Marriage Dispute : ಮೊದಲ ರಾತ್ರಿ ಪತಿಯ ಮಾತಿಗೆ ಪತ್ನಿ ಶಾಕ್
ದಾಂಪತ್ಯದಲ್ಲಿ ಸಾಮರಸ್ಯ ಅಗತ್ಯ. ಸರಸವಿಲ್ಲದ ದಾಂಪತ್ಯ ನಿರ್ಜೀವ. ಮದುವೆಯಾದಾಗಿನಿಂದ್ಲೂ ಕಣ್ಣೆತ್ತಿ ನೋಡದ ಪತಿ ಜೊತೆ ಜೀವನ ಸಾಗಿಸುವುದು ನರಕವಾಸದಂತೆ ಅಂದ್ರೆ ತಪ್ಪಾಗಲಾರದು.
ಮದುವೆ (Marriage) ಗೂ ಮುನ್ನ ಪ್ರತಿಯೊಬ್ಬರೂ ಸುಂದರ (Beautiful) ಕನಸು (Dream) ಗಳನ್ನು ಕಂಡಿರ್ತಾರೆ. ಸಂಗಾತಿ (Partner) ಹೀಗಿರಬೇಕು, ಹಾಗಿರಬೇಕು, ಮದುವೆ ನಂತ್ರ ಇಬ್ಬರು ಜೀವನವನ್ನು ಹೇಗೆ ಎಂಜಾಯ್ ಮಾಡ್ಬೇಕು.. ಹೀಗೆ ಅನೇಕ ಕನಸುಗಳನ್ನು ಕಂಡಿರ್ತಾರೆ. ಆದ್ರೆ ಎಲ್ಲರು ಅಂದುಕೊಂಡಂತೆ ಜೀವನ ಸಾಗುವುದಿಲ್ಲ. ಅನೇಕ ಬಾರಿ ನಮ್ಮ ಕಲ್ಪನೆಗೆ ತದ್ವಿರುದ್ಧವಾದ ಸಂಗಾತಿ ಸಿಗಬಹುದು. ಅವರಿಗೆ ಹೊಂದಿಕೊಂಡು ಜೀವನ ನಡೆಸಬೇಕಾಗುತ್ತದೆ. ಆದ್ರೆ ಹೊಂದಾಣಿಕೆಗೂ ಒಂದು ಮಿತಿಯಿದೆ. ಪ್ರೀತಿ ಇಲ್ಲದವರ ಜೊತೆ ಜೀವನ ಸಾಗಿಸುವುದು ಇದ್ದು ಸತ್ತಂತೆ. ಮಹಿಳೆಯೊಬ್ಬಳ ಜೀವನದಲ್ಲಿ ಇದೇ ಆಗಿದೆ. ಮದುವೆಯಾಗಿ ಒಂದು ವರ್ಷವಾಗ್ತಾ ಬಂದರೂ ಪತಿ, ಆಕೆಯನ್ನು ಕಣ್ಣೆತ್ತಿ ನೋಡಿಲ್ಲವಂತೆ. ಇದಕ್ಕೆ ಪತಿ ಹೇಳಿದ ಕಾರಣ ಅಚ್ಚರಿ ಮೂಡಿಸುತ್ತದೆ. ಪತಿಯ ಬಗ್ಗೆ ಆತನ ಕುಟುಂಬಸ್ಥರ ಮುಂದೆ ಹೇಳಿದ್ರೆ ಅವರು ಇಟ್ಟ ಬೇಡಿಕೆ ಮತ್ತಷ್ಟು ಆಘಾತಕಾರಿಯಾಗಿದೆ. ಇದ್ರಿಂದ ಬೇಸತ್ತಿರುವ ಮಹಿಳೆ, ತನ್ನ ನೋವನ್ನು ತೋಡಿಕೊಂಡಿದ್ದಾಳೆ.
ಮದುವೆಯ ಮೊದಲ ರಾತ್ರಿಯೇ ದೂರ ಮಲಗಿದ ಪತಿ : ಮಹಿಳೆಗೆ ಮದುವೆಯಾಗಿ ಒಂದು ವರ್ಷವಾಗ್ತಾ ಬಂದಿದೆ. ಕಳೆದ ಜೂನ್ ನಲ್ಲಿ ಮಹಿಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳಂತೆ. ಆಕೆಯದ್ದು ಅರೆಂಜ್ ಮ್ಯಾರೇಜ್. ತಂದೆ – ತಾಯಿ ಹುಡುಗನನ್ನು ಹುಡುಕಿದ್ದಾರೆ. ಮದುವೆಗೂ ಮುನ್ನ ಎಲ್ಲವೂ ಸರಿಯಿತ್ತಂತೆ. ಆದ್ರೆ ಮದುವೆಯಾದ ಮೊದಲ ರಾತ್ರಿಯೇ ಪತಿಯ ವರ್ತನೆ ಭಿನ್ನವಾಗಿತ್ತಂತೆ. ಅಲ್ಲಿಂದ ಇಲ್ಲಿಯವರೆಗೆ ಒಂದು ದಿನವೂ ಇಬ್ಬರ ಮಧ್ಯೆ ಯಾವುದೇ ರೀತಿಯ ಸಂಬಂಧ ಬೆಳೆದಿಲ್ಲವಂತೆ.
ಮಗುವಿಗೆ ಜನ್ಮ ನೀಡಿ 11 ಲಕ್ಷ ರೂ. ಗಳಿಸಿ, ಚೀನಾ ಕಂಪೆನಿಯ ಹೊಸ ಆಫರ್ !
ಪತಿ ದೂರವಿರಲು ಕಾರಣವೇನು ಗೊತ್ತಾ? : ನವ ದಂಪತಿ ಲವಲವಿಕೆಯಿಂದಿರ್ತಾರೆ. ಆದ್ರೆ ಪತ್ನಿಯನ್ನು ಈತ ಕಣ್ಣೆತ್ತಿಯೂ ನೋಡ್ತಿರಲಿಲ್ಲವಂತೆ. ಆರಂಭದಲ್ಲಿ ಎರಡು ದಿನ ಚಿತ್ರ ಹಿಂಸೆ ಅನುಭವಿಸಿದ ಮಹಿಳೆ, ನಾಲ್ಕೈದು ದಿನಗಳಲ್ಲಿ ಸರಿಯಾಗುತ್ತೆ ಎಂದುಕೊಂಡಿದ್ದಳಂತೆ. ಆದ್ರೆ ಯಾವುದೂ ಸರಿಯಾಗದ ಕಾರಣ ಪತಿಗೆ ಪ್ರಶ್ನೆ ಹಾಕಿದ್ದಾಳೆ. ಆತ ನೀಡಿದ ಉತ್ತರ ಆಕೆಯನ್ನು ದಂಗುಬಡಿಸಿದೆ. ನೀನು ಚೆನ್ನಾಗಿಲ್ಲ, ನೋಡಲು ಸುಂದರವಾಗಿಲ್ಲ. ನಿನ್ನ ಮೇಲೆ ನನಗೆ ಪ್ರೀತಿ ಸೇರಿದಂತೆ ಯಾವುದೇ ಭಾವನೆಯಿಲ್ಲ ಎಂದಿದ್ದಾನೆ ಪತಿ. ಇಷ್ಟೇ ಅಲ್ಲ, ಮದುವೆಗೆ ಕಾರಣವನ್ನೂ ಹೇಳಿದ್ದಾನೆ. ನಿನಗಿಂತ ಕುರೂಪಿ ಹುಡುಗಿ ನನಗೆ ಸಿಕ್ಕಿದ್ರೆ ಎಂಬ ಭಯಕ್ಕೆ ನಿನ್ನನ್ನು ಮದುವೆಯಾದೆ ಎಂದಿದ್ದಾನಂತೆ. ಅಲ್ಲಿಂದ ಈವರೆಗೂ ಒಂದೇ ಒಂದು ದಿನವೂ ಪತ್ನಿ ಜೊತೆ ಸರಿಯಾಗಿ ನಡೆದುಕೊಂಡಿಲ್ಲವಂತೆ ಆತ.
ಕುಟುಂಬಸ್ಥರು ಹೇಳೋದೇನು ಗೊತ್ತಾ? : ಪತಿಯ ವರ್ತನೆಯಿಂದ ನೊಂದ ಮಹಿಳೆ, ಆತನ ಪಾಲಕರಿಗೆ ವಿಷ್ಯ ಮುಟ್ಟಿಸಿದ್ದಾಳೆ. ನೀನು ಕೆಲಸ ಬಿಟ್ಟು ಮನೆಯಲ್ಲಿರು. ಆಗ ಆತ ನಿನ್ನ ಬಗ್ಗೆ ಹೆಚ್ಚು ಆಸಕ್ತಿ ತೋರಬಹುದು ಎಂದಿದ್ದಾರಂತೆ ಅವರು. ಅವರ ಈ ವಿಚಿತ್ರ ಹೇಳಿಕೆ ಕೇಳಿದ ಮಹಿಳೆ ಮತ್ತಷ್ಟು ಗೊಂದಲಕ್ಕೀಡಾಗಿದ್ದಾಳೆ.
ಹೊಸ ತಾಯಂದಿರಲ್ಲಿ ನಿದ್ರಾಹೀನತೆಯ ಸಮಸ್ಯೆ, ಮೂಡ್ ಸ್ವಿಂಗ್ಸ್‌ಗೂ ಇದುವೇ ಕಾರಣ !
ತಜ್ಞರ ಸಲಹೆ : ಮಹಿಳೆ ಸಮಸ್ಯೆ ಆಲಿಸಿದ ತಜ್ಞರು, ಭಾವನೆಯೇ ಇಲ್ಲದ ವ್ಯಕ್ತಿ ಜೊತೆ ಜೀವನ ನಡೆಸುವುದು ಸುಲಭವಲ್ಲವೆಂದು ಅವರು ಹೇಳಿದ್ದಾರೆ. ಬಾಹ್ಯ ಸೌಂದರ್ಯಕ್ಕಿಂತ ಆತಂರಿಕ ಸೌಂದರ್ಯ ಮುಖ್ಯ. ನಿಮ್ಮ ಸೌಂದರ್ಯ ಅವರಿಗೆ ತಿಳಿದಿಲ್ಲ. ಅಷ್ಟಕ್ಕೂ ಕೆಲಸ ಬಿಟ್ಟರೆ ಕುಟುಂಬಸ್ಥರು ಸಹಾಯ ಮಾಡ್ತಾರೆ ಎಂಬುದಕ್ಕೆ ಗ್ಯಾರಂಟಿ ಏನಿದೆ? ಮೊದಲು ಕುಟುಂಬಸ್ಥರ ಜೊತೆ ಮಾತನಾಡಿ. ಹಾಗೆಯೇ ನಿಮ್ಮ ತಂದೆ – ತಾಯಿಗೆ ವಿಷ್ಯ ತಿಳಿಸಿ. ಪ್ರತಿಯೊಂದು ಸಣ್ಣ ವಿಷ್ಯ ಗೊತ್ತಿದ್ದರೆ ಅವರು ನಿಮಗೆ ನೆರವಾಗಬಹುದು ಎಂದಿದ್ದಾರೆ ತಜ್ಞರು. ಇಷ್ಟು ಮಾತ್ರವಲ್ಲ, ಕೌನ್ಸಿಲರ್ ಭೇಟಿಯಾಗಿ ನಿಮ್ಮ ಗೊಂದಲ ಹೇಳಿ. ಅವರೆಲ್ಲರ ಅಭಿಪ್ರಾಯದ ನಂತ್ರ ಮುಂದಿನ ಹೆಜ್ಜೆಯಿಡಿ ಎಂದಿದ್ದಾರೆ ತಜ್ಞರು.