Personality Development: ಹ್ಯಾಪ್ ಮೋರೆ ಹಾಕೋದು ಬಿಟ್ವಿಡಿ..ಹ್ಯಾಪಿಯಾಗಿರಿ
ಕೆಲವೊಬ್ರನ್ನು ನೋಡಿರ್ತೀರಾ ? ಆಕಾಶಾನೇ ತಲೆಮೇಲೆ ಬಿದ್ದಂಗೆ ಆಡ್ತಿರ್ತಾರೆ. ಪಾರ್ಟಿ (Party)ಯಿರ್ಲಿ, ಹಬ್ಬ ಇರ್ಲಿ ಅವ್ರದ್ದು ಅದೇ ಗೋಳು. ನೀವು ಹೀಗೆನಾ ? ಯಾವಾಗ್ಲೂ ಡಲ್ (Dull) ಆಗಿರ್ತೀರಾ ? ಅದ್ಯಾಕೆ ಹೀಗಾಡ್ತೀರಿ. ನಾವ್ ಹೇಳ್ತೀವಿ ಕೇಳಿ.
ಪ್ರತಿಯೊಬ್ಬರ ಜೀವನಶೈಲಿ (Lifestyle)ಯೂ ವಿಭಿನ್ನವಾಗಿರುತ್ತದೆ. ಒಬ್ಬೊಬ್ಬರೂ ಒಂದೊಂದು ರೀತಿಯ ಜೀವನಕ್ರಮವನ್ನು ಅನುಸರಿಸುತ್ತಾರೆ, ವಿವಿಧ ರೀತಿಯ ಚಟುವಟಿಕೆಗೆಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಕೆಲವೊಬ್ಬರನ್ನು ನೀವು ಗಮನಿಸಿರಬಹುದು. ದಿನಪೂರ್ತಿ ಉತ್ಸುಕರಾಗಿರುತ್ತಾರೆ. ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಮಾತುಕತೆಯಲ್ಲಿ ಭಾಗವಹಿಸುತ್ತಾರೆ. ಆದರೆ ಇನ್ನು ಕೆಲವೊಬ್ಬರು ಹಾಗಲ್ಲ, ಎಂಥಾ ಹಬ್ಬಹರಿದಿನವಾಗಿದ್ದರೂ ಡಲ್ (Dull) ಆಗಿರುತ್ತಾರೆ. ಉದಾಸೀನ ಮನೋಭಾವವನ್ನು ಹೊಂದಿರುತ್ತಾರೆ. ಇದಕ್ಕೇನು ಕಾರಣ ?
ನಾವೆಲ್ಲರೂ ಪ್ರತಿದಿನವೂ ನಮ್ಮ ದಿನಚರಿಯ ಭಾಗವಾಗಿರುವ ಕೆಲಸಗಳನ್ನು ಮಾಡುತ್ತೇವೆ. ಈ ದಿನಚರಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತದೆ. ಈ ರೀತಿಯ ಚಟುವಟಿಕೆಗಳೇ ನಮ್ಮ ಮನೋಭಾವವನ್ನು ನಿರ್ಧರಿಸುತ್ತದೆ. ಕೆಲವೊಬ್ಬರು ಖುಷಿ (Happy)ಯಾಗಿರಲು, ಕೆಲವೊಬ್ಬರು ಡಲ್ ಆಗಿರಲು ಕಾರಣವಾಗುತ್ತದೆ. ಹಾಗಿದ್ರೆ ನಮ್ಮಲ್ಲಿರುವ ಯಾವ ರೀತಿಯ ಅಭ್ಯಾಸ ನಾವು ಡಲ್ ಆಗಿರುವಂತೆ ಮಾಡುತ್ತದೆ ಎಂಬುದನ್ನು ತಿಳಿಯೋಣ.
Be Happy: ಯಾವಾಗ್ಲೂ ಖುಷಿಯಾಗಿರ್ಬೇಕಾ ? ಹೀಗೆ ಮಾಡಿ ಸಾಕು
ಅತಿಯಾಗಿ ಯೋಚಿಸುವುದು
ಪ್ರತಿಯೊಬ್ಬರೂ ಯೋಚನೆ (Thinking) ಮಾಡುತ್ತಾರೆ. ಆದರೆ ಕೆಲವೊಬ್ಬರು ಅತಿಯಾಗಿ ಆಲೋಚನೆ ಮಾಡುತ್ತಾರೆ. ಈಗಾಗಲೇ ನಡೆದಿರುವ ಘಟನೆ, ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ಊಹಿಸಿ ತಲೆಕೆಡಿಸಿಕೊಳ್ಳುತ್ತಾರೆ. ಇಂಥಹಾ ಆಲೋಚನೆಗಳು ಮಾನಸಿಕವಾಗಿ ನಮ್ಮನ್ನು ದಣಿಯುವಂತೆ ಮಾಡುತ್ತದೆ. ಇದು ದಿನವಿಡೀ ನಾವು ಡಲ್ ಆಗಿರಲು ಕಾರಣವಾಗುತ್ತದೆ. ಖುಷಿಯ ಕ್ಷಣಗಳನ್ನು ಸಹ ಆಸ್ವಾದಿಸಲು ಸಾಧ್ಯವಾಗುವುದಿಲ್ಲ.
ಕಳೆದುಹೋದ ಕ್ಷಣದ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ
ಜೀವನದಲ್ಲಿ ಈ ಹಿಂದೆ ಮಾಡಿರುವ ತಪ್ಪು (Mistake)ಗಳಿಂದ ನಾವು ಪಾಠ ಕಲಿಯಬಹುದಷ್ಟೇ. ಕಾಲವನ್ನು ಹಿಂದಕ್ಕೆ ಸರಿಸಿ ತಪ್ಪನ್ನು ಸರಿಪಡಿಸಲು ಸಾಧ್ಯವಿಲ್ಲ. ಹೀಗಾಗಿ ಈ ಹಿಂದೆ ಮಾಡಿರುವ ತಪ್ಪಿನ ಬಗ್ಗೆ, ಅದರಿಂದಾದ ಪರಿಣಾಮಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡಿ. ಆ ತಪ್ಪಿನಿಂದ ಕಲಿತ ಪಾಠವಷ್ಟೇ ನಿಮ್ಮ ಮನದಲ್ಲಿರಲಿ.
ಭವಿಷ್ಯದ ಬಗ್ಗೆ ವಿನಾಕಾರಣ ಚಿಂತೆ ಮಾಡಬೇಡಿ
ಹಾಗೆಯೇ ಭವಿಷ್ಯ (Future)ದಲ್ಲಿ ಎದುರಾಗುವ ಅಪಾಯವನ್ನು ನಾವು ಈಗಲೇ ಊಹಿಸಿ ಭಯಪಡುವುದು ಸೂಕ್ತವಲ್ಲ. ಭವಿಷ್ಯದ ಬಗ್ಗೆ ವಿನಾಕಾರಣ ಆಲೋಚನೆ ಮಾಡುವುದು ಚಿಂತೆ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಭವಿಷ್ಯದಲ್ಲಿ ಏನಾಗಲಿದೆಯೋ ಅದೇ ಆಗಲಿದೆ. ಅದನ್ನು ಬದಲಾಯಿಸಲು ನಿಮ್ಮ ಪರಿಶ್ರಮ ಪಡಬಹುದಷ್ಟೇ. ವಿನಾಕಾರಣ ಅದರ ಬಗ್ಗೆಯೇ ಯೋಚಿಸಿ ಇಂದಿನ ಖುಷಿಯನ್ನು ಸಹ ಕಳೆದುಕೊಳ್ಳುವುದು ಮೂರ್ಖತನ.
Be Happy: ಟೆನ್ಶನ್ ಆದಾಗ ರಿಲ್ಯಾಕ್ಸ್ ಆಗಲು ಹೀಗೆ ಮಾಡಿ
ಒತ್ತಡದಲ್ಲಿಯೇ ಸಮಯ ಕಳೆಯುವುದು
ಅತಿಯಾಗಿ ಆಲೋಚಿಸುವುದರಲ್ಲೇ ಹಲವರು ಅದೆಷ್ಟೋ ಗಂಟೆಗಳನ್ನು ವ್ಯರ್ಥ ಮಾಡುತ್ತಾರೆ. ಇದು ಆತಂಕ (Tension)ವನ್ನು ಹೆಚ್ಚಿಸಬಹುದು. ನೀವು ಅತಿಯಾಗಿ ಆಲೋಚಿಸುತ್ತಿರುವಾಗ ಕೆಲಸದ ಮೇಲೆ ನಿಮ್ಮ ಗಮನವು ಕಡಿಮೆಯಾಗುವುದಲ್ಲದೆ, ತಲೆನೋವು, ದೇಹನೋವು ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಅನೇಕ ಜನರು ತಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳ ಬಗ್ಗೆ ಚಿಂತೆ ಮಾಡುತ್ತಾರೆ. ಅತಿಯಾಗಿ ಯೋಚಿಸುವ ಅಭ್ಯಾಸವು ವ್ಯಕ್ತಿಗಳ ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಇದರ ಬದಲು ಸಮಯವನ್ನು ನಾವು ಎದುರಿಸುತ್ತಿರುವ ಸವಾಲುಗಳಿಗೆ ಸೃಜನಶೀಲ ಪರಿಹಾರಗಳನ್ನು ಹುಡುಕಲು ಬಳಸಿಕೊಳ್ಳಬಹುದು.
ಹೊಸತನ್ನು ಕಲಿಯದಿರುವುದು
ರೊಟೀನ್ ಜೀವನಕ್ರಮವನ್ನು ಅನುಸರಿಸುವುದು ವ್ಯಕ್ತಿ ಡಲ್ ಆಗಿರುವಂತೆ ಮಾಡುತ್ತದೆ. ಜೀವನದಲ್ಲಿ ಹೊಸತೇನು ಇಲ್ಲದಿದ್ದಾಗ ಪ್ರತಿದಿನವೂ ನೀರಸವಾಗಿರುತ್ತದೆ. ಸೃಜನಶೀಲತೆ ಮತ್ತು ಕಲಿಕೆಯ ವ್ಯಾಪ್ತಿಯಿಲ್ಲದ ಏಕತಾನತೆಯ ದೈನಂದಿನ ದಿನಚರಿಯನ್ನು ಅನುಸರಿಸುವುದು ನಮ್ಮನ್ನು ಅತೃಪ್ತಿ ಮತ್ತು ಮಂದಗೊಳಿಸುತ್ತಿರುವ ವಿಷಯವಾಗಿದೆ. ಹೀಗಾಗಿ ಯಾವತ್ತೂ ಹೊಸ ಹೊಸತನ್ನು ಕಲಿಯುತ್ತಿರಿ. ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಹೊಸ ಹವ್ಯಾಸ (Habit) ಅಥವಾ ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ಮನಸ್ಸನ್ನು ಚುರುಕಾಗಿಸುತ್ತದೆ, ಮನಸ್ಸಿಗೆ ಖುಷಿ ನೀಡುತ್ತದೆ ಮತ್ತು ಸಮಯವನ್ನು ಅರ್ಥಪೂರ್ಣವಾದ ರೀತಿಯಲ್ಲಿ ಕಳೆಯಲು ಸಹಾಯ ಮಾಡುತ್ತದೆ. ದಿನವಿಡೀ ಖುಷಿಯಾಗಿರಲು ನೆರವಾಗುತ್ತದೆ. ಸೋ, ಇನ್ಯಾಕೆ ತಡ ಹ್ಯಾಪ್ ಮೋರೆ ಹಾಕೋದು ಬಿಟ್ವಿಡಿ. ಹ್ಯಾಪಿಯಾಗಿರಿ.