Asianet Suvarna News Asianet Suvarna News

Be Happy: ಟೆನ್ಶನ್‌ ಆದಾಗ ರಿಲ್ಯಾಕ್ಸ್ ಆಗಲು ಹೀಗೆ ಮಾಡಿ

ಯಪ್ಪಾ ಇದೆಂಥಾ ಹೆಕ್ಟಿಕ್ ಡೇ. ಫುಲ್ ಡೇ ಹಾಸಿ ಹೊದ್ದುಕೊಳ್ಳುವಷ್ಟು ಕೆಲ್ಸ (Work), ಬಾಸ್ ಬೈಗುಳ ಬೇರೆ ಸಾಕಾಯ್ತಪ್ಪಾ ಅಂತ ಅನಿಸಿರೋ ದಿನಗಳಿದ್ಯಾ ? ವಿಪರೀತವಾಗಿ ಸ್ಟ್ರೆಸ್ (Stress) ಅನಿಸಿದ ದಿನ ರಿಫ್ರೆಶ್ (Refresh) ಆಗಲು ಹೀಗೆ ಮಾಡಿ.

Quick Ways To Relax After A Stressful Day
Author
Bengaluru, First Published Feb 14, 2022, 5:42 PM IST

ಆಫೀಸ್ ಕೆಲ್ಸ, ಮನೆಯ ಜವಾಬ್ದಾರಿ, ಊರಿನಲ್ಲೇನೋ ಪ್ರಾಬ್ಲಂ (Problem). ಎಲ್ಲರ ಜೀವನದಲ್ಲೂ ಸಮಸ್ಯೆಗಳು ನೂರಾರು ಇರುತ್ತವೆ. ಒಂದೊಂದು ಸಾರಿ ಎಲ್ಲವೂ ವಿಪರೀತವಾಗಿ ಮನಸ್ಸಿನ ಮೇಲೆ ಒತ್ತಡ (Pressure) ಬೀಳುತ್ತದೆ. ಒತ್ತಡದಿಂದ ಹೊರಬಂದು ವಿಶ್ರಾಂತಿ ಪಡೆಯಬೇಕು ಎಂದು ಬಲವಾಗಿ ಅನಿಸುತ್ತದೆ. ಹೀಗಿರುವಾಗ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಅತೀ ಅಗತ್ಯವಾಗಿದೆ.. ನಿಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಒತ್ತಡವನ್ನು ಕಡಿಮೆ ಮಾಡಲು ನೀವು ಸಿದ್ಧರಾಗಿದ್ದರೆ, ಒತ್ತಡದ ದಿನದ ನಂತರ ಮಾನಸಿಕವಾಗಿ ಹೇಗೆ ರಿಫ್ರೆಶ್ ಮಾಡುವುದು ಎಂಬುದರ ಕುರಿತು ನೀವು ತಿಳಿದಿರಬೇಕು. ಅಲ್ಲದೆ, ನಿಮ್ಮ ದೈಹಿಕ ಆರೋಗ್ಯದಷ್ಟೇ ನಿಮ್ಮ ಮಾನಸಿಕ ಆರೋಗ್ಯ (Mentel Health)ವೂ ಮುಖ್ಯವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಒತ್ತಡದ ದಿನದ ನಂತರ ಮಾನಸಿಕವಾಗಿ ರಿಫ್ರೆಶ್ ಮಾಡಲು ಹೀಗೂ ಮಾಡ್ಬೋದು ನೋಡಿ.

ಮನಸ್ಸಿಗೆ ಬಂದಾಗ ಆಲೋಚನೆಗಳನ್ನು ಬರೆಯಿರಿ
ಮನಸ್ಸಿಗೆ ಹೆಚ್ಚು ಒತ್ತಡದ ಅನುಭವವಾಗುವುದು ಇದೇ ಕಾರಣಕ್ಕೆ. ಯಾವುದೇ ವಿಷಯವನ್ನು ಪದೇ ಪದೇ ಯೋಚನೆ ಮಾಡುತ್ತಿದ್ದಾಗ ಅದು ಮನಸ್ಸಿಗೆ ಒತ್ತಡವಾಗಿ ಪರಿಣಮಿಸುತ್ತದೆ. ಹೀಗಾಗಿ ಯಾವುದೇ ವಿಷಯದ ಬಗ್ಗೆಯೂ ವಿಪರೀತವಾಗಿ ಆಲೋಚನೆ ಮಾಡಬೇಡಿ. ಮನಸ್ಸಿಗೆ ಹೆಚ್ಚು ಆಲೋಚನೆಗಳು ಬಂದಾಗ ಅದನ್ನು ಅಕ್ಷರ ರೂಪಕ್ಕಿಳಿಸಿ. ಮನಸ್ಸಿಗೆ ಬಂದದ್ದನ್ನು ಬರೆಯಿರಿ. ಆಲೋಚನೆಗಳನ್ನು ಪುಸ್ತಕ (Book)ದಲ್ಲಿ ಬರೆಯುತ್ತಾ ಹೋಗಿ. ಆಲೋಚನೆಗಳನ್ನು ಜರ್ನಲ್ ಮಾಡುವುದರಿಂದ ನೀವು ಬಹಳಷ್ಟು ಒತ್ತಡವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. 

Mother Health: ಬಾಣಂತಿಗಿರಲಿ ಸೂಕ್ತ ಮಾನಸಿಕ ಆರೋಗ್ಯ ಆರೈಕೆ

ನೆನಪಿಡಿ, ನಾವು ರೋಬೋಟ್‌ಗಳಲ್ಲ, ಮತ್ತು ನಾವು ಕಾಲಕಾಲಕ್ಕೆ ನಮ್ಮ ಮನಸ್ಸನ್ನು ಕ್ಲಿಯರ್ ಮಾಡುತ್ತಾ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮನಸ್ಸು (Mind) ಹಲವು ಆಲೋಚನೆಗಳ ಒತ್ತಡದಿಂದ ಬಳಲುವಂತಾಗುತ್ತದೆ. 

ಧ್ಯಾನದಲ್ಲಿ ತೊಡಗಿಸಿಕೊಳ್ಳಿ
ಧ್ಯಾನ (Meditation)ದಲ್ಲಿ ತೊಡಗಿಸಿಕೊಳ್ಳುವುದು ಒತ್ತಡದಿಂದ ಹೊರಬರುವ ತ್ವರಿತ ಮಾರ್ಗವಾಗಿದೆ. ಹೀಗಾಗಿ ದಿನದಲ್ಲಿ ಕನಿಷ್ಠ ಐದು ನಿಮಿಷ ಅಥವಾ ಗರಿಷ್ಠ 1 ಗಂಟೆ ಧ್ಯಾನಕ್ಕಾಗಿ ಮೀಸಲಿಡಿ. ಇದು ಮೆದುಳಿನಿಂದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಚಿಂತನೆಯನ್ನು ಮಾಡಲು ನೆರವಾಗುತ್ತದೆ. ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ವಿಶ್ರಾಂತಿ, ನಿದ್ರೆ ಮತ್ತು ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದರಿಂದ ಹೊಸ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ. ಹೀಗಾಗಿ ಒತ್ತಡವಿರಲಿ, ಇಲ್ಲದಿರಲಿ ಪ್ರತಿ ದಿನ ಧ್ಯಾನ ಮಾಡಿ. ಒತ್ತಡವಿಲ್ಲದೆ ಜೀವನ ನಡೆಸಿ.

ಆತ್ಮೀಯರೊಂದಿಗೆ ಸಮಯ ಕಳೆಯಿರಿ
ಏಕಾಂಗಿಯಾಗಿರುವುದು ಯಾವಾಗಲೂ ಮನಸ್ಸಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಒತ್ತಡ ಬೀಳಲು ಕಾರಣವಾಗುತ್ತದೆ. ಹೀಗಾಗಿ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ, ಆತ್ಮೀಯರೊಂದಿಗೆ ಹೆಚ್ಚು ಸಮಯ (Time) ಕಳೆಯಿರಿ. ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇರುವುದರಿಂದ ನಿಮಗೆ ಸುರಕ್ಷಿತ ಭಾವನೆ ಮೂಡುತ್ತದೆ. ರಿಲ್ಯಾಕ್ಸ್ ಆದ ಅನುಭವವಾಗುತ್ತದೆ. ಸಮಸ್ಯೆಗಳಿದ್ದಾಗ ಆಪ್ತರೆನಿಸಿಕೊಂಡವರಲ್ಲಿ ಹೇಳಿಕೊಳ್ಳಿ. ಸಮಸ್ಯೆಗಳು ವಿಪರೀತವಾಗಿ ಮನಸ್ಸಿಗೆ ಕಿರಿಕಿರಿಯುಂಟು ಮಾಡುತ್ತಿದೆ ಎಂದೆನಿಸಿದಾಗ ಪ್ರೀತಿಪಾತ್ರರಿಗೆ ಕರೆ ಮಾಡಿ ಉತ್ತಮವಾಗಿ ಸಮಯ ಕಳೆಯಿರಿ. 

Mental Health: ಸಮಸ್ಯೆಗಳು ಅಂದ್ರೆ ಭಯಾನ, ಮೆಂಟಲೀ ಸ್ಟ್ರಾಂಗ್ ಆಗೋದು ಹೇಗೆ ?

ಯೋಗ/ ವ್ಯಾಯಾಮ ಮಾಡಿ
ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ.ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ನೆಮ್ಮದಿಯನ್ನು ನೀಡುತ್ತದೆ. ಜಿಮ್‌ಗೆ ಹೋಗುವುದು, ಯೋಗ (Yoga) ಮಾಡುವುದು, ಅಥವಾ ನಿಯಮಿತ ನಡಿಗೆಗೆ ಹೋಗುವುದು ಸಹ ದೀರ್ಘ ದಿನದ ನಂತರ ನಿಮಗೆ ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ನಿಮ್ಮ ಸ್ನಾಯುಗಳನ್ನು ವಿಸ್ತರಿಸುವುದು ಎಲ್ಲಾ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಒಂದು ಮೂಡ್ ಬೂಸ್ಟರ್ ಆಗಿರುವುದರಿಂದ, ಹವಾಮಾನವು ಉತ್ತಮವಾದಾಗ ವಾಕಿಂಗ್‌ಗೆ ಹೋಗುವುದು ಸಹ ನೀವು ಒತ್ತಡದಲ್ಲಿದ್ದಾಗ ವಿಶೇಷವಾಗಿ ಪ್ರಯೋಜನಕಾರಿ ಅನುಭವವನ್ನು ನೀಡುತ್ತದೆ.

ಸೋ, ಇನ್ಮುಂದೆ ಟೆನ್ಶನ್, ಸ್ಟ್ರೆಸ್ ಅನ್ಸಿದಾಗ ಏನ್ಮಾಡ್ಬೇಕು ಗೊತ್ತಾಯ್ತಲ್ಲ. ಮುಂದಿನ ಬಾರಿ ನೀವು ಕೆಲಸದಲ್ಲಿ ನಿರ್ಧಿಷ್ಟವಾಗಿ ಒತ್ತಡದ ದಿನವನ್ನು ಹೊಂದಿದ್ದಾಗ ಈ ರೀತಿ ಮಾಡಿ ನೋಡಿ ನೆಮ್ಮದಿಯಾಗಿರಿ.

Latest Videos
Follow Us:
Download App:
  • android
  • ios