ಕೂದಲು ಸಾಫ್ಟ್ ಹಾಗೂ ಶೈನಿಂಗ್ ಆಗಿರಬೇಕು ಎಂಬುದು ಎಲ್ಲ ಹೆಣ್ಮಕ್ಕಳ ಕನಸು. ಅದಕ್ಕಾಗಿಯೇ ಶಾಂಪೂ ಹಾಕಿ ಕೂದಲು ತೊಳೆದ ಮೇಲೆ ಕಂಡೀಷನರ್ ಹಾಕಿ ಅದಕ್ಕೆ ಮತ್ತಷ್ಟು ಮೆರುಗು ನೀಡುವ ಕೆಲಸವನ್ನು ಹೆಣ್ಮಕ್ಕಳು ಮಾಡುತ್ತಾರೆ.ಆದ್ರೆ ಕೂದಲ ಅಂದವನ್ನು ಹೆಚ್ಚಿಸುವ ಈ ಹೇರ್ ಕಂಡೀಷನರ್‍ನಿಂದ ಎಷ್ಟೊಂದು ಉಪಯೋಗಗಳಿವೆ ಎಂಬುದು ನಿಮ್ಗೆ ಗೊತ್ತಾ? ಲಾಕ್‍ಡೌನ್ ಪರಿಣಾಮ ಮಲ್ಟಿ ಪರ್ಪಸ್ ವಸ್ತುಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋದು ಅಗತ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಕೆಲವೊಂದು ವಸ್ತುಗಳು ಸಿಗುತ್ತಿಲ್ಲ. ಹೀಗಾಗಿ ಅವುಗಳಿಗೆ ಬದಲಿಯಾಗಿ ಬಳಸಬಹುದಾದ ವಸ್ತುಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯಿದ್ರೆ ಅವುಗಳನ್ನು ಬಳಸಿ ನಮ್ಮ ಕೆಲಸ ಮಾಡಿಕೊಳ್ಳಬಹುದು. ಅಂಥ ಮಲ್ಟಿ ಪರ್ಪಸ್ ವಸ್ತುಗಳಲ್ಲಿ ಹೇರ್ ಕಂಡೀಷನರ್ ಕೂಡ ಒಂದು. ಇದನ್ನು ಹೇಗೆಲ್ಲ ಬಳಸಬಹುದು ಗೊತ್ತಾ?

ಕ್ವಾರೆಂಟೈನ್‌ನ ಹೊಸ ಚಾಲೆಂಜ್‌ - ಬರೀ ಮೈಗೆ ದಿಂಬಿನ ಡ್ರೆಸ್‌!

ಮೇಕಪ್ ರಿಮೂವರ್
ಮುಖಕ್ಕೆಲ್ಲ ಬಣ್ಣ ಹಚ್ಚಿಕೊಂಡು ಕಣ್ಣುಗಳಿಗೆ ಅಲಂಕಾರ ಮಾಡದಿದ್ರೆ ಹೇಗೆ ಅಲ್ವಾ? ಈಗಂತೂ ವಾಟರ್‍ಪ್ರೂಫ್ ಐ ಮೇಕಪ್ ಹಚ್ಚಿದ್ರೆ ದಿನವಿಡೀ ನಿಮ್ಮ ಕಣ್ಣುಗಳು ಬ್ಯೂಟಿಫುಲ್ ಆಗಿ ಕಾಣಿಸುತ್ತವೆ. ಆದ್ರೆ ಈ ಮೇಕಪ್ ತೆಗೆಯೋದು ಹಚ್ಚಿದಷ್ಟು ಸುಲಭವಲ್ಲ. ತೆಗೆಯದೇ ಹಾಗೇ ಬಿಟ್ರೆ ಕಣ್ಣುಗಳಿಗೆ ಹಾಗೂ ಚರ್ಮಕ್ಕೆ ಒಳ್ಳೆಯದ್ದಲ್ಲ. ನಿಮ್ಮ ಬಳಿ ಮೇಕಪ್ ರಿಮೂವರ್ ಖಾಲಿಯಾಗಿದ್ರಂತೂ ಕಣ್ಣುಗಳಿಗೆ ಹಚ್ಚಿರುವ ಮೇಕಪ್ ತೆಗೆಯೋದು ಹೇಗಪ್ಪ ಎಂಬ ಟೆನ್ಷನ್ ಕಾಡಲು ಪ್ರಾರಂಭಿಸುತ್ತೆ. ಡೋಂಟ್ ವರಿ, ಮೇಕಪ್ ರಿಮೂವರ್ ಇಲ್ಲಂದ್ರೆ ಏನಾಯ್ತು ಹೇರ್ ಕಂಡೀಷನರ್ ಇದೆಯಲ್ಲ! ಹೌದು, ಮೇಕಪ್ ರಿಮೂವಿಂಗ್ ಪ್ಯಾಡ್‍ಗೆ ಕೆಲವು ಹನಿಗಳಷ್ಟು ಕಂಡೀಷನರ್ ಹಾಕಿ ಕಣ್ಣಿನ ಕೆಳಗೆ ಹಾಗೂ ರೆಪ್ಪೆಗಳ ಮೇಲೆ ವೃತ್ತಾಕಾರವಾಗಿ ಉಜ್ಜಿದ್ರೆ ಮೇಕಪ್ ಅನ್ನು ಸುಲಭವಾಗಿ ತೆಗೆಯಬಹುದು. ಇದ್ರಿಂದ ಕಣ್ಣುಗಳಿಗೆ ಕಿರಿಕಿರಿ ಕೂಡ ಆಗೋದಿಲ್ಲ.

ಉಂಗುರ ಕಳಚಲು ನೆರವು
ನಿಮ್ಮ ಎಂಗೇಜ್‍ಮೆಂಟ್ ಉಂಗುರ ಅಥವಾ ನಿಮ್ಮ ಪ್ರೀತಿಪಾತ್ರರು ಗಿಫ್ಟ್ ನೀಡಿದ ಉಂಗುರವನ್ನು ಬೆರಳಿಗೆ ಹಾಕಿಕೊಂಡು ಅನೇಕ ವರ್ಷಗಳೇ ಕಳೆದಿರುತ್ತವೆ. ಅವು ಸದಾ ನಿಮ್ಮ ಕೈ ಬೆರಳಲ್ಲೇ ಇರುವ ಕಾರಣ ಅವುಗಳ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳೋದು ಇಲ್ಲ. ಆದ್ರೆ ಯಾವತ್ತಾದ್ರೂ ಒಂದು ದಿನ ಆ ಉಂಗುರವನ್ನು ಕಳಚಬೇಕು ಎಂದು ಪ್ರಯತ್ನಿಸಿದ್ರೆ ಅದನ್ನು ತೆಗೆಯಲು ಸಾಧ್ಯವಾಗೋದೇ ಇಲ್ಲ. ಇಂಥ ಸಮಯದಲ್ಲಿ ಉಂಗುರ ಇರುವ ಸ್ಥಳವನ್ನು ಬಿಟ್ಟು ಅದರ ಮೇಲಿನ ಹಾಗೂ ಕೆಳಭಾಗದ ಚರ್ಮಕ್ಕೆ ಸ್ವಲ್ಪ ಕಂಡೀಷನರ್ ಹಾಕಿ ಉಜ್ಜಿ ಆ ಬಳಿಕ ಉಂಗುರವನ್ನು ಹಿಂದೆ ಮುಂದೆ ತಿರುಗಿಸಿದ್ರೆ ಸುಲಭವಾಗಿ ಕಳಚಲು ಸಾಧ್ಯವಾಗುತ್ತೆ. 

ಬೇಸಿಗೆಯಲ್ಲಿ ಹಾಟ್ ಲುಕ್‌ನ ಕೂಲ್ ಡ್ರೆಸ್‌ಗಳು

ಹಟಮಾರಿ ಝಿಪ್‍ಗೆ ಬುದ್ಧಿ ಕಲಿಸುತ್ತೆ
ಕೆಲವೊಮ್ಮೆ ಪ್ಯಾಂಟ್, ಬ್ಯಾಗ್‍ಗಳ ಝಿಪ್‍ಗಳು ಟೈಟಾಗಿರುತ್ತವೆ. ನಾವೇನಾದ್ರೂ ಸ್ವಲ್ಪ ಜಾಸ್ತಿ ಬಲ ಹಾಕಿ ಎಳೆದ್ರೆ ತುಂಡಾಗಿ ಕೈಗೆ ಬಂದುಬಿಡುತ್ತವೆ. ಈ ರೀತಿ ಆ ಕಡೆ ಈ ಕಡೆ ಸರಿಯಲು ಹಟ ಮಾಡುವ ಝಿಪ್‍ಗೆ ಸ್ವಲ್ಪ ಕಂಡೀಷನರ್ ಹಾಕಿ ಹಿಂದೆ-ಮುಂದೆ ಮಾಡಿದ್ರೆ ಹೇಳಿದ ಮಾತು ಕೇಳುತ್ತೆ. 

ತುಕ್ಕನ್ನು ದೂರವಿರಿಸುತ್ತೆ
ಅಡುಗೆ ಮನೆ ಬಳಕೆಗೆ ಖರೀದಿಸಿದ ಚಾಕು, ನೇಲ್ ಕಟರ್ ಅಥವಾ ನಿಮ್ಮ ನೆಚ್ಚಿನ ಕೀ ಚೈನ್‍ಗೆ ತುಕ್ಕು ಹಿಡಿದ್ರೆ ಮೂಡ್ ಹಾಳಾಗೋದು ಗ್ಯಾರಂಟಿ. ಹಾಗಾದ್ರೆ ಇಂಥ ವಸ್ತುಗಳು ತುಕ್ಕಿಗೆ ಬಲಿಯಾಗಬಾರದು ಅಂದ್ರೆ ಏನ್ ಮಾಡ್ಬೇಕು? ಹೇರ್ ಕಂಡೀಷನರ್ ಅನ್ನು ಈ ವಸ್ತುಗಳ ಮೇಲೆ ತೆಳುವಾಗಿ ಲೇಪಿಸಬೇಕು. ಈ ಪ್ರಕ್ರಿಯೆಯನ್ನು ಆಗಾಗ ರಿಪೀಟ್ ಮಾಡೋದ್ರಿಂದ ತುಕ್ಕು ಹಿಡಿಯೋದಿಲ್ಲ.

ಹೈ ಹೀಲ್ಸ್ ನಿಮ್ಮ ಮೂಳೆಗಳ ಆರೋಗ್ಯ ಕಸಿಯುತ್ತೆ ಜೋಪಾನ...!

ಚರ್ಮಕ್ಕೆ ತೇವಾಂಶ
ಕೈಗಳು ಸಾಫ್ಟ್ ಆಗಿದ್ರೆ ನೋಡೋಕೆ ಚೆಂದ. ಆದ್ರೆ ಕೈಗಳ ಸಾಫ್ಟ್ನೆಸ್ ಉಳಿಸಿಕೊಳ್ಳಲು ಆಗಾಗ ಮಾಯಿಶ್ಚರೈಸರ್ ಹಚ್ಚೋದು ಅಗತ್ಯ. ಈಗ ಲಾಕ್‍ಡೌನ್ ಪರಿಣಾಮವಾಗಿ ಮನೆಯಲ್ಲಿ ಮಾಯಿಶ್ಚರೈಸರ್ ಖಾಲಿಯಾಗಿದ್ರೆ ಟೆನ್ಷನ್ ಮಾಡ್ಕೋಬೇಡಿ. ಸ್ವಲ್ಪ ಹೇರ್ ಕಂಡೀಷನರ್ ಅನ್ನು ಕೈಗಳಿಗೆ ಹಾಕಿ ಉಜ್ಜಿ 5 ನಿಮಿಷಗಳ ಬಳಿಕ ತೊಳೆಯಿರಿ ಅಥವಾ ಉಜ್ಜಿ ತೆಗೆಯಿರಿ.