Asianet Suvarna News Asianet Suvarna News

ಉಸಿರುಕಟ್ಟುತ್ತಿತ್ತು… ಪಾಲಕರ ಫೋಟೋ ಹೊರಗೆಸೆದೆ ಎಂದ ಮಹಿಳೆ!

ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಜನರು ಅನೇಕ ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ. ಅದ್ರಲ್ಲಿ ಕೆಲ ವಿಷ್ಯಗಳು ತುಂಬಾ ನೋವಿನಿಂದ ಕೂಡಿರುತ್ತವೆ. ಈ ಮಹಿಳೆ ಕೂಡ ತನ್ನ ಜೀವನದ ಕಹಿ ಸತ್ಯವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾಳೆ. 
 

Threw Away Everything Of My Dead Parents  roo
Author
First Published Mar 18, 2024, 1:01 PM IST

ತಂದೆ – ತಾಯಿ ಅಗಲಿದಾಗ ಅದರ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಸದಾ ನಮ್ಮ ಜೊತೆಗಿರುವ ದುಃಖ ಅದು. ಅವರ ಜಾಗವನ್ನು ಯಾರೂ ತುಂಬಲು ಅಸಾಧ್ಯ. ಪಾಲಕರು ಸಾವನ್ನಪ್ಪಿ ವರ್ಷ ವರ್ಷಗಳೇ ಉರುಳಿ ಮಕ್ಕಳಿಗೆ ವಯಸ್ಸಾದ್ರೂ ಅವರನ್ನು ಮರೆಯಲು ಆಗೋದಿಲ್ಲ. ಅವರ ಫೋಟೋ ಅಥವಾ ಅವರು ಬಳಸಿದ ವಸ್ತುಗಳು ನಮ್ಮ ಮುಂದಿದ್ದರೆ ಅವರು ಆಗಾಗ ನೆನಪಾಗಿ ಮತ್ತಷ್ಟು ನೋವು ತಿನ್ನಬೇಕಾಗುತ್ತದೆ. ಎಷ್ಟೇ ನೋವು ನೀಡಿದ್ರೂ ಬಹುತೇಕ ಮಕ್ಕಳು ಪಾಲಕರ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ತಾರೆ. ಅವರ ಬಟ್ಟೆ, ಬಂಗಾರದ ಆಭರಣಗಳನ್ನು ಒಂದ್ಕಡೆ ಎತ್ತಿಟ್ಟಿರುತ್ತಾರೆ. ಅದನ್ನು ಕಸಕ್ಕೆ ಎಸೆಯಲು ಅಥವಾ ಬೇರೆಯವರಿಗೆ ನೀಡಲು ಮನಸ್ಸು ಬರೋದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಳೆ. ಪಾಲಕರ ವಿಷ್ಯದಲ್ಲಿ ಭಾವುಕಳಾಗಿರುವ ಅವಳು, ತಾನು ಏನು ಮಾಡಿದ್ದೇನೆ ಎಂಬುದನ್ನು ಸಾಮಾಜಿಕ ಜಾಲತಾಣ ರೆಡ್ಡಿಟ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾಳೆ. ಮನೆಯಲ್ಲಿ ಪಾಲಕರ ಒಂದೂ ವಸ್ತುವನ್ನು ನಾನಿಟ್ಟುಕೊಂಡಿಲ್ಲ ಎಂದು ಆಕೆ ಹೇಳಿದ್ದಾಳೆ.  

ಮಹಿಳೆ ಪೋಸ್ಟ್ (Post) ಓದಿದ ಅನೇಕರ ಕಣ್ಣಿನಲ್ಲಿ ನೀರು ಬಂದಿದೆ. ನನ್ನ ಮೃತ ತಂದೆ ತಾಯಿ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದ್ದೇನೆ ಎಂದು ಶೀರ್ಷಿಕೆ ನೀಡಿ ಆಕೆ ಪೋಸ್ಟ್ ಹಾಕಿದ್ದಾಳೆ. ಈ ಮಹಿಳೆ ತಾಯಿ, ಮಹಿಳೆಗೆ ಐದು ವರ್ಷವಿರುವಾಗ್ಲೇ ಮೃತಪಟ್ಟಿದ್ದಾರೆ. ತಂದೆ ಕೊರೊನಾ (Corona) ಮೊದಲ ಅಲೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಾವು (Death) ಮಹಿಳೆ ಉಸಿರುಗಟ್ಟಿಸುತ್ತಿದೆ. ಮನೆಯ ಪ್ರತಿಯೊಂದು ವಸ್ತುಗಳು ಆಕೆಗೆ ತಂದೆ – ತಾಯಿಯನ್ನು ನೆನಪಿಸುತ್ತಿದೆ. ಅವರ ನೆನಪಿನಿಂದ ನಾನು ಹೊರಬರಲು ಬಯಸಿದ್ದೆ. ಹಾಗಾಗಿ ಹೀಗೆ ಮಾಡಿದೆ ಎಂದಿದ್ದಾಳೆ ಮಹಿಳೆ. 

ಸೆಕ್ಸ್ ಡ್ರೈವ್ ಹೆಚ್ಚಿಸಿಕೊಳ್ಳಲು ಪುರುಷರು ದಿನಾ ಈ ಒಂದು ಮಸಾಲೆ ತಿಂದ್ರೆ ಸಾಕು!

ಮನೆಯ ಮೂಲೆ ಮೂಲೆಯನ್ನು ನಾನು ಕ್ಲೀನ್ ಮಾಡ್ತಿದ್ದೆ. ಈ ಸಮಯದಲ್ಲಿ ಅವರ ಅನೇಕ ವಸ್ತುಗಳು ನನ್ನ ಕಣ್ಣಿಗೆ ಬಿದ್ದಿದ್ದವು. ಅದರಲ್ಲಿ ಅವರ ಮದುವೆ ಫೋಟೋಗಳಿದ್ದವು. ನಾನದನ್ನು ನೋಡ್ತಾ ಕುಳಿತಿದ್ದೆ. ಎಂದಿನಂತೆ ಆ ಫೋಟೋಗಳು ನನಗೆ ಖುಷಿ ನೀಡಿದ್ದವು. ಆದ್ರೆ ಈ ವೇಳೆ ನನಗೆ ಜ್ಞಾನೋದಯವಾಯ್ತು. ಈ ನೆನಪಿನಲ್ಲೇ ನಾನು ಎಷ್ಟು ದಿನ ಹೀಗೆ ಇರೋದು, ನನ್ನನ್ನು ನಾನು ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದೆ ಎನ್ನುತ್ತಾಳೆ ಮಹಿಳೆ.

ಪಾಲಕರ ನೆನಪು ಬರಬಾರದು ಎನ್ನುವ ಕಾರಣಕ್ಕೆ ಅವರ ಫೋಟೋಗಳನ್ನು ಮನೆಯಿಂದ ಹೊರಗೆ ಹಾಕಿದೆ. ಅಲ್ಲದೆ ಎಲ್ಲ ಬಟ್ಟೆಯನ್ನು ದಾನ ನೀಡಿದ್ದೇನೆ. ಅವರ ಸಣ್ಣಪುಟ್ಟ ವಸ್ತುಗಳೂ ನನ್ನ ಬಳಿ ಇಲ್ಲ. ಅಮ್ಮನ ಬಂಗಾರವನ್ನೂ ಮಾರಿದ್ದೇನೆ. ಈಗ ಅವರ ಮದುವೆ ಫೋಟೋ ಹಾಗೂ ಅಮ್ಮನ ಮದುವೆ ಸೀರೆ ಮಾತ್ರ ನನ್ನ ಬಳಿ ಇದೆ. ಅದಷ್ಟನ್ನು ತೆಗೆದುಕೊಂಡು ನಾನು ಮನೆ ಬಿಟ್ಟಿದ್ದೇನೆ. ಹೊಸ ಜೀವನ ಶುರು ಮಾಡುವ ಭರವಸೆಯಲ್ಲಿದ್ದೇನೆ ಎಂದು ಮಹಿಳೆ ಬರೆದಿದ್ದಾಳೆ. ಇಷ್ಟೇ ಅಲ್ಲ ರೆಡ್ಡಿಟ್ ಪೋಸ್ಟ್ ನಲ್ಲಿ ಕೆಲವು ಸಲಹೆಯನ್ನು ಕೂಡ ನೀಡಿದ್ದಾಳೆ. ನೀವೂ ಇಂಥ ನೋವಿನಲ್ಲಿದ್ದರೆ ಅದರಿಂದ ಹೊರಗೆ ಬರಲು ನನ್ನ ದಾರಿ ತುಳಿಯಬಹುದು. ಇಲ್ಲವೆ ನೀವು ತಜ್ಞರ ಸಲಹೆ ಪಡೆಯಬಹುದು ಎಂದಿದ್ದಾಳೆ.

Parenting Tips: ಮಕ್ಕಳಿಗೆ ಏಟು ಹಾಕೋದೊಂದೇ ಎಲ್ದವಕ್ಕೂ ಪರಿಹಾರವಲ್ಲ; ಕೆಲವೊಮ್ಮೆ ಹೊಡಯಲೇ ಬಾರದು!

ಮಹಿಳೆ ರೆಡ್ಡಿಟ್ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಬಳಕೆದಾರರು ಮಹಿಳೆಗೆ ಸಾಂತ್ವಾನ ಹೇಳಿದ್ದಾರೆ. ಮತ್ತೆ ಕೆಲವರು ತಮ್ಮ ಕಥೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ತನ್ನ ಅಪ್ಪನನ್ನು ಕಳೆದುಕೊಂಡಿದ್ದು, ಅನಾರೋಗ್ಯ ಅಮ್ಮನ ಜೊತೆ ಜೀವನ ನಡೆಸುತ್ತಿದ್ದೇನೆ. ಭವಿಷ್ಯದಲ್ಲಿ ಒಂಟಿಯಾಗಿರಬೇಕೆಂಬ ನೋವು ನನ್ನನ್ನು ಕಾಡುತ್ತಿದ್ದೆ ಎಂದಿದ್ದಾರೆ. ಇನ್ನೊಬ್ಬರು ನಾನು ಎರಡು ವರ್ಷ ಥೆರಪಿ ಪಡೆದಿದ್ದು, ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ.  

Follow Us:
Download App:
  • android
  • ios