ಲಾಕ್ ಡೌನ್ - ಜೋಡಿಗಳ ಲವ್ ಓಪನ್; ಬೆಂಗಳೂರಿನಲ್ಲಿ ಗರ್ಭನಿರೋಧಕ ಖಾಲಿ ಖಾಲಿ

ಲಾಕ್ ಡೌನ್ ಎಫೆಕ್ಟ್/ ಗರ್ಭನಿರೋಧಕ ಮಾತ್ರೆ ಮತ್ತು ಪ್ರಗ್ನೆನ್ಸಿ ಕಿಟ್ ಮಾರಾಟ ಗಣನೀಯ ಏರಿಕೆ/ ಒಂದಾಗಿ ಕಾಲ ಕಳೆಯುತ್ತಿರರುವ  ಬೆಂಗಳೂರಿನ ದಂಪತಿಗಳು

Coronavirus Lockdown Affect Pregnancy test, pill sales surge by 50 percent in Bengaluru

ಬೆಂಗಳೂರು(ಏ. 17) ಲಾಕ್ ಡೌನ್ ಅವಧಿಯಲ್ಲಿ ಕಾಂಡೋಮ್ ಗಳು ಖಾಲಿ ಖಾಲಿ ಎಂದು ದೊಡ್ಡ ಸುದ್ದಿಯಾಗಿತ್ರು. ಈಗ ಅದರ ಮುಂದಿನ ಹೆಜ್ಜೆ ಎಂಬಂತೆ ಮತ್ತೊಂದು ಸುದ್ದಿ ಬಂದಿದೆ. ಈ ವರದಿ ಬೆಂಗಳೂನಿಂದಲೇ ಬಂದಿದೆ.

ಗರ್ಭ ನಿರೋಧಕ ಮಾತ್ರೆಗಳು ಮತ್ತು ಪ್ರಗ್ನೆಸ್ಸಿ ಟೆಸ್ಟ್ ಕಿಟ್ ಗಳ ಮಾರಾಟದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಶೇ. 50 ರಷ್ಟು ಏರಿಕೆ ಕಂಡುಬಂದಿದ್ದು ದಂಪತಿ ಜತೆಯಾಗಿ ಕಾಲ ಕಳೆಯುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಕೊಟ್ಟಿದೆ.

ಕೊರೋನಾ ಆತಂಕದ ನಡುವೆ ಸಂಭೋಗ ಅಪಾಯವೆ? ಓರಲ್ ಓಕೆನಾ?

ಇದೊರೊಂದಿಗೆ ದಂಪತಿಗೆ ಮತ್ತೊಂದು ಚಿಂತೆಯೂ ಕಾಡಹತ್ತಿದೆ.  ಮುಂದಾಲೋಚನೆಯಿಲ್ಲದೇ ಗರ್ಭವತಿಯಾದರೆ ಕತೆಯೇನು?  ಎಂಬ ಬಗ್ಗೆಯೂ ವೈದ್ಯರಿಗೆ ಪ್ರಶ್ನೆಗಳ ಸುರಿಮಳೆ ಹರಿದು ಬಂದಿದೆ.
 
ಗರ್ಭನಿರೋಧಕ ಮಾತ್ರೆ ಮತ್ತು ಪ್ರಗ್ನೆನ್ಸಿ ಕಿಟ್ ಗಳ ಮಾರಾಟ ಹಿಂದೆಂದಿಗಿಂತಲೂ ಏರಿಕೆ ಕಂಡಿದ್ದು ಅಂಕಿ ಅಂಶ ಬಹಿರಂಗ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಶಾರ್ಟೆಜ್ ಸಹ ಕಂಡುಬಂತು ಎಂದು ಚಂದ್ರಾ ಲೇಔಟ್ ನಲ್ಲಿ  ಮೆಡಿಕಲ್ ಸ್ಟೋರ್  ನೋಡಿಕೊಳ್ಳುವರೊಬ್ಬರು ಹೇಳುತ್ತಾರೆ.

ಸೆಕ್ಸ್ ನಿಂದ ಪತ್ನಿಗೆ ವಿಚಿತ್ರ ಅಲರ್ಜಿ; ಕಾರಣ ತಿಳಿಯದ ಪತಿ ಕಂಗಾಲು

ಬೆಂಗಳೂರು ಪುಣೆ ನಂಬರ್ ಒನ್: 
ಪ್ರಗ್ನೆನ್ಸಿ ಕಿಟ್ ಮಾರಾಟದಲ್ಲಿ ಬೆಂಗಳೂರು ಮತ್ತು ಪುಣೆಗೆ ಅಗ್ರ ಸ್ಥಾನ. ಮಾರ್ಚ್ ಅಡಿಟ್ ವೇಳೆ ಈ ಅಂಶ ಬಹಿರಂಗವಾಗಿದ್ದು ಅತಿ ಹೆಚ್ಚು ಆರ್ಡರ್ ಗಳಾಗಿರುವುದು ಗೊತ್ತಾಗಿದೆ. ಇದೆ ತೆರನಾದ ಬೆಳವಣಿಗೆ ಹೈದರಾಬಾದ್ ಮತ್ತು ಮುಂಬೈನಲ್ಲಿಯೂ ಇದೆ.

ರೆಸಿಡೆನ್ಶಿಯಲ್ ಏರಿಯಾದಲ್ಲಿ ಮಾರಾಟ ಗಣನೀಯವಾಗಿ ಏರಿದ್ದರೆ ಕಮರ್ಷಿಯಲ್ ಪ್ರದೇಶದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂದಿದೆ. 5-6 ಬಾಕ್ಸ್ ಪ್ರಗ್ನೆನ್ಸಿ ಕಿಟ್ ಮಾರಾಟವಾಗುವ ಜಾಗದಲ್ಲಿ 20 ಕಿಟ್ ಮಾರಾಟವಾಗುತ್ತಿದೆ.

Latest Videos
Follow Us:
Download App:
  • android
  • ios