Asianet Suvarna News Asianet Suvarna News

ಲೈಂಗಿಕ ಸಮಸ್ಯೆ ಮುಚ್ಚಿಟ್ಟಷ್ಟೂ ದಾಂಪತ್ಯ ಬದುಕಿಗೆ ಹಾನಿ

ಬಹುತೇಕರು ಇತರ ಆರೋಗ್ಯ ಸಮಸ್ಯೆಗಳಂತೆ ಲೈಂಗಿಕ ಸಮಸ್ಯೆಗಳನ್ನು ಪರಿಗಣಿಸೋದಿಲ್ಲ. ತಮಗಿರೋ ಲೈಂಗಿಕ ಸಮಸ್ಯೆಯನ್ನುಯಾರ ಬಳಿಯೂ ಹೇಳಿಕೊಳ್ಳದೆ, ಸೂಕ್ತ ಚಿಕಿತ್ಸೆಯೂ ಪಡೆಯದೆ ಮಾನಸಿಕ ಯಾತನೆ ಅನುಭವಿಸುತ್ತಾರೆ. ಆದ್ರೆ ಈ ರೀತಿ ಲೈಂಗಿಕ ಸಮಸ್ಯೆಯನ್ನು ಸಂಗಾತಿಯಿಂದ ಮುಚ್ಚಿಡೋದ್ರಿಂದ ದಾಂಪತ್ಯ ಬದುಕಿಗೆ ಹಾನಿಯಾಗೋ ಸಾಧ್ಯತೆ ಹೆಚ್ಚು.

Do not hide sexual problems from your spouse
Author
Bangalore, First Published Jan 30, 2021, 12:11 PM IST

ಜಗತ್ತಿನಲ್ಲಿ ನಡೆಯೋ ಅನೇಕ ವಿಚ್ಛೇದನೆಗಳಿಗೆ ಲೈಂಗಿಕ ಸಮಸ್ಯೆಗಳು ಕೂಡ ಕಾರಣವಾಗಿರುತ್ತವೆ.ಲೈಂಗಿಕ ಸಮಸ್ಯೆಗಳನ್ನುಮುಚ್ಚಿಡೋದು, ಸೂಕ್ತ ಚಿಕಿತ್ಸೆ ಪಡೆಯದಿರೋದೇ ಪತಿ-ಪತ್ನಿ ನಡುವೆ ಸಂಬಂಧ ಕೆಡಲು ಕಾರಣವಾಗುತ್ತೆ.ಕೆಲವರಿಗೆ ಮದುವೆಗೆ ಮುನ್ನ ಸಮಸ್ಯೆಯ ಅರಿವಿರುತ್ತದೆ.ಆದರೆ, ಅದನ್ನು ಮುಚ್ಚಿಟ್ಟು ಅಥವಾ ನಿರ್ಲಕ್ಷಿಸಿ ಮದುವೆಯಾಗುತ್ತಾರೆ. ಇನ್ನೂ ಕೆಲವರಿಗೆ ಮದುವೆ ಬಳಿಕವೇ ಲೈಂಗಿಕ ಸಮಸ್ಯೆಯಿರೋದು ಗೊತ್ತಾಗುತ್ತೆ. ಅದೇನೆ ಇರಲಿ, ಲೈಂಗಿಕ ಸಮಸ್ಯೆಗಳಿದ್ದಾಗ ಏನು ಮಾಡ್ಬೇಕು? ವೈವಾಹಿಕ ಬದುಕನ್ನು ಅದು ಹಾಳು ಮಾಡದಂತೆ ಎಚ್ಚರ ವಹಿಸೋದು ಹೇಗೆ?

ಸಮಸ್ಯೆಯಿರೋದನ್ನು ಒಪ್ಪಿಕೊಳ್ಳಿ

ಎಷ್ಟೋ ಬಾರಿ ನಮ್ಮಲ್ಲಿರೋ ಸಮಸ್ಯೆಯನ್ನು ನಾವು ಒಪ್ಪಿಕೊಳ್ಳಲು ಮುಂದಾಗೋದಿಲ್ಲ. ಇದ್ರಿಂದ ಸಾಕಷ್ಟು ಮಾನಸಿಕ ತುಮುಲಗಳಿಗೆ ಒಳಗಾಗಬೇಕಾಗುತ್ತದೆ. ಆದಕಾರಣ ನಿಮ್ಮಲ್ಲಿರೋ ಲೈಂಗಿಕ ಸಮಸ್ಯೆಯನ್ನು ಒಪ್ಪಿಕೊಳ್ಳಿ. ನಿಮ್ಮ ಮನಸ್ಸಿಗೆ ನೀವೇ ಈ ಬಗ್ಗೆ ಮನವರಿಕೆ ಮಾಡಿಸೋ ಪ್ರಯತ್ನ ಮಾಡಿ.

ಸೆಕ್ಸ್‌ನ ಉತ್ತುಂಗದಲ್ಲಿ ಸಾವು! ಹೀಗೂ ಆಗುತ್ತೆ!

ಪ್ರತಿ ಸಮಸ್ಯೆಗೂ ಒಂದು ಪರಿಹಾರವಿದ್ದೇ ಇರುತ್ತೆ, ಹೀಗಾಗಿ ಲೈಂಗಿಕ ಸಮಸ್ಯೆಗಳಿವೆ ಎಂಬ ಕಾರಣಕ್ಕೆ ಕೊರಗುತ್ತ ಕೂರುವ ಅಗತ್ಯವಿಲ್ಲ. ಮುಂದೇನು ಮಾಡ್ಬಹುದು, ಈ ಸಮಸ್ಯೆಯಿಂದ ಹೊರಬರೋದು ಹೇಗೆ ಎಂಬ ಬಗ್ಗೆ ಯೋಚಿಸಿ.

ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ

ಬಹುತೇಕರು ಮಾಡೋ ದೊಡ್ಡ ತಪ್ಪೆಂದ್ರೆ ಪತಿ ಅಥವಾ ಪತ್ನಿಯಿಂದ ಲೈಂಗಿಕ ಸಮಸ್ಯೆಯಿರೋ ವಿಷಯವನ್ನು ಮುಚ್ಚಿಡೋದು. ನಿಮಗಿರೋ ಸಮಸ್ಯೆ ಬಗ್ಗೆ ನಿಮ್ಮ ಪತಿ ಅಥವಾ ಪತ್ನಿಗೆ ಒಂದಲ್ಲೊಂದು ದಿನ ತಿಳಿದೇ ತಿಳಿಯುತ್ತೆ. ಹೀಗಾಗಿ ಅವರಾಗಿಯೇ ತಿಳಿದುಕೊಳ್ಳೋ ಮುನ್ನ ನೀವೇ ಹೇಳಿಬಿಡೋದು ಒಳ್ಳೆಯದು. ಇದ್ರಿಂದ ನಿಮ್ಮ ಮೇಲೆ ಅವರಿಟ್ಟಿರೋ ನಂಬಿಕೆ ಗಟ್ಟಿಯಾಗುತ್ತೆ.

ಹುಡುಗೀರನ್ನು ಪ್ರೀತಿಯಲ್ಲಿ ಕೆಡವಲು ಹುಡುಗರಿಗೆ ಈ ಬಣ್ಣವೇ ಬಹ್ಮಾಸ್ತ್ರ!

ಒಂದು ವೇಳೆ ಸಮಸ್ಯೆಯನ್ನು ದೀರ್ಘಕಾಲದ ತನಕ ನೀವು ಮುಚ್ಚಿಟ್ಟು, ಆ ಬಳಿಕ ಸಂಗಾತಿಗೆ ಅರಿವಾದ್ರೆ ಅವರಿಗೆ ನೀವು ಮೋಸ ಮಾಡುತ್ತಿದ್ದೀರಿ ಎಂಬ ಭಾವನೆ ಮೂಡಬಹುದು. ಇದು ನಿಮ್ಮಿಬ್ಬರ ನಡುವಿನ ಸಂಬಂಧವನ್ನು ಕೆಡಿಸೋ ಸಾಧ್ಯತೆಗಳಿರುತ್ತವೆ. ಲೈಂಗಿಕ ಸಮಸ್ಯೆಯನ್ನು ಸಂಗಾತಿ ಬಳಿ ಹೇಳಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು, ಆದ್ರೂ ಇದನ್ನು ಮುಚ್ಚಿಡೋದು ಒಳ್ಳೆಯದ್ದಲ್ಲ. 

ವೈದ್ಯರ ಬಳಿ ಹೋಗಲು ಸಂಕೋಚ ಬೇಡ

ಲೈಂಗಿಕ ಸಮಸ್ಯೆ ಕಾಣಿಸಿಕೊಂಡಾಗ ಬಹುತೇಕರು ವೈದ್ಯರ ಬಳಿ ಹೋಗಲು ಹಿಂದೇಟು ಹಾಕುತ್ತಾರೆ. ಇದು ಕೂಡ ಬೇರೆಲ್ಲ ಆರೋಗ್ಯ ಸಮಸ್ಯೆಗಳಂತೆಯೇ ಆಗಿದ್ದು, ಇದ್ರಲ್ಲಿ ನಾಚಿಕೆಪಡೋ ಅಗತ್ಯವಿಲ್ಲ. ಚಿಕಿತ್ಸೆಯ ಮೂಲಕ ಬಹುತೇಕ ಲೈಂಗಿಕ ಸಮಸ್ಯೆಗಳನ್ನು ಗುಣಪಡಿಸಬಹುದಾಗಿದೆ. ಹೀಗಾಗಿ ಲೈಂಗಿಕ ಸಮಸ್ಯೆಯಿರೋದು ಅರಿವಿಗೆ ಬಂದ ತಕ್ಷಣ ತಜ್ಞ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಪರಸ್ಪರ ನಂಬಿಕೆ ಗಟ್ಟಿಗೊಳಿಸಿ

ದಾಂಪತ್ಯ ಬದುಕಿನಲ್ಲಿ ಆಗಾಗ ಅನೇಕ ಸಮಸ್ಯೆಗಳು ಎದುರಾಗಬಹುದು. ಅದೇರೀತಿ ಈ ಲೈಂಗಿಕ ಸಮಸ್ಯೆ ಕೂಡ. ಲೈಂಗಿಕ ಸಮಸ್ಯೆ ಪತಿಯಲ್ಲಿರಲಿ ಅಥವಾ ಪತ್ನಿಯಲ್ಲಿರಲಿ, ಅದು ಇಬ್ಬರಿಗೂ ಸಂಬಂಧಿಸಿದ್ದು. ಏಕೆಂದ್ರೆ ದಾಂಪತ್ಯ ಬದುಕು ಸುಸೂತ್ರವಾಗಿ ಮುಂದೆ ಸಾಗಲು ಲೈಂಗಿಕ ಜೀವನ ಕೂಡ ಚೆನ್ನಾಗಿರೋದು ಅಗತ್ಯ.

ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ : ಗಮನಹರಿಸಬೇಕಾದ ಕೆಲವು ವಿಷಯಗಳು

ಹೀಗಾಗಿ ಲೈಂಗಿಕ ಸಮಸ್ಯೆ ನಿಮ್ಮಿಬ್ಬರ ನಡುವಿನ ನಂಬಿಕೆ, ವಿಶ್ವಾಸಕ್ಕೆ ಹಾನಿ ಮಾಡದಂತೆ ಎಚ್ಚರ ವಹಿಸಿ. ದಾಂಪತ್ಯ ಬದುಕಿನ ಉಳಿದೆಲ್ಲ ಸಮಸ್ಯೆಗಳಂತೆ ಇದನ್ನು ಕೂಡ ಇಬ್ಬರು ಜೊತೆಯಾಗಿ ಎದುರಿಸೋ ಸಂಕಲ್ಪ ಮಾಡಿ. ಒಬ್ಬರ ನೋವಿಗೆ ಇನ್ನೊಬ್ಬರು ಹೆಗಲಾದಾಗ ಯಾವ ಸಮಸ್ಯೆಯೂ ದೊಡ್ಡದೆನಿಸೋದಿಲ್ಲ. 

ಅನ್ಯರ ಮಾತುಗಳಿಗೆ ಸೊಪ್ಪು ಹಾಕ್ಬೇಡಿ

ಮದುವೆಯಾಗಿ ಅನೇಕ ವರ್ಷಗಳೇ ಕಳೆದಿದ್ರೂ ಇನ್ನು ಮಗುವಾಗಿಲ್ಲವೆಂದ್ರೆ, ನಿಮಗೇನೋ ಸಮಸ್ಯೆಯಿದೆ ಎಂಬಂತೆಯೇ ಸಂಬಂಧಿಕರು, ಸ್ನೇಹಿತರು ವರ್ತಿಸುತ್ತಾರೆ. ಕೆಲವರಂತೂ ಈ ಬಗ್ಗೆ ನಿಮ್ಮನ್ನು ಪ್ರಶ್ನೆ ಮಾಡಿ ಇರಿಸುಮುರಿಸು ಉಂಟು ಮಾಡ್ಬಹುದು. ಇಂಥ ಮಾತುಗಳಿಗೆ ಸೊಪ್ಪು ಹಾಕ್ಬೇಡಿ. ನಿಮ್ಮ ಸಂಗಾತಿಯಲ್ಲೇ ಏನೋ ಸಮಸ್ಯೆಯಿದೆ ಎಂದು ಹತ್ತಿರದವರೇ ನಿಮ್ಮ ಬಳಿ ದೂರಬಹುದು. ಇಂಥ ಮಾತುಗಳು ನಿಮ್ಮ ಮನಸ್ಸಿಗೆ ಘಾಸಿಯುಂಟು ಮಾಡೋ ಜೊತೆ ಸಂಗಾತಿ ಮೇಲೆ ಅಪನಂಬಿಕೆ ಹುಟ್ಟುವಂತೆಯೂ ಮಾಡ್ಬಹುದು. ಆದಕಾರಣ ಇನ್ನೊಬ್ಬರ ಮಾತಿನ ಆಧಾರದಲ್ಲಿ ಸಂಗಾತಿಯನ್ನು ನಿರ್ಧರಿಸಲು ಹೋಗ್ಬೇಡಿ.

ನಿಮ್ಮಿಬ್ಬರ ನಡುವಿನ ಖಾಸಗಿ ಕ್ಷಣಗಳ ಬಗ್ಗೆ ಅಭಿಪ್ರಾಯ ತಿಳಿಸಿ

ಬೆಡ್‌ರೂಮ್‌ನಲ್ಲಿ ನಿಮ್ಮಿಬ್ಬರ ನಡುವಿನ ರೊಮ್ಯಾನ್ಸ್‌, ಸೆಕ್ಸ್‌ಗೆ ಸಂಬಂಧಿಸಿ ನಿಮ್ಮ ಮನಸ್ಸಿನಲ್ಲಿ ಏನೇ ಆತಂಕ, ಭಯ ಅಥವಾ ಬೇಸರಗಳಿದ್ರೆ, ಆ ಬಗ್ಗೆ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಕೆಲವು ಬಾರಿ ದೇಹದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ್ರೂ ಲೈಂಗಿಕ ಚಟುವಟಿಕೆಯಲ್ಲಿ ತೊಡಗೋ ಆಸಕ್ತಿಯಿರೋದಿಲ್ಲ. ಇಂಥ ಸಮಯದಲ್ಲಿ ಸುಮ್ಮನಿದ್ರೆ ಸಂಗಾತಿಗೆ ನಿಮ್ಮ ಮೇಲೆ ಅನುಮಾನ, ಅಸಮಾಧಾನವಾಗಬಹುದು. ಹಾಗಾಗಿ ನಿಮಗೇಕೆ ಆಸಕ್ತಿಯಿಲ್ಲ ಎಂಬುದಕ್ಕೆ ಕಾರಣ ಹೇಳಿಬಿಡಿ.

Follow Us:
Download App:
  • android
  • ios