ಇಲ್ಲಿ ಮೊದಲು ನಿಮಗೇನು ಕಾಣುತ್ತೆ? ಜಗತ್ತನ್ನು ಹೇಗೆ ಗ್ರಹಿಸುತ್ತೀರೋ ಗೊತ್ತು ಮಾಡ್ಕೊಳ್ಳಿ!

ಇಲ್ಲೊಂದು ಚಿತ್ರವಿದೆ. ಇದರಲ್ಲಿ ಯಾವ ಭಾಗವನ್ನು ನೀವು ಮೊದಲು ಗಮನಿಸಿದ್ದೀರಿ? ಇದರ ಆಧಾರದ ಮೇಲೆ ನಿಮ್ಮಲ್ಲಿ ಗ್ರಹಿಸಿಕೊಳ್ಳುವ ಗುಣ ಯಾವ ರೀತಿಯಲ್ಲಿದೆ ಎನ್ನುವುದನ್ನು ಅರಿಯಬಹುದು.
 

This optical illusion tells your personality about grasping sum

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮನುಷ್ಯನ ವ್ಯಕ್ತಿತ್ವವನ್ನು ಅರಿಯಲು ಸಾಕಷ್ಟು ನೆರವು ನೀಡುತ್ತವೆ. ವಿಶಿಷ್ಟ ಈ ಚಿತ್ರಗಳು ನಮ್ಮ ದೃಷ್ಟಿಕೋನ ಮತ್ತು ಅರಿವನ್ನು ರೂಪಿಸುವ ಈ ಚಿತ್ರಗಳು ನಾವು ನಮ್ಮ ಸುತ್ತಲಿನ ಜಗತ್ತನ್ನು ಹೇಗೆ ಪರಿಗಣಿಸುತ್ತೇವೆ ಎನ್ನುವುದನ್ನೂ ತೋರಿಸುತ್ತವೆ. ಅಂತರ್ ದೃಷ್ಟಿಕೋನ ಮತ್ತು ನಮಗೇ ಅರಿವಿಲ್ಲದೆ ನಮ್ಮೊಳಗಿನ ಪ್ರಪಂಚವನ್ನು ತೋರಿಸುವಲ್ಲಿ ಇವು ಸಹಕಾರಿಯಾಗಿವೆ. ಇಲ್ಲೊಂದು ಚಿತ್ರವಿದೆ. ಇದರಲ್ಲಿ ಮನುಷ್ಯನ ಮುಖ ಹಾಗೂ ಇಲಿಯ ಚಿತ್ರ ಅಡಗಿವೆ. ಈ ಮನುಷ್ಯನ ಮುಖವನ್ನೊಮ್ಮೆ ಸರಿಯಾಗಿ ನೋಡಿ. ವಿವರವನ್ನು ಗಮನಿಸಿಕೊಳ್ಳಿ. ಯಾವ ಚಿತ್ರಗಳನ್ನು ನೀವು ಮೊದಲು ಗುರುತಿಸುತ್ತೀರಿ ಎನ್ನುವುದನ್ನು ಆಧರಿಸಿ ನಿಮ್ಮ ಕೇಳಿಸಿಕೊಳ್ಳುವ ಸಾಮರ್ಥ್ಯ ಹೇಗಿದೆ ಎಂದು ಗುರುತಿಸಬಹುದು. ನೀವು ಉತ್ತಮ ಕೇಳುಗರಾ, ಕೇಳಿಸಿಕೊಳ್ಳುವುದರಲ್ಲಿ ನಿಮಗೆಷ್ಟು ಆಸಕ್ತಿ ಇದೆ ಎನ್ನುವುದನ್ನು ಪತ್ತೆ ಮಾಡಬಹುದು. ಜತೆಗೆ, ನಿಮ್ಮಲ್ಲಿ ಸುತ್ತಮುತ್ತ ಪರಿಸರವನ್ನು ಗಮನಿಸುವ ಸಾಮರ್ಥ್ಯ ಯಾವ ರೀತಿಯಲ್ಲಿದೆ ಎನ್ನುವುದನ್ನೂ ತಿಳಿದುಕೊಳ್ಳಬಹುದು. ಇಂತಹ ಚಿತ್ರಗಳನ್ನು ಗಮನಿಸುವುದರಿಂದ ಸೂಕ್ಷ್ಮವಾಗಿ ಗಮನಿಸುವ ಸಾಮರ್ಥ್ಯವೂ ಹೆಚ್ಚುತ್ತದೆ ಎನ್ನುವುದು ಮುಖ್ಯ.

•    ಮಾನವನ ಮುಖ (Human Face)
ಮೊಟ್ಟಮೊದಲು ನೀವು ಮಾನವನ ಮುಖವನ್ನು ಗಮನಿಸಿದ್ದರೆ ನೀವು ನಿಮ್ಮ ಸುತ್ತಮುತ್ತ ಪರಿಸರ (Environment), ವಾತಾವರಣ, ಜನರು (People), ಅವರ ಮನಸ್ಥಿತಿ (Mentality) ಇತ್ಯಾದಿ ಅಂಶಗಳನ್ನು ಬಹಳ ಚೆನ್ನಾಗಿ ಗ್ರಹಿಸುತ್ತೀರಿ. ಗ್ರಹಿಕೆಯಲ್ಲಿ (Grasping) ನೀವು ತುಂಬ ಚೆನ್ನಾಗಿರುತ್ತೀರಿ. ನಿಯಮಗಳನ್ನು ಅನುಸರಿಸುತ್ತೀರಿ. ಸಾಂಪ್ರದಾಯಿಕ ಪದ್ಧತಿಗಳನ್ನು ವಿರೋಧಿಸುವ ಗುಣ ನಿಮ್ಮಲ್ಲಿ ಇರುವುದಿಲ್ಲ.

ಇದ್ರಲ್ಲಿ ಮೊಲ ಎಲ್ಲಿದೆ? ಟಿಕ್ ಟಿಕ್ ಒನ್… 8 ಸೆಕೆಂಡ್ ಇರೋದು ಬೇಗ ಹೇಳಿ, ನಿಮ್ಮ ವ್ಯಕ್ತಿತ್ವ ಚೆಕ್ ಮಾಡ್ಕೊಳ್ಳಿ

ಸವಾಲುಗಳನ್ನು (Challenges) ಪೂರ್ಣಗೊಳಿಸಲು ಯತ್ನಿಸುತ್ತೀರಿ. ನಿಮ್ಮ ಪರಿಸ್ಥಿತಿ, ಪರಿಸರದಲ್ಲಿನ ಇಂತಹ ಸೂಕ್ಷ್ಮ ಗ್ರಹಿಕೆ ಹೊಂದಿರುವ ನೀವು ಸ್ಥಿರತೆಯನ್ನು (Stability) ಬಯಸುತ್ತೀರಿ ಎನ್ನುವುದನ್ನು ಸೂಚಿಸುತ್ತದೆ. ಹಾಗೂ ನಿರ್ದಿಷ್ಟ ಶಿಷ್ಟಾಚಾರ ಹಾಗೂ ಸೂಚನೆಗಳನ್ನು ಸಹ ಪಾಲನೆ ಮಾಡುತ್ತೀರಿ. ಯಾವುದೇ ವಿಷಯವನ್ನಾದರೂ ವಿಸ್ತೃತವಾಗಿ ಪರಿಗಣಿಸುತ್ತೀರಿ. ಈ ಸಾಮರ್ಥ್ಯವು (Ability) ನಿಮ್ಮ ಅತ್ಯಮೂಲ್ಯ ಆಸ್ತಿಯಾಗಿರುತ್ತದೆ. ಗಮನ ನೀಡುವ ನಿಮ್ಮ ಗುಣಕ್ಕೆ ಸ್ವಲ್ಪ ಪದ್ಧತಿ ಮತ್ತು ವ್ಯವಸ್ಥಿತ ಧೋರಣೆ ಬೆಳೆಸಿಕೊಂಡರೆ ಇನ್ನಷ್ಟು ಅನುಕೂಲವಾಗುತ್ತದೆ.

•    ಇಲಿ (Rat)
ಈ ಮೇಲಿನ ಚಿತ್ರವನ್ನು ಸರಿಯಾಗಿ ಗಮನಿಸಿದರೆ ಅದರಲ್ಲಿ ಇಲಿ ಚಿತ್ರ ಅಡಗಿರುವುದು ಸಹ ಕಂಡುಬರುತ್ತದೆ. ಚಿತ್ರವನ್ನು ಸರಿಯಾಗಿ ಗಮನಿಸಿದ ಬಳಿಕ ನಿಮಗೆ ಆರಂಭದಲ್ಲೇ ಇಲಿಯ ಚಿತ್ರ ಗಮನ ಸೆಳೆಯಿತಾ? ಹಾಗಾದರೆ, ಇದು ಸಹ ನಿಮ್ಮ ಗಮನಿಸುವ ಅಥವಾ ಗ್ರಹಿಸುವ ಶಕ್ತಿಯನ್ನು ವ್ಯಕ್ತಪಡಿಸುತ್ತದೆ. ಗಮನ (Attentive) ನೀಡುವ ನಿಮ್ಮ  ಗುಣ ನೈಸರ್ಗಿಕವಾಗಿರುತ್ತದೆ. ವಿಸ್ತೃತವಾಗಿ ವಿಷಯ ಗ್ರಹಿಸುವ ನೀವು ಮತ್ತೆ ಮತ್ತೆ ಒಂದೇ ವಿಚಾರವನ್ನು ಮನನ ಮಾಡುತ್ತೀರಿ. 

Optical Illusion Test: ಲೈಫ್‌ಲ್ಲಿ ಯಾವುದರ ಬಗ್ಗೆ ನಿಮ್ಗೆ ಅತೀ ಹೆಚ್ಚು ಭಯ, ಫೋಟೋ ನೋಡಿ ತಿಳ್ಕೊಳ್ಳಿ

ಸೂಕ್ಷ್ಮವಾಗಿ (Sensitive) ಗ್ರಹಿಸುವ ನಿಮ್ಮ ಗುಣ ನಿಮ್ಮಲ್ಲಿ ಅಂತರ್ಗತವಾಗಿರುವ ಕ್ರಿಯಾಶೀಲತೆಯನ್ನು  ತೋರಿಸುತ್ತದೆ. ಹಾಗೂ ನಿಮ್ಮಲ್ಲಿ ಸಂಶೋಧನೆ ಮಾಡುವ, ಅನ್ವೇಷಣೆ (Innovative) ಮಾಡುವ ಬುದ್ಧಿ ಜಾಗೃತವಾಗಿರುತ್ತದೆ. ಯಾವುದೇ ಪರಿಸ್ಥಿತಿಯನ್ನಾದರೂ ನೀವು ಬೇರೆಯದೇ ಆದ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೀರಿ. ಹಾಗೂ ಪರಿಣಾಮಗಳ ಕುರಿತು ಅಂದಾಜು ಮಾಡುತ್ತೀರಿ. ಸವಾಲುಗಳನ್ನು ಮುಂಚೆಯೇ ಗ್ರಹಿಸುವುದು ನಿಮ್ಮ ಗುಣ. ಈ ಅದ್ಭುತ ಗುಣದಿಂದಾಗಿ ನೀವು ಹೆಚ್ಚು ಗ್ರಹಿಕೆ ಬೇಡುವ ಕಾರ್ಯದಲ್ಲಿ ಯಶಸ್ವಿಯಾಗಬಲ್ಲಿರಿ. ಸವಾಲುಗಳನ್ನು ಅತ್ಯಂತ ಮುಕ್ತವಾಗಿ ಎದುರಿಸುತ್ತೀರಿ. ಅನ್ವೇಷಣಾತ್ಮಕ ಪರಿಹಾರಗಳನ್ನು ಗುರುತಿಸಬಲ್ಲಿರಿ. ಕ್ರಿಯಾಶೀಲತೆ (Creative) ಮತ್ತು ಅಮೂಲ್ಯವಾದ ಯಾವುದೇ ಕ್ಷೇತ್ರದಲ್ಲಿ ನೀವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲಿರಿ ಎನ್ನುವುದು ಇದರಿಂದ ತಿಳಿದುಬರುತ್ತದೆ.

Latest Videos
Follow Us:
Download App:
  • android
  • ios