ಗಂಡ-ಹೆಂಡ್ತಿ ಜಗಳದ ಮಧ್ಯೆ ಕೂಸು ಬಡವಾಗ್ಬಾರ್ದು ಅಂದ್ರೆ ಹೀಗೆ ಮಾಡಿ

ಗಂಡ-ಹೆಂಡತಿಯ (Husband-wife) ಮಧ್ಯೆ ಜಗಳ ನಡೆಯುವುದು ಸಾಮಾನ್ಯ. ಪ್ರತಿಯೊಂದು ಮನೆಯಲ್ಲಿಯೂ ಏನಾದರೊಂದು ವಿಷಯಕ್ಕೆ ಜಗಳವಾಗುತ್ತಲೇ ಇರುತ್ತದೆ. ಜಗಳವಾಡುವುದು ವಿಚಿತ್ರವೇನಲ್ಲ. ಆದರೆ ಪೋಷಕರು (Parents) ಮಕ್ಕಳ (Children) ಮುಂದೆ ಜಗಳವಾಡುವ ತಪ್ಪನ್ನು ಮಾಡಲೇಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. 

How To Minimise Effects Of Family Tension On Children,  Expert Shares Tips Vin

ಗಂಡ-ಹೆಂಡತಿಯ (Husband-wife) ಜಗಳ ಎಲ್ಲಾ ಕುಟುಂಬದಲ್ಲೂ ಉಂಟಾಗುತ್ತದೆ. ಆದರೆ ಇದರಿಂದ ಉಂಟಾಗುವ ಅತಿ ದೊಡ್ಡ ಹಾನಿಯೆಂದರೆ ಇದು ಮಕ್ಕಳ (Children) ಮನಸ್ಸಿನ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಪತಿ-ಪತ್ನಿಯ ಮಧ್ಯೆ ಜಗಳ ನಡೆಯುವ ಅದೆಷ್ಟೋ ಮನೆಯ ಮಕ್ಕಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾರೆ. ಕೌಟುಂಬಿಕ ಒತ್ತಡವು (Pressure) ಮಕ್ಕಳ ಮೇಲೆ ದೀರ್ಘಕಾಲೀನ ಭಾವನಾತ್ಮಕ ಪರಿಣಾಮಗಳನ್ನು ಬೀರಬಹುದು. ಉದ್ವಿಗ್ನತೆ, ಘರ್ಷಣೆ, ಆತಂಕ ಮತ್ತು ಆಘಾತದಲ್ಲಿ ಮುಳುಗಿರುವ ಮನೆಗಳಲ್ಲಿ ಹುಟ್ಟಿ ಬೆಳೆದ ಮಕ್ಕಳು, ಆತಂಕ, ಖಿನ್ನತೆ ಮತ್ತು ನಡವಳಿಕೆ ಸಮಸ್ಯೆಗಳಿರುವ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಇದು ವ್ಯಕ್ತಿಯ ಯೋಗಕ್ಷೇಮದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ

ಮಕ್ಕಳ ಮೇಲೆ ಪತಿ-ಪತ್ನಿಯ ಜಗಳದ ಪರಿಣಾಮವನ್ನು ಕಡಿಮೆ ಮಾಡಲು ಇಲ್ಲಿದೆ ಕೆಲವೊಂದು ಸಲಹೆಗಳು. ಮೆಡಾಲ್ ಮೈಂಡ್‌ನ ಕೌನ್ಸೆಲಿಂಗ್ ಸೈಕಾಲಜಿಸ್ಟ್ ಕೆ. ವೈಷ್ಣವಿ ಈ ಕುರಿತು ಮಾಹಿತಿ ನೀಡುತ್ತಾರೆ. ಕುಟುಂಬದ ಉದ್ವಿಗ್ನತೆ ಮತ್ತು ಘರ್ಷಣೆಯಿಂದಾಗಿ, ನಿಮ್ಮ ಮಗುವಿಗೆ ಸಾಕಷ್ಟು ಗಮನವನ್ನು ನೀಡಲು ವಿಫಲರಾಗಬೇಡಿ. ನಿಮ್ಮ ಮಗು ಬೆಳೆಯಲು ಸುರಕ್ಷಿತ, ಆರೋಗ್ಯಕರ ಮತ್ತು ಸ್ವೀಕಾರಾರ್ಹ ವಾತಾವರಣವನ್ನು ನಿರ್ಮಿಸುವತ್ತ ಗಮನಹರಿಸಿ ಎಂದು ಕೆ. ವೈಷ್ಣವಿ ಅವರು ಮಕ್ಕಳ ಮೇಲೆ ಸಂಘರ್ಷದ ಪರಿಣಾಮವನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಅಭ್ಯಾಸಗಳನ್ನು ತಿಳಿಸುತ್ತಾರೆ.

Kids Care : ಉಗುರು ಕಚ್ಚಿ ಮಕ್ಕಳು ಆರೋಗ್ಯ ಹಾಳ್ಮಾಡಿಕೊಂಡ್ರೆ ಹೀಗೆ ಮಾಡಿ

ಕೌಟುಂಬಿಕ ಜಗಳವು ಒತ್ತಡವು ಒತ್ತಡ, ಅಸ್ವಸ್ಥತೆಗಳು, ಆತ್ಮಹತ್ಯೆ ಅಥವಾ ಮಾದಕವಸ್ತು ಬಳಕೆಯೊಂದಿಗೆ ಪರಸ್ಪರ ಸಂಬಂಧ ಹೊಂದಿರಬಹುದು. ಇದು ಮಕ್ಕಳ ಉತ್ತಮ ವ್ಯಕ್ತಿತ್ವ ರೂಪೀಕರಣವನ್ನು ತಡೆಯುತ್ತದೆ ಮತ್ತು ಅವರ ಬೆಳವಣಿಗೆಯ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪೋಷಕರು ಮಕ್ಕಳ ಮುಂದೆ ಜಗಳವಾಡುವ ಮೊದಲು ತುಂಬಾ ಎಚ್ಚರಿಕೆಯಿಂದ ಇರಬೇಕು.

ಮಕ್ಕಳಲ್ಲಿ ಇಂತಹ ಕೌಟುಂಬಿಕ ಉದ್ವೇಗದ ಭಾವನಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಕುಟುಂಬದೊಳಗೆ ಆರೋಗ್ಯಕರ ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕೆಲವು ಅಭ್ಯಾಸಗಳನ್ನು ಕೆ. ವೈಷ್ಣವಿ ಅವರು  ಗಮನಿಸಿದರು.

ಮಕ್ಕಳ ಮುಂದೆ ಜಗಳವಾಡುವುದನ್ನ ತಪ್ಪಿಸಿ: ಎಲ್ಲರ ಮನೆಯಲ್ಲಿಯೂ ಜಗಳವಾಗುತ್ತದೆ. ಸಂಗಾತಿಯೊಂದಿಗೆ ಜಗಳವಾಗುವುದು ಸಹಜ, ಆದರೆ ಅದನ್ನು ಮಕ್ಕಳ ಮುಂದೆ ಮಾಡಿದಾಗ, ಅದು ಉದ್ವಿಗ್ನತೆಯ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಇದು ಮಕ್ಕಳ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳ ಮುಂದೆ ಪೋಷಕರು ಜಗಳವಾಡುವುದನ್ನು ತಪ್ಪಿಸಿ.

Parenting Tips : ಮಕ್ಕಳ ಕಣ್ಣಿನ ಮೇಲಿರಲಿ ಪಾಲಕರ ಗಮನ

ಮಕ್ಕಳ ಸಮ್ಮುಖದಲ್ಲಿಯೇ ಸಮಸ್ಯೆ ಪರಿಹರಿಸಿ: ಮಕ್ಕಳ ಮುಂದೆಯೇ ಜಗಳ ನಡೆದಿದ್ದರೆ, ಅವರ ಸಮ್ಮುಖದಲ್ಲಿಯೇ ಅದನ್ನು ಪರಿಹರಿಸಲು ಪ್ರಯತ್ನಿಸಿ, ಇದರಿಂದ ಉದ್ವಿಗ್ನತೆ ಮುಗಿದಿದೆ ಎಂದು ಅವರಿಗೆ ತಿಳಿಯುತ್ತದೆ. ಅಲ್ಲದೆ ಜಗಳವನ್ನು ಮಕ್ಕಳು ಸಹ ಲಘುವಾಗಿ ತೆಗೆದುಕೊಳ್ಳುತ್ತಾರೆ

ಪ್ರಾಮಾಣಿಕ ಸಂವಹನ: ಸಂಘರ್ಷವನ್ನು ಪರಿಹರಿಸುವಲ್ಲಿ ಮಕ್ಕಳ ಸಹಾಯವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಆ ರೀತಿಯಲ್ಲಿ, ಅವರೊಂದಿಗೆ ಸಂವಹನವು ಪೋಷಣೆ ಮತ್ತು ಪ್ರಾಮಾಣಿಕವಾಗಿದೆ ಎಂದು ಅವರು ಭಾವಿಸುತ್ತಾರೆ.

ಗಮನಹರಿಸುವ ಪಾಲನೆ: ನಿಮ್ಮ ಮಕ್ಕಳೊಂದಿಗೆ ಸಂವಹನದಲ್ಲಿ ನೀವು ಪ್ರದರ್ಶಿಸುವ ಭಾವನೆಗಳ ಮೇಲೆ ಕೇಂದ್ರೀಕರಿಸಿ. ಕೋಪದಂತಹ ತೀವ್ರವಾದ ಭಾವನೆಗಳನ್ನು ತೋರಿಸುವುದನ್ನು ತಪ್ಪಿಸಲು ಪ್ರಯತ್ನಿಸಿ. ಸಕಾರಾತ್ಮಕ ಶಿಸ್ತನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಇದು ಮಕ್ಕಳ ಮೇಲೆ ಸಹ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ.

ಉದ್ವೇಗದಲ್ಲಿ ಮಗುವನ್ನು ದೂಷಿಸಬೇಡಿ: ಹೆಚ್ಚಿನ ಪೋಷಕರು ಹೀಗೇ ಮಾಡುತ್ತಾರೆ. ಗಂಡ-ಹೆಂಡತಿಯ ಜಗಳದಲ್ಲಿ ಮಕ್ಕಳನ್ನು ದೂಷಿಸಲು ಆರಂಭಿಸುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳು ಯಾವುದೇ ರೀತಿಯಲ್ಲಿ ಕುಟುಂಬದ ಉದ್ವೇಗಕ್ಕೆ ತಾವೇ ಜವಾಬ್ದಾರರೆಂದು ಭಾವಿಸುತ್ತಾರೆ. ಉದ್ವಿಗ್ನತೆಗೆ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದು ಮತ್ತು ಅವರು ಅನುಭವಿಸುವ ಭಾವನೆಗಳ ಬಗ್ಗೆ ಅವರಿಗೆ ಅರ್ಥ ಮಾಡಿಸುವುದು ಮುಖ್ಯವಾಗಿದೆ.

Latest Videos
Follow Us:
Download App:
  • android
  • ios