. ಈ ರೀತಿ ನಿಮಗಿಷ್ಟವಿಲ್ಲದ ವಿಷಯಗಳನ್ನು ಮಾಡುವಂತೆ ಒತ್ತಾಯಿಸೋದು.ನೀವು ಎಷ್ಟೇ ಬಿಡಿಸಿ ಹೇಳಿದ್ರೂ ಅರ್ಥ ಮಾಡಿಕೊಳ್ಳದಿರೋದು. ಈ ರೀತಿಯ ವ್ಯಕ್ತಿ ಖಂಡಿತವಾಗಲೂ ಪ್ರಬುದ್ಧನ್ನಲ್ಲ.
ಯಶಸ್ಸನ್ನು ಹಣದಲ್ಲಿ ಅಳೆಯೋ ಚಾಳಿ
ಉದ್ಯೋಗದಲ್ಲಿ ಅದೆಷ್ಟೇ ಉನ್ನತ ಸ್ಥಾನಕ್ಕೇರಿದ್ರೂ ಆ ವ್ಯಕ್ತಿ ಯಶಸ್ಸನ್ನು ಹಣದ ಮಾನದಂಡ ಬಳಸಿ ಅಳೆಯೋ ಗುಣ ಹೊಂದಿದ್ರೆ ಆತ ಅಪ್ರಬುದ್ಧನೇ. ದುಬಾರಿ ಬಟ್ಟೆ, ವಾಚ್, ಕಾರ್, ಮನೆಯೇ ಆತನಿಗೆ ಪ್ರತಿಷ್ಠೆಯ ಸಂಕೇತಗಳು. ಪ್ರತಿ ವಸ್ತುವನ್ನು ಅದರ ಬೆಲೆಯ ಆಧಾರದಲ್ಲಿ ಅಳೆದು ತೂಗಿ ನೋಡುತ್ತಾನೆ.ಇಂಥ ವ್ಯಕ್ತಿ ಇನ್ನೊಬ್ಬರ ಭಾವನೆಗಳಿಗೆ ಖಂಡಿತಾ ಬೆಲೆ ನೀಡಲಾರ. ಒಂದು ಹುಡುಗಿಯನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡೋವಾಗಲೂ ಆತ ಖಂಡಿತಾ ಹಣದ ಲೆಕ್ಕಾಚಾರ ಹಾಕಿಯೇ ಮುಂದುವರಿಯುತ್ತಾನೆ. ನಿಮ್ಮ ಸಂಬಳ ಅಥವಾ ನಿಮ್ಮಹೆತ್ತವರ ಶ್ರೀಮಂತಿಕೆ ಈತನನ್ನು ನಿಮ್ಮೆಡೆಗೆ ಸೆಳೆದಿರೋ ಸಾಧ್ಯತೆಯಿದೆ.
ಪುರುಷರು ಹೀಗಿದ್ದರೆ ಮಹಿಳೆಯರು ಆಕರ್ಷಿತರಾಗೋದು ಗ್ಯಾರಂಟಿ!
ಇನ್ನೊಬ್ಬರೊಂದಿಗೆ ಹೋಲಿಕೆ
ಪ್ರಬುದ್ಧ ವ್ಯಕ್ತಿ ಎಂದಿಗೂ ತನ್ನ ಸಂಗಾತಿಯಾಗೋ ಹೆಣ್ಣನ್ನು ಬೇರೆ ಹುಡುಗಿರೊಂದಿಗೆ ಹೋಲಿಕೆ ಮಾಡಿ ಹೀಯಾಳಿಸಲಾರ. ಆಕೆ ಗುಣ, ರೂಪದ ಬಗ್ಗೆ ಲಘುವಾಗಿ ಮಾತನಾಡಲಾರ. ಒಂದು ವೇಳೆ ನಿಮ್ಮ ಹುಡುಗ ನಿಮ್ಮನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಮನಸ್ಸಿಗೆ ಬೇಸರವಾಗೋ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದ್ರೆ ನೀವು ಆತನೊಂದಿಗೆ ಸಂಬಂಧ ಮುಂದುವರಿಸಬೇಡಿ.ಇಂಥ ಪುರುಷ ನಿಮ್ಮ ಜೀವನ ಸಂಗಾತಿಯಾದ್ರೆ ವೈವಾಹಿಕ ಬದುಕಿನ ನೆಮ್ಮದಿ ಹರಣವಾಗುತ್ತೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 2, 2021, 3:41 PM IST