Asianet Suvarna News Asianet Suvarna News
breaking news image

'ಗಂಡ ವೇಶ್ಯೆಯರಿಗೆ ಕಾಸು ಕೊಟ್ಟು ಅವರು ಮೂತ್ರ ಮಾಡೋದು ನೋಡ್ತಾನೆ! ಏನಿದು ಹುಚ್ಚು?'

ಹಲವು ಮಂದಿ ನೀವು ಊಹಿಸಲಿಕ್ಕೂ ಸಾಧ್ಯವಾಗದ ʼವಿಚಿತ್ರ ಕಾಮಾಸಕ್ತಿʼ ಅಥವಾ ʼಫೆಟಿಶ್‌ʼ (fetish)ಗಳನ್ನು ಹೊಂದಿರುತ್ತಾರೆ. ಇದರಿಂದ ವಿಚಿತ್ರ ಉದ್ರೇಕ, ಆನಂದ ಅನುಭವಿಸುತ್ತಾರೆ. ʼಮೂತ್ರಕಾಮʼ ಎಂದು ಕನ್ನಡದಲ್ಲಿ ಕರೆಯಬಹುದಾದ ಈ ಸ್ವಭಾವ ಅವುಗಳಲ್ಲಿ ಒಂದು. ಈ ಬಗ್ಗೆ ಸೆಕ್ಸ್‌ಪರ್ಟ್‌ ಬಳಿ ಒಬ್ಬರು ಕೇಳಿದ ಪ್ರಶ್ನೆ ಮತ್ತು ಅವರು ನೀಡಿದ ಉತ್ತರ ಹೀಗಿದೆ.

 

My husband pays prostitutes to watch them urinate! Why this crazyness?
Author
First Published Jun 27, 2024, 11:17 AM IST

ಪ್ರಶ್ನೆ: ನನಗೆ ಇತ್ತೀಚೆಗೆ ಮದುವೆಯಾಗಿದೆ. ಇತ್ತೀಚೆಗೆ ನನ್ನ ಗಂಡನ ಬಗ್ಗೆ ಒಂದು ವಿಷಯ ತಿಳಿದು ನನಗೆ ಆಘಾತವಾಯಿತು. ಆತ ವೇಶ್ಯೆಯರು ಮೂತ್ರ ಮಾಡೋದು ನೋಡುವುದಕ್ಕೆಂದೇ ಅವರ ಮನೆಗೆ ಹೋಗಿ ಕಾಸು ಕೊಟ್ಟು, ಅವರು ಮೂತ್ರ ಮಾಡುವುದನ್ನು ನೋಡುತ್ತ ಆನಂದ ಅನುಭವಿಸುತ್ತಾನಂತೆ. ಇದನ್ನು ಆತ ನನ್ನ ಬಳಿ ಹೇಳಲಿಲ್ಲ, ನನಗೇ ಹೇಗೋ ಗೊತ್ತಾಯಿತು. ನಾನು ಇದನ್ನು ತಿಳಿದು ಬೆಚ್ಚಿದೆ. ಆದರೆ ಆತ ವೇಶ್ಯೆಯರ ಜೊತೆ ಸೆಕ್ಸ್‌ ಮಾಡೋಲ್ಲ ಎಂಬುದು ನನಗೆ ಗೊತ್ತಿದೆ. ನನ್ನ ಗಂಡ ನನ್ನನ್ನು ಪ್ರೀತಿಸುತ್ತಾನೆ ಎಂಬುದೂ ನನಗೆ ಗೊತ್ತು. ಆದರೆ ಆತನ ಈ ಸ್ವಭಾವ ಸಹಿಸಲು, ಮರೆತುಬಿಡಲು ಸಾಧ್ಯವಾಗ್ತಿಲ್ಲ. ಹಾಗಂತ ಡೈವೋರ್ಸ್‌ ಮಾಡೋಕೂ ನಾನು ಸಿದ್ಧಳಿಲ್ಲ. ಏನಿದು? ಯಾಕೆ ಹೀಗೆ? ನಾನೇನು ಮಾಡಲಿ? 

ಇದಕ್ಕೆ ಸೀಮಾ ಆನಂದ್‌ ಎಂಬ ಸೆಕ್ಸ್‌ಪರ್ಟ್‌ ಉತ್ತರಿಸಿದ್ದು ಹೀಗೆ: 
ಇದು ನಿಮ್ಮ ಗಂಡನ ವಿಚಿತ್ರ ಕಾಮಾಸಕ್ತಿ ಅಥವಾ ಫೆಟಿಶ್.‌ ಒಬ್ಬ ಮಹಿಳೆ ಮೂತ್ರ ಮಾಡುವುದನ್ನು ನೋಡಿದಾಗ ಆತನ ಕಾಮಾಸಕ್ತಿ ಉದ್ರೇಕಗೊಂಡು ತಣಿಯುತ್ತದೆ. ಇಂದ್ರಿಯ ನಿಗುರುತ್ತದೆ. ಫೆಟಿಶ್‌ ಎಂಬುದು ಮೂಲಸ್ವಭಾವ. ಅದನ್ನು ಹಾಗೇ ಯಾರೂ ನಿಯಂತ್ರಿಸಲಾಗುವುದಿಲ್ಲ. ಅದು ಆತ ಆಯ್ಕೆ ಮಾಡಿಕೊಂಡದ್ದಲ್ಲ, ಒಳಗಿನಿಂದಲೇ ಬರುವುದು. ಮೂತ್ರಕಾಮ ಬಹಳ ಅಪರೂಪವೇನಲ್ಲ. ಆದರೆ ತುಂಬಾ ಮಂದಿ ಬಹಿರಂಗವಾಗಿ ಅದರಿಂದ ಆನಂದ ಹೊಂದಲು ಅಂಜುತ್ತಾರೆ. ಯಾಕೆಂದರೆ ಸಮಾಜ ಅದರೊಂದಿಗೆ ತಳುಕು ಹಾಕಿರುವ ಶೇಮ್‌ ಅಥವಾ ಲಜ್ಜೆ. ಇಂಥ ಇತರ ಹಲವು ಫೆಟಿಶ್‌ಗಳ ಬಗ್ಗೆಯೂ ಸಮಾಜಕ್ಕೆ ಒಳ್ಳೆಯ ಭಾವನೆಯೇನಿಲ್ಲ. 

 

ಈಗ ನೀವೇ ಹೇಳಿ, ಒಂದು ವೇಳೆ, ನಿಮ್ಮ ಗಂಡ ನಿಮ್ಮ ಹತ್ತಿರವೇ ಬಂದು, ನೀವು ಮೂತ್ರ ಮಾಡುವುದನ್ನು ನೋಡುತ್ತೇನೆ ಎಂದು ಹೇಳಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಗಾಬರಿಯಾಗಿಬಿಡುತ್ತೀರಲ್ಲವೇ? ಹಾಗೆಯೇ ನಿಮ್ಮ ಗಂಡ ಸುರಕ್ಷಿತ ಆಯ್ಕೆಯತ್ತ ಹೋಗಿದ್ದಾರೆ. ಕಾಲ್‌ಗರ್ಲ್‌ಗಳ ಬಳಿ ಹೋಗಿ ತಮ್ಮ ಆನಂದ ಪಟ್ಟಿದ್ದಾರೆ. ಇದು ಸುರಕ್ಷಿತ ಅಂತ ಯಾಕೆ ಹೇಳುತ್ತೇನೆ ಗೊತ್ತೇ? ತುಂಬಾ ಮಂದಿ ಇಂಥ ಫೆಟಿಶ್‌ ಹೊಂದಿದವರು ನನಗೆ ಗೊತ್ತಿದ್ದಾರೆ. ಅವರೇನು ಮಾಡುತ್ತಾರೆ ಗೊತ್ತಾ? ತಮ್ಮ ಮನೆಯಲ್ಲೇ ತಮ್ಮ ಮನೆಯ ಸ್ತ್ರೀಯರೇ ಮೂತ್ರ ಮಾಡುವಲ್ಲಿ ಹಿಡನ್‌ ಕ್ಯಾಮೆರಾಗಳನ್ನಿಟ್ಟುಕೊಂಡು ಅದನ್ನು ನೋಡುತ್ತಾ ಆನಂದ ಹೊಂದುತ್ತಾರೆ. ಇದು ಮನೆಯವರ ಒಪ್ಪಿಗೆ ಇದ್ದೂ ಇರಬಹುದು, ಅಥವಾ ಗೊತ್ತಿಲ್ಲದೆಯೂ ಇರಬಹುದು.  ಅಥವಾ ಬೇರೆಯವರ ಮನೆಗಳನ್ನೂ ಹಿಡನ್‌ ಕ್ಯಾಮೆರಾ ಇಡಬಹುದು. 

 

ವೈದ್ಯರೊಂದಿಗೆ ಸೇರಿ ಸ್ನೇಹಿತನ ಕಿತಾಪತಿ: ನಿದ್ದೆಯಲ್ಲಿದ್ದಾಗಲೇ ವ್ಯಕ್ತಿಯ ಲಿಂಗ ಬದಲು: ಆತ ಈಗ ಆಕೆ

ಸರಿ, ಇದನ್ನು ಈಗ ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದನ್ನೂ ನೀವೇ ನಿರ್ಧರಿಸಬೇಕು. ಆತ ತನ್ನ ಫೆಟಿಶ್‌ಗಾಗಿ ಕಾಲ್‌ಗರ್ಲ್‌ಗಳಿಗೆ ಹಣ ವೆಚ್ಚ ಮಾಡುವುದಕ್ಕೆ (Spending Money on Call Girls for Fetish) ನೀವು ಅನುಮತಿಸುತ್ತೀರೋ, ಅಥವಾ ಆತನ ಫೆಟಿಶ್‌ ಈಡೇರಿಸಿಕೊಳ್ಳಲು ನೀವೇ ನೆರವಾಗುತ್ತೀರೋ, ಅಥವಾ ಆತ ʼಯೂರಿನ್‌ ಪೋರ್ನ್‌ʼ (Urine Porn) ನೋಡಲಿ ಅನ್ನುತ್ತೀರಾ, ನೀವೇ ನಿರ್ಧರಿಸಬೇಕು. ಯಾಕೆಂದರೆ ಈ ಫೆಟಿಶ್‌ ಹಾಗೇ ಹೋಗಿಬಿಡುವುದಿಲ್ಲ. ನೀವು ಅದರ ಬಗ್ಗೆ ಗಂಡನ ಜೊತೆಗೇ ಮಾತನಾಡಬೇಕಾಗುತ್ತದೆ. ಮಾತುಕತೆಯ ಮೂಲಕ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕು. 

ಹಾಗೇ ಇಲ್ಲಿ ಇನ್ನೊಂದು ನೈತಿಕ ಪ್ರಶ್ನೆ ಇದೆ. ತನ್ನ ಫೆಟಿಶ್‌ಗಾಗಿ ವೇಶ್ಯೆಯರ ಬಳಿಗೆ ಹೋಗುವ ವ್ಯಕ್ತಿ ತನ್ನ ಪತ್ನಿಗೆ ಮೋಸ ಮಾಡಿದಂತಲ್ಲವೇ? ಇದೂ ನಿಮ್ಮ ಹಾಗೂ ನಿಮ್ಮ ಗಂಡನ ನೈತಿಕ ಪ್ರಜ್ಞೆಗೆ ಸಂಬಂಧಿಸಿದ ವಿಷಯ. ಇದಕ್ಕೆ ಸುಲಭ ಉತ್ತರ ಯಾರಲ್ಲೂ ಇರಲಾರದು. 

ಮೂತ್ರಕಾಮ ಅಥವಾ "ಯುರೊಲಾಗ್ನಿಯಾ" (urolagnia) ಅಸಾಮಾನ್ಯ ಅಥವಾ ಹೊಸದಲ್ಲ. ಮೂತ್ರವನ್ನು ಸ್ಪರ್ಶಿಸುವುದು, ಅದದ ವಾಸನೆ ನೋಡುವುದು, ಅಥವಾ ಬೇರೆಯವರು ಮೂತ್ರ ವಿಸರ್ಜಿಸುವುದನ್ನು ನೋಡುವುದು ಸಹ ಶತಮಾನಗಳಿಂದ ಕಾಮ ಪ್ರಚೋದನೆಗಾಗಿ ಬಳಸಲ್ಪಟ್ಟಿದೆ. ಆದರೆ ಲೈಂಗಿಕ ಪ್ರಪಂಚದ ಹೆಚ್ಚಿನ ವಿಷಯಗಳಂತೆ ಈ ಕಲ್ಪನೆಯು ಕಳಂಕ ಮತ್ತು ಅವಮಾನದಿಂದ ಮುಚ್ಚಿಹೋಗಿದೆ. ಅದೃಷ್ಟವಶಾತ್ ಹೆಚ್ಚು ಹೆಚ್ಚು ಜನರು ಈಗ ಅದರ ಬಗ್ಗೆ ಮಾತನಾಡಲು ಸಾಧ್ಯವಾಗುತ್ತಿದೆ. ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸುವುದಕ್ಕೆ ಇನ್ನೂ ಬಹಳ ಸಮಯ ತೆಗೆದುಕೊಳ್ಳುತ್ತದೆ. ಪ್ರಮುಖ ಅಂಶವೆಂದರೆ, ನಾವು ಫೆಟಿಶ್ ಶೇಮಿಂಗ್ (Fitish Shaming) ಮಾಡಬಾರದು. ನಿಮ್ಮ ಸಂಗಾತಿಯ ಫೆಟಿಶ್‌ ಬಗ್ಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಸಹ ಅದನ್ನು ಪ್ರಯತ್ನಿಸಿ. ಏಕೆಂದರೆ ಇದು ಅನ್ಯೋನ್ಯತೆಯನ್ನು ನಿರ್ಮಿಸುತ್ತದೆ.

ಲವ್ ಮ್ಯಾರೇಜ್ ಆದ್ರೂ ಕಳ್ಳ ಸಂಬಂಧ ಇಟ್ಕೋಳ್ಳೋದ್ಯಾಕೆ ಕೆಲವರು?

Latest Videos
Follow Us:
Download App:
  • android
  • ios