ಮುದ್ದು ಮಗಳ ಬಗ್ಗೆ ಅಪ್ಪ ತಿಳಿಯಲೇಬೇಕಾದ ಕೆಲವು ಸಂಗತಿಗಳು

ಮಗಳೆಂದ್ರೆ ತಂದೆಗೆ ವಿಶೇಷ ಪ್ರೀತಿ. ಹಾಗೆ ಮಗಳಿಗೆ ತಂದೆ ಮೇಲೆ ಗೌರವ. ಜೀವನದ ಮೊದಲ ಹೀರೋನಂತೆ ತಂದೆಯನ್ನು ನೋಡುವ ಮಗಳು, ಆತನಿಂದ ಅನೇಕ ವಿಷ್ಯಗಳನ್ನು ನಿರೀಕ್ಷೆ ಮಾಡ್ತಾಳೆ. ಅದನ್ನು ತಂದೆ ಅರಿತು ನೀಡಿದ್ರೆ ಆಕೆ ಬಾಳು ಬೆಳಗಿದಂತೆ.
 

Things Dads Of Girls Should Know

ತಂದೆ ತಾಯಿಯರಿಗೆ ಮಕ್ಕಳೆಂದರೆ ಜೀವ. ಮಕ್ಕಳು ಕೂಡ ಒಂದು ದಿನವೂ ಹೆತ್ತವರನ್ನು ಅಗಲಿ ಇರುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು ತಂದೆ ತಾಯಿ, ಹುಟ್ಟಿದ ಮನೆಯ ಮೇಲೆ ಇನ್ನೂ ಹೆಚ್ಚಿನ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ.  ಮಗಳಿಗೆ ತಂದೆಯ ಮೇಲೆ ವಿಶೇಷ ಗೌರವ, ಪ್ರೀತಿ ಸ್ವಲ್ಪ ಹೆಚ್ಚಿರುತ್ತದೆ.

ಮನೆ (House) ಮಗಳು ಬೆಳೆದು ದೊಡ್ಡವಳಾಗಿ ಮದುವೆ (Marriage) ಯಾಗಿ ಗಂಡನ ಮನೆ ಸೇರಿದ ಮೇಲಂತೂ ತನ್ನ ತವರು ಹಾಗೂ ಅಪ್ಪನ ಮೇಲೆ ಮೊದಲಿಗಿಂತಲೂ ಹೆಚ್ಚಿನ ಮಮತೆ ಮೂಡುತ್ತದೆ. ಅಪ್ಪ (Father) ನೆಂದರೆ ಅವಳಿಗೆ ಒಂದು ರೀತಿಯ ಭದ್ರತೆ. ಆತ ಒಬ್ಬ ತನ್ನ ಜೊತೆಗಿದ್ದರೆ ತಾನು ಏನನ್ನಾದರೂ ಸಾಧಿಸಬಲ್ಲೆ, ಯಾರನ್ನಾದರೂ ಎದುರಿಸಬಲ್ಲೆ ಎನ್ನುವ ಧೈರ್ಯ ಆಕೆಯಲ್ಲಿರುತ್ತದೆ. ಎಲ್ಲ ಹೆಣ್ಣು ಮಕ್ಕಳೂ ತಮ್ಮ ಪ್ರೀತಿ, ಆಸೆಗಳನ್ನು ಮುಕ್ತವಾಗಿ ತೋರಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ತಂದೆಯೇ ಮಗಳ ಆಸೆ, ಕನಸುಗಳನ್ನು ಅರ್ಥ ಮಾಡಿಕೊಳ್ಳಬೇಕು.

ಪತಿಗೆ ಮಡದಿ ಕೊಡಲಾಗದ್ದು ಇದು, ಏನದು? ಪಾಕಿಸ್ತಾನಿ ಆ್ಯನ್ಸರ್ ಫುಲ್ ವೈರಲ್!

ನಿಮ್ಮ ಮಗಳನ್ನು ಮುದ್ದಿಸಿ : ಅಪ್ಪನ ಮುದ್ದಿನ ಕಣ್ಮಣಿಗೆ ಅಪ್ಪ ತನ್ನನ್ನು ಹೆಚ್ಚು ಪ್ರೀತಿಸಬೇಕು, ತನ್ನ ಎಲ್ಲ ಪರಿಸ್ಥಿತಿಗಳಲ್ಲೂ ಆತ ತನಗೆ ಹೆಗಲು ಕೊಡಬೇಕು. ತಾನು ಸೋಲಲಿ ಅಥವಾ ಗೆಲ್ಲಲಿ ನನ್ನನ್ನು ಹುರಿದುಂಬಿಸಲು ಅಪ್ಪನೇ ನನ್ನ ಜೊತೆಗಿರಬೇಕು ಎಂಬುದು ಮಗಳ ಬಯಕೆ. ಕೆಲವರು ತಮ್ಮ ಪ್ರೀತಿ ಜವಾಬ್ದಾರಿಗಳನ್ನು ಮಗಳೆದುರು ತೋರಿಸಿಕೊಳ್ಳುವುದಿಲ್ಲ. ಆಗ ಅವರಿಗೆ ತನ್ನ ಅಪ್ಪ ತನ್ನ ಕಡೆ ಹೆಚ್ಚು ಲಕ್ಷ್ಯ ಕೊಡುವುದಿಲ್ಲ ಎಂಬ ಅನುಮಾನ ಮೂಡುತ್ತದೆ. ಆದ್ದರಿಂದ ನಿಮ್ಮ ಮಗಳು ನಿಮ್ಮ ಪ್ರೀತಿಯನ್ನು ಅನುಮಾನಿಸುವಂತೆ ವರ್ತಿಸಬೇಡಿ. ನಿಮ್ಮ ಕಣ್ಮಣಿಯನ್ನು ಮುಕ್ತವಾಗಿ ಮುದ್ದಾಡಿ.

ಮಗಳ ಬಾಹ್ಯ ಸೌಂದರ್ಯದ ಬಗ್ಗೆ ಕೊರಗಬೇಡಿ :  ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಹಾಗೆ ನಿಮ್ಮ ಮಗು ಹೇಗಿದ್ದರೂ ಅದು ನಿಮಗೆ ಚೆಂದ. ಮಗಳು ಕಪ್ಪಾಗಿದ್ದಾಳೆ, ದಪ್ಪವಿದ್ದಾಳೆ, ಓದು ಬರಹದಲ್ಲಿ ಹಿಂದೆ ಎಂದು ಅವಳನ್ನು ಹೀಗಳೆಯಬೇಡಿ. ಬದಲಾಗಿ ಅವಳಿಗೆ ಉತ್ತಮ ಸಂಸ್ಕಾರ, ತನ್ನನ್ನು ತಾನು ಗೌರವಿಸಿಕೊಳ್ಳುವುದನ್ನು ಮತ್ತು ಆತ್ಮವಿಶ್ವಾಸವನ್ನು ಕಲಿಸಿ.

ಬೆಳೆದು ದೊಡ್ಡವಳಾದ ಮೇಲೂ ಅಷ್ಟೇ ಪ್ರೀತಿ ಇರಲಿ : ಮಗಳು ದೊಡ್ಡವಳಾದ ಹಾಗೆ ಅಪ್ಪ ಮಗಳ ನಡುವೆ ಕೆಲವು ಸ್ವಾಭಾವಿಕ ಅಂತರ ಬೆಳೆದುಹೋಗುತ್ತದೆ. ಪ್ರಪಂಚಕ್ಕೆ ಅವಳು ದೊಡ್ಡವಳಾದರೂ ನಿಮಗೆ ಮಗಳೇ ಅಲ್ಲವೇ. ಮಗಳ ಪೀರಿಯಡ್ಸ್ ಸಮಸ್ಯೆ, ಬಾಳ ಸಂಗಾತಿಯ ಸಮಸ್ಯೆ, ಸಾಮಾಜಿಕ ಸಮಸ್ಯೆ ಏನೇ ಇದ್ದರೂ ನೀವು ಅವಳ ಕೈ ಬಿಡಬೇಡಿ.

ತನ್ನ ಅಮ್ಮನನ್ನೂ ಪ್ರೀತಿಸಬೇಕೆಂಬುದು ಅವಳ ಬಯಕೆ :  ಅಪ್ಪ ತನ್ನ ಜೊತೆಗೆ ಅಮ್ಮನನ್ನೂ ಪ್ರೀತಿಸಬೇಕು, ಅವಳ ಕಷ್ಟಗಳನ್ನು ಕೂಡ ಅರ್ಥಮಾಡಿಕೊಳ್ಳಬೇಕು ಎಂದು ಮಗಳು ಬಯಸ್ತಾಳೆ. ಕುಟುಂಬ ಸಮೇತರಾಗಿ ಎಲ್ಲರೂ ಪ್ರವಾಸಕ್ಕೆ ಹೋಗಬೇಕು ಎನ್ನುವ ಆಸೆಗಳಿರುತ್ತವೆ.

ನಿಮ್ಮ ಪ್ರಯಾಣ ಹೀಗಿರಲಿ : ಅಪ್ಪ ಮಗಳು ಒಟ್ಟಿಗೇ ಪ್ರಯಾಣಿಸುವಾಗ ಮಗಳು ಇಷ್ಟಪಡುವ ಹಾಡನ್ನು ಪ್ಲೇ ಮಾಡಲು ಹೇಳಿ. ಇಂತಹ ಸಣ್ಣ ಪುಟ್ಟ ಖುಷಿಗಳೇ ಆಕೆಯ ಪಾಲಿಗೆ ಮರೆಯಲಾಗದ ಉಡುಗೊರೆಯಾಗುತ್ತದೆ.

ಅವಳ ಕೂದಲನ್ನು ಬಾಚಿ : ಸಾಮಾನ್ಯವಾಗಿ ಮಕ್ಕಳ ಮುಕ್ಕಾಲು ಭಾಗ ಕೆಲಸವನ್ನು ಅಮ್ಮಂದಿರೇ ಮಾಡಬೇಕಾಗುತ್ತದೆ. ಹೀಗಾದಾಗ ತಂದೆ ಮಗಳ ಬಾಂಧವ್ಯದಲ್ಲಿ ಬಿರುಕು ಮೂಡಬಹುದು. ಹಾಗಾಗಿ ಅಪರೂಪಕ್ಕೊಮ್ಮೆಯಾದರೂ ಮಗಳ ಕೂದಲು ಬಾಚುವುದು ಆಕೆಯ ಕೈ ಕಾಲಿನ ಉಗುರುಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಕೆಲಸಗಳನ್ನು ಮಾಡಿ.

ಅವಳ ಜೊತೆ ಆಟವಾಡಿ (Play With Kids) :  ಮಕ್ಕಳು ಆಟದಿಂದ ಹೆಚ್ಚು ಖುಷಿಗೊಳ್ಳುತ್ತಾರೆ. ನಿಮ್ಮ ಕೆಲಸದ ಸಮಯ ಮುಗಿದ ನಂತರ ಮಗಳ ಜೊತೆ ಆಟವಾಡಿ. ನಿಮಗೆ ತಿಳಿದ ವ್ಯಾಯಾಮವನ್ನು ಆಕೆಗೂ ಹೇಳಿಕೊಡಿ. ಇದರಿಂದ ನಿಮ್ಮ ಮಧ್ಯೆ ಬಾಂಡಿಂಗ್ ಹೆಚ್ಚುತ್ತದೆ.

ಮಕ್ಕಳ ಕಾರ್ಯಕ್ರಮದಲ್ಲಿ ಭಾಗಿಯಾಗಿ :  ಬಿಡುವಿಲ್ಲದ ಕೆಲಸಗಳ ಮಧ್ಯೆ ಮಕ್ಕಳ ಸ್ಪೋರ್ಟ್ಸ್, ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಂದೆಗೆ ಸಮಯವೇ ಇರುವುದಿಲ್ಲ. ನಿಮ್ಮ ಅಮೂಲ್ಯವಾದ ಸಮಯದ ಸ್ವಲ್ಪ ಭಾಗವನ್ನು ಅವಳಿಗೆ ಕೊಡಿ ಅವಳನ್ನು ಚೀರ್ ಅಪ್ ಮಾಡಿ.

ಭೂಮಿ ಮೇಲಿನ ಮೊದಲ ಮದ್ವೆ ಯಾವಾಗ ಆಯ್ತು, ಯಾರ ಮಧ್ಯೆ ನಡೀತು?

ಮಾದರಿ ವ್ಯಕ್ತಿ (Role Model) ಎನಿಸಿಕೊಳ್ಳಿ : ತಂದೆಯಾದವನು ಮಗಳ ಜಗತ್ತಿನ ಮೊದಲ ಪುರುಷನಾಗಿರುತ್ತಾನೆ. ತಂದೆಯ ಮೂಲಕ ಒಬ್ಬ ಪುರುಷ ಹೇಗಿರುತ್ತಾನೆ ಎಂಬುದು ಅವಳ ಕಲ್ಪನೆಗೆ ಬರುತ್ತದೆ. ಮುಂದೆ ಮದುವೆಯಾಗುವ ಹುಡುಗನಲ್ಲಿ ಕೂಡ ನಿಮ್ಮ ಸ್ವಭಾವವನ್ನೇ ಆಕೆ ಕಾಣುತ್ತಾಳೆ.

ನೆನಪುಗಳನ್ನು (Memories) ಕೂಡಿ ಹಾಕಿ : ಮಗಳ ಜೊತೆ ಕಳೆದ ಮಧುರ ಕ್ಷಣಗಳನ್ನು ಫೋಟೋ, ವಿಡಿಯೋದಲ್ಲಿ ಸೆರೆಹಿಡಿಯಿರಿ. ಇಂತಹ ನೆನಪುಗಳ ನಿಮ್ಮ ಪ್ರೀತಿಯನ್ನು ಇಮ್ಮಡಿಗೊಳಿಸುತ್ತವೆ.

Latest Videos
Follow Us:
Download App:
  • android
  • ios