Asianet Suvarna News Asianet Suvarna News
breaking news image

ಕಾರಲ್ಲಿ ಸೆಕ್ಸ್‌ ಆನಂದ ಅನುಭವಿಸೋ ಸಂಗಾತಿಗಿಲ್ಲಿವೆ ಸಿಂಪಲ್ ಟಿಪ್ಸ್!

ಸಾಹಸಮಯ ಸ್ವಭಾವ ಹೊಂದಿರುವ ಸಂಗಾತಿಗಳು ತಮ್ಮ ಕಾರ್‌ನೊಳಗೆ ಒಂದಲ್ಲ ಒಂದು ಸಲವಾದರೂ ಪ್ರಣಯಕ್ರೀಡೆಯಾಡಲು ಕಾತರಿಸುತ್ತಾರೆ. ಇದು ಸಂಗಾತಿಗಳ ಸೆಕ್ಸ್ ಸಾಂಗತ್ಯವನ್ನು ಬೆಚ್ಚಗಿಡುವ ವಿಧಾನಗಳಲ್ಲಿ ಒಂದು. ಆದರೆ ಇಲ್ಲಿ ಕೆಲವು ಕಷ್ಟಗಳಿವೆ. ಕಾರಿನಲ್ಲಿ ಆನಂದಮಯ ಸೆಕ್ಸ್‌ ಹೇಗೆ? ಇಲ್ಲಿದೆ ಕೆಲವು ಟಿಪ್ಸ್.‌

 

Tips to get maximum pleasure while doing sex in Car
Author
First Published Jun 28, 2024, 9:06 AM IST

ತಮ್ಮ ಸಂಬಂಧದಲ್ಲಿ ಬೆಚ್ಚಗಿನ ಪ್ರಣಯ, ಉತ್ಸಾಹ, ವಿನೋದವನ್ನು ಜೀವಂತವಾಗಿರಿಸಲು ಮುಂದಾಗುವ ಸಂಗಾತಿಗಳು ಅದ್ಭುತ ಮಾರ್ಗವಾಗಿ ಕಾರ್‌ ಸೆಕ್ಸ್‌ ಅನ್ನು ಅನುಸರಿಸಬಹುದು. ಆದರೆ ಮೋಜಿನ ಜೊತೆಗೆ ಕಾರ್ ಸಂಭೋಗ ನಿಜವಾಗಿಯೂ ಜಟಿಲವಾದುದು. ಇಲ್ಲಿರುವ ಮೊದಲ ಅನಾನುಕೂಲ ಅಂದರೆ ಸೀಟುಗಳೇ. ಆಮೇಲೆ ಗೌಪ್ಯತೆಯ ಕೊರತೆ. ಆದರೂ ಕೆಲವು ಸೂತ್ರಗಳನ್ನು ಅನುಸರಿಸಿ ನಿಮ್ಮ ಕಾರ್‌ ಪ್ರಣಯವನ್ನು ಆನಂದಿಸಲು ಕೆಲವು ಉಪಯುಕ್ತ ಸಲಹೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸೀಮಿತ ಭಂಗಿಗಳು: ಕಾರಿನಲ್ಲಿ ನಿಮ್ಮ ಎಲ್ಲಾ ಸೃಜನಶೀಲತೆ ತೋರಿಸಲು ಹೋಗಬೇಡಿ. ಸರಿಯಾದ ಸ್ಥಳಾವಕಾಶದ ಕೊರತೆಯಿಂದಾಗಿ ವಿಭಿನ್ನ ಲೈಂಗಿಕ ಭಂಗಿಗಳನ್ನು ಕಾರ್ಯಗತಗೊಳಿಸಲು ಕಷ್ಟವಾಗುತ್ತದೆ. ಆದ್ದರಿಂದ, ಸಾಕಷ್ಟು ಆರಾಮದಾಯಕವಾದ ಭಂಗಿಗಳಿಗೆ ಅಂಟಿಕೊಳ್ಳುವುದು ಸೂಕ್ತ. ಹೆಚ್ಚುವರಿ ಮೆತ್ತನೆಗಾಗಿ ನೀವು ದಿಂಬುಗಳನ್ನು ಇಟ್ಟುಕೊಳ್ಳಬಹುದು. ಅಥವಾ ಮುಂಭಾಗದ ಆಸನವನ್ನು ಸಮತಲವಾಗಿ ತಳ್ಳಬಹುದು. ಲೈಂಗಿಕ ಭಂಗಿಗಳ ಸಾಧ್ಯತೆಯ ಬಗ್ಗೆ ನಿಮಗೆ ಸಂದೇಹವಿದ್ದಲ್ಲಿ ಮನೆಯಲ್ಲಿ ಮೊದಲು ಪ್ರಯತ್ನಿಸಬಹುದು. ಕಾರಿನಲ್ಲಿ ಓರಲ್ ಸೆಕ್ಸ್‌ ಅಥವಾ ಮುಖರತಿ ಹೆಚ್ಚು ಅನುಕೂಲಕರ.

ಕರ್ಟನ್‌ಗಳು: ಕಾರ್ ಕರ್ಟನ್‌ಗಳು ಹೆಚ್ಚು ಉಪಯುಕ್ತವಾದವು. ನಿಮಗೆ ನಿಜವಾಗಿಯೂ ಇದು ಅಗತ್ಯವಿದ್ದಾಗ ಗೌಪ್ಯತೆಯನ್ನು ನೀಡುತ್ತದೆ. ನಿಮ್ಮ ಕಾರಿನಲ್ಲಿ ಕರ್ಟನ್‌ಗಳನ್ನು ಅಳವಡಿಸಲು ನೀವು ಬಯಸದಿದ್ದರೆ, ಸುಲಭವಾಗಿ ತೆಗೆಯಬಹುದಾದ ಕಪ್ಪು ವಿಂಡೋ ಶೇಡ್‌ಗಳನ್ನು ಬಳಸಬಹುದು. 

ನಿರ್ಜನ ಜಾಗ: ಕಾರ್ ಸಂಭೋಗಕ್ಕೆ ಬಂದಾಗ ಜನರು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದು, ಪ್ರಣಯೋದ್ರೇಕವಾದಾಗ ಥಟ್ಟನೆ ಎಲ್ಲೆಂದರಲ್ಲಿ ನಿಲ್ಲಿಸಿ ಶುರುಮಾಡುವುದು. ಅದು ಪಾರ್ಕಿಂಗ್ ಸ್ಥಳವಾಗಿರಬಹುದು ಅಥವಾ ರಾತ್ರಿ ಕ್ಲಬ್‌ನ ಹೊರಗಿನ ಸ್ಥಳವಾಗಿರಬಹುದು. ಆದರೆ ಇದು ತಪ್ಪು. ಕಾರು ಅಲುಗಾಡುವುದನ್ನು ಜನ ಗಮನಿಸಿಯೇ ಗಮನಿಸುತ್ತಾರೆ. ನಿರ್ಜನ ಬೀದಿಗಳು ಅನುಕೂಲ. ಪೊಲೀಸರು ಕಂಡರೆ ಇದು ಅಪರಾಧ ಎಂದು ದಂಡ ಹಾಕಬಹುದು. ಯಾವುದೇ ಅಪಾಯಕಾರಿ ಚಿಹ್ನೆಗಳಿಗಾಗಿ ಸುತ್ತಲೂ ನೋಡಿ.

'ಗಂಡ ವೇಶ್ಯೆಯರಿಗೆ ಕಾಸು ಕೊಟ್ಟು ಅವರು ಮೂತ್ರ ಮಾಡೋದು ನೋಡ್ತಾನೆ! ಏನಿದು ಹುಚ್ಚು?'

ಸಡಿಲವಾದ ಬಟ್ಟೆ (Loose Cloths): ನೀವಿಬ್ಬರೂ ಲೈಂಗಿಕ ಪ್ರಚೋದನೆಯಲ್ಲಿ ತೊಡಗಿರುವಾಗ ಬಿಗಿಯಾದ ಜೀನ್ಸ್ ಅಥವಾ ಲೆಗ್ಗಿಂಗ್‌ಗಳನ್ನು ಎಳೆದು ತೆಗೆಯುವುದು ಕಷ್ಟ. ಕಾರಿನೊಳಗೆ ಇದು ಇನ್ನೂ ಕಷ್ಟ. ಇದು ಆ ಕ್ಷಣದ ಲೈಂಗಿಕ ಉದ್ರೇಕವನ್ನೂ ತಗ್ಗಿಸುತ್ತದೆ. ಸುಲಭವಾಗಿ ಎತ್ತುವ ಅಥವಾ ತೆಗೆಯಬಹುದಾದ ಸ್ಟ್ರೆಚಿ ಟಿ-ಶರ್ಟ್‌ಗಳು, ಶಾರ್ಟ್ಸ್ ಮತ್ತು ಸ್ಕರ್ಟ್‌ಗಳನ್ನು ಧರಿಸಿ. ಈ ಸಂದರ್ಭದಲ್ಲಿ ವೇಗವೇ ಉತ್ತಮ!

ಚಲಿಸುವಾಗ ಬೇಡ: ಚಲಿಸುವ ಕಾರಿನಲ್ಲಿ ಕಾಮಕ್ರೀಡೆ ಬೇಡ. ಚಲಿಸುವ ಕಾರಿನಲ್ಲಿ ಮುತ್ತಿಡುವ ಸೀನ್‌ಗಳನ್ನು ನೀವು ಚಲನಚಿತ್ರಗಳಲ್ಲಿ ನೋಡಿರಬಹುದು. ಆದರೆ ಈ ದೃಶ್ಯಗಳು ಅವಾಸ್ತವಿಕ ಮತ್ತು ಅಪಾಯಕಾರಿ. ಯಾರೂ ಇದನ್ನು ಎಂದಿಗೂ ಪ್ರಯತ್ನಿಸಬಾರದು. ಏಕೆಂದರೆ ಆನಂದದ ಕ್ಷಣದಲ್ಲಿ ನಾವು ಕಾರಿನ ಮೇಲಿನ ನಮ್ಮ ಹಿಡಿತವನ್ನು ಕಳೆದುಕೊಳ್ಳಬಹುದು.

ಕಾರಿನ ಹೊರಗೆ: ನಿರ್ಜನವಾದ ಜಾಗ ಇದ್ದರೆ, ಯಾರೂ ಬರಲಾರರು ಎಂಬುದು ಖಚಿತವಾಗಿದ್ದರೆ ನೀವು ಕಾರಿನ ಟಾಪ್‌ ಮೇಲೆ, ಬಾನೆಟ್‌ ಮೇಲೂ ರತಿಕ್ರೀಡೆಯನ್ನು ಆಸ್ವಾದಿಸಬಹುದು. ನಕ್ಷತ್ರಖಚಿತ ಬಾನಿನ ಕೆಳಗೆ ಸ್ವರ್ಗವನ್ನು ಸೃಷ್ಟಿಸಿಕೊಳ್ಳಿ. ಇದಕ್ಕಾಗಿ ಕಾರಿನಲ್ಲಿ ಅಗತ್ಯವಿರುವ ಹಗುರವಾದ ಹೊದಿಕೆಗಳನ್ನು ಇರಿಸಿಕೊಳ್ಳಲು ಮರೆಯಬೇಡಿ.

ಮುಂಜಾನೆ ಸೆಕ್ಸ್‌ ಮಾಡೋ ದಂಪತಿ ಹೀಗೆಲ್ಲಾ ಆಗ್ತಾರಂತೆ!
 

Latest Videos
Follow Us:
Download App:
  • android
  • ios