Relationship Tips : ಪತಿ ಮುಂದೆ ಖುಷಿ ನಾಟಕವಾಡೋದೇ ದುಬಾರಿಯಾಗ್ತಿದೆ
Relationship Tips: ಖುಷಿ, ದುಃಖ ಎಲ್ಲವನ್ನೂ ಸಂಗಾತಿ ಮುಂದೆ ವ್ಯಕ್ತಪಡಿಸುವು ಸ್ವಾತಂತ್ರ್ಯವಿರಬೇಕು. ಹಾಗೆ ದಾಂಪತ್ಯ ಜೀವನದಲ್ಲಿ ನಾಟಕವಿರಬಾರದು. ಸಂಗಾತಿ ಮುಂದೊಂದು ಮಾತು, ಹಿಂದೊಂದು ಮಾತು ಆಡಿದ್ರೆ ಆ ಸಂಬಂಧ ತುಂಬಾ ದಿನ ಇರೋದಿಲ್ಲ.
ಮನುಷ್ಯ (Human) ನ ಇಷ್ಟಗಳು ಭಿನ್ನವಾಗಿರುತ್ತವೆ. ಇದೇ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಪತಿ – ಪತ್ನಿ (Husband - wife ) ವಿಷ್ಯದಲ್ಲೂ ಹಾಗೆ. ಇಬ್ಬರು ಒಂದೇ ರೀತಿ ಇರಲು ಸಾಧ್ಯವಿಲ್ಲ. ಪತಿ – ಪತ್ನಿ ಇಬ್ಬರ ಆಸೆ, ಬೇಡಿಕೆಗಳು ಭಿನ್ನವಾಗಿರುತ್ತವೆ. ಅದಕ್ಕೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಒಬ್ಬರ ಆಸಕ್ತಿಗೆ ಇನ್ನೊಬ್ಬರು ಸ್ಪಂದಿಸಬೇಕು. ಆಗ್ಲೇ ಜೀವನ ಸುಖಕರವಾಗಿರಲು ಸಾಧ್ಯ. ಯಾವುದೇ ಕಾರಣಕ್ಕೂ ನಮ್ಮ ಬಯಕೆ, ನಿರ್ಧಾರಗಳನ್ನು ಬೇರೆಯವರ ಮೇಲೆ ಹೇರಬಾರದು. ಇದ್ರಿಂದ ಸಂಬಂಧ (Relation) ದಲ್ಲಿ ಉಸಿರುಗಟ್ಟಿದ ಅನುಭವವಾಗುತ್ತದೆ. ಇಷ್ಟವಿಲ್ಲದ ಕೆಲಸವನ್ನು ಕಷ್ಟಪಟ್ಟು ನಾಲ್ಕೈದು ದಿನ ಮಾಡ್ಬಹುದು. ಆ ಮೇಲೆ ಅದರಿಂದ ಹೊರಗೆ ಬರಲು ಮನಸ್ಸು ಚಡಪಡಿಸುತ್ತದೆ. ಕೆಲಸದ ಮೇಲೆ ಮಾತ್ರವಲ್ಲ ಕೆಲಸ ಹೇಳುವ ವ್ಯಕ್ತಿ ಮೇಲೂ ಆಸಕ್ತಿ, ಪ್ರೀತಿ ಕಡಿಮೆಯಾಗುತ್ತದೆ. ಇದಕ್ಕೆ ಈ ಮಹಿಳೆ ಉತ್ತಮ ಉದಾಹರಣೆ ಎನ್ನಬಹುದು. ಪತಿಯ ಸಿನಿಮಾ ಈಕೆ ಜೀವನದಲ್ಲಿ ದೊಡ್ಡ ಬಿರುಗಾಳಿಯಾಗ್ತಿದೆ. ಆ ಮಹಿಳೆ ಸಮಸ್ಯೆಯೇನು ? ಹಾಗೆ ಅದಕ್ಕೆ ತಜ್ಞರು ಹೇಳಿದ್ದೇನು? ಎಂಬುದನ್ನು ನಾವಿಂದು ಹೇಳ್ತೇವೆ.
ಪತಿ ಹಾಲಿವುಡ್ (Hollywood) ಸಿನಿಮಾ (Cinema ) ಪ್ರೇಮಿ : ಆಕೆಗೆ ಮದುವೆ (Marriage)ಯಾಗಿ ಮೂರು ವರ್ಷವಾಗಿದೆ. ಇಬ್ಬರ ಮಧ್ಯೆ ಪ್ರೀತಿಯಿದೆ. ಆದ್ರೆ ಕೆಲವೊಂದು ವಿಷ್ಯದಲ್ಲಿ ಮಹಿಳೆ, ಪತಿ ಮುಂದೆ ನಾಟಕವಾಡ್ತಿದ್ದಾಳೆ. ಈ ನಾಟಕಕ್ಕೆ ಮೂಲ ಸಿನಿಮಾ. ಮಹಿಳೆ ಪತಿಗೆ ಹಾಲಿವುಡ್ ಸಿನಿಮಾ ಅಂದ್ರೆ ಇಷ್ಟವಂತೆ. ಸದಾ ಆತ ಹಾಲಿವುಡ್ ಸಿನಿಮಾ ನೋಡ್ತಾನಂತೆ. ಆತನೊಬ್ಬನೇ ಹಾಲಿವುಡ್ ಸಿನಿಮಾ ನೋಡಿದ್ರೆ ತೊಂದರೆಯಿರಲಿಲ್ಲ. ಜೊತೆಗೆ ಪತ್ನಿಯನ್ನೂ ಕರೆದುಕೊಂಡು ಹೋಗ್ತಾನಂತೆ. ಹಾಲಿವುಡ್ ಸಿನಿಮಾವನ್ನು ಒಂದೂ ಬಿಡೋದಿಲ್ವಂತೆ. ಸಿನಿಮಾ ಬಿಡುಗಡೆಯಾದ ದಿನವೇ ಇಬ್ಬರೂ ಥಿಯೇಟರ್ ಗೆ ಹೋಗ್ತಾರಂತೆ. ಆದ್ರೆ ಮಹಿಳೆಗೆ ಹಾಲಿವುಡ್ ಸಿನಿಮಾಗಳು ಇಷ್ಟವಿಲ್ಲವಂತೆ. ಪತಿ ಈವರೆಗೆ ಒಂದೇ ಒಂದು ಭಾರತೀಯ ಸಿನಿಮಾ ನೋಡಿಲ್ವಂತೆ. ಹಾಲಿವುಡ್ ಸಿನಿಮಾ ನೋಡೋದು ನನಗೆ ಹಿಂಸೆ ನೀಡುತ್ತದೆ. ಆದ್ರೆ ಸಿನಿಮಾ ನೋಡಿ ಖುಷಿಯಾಗಿದ್ದೇನೆ ಎಂದು ನಾನು ಪತಿಗೆ ಸುಳ್ಳು ಹೇಳ್ತಿದ್ದೇನೆ. ನನಗೆ ಸಿನಿಮಾ ಮಾತ್ರವಲ್ಲ ಈ ನಾಟಕದಿಂದ ಬೇಸರವಾಗ್ತಿದೆ. ಪತಿ ಮೇಲೂ ಆಸಕ್ತಿ ಕಡಿಮೆಯಾಗ್ತಿದೆ. ಮುಂದೇನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎಂದಿದ್ದಾಳೆ ಆಕೆ.
LOVE TRAGEDY : ಹೆಂಡತಿಯ ಬಾಯ್‌ಫ್ರೆಂಡ್ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್
ತಜ್ಞರು ಹೇಳೋದೇನು? : ಗಂಡ - ಹೆಂಡತಿ ಆಯ್ಕೆಗಳು ಪರಸ್ಪರ ಭಿನ್ನವಾಗಿರುತ್ತವೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಇಬ್ಬರ ಇಷ್ಟ-ಕಷ್ಟಗಳು ಮುಖ್ಯ. ಅದರಲ್ಲಿ ರಾಜಿ ಮಾಡಿಕೊಳ್ಳದೆ ಹೋದ್ರೆ ಸಂಬಂಧ ದೀರ್ಘಕಾಲ ಉಳಿಯುವುದು ಕಷ್ಟವಾಗುತ್ತದೆ. ಪತಿಗೆ ಇಂಗ್ಲೀಷ್ ಚಿತ್ರಗಳು ಹೆಚ್ಚು ಇಷ್ಟ. ಆದ್ರೆ ನಿಮಗೆ ಇಷ್ಟವಿರಬೇಕೆಂದೇನಿಲ್ಲ. ಹಾಗಾಗಿ ಅದಕ್ಕೆ ಮೌನವಾಗಿ ಬಲಿಪಶುವಾಗಬೇಕಾಗಿಲ್ಲ. ನೀವು ರಾಜಿ ಮಾಡಿಕೊಳ್ಳುವುದಕ್ಕಿಂತ ನಿಮ್ಮ ನೆಚ್ಚಿನ ವಿಷಯಗಳ ಬಗ್ಗೆ ನಿಮ್ಮವರಿಗೆ ಹೇಳಿ. ಸಿನಿಮಾ ನೋಡುವುದರಿಂದ ಹಿಡಿದು ಊಟ ಮಾಡುವವರೆಗೆ ನಿಮ್ಮಿಬ್ಬರ ಒಪ್ಪಿಗೆ ಮುಖ್ಯ. ಇತರರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ನಿಮ್ಮವರಿಗೆ ನಿಮ್ಮನ್ನು ಅರ್ಥ ಮಾಡಿಸಿ.
ಗಂಡ-ಹೆಂಡ್ತಿ ಜಗಳದ ಮಧ್ಯೆ ಕೂಸು ಬಡವಾಗ್ಬಾರ್ದು ಅಂದ್ರೆ ಹೀಗೆ ಮಾಡಿ
ನಿಮ್ಮ ಆಸೆ,ಬಯಕೆ, ಇಷ್ಟ –ಕಷ್ಟಗಳನ್ನು ಹೇಳಿ. ಹಾಗೆ ಅದಕ್ಕೂ ಬೆಂಬಲ ನೀಡುವಂತೆ ಅವರಿಗೆ ತಿಳಿಸಿ ಹೇಳಿ. ನಿಮ್ಮ ಭಾವನೆಗಳಿಗೆ ಅವರು ಬೆಂಬಲ ನೀಡಬೇಕಾಗುತ್ತದೆ. ಒಂದು ವೇಳೆ ನೀವು ಹೇಳಿದ ನಂತರವೂ ಅವರು ಸ್ಪಂದಿಸಿಲ್ಲವೆಂದಾದ್ರೆ ನಂತ್ರ ನೀವು ಬೇರೆ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದ್ರೆ ನೆನಪಿರಲಿ, ನೀವು ಅವರಿಗೆ ನಿಮ್ಮ ಭಾವನೆ ಹೇಳುವಾಗ ಮಾತಿನ ಮೇಲೆ ಹಿಡಿತವಿರಲಿ. ಮಾತಿನ ಲಯ ತಪ್ಪಿದ್ರೆ ಸಂಬಂಧ ಹಾಳಾಗುವ ಸಾಧ್ಯತೆಯಿರುತ್ತದೆ ಎನ್ನುತ್ತಾರೆ ತಜ್ಞರು.