ಮಗು ನಡೆಯುವುದಕ್ಕೂ ಮೊದಲು ಅಂಬೆಗಾಲಿಡಬೇಕು, ಯಾಕೆ?
ಮಕ್ಕಳ (Children) ಬೆಳವಣಿಗೆ ಹಂತ ಹಂತವಾಗಿರುತ್ತದೆ. ತೆವಳುತ್ತಾ ಹೋಗುವುದು, ಅಂಬೆಗಾಲಿಡುವುದು, ತೊದಲು ನುಡಿಯುವುದು ,ನಡೆಯುವುದು ಹೀಗೆ ಮಕ್ಕಳು ಹಂತ ಹಂತವಾಗಿಯೇ ದೊಡ್ಡವರಾಗುತ್ತಾ ಹೋಗುತ್ತಾರೆ. ಮಕ್ಕಳು ನಡೆಯುವುದಕ್ಕೂ (Walking) ಮೊದಲು ಅಂಬೆಗಾಲಿಡುವುದು ಮುಖ್ಯ ಅಂತಾರೆ. ಅದ್ಯಾಕೆ ನಿಮ್ಗೆ ಗೊತ್ತಾ ?
ಮಗುವಿನ (Baby) ಲಾಲನೆ-ಪೋಷಣೆ, ಬೆಳವಣಿಗೆ ಪ್ರತಿಯೊಬ್ಬ ಪೋಷಕರಿಗೂ (Parents) ಮುಖ್ಯವಾಗಿರುತ್ತದೆ. ಹೀಗಾಗಿಯೇ ಮಗು ದೊಡ್ಡದಾಗುವ ಪ್ರತಿಯೊಂದು ಹಂತವನ್ನೂ ಎಚ್ಚರಿಕೆಯಿಂದ ಗಮನಿಸುತ್ತಾ ಹೋಗುತ್ತಾರೆ. ಮಕ್ಕಳು ಹುಟ್ಟಿದ ಕೂಡಲೇ ಏಕಾಏಕಿ ನಡೆಯುವುದಿಲ್ಲ. ಮಕ್ಕಳ ಬೆಳವಣಿಗೆ ಹಂತ ಹಂತವಾಗಿರುತ್ತದೆ. ವಳುತ್ತಾ ಹೋಗುವುದು, ಅಂಬೆಗಾಲಿಡುವುದು, ತೊದಲು ನುಡಿಯುವುದು ,ನಡೆಯುವುದು ಹೀಗೆ ಮಕ್ಕಳು ಹಂತ ಹಂತವಾಗಿಯೇ ದೊಡ್ಡವರಾಗುತ್ತಾ ಹೋಗುತ್ತಾರೆ. ಮಗುವಿನ ಜನನದಿಂದ ಮನೆಯಲ್ಲಿ ಖುಷಿಯೇ ತುಂಬಿರುತ್ತದೆ. ಮಗು ಜನಿಸಿದಾಗಿನಿಂದ, ಅದರ ಪ್ರತಿಯೊಂದು ಚಟುವಟಿಕೆಯನ್ನೂ ಪೋಷಕರು ಆಸ್ವಾದಿಸುತ್ತಾರೆ. ಮಗು ಯಾವಾಗ ನಡೆಯಲು (Walk) ಕಲಿಯುತ್ತೋ, ಮಾತನಾಡುತ್ತೋ ಎಂದು ಕಾಯುತ್ತಿರುತ್ತಾರೆ. ಮಗುವಿನ ಪ್ರತಿಯೊಂದು ಹೊಸ ಕೆಲಸವೂ ಪೋಷಕರಿಗೆ ಖುಷಿಯನ್ನು ನೀಡುತ್ತದೆ.
ಅದರಲ್ಲೂ ಮಗುವು ಅಂಬೆಗಾಲಿಡುವಾಗ ನೋಡಲು ತುಂಬಾನೇ ಖುಷಿಯಾಗುತ್ತದೆ. ಶಿಶುಗಳು ತಾವು ಮೊದಲ ಬಾರಿ ನಡೆಯುವ ಮೊದಲೇ ಕೋಣೆಯಾದ್ಯಂತ ಅಂಬೆಗಾಲಿಡಲು ಅಗತ್ಯವಿರುವ ಕೌಶಲ್ಯಗಳ ಮೇಲೆ ಕೆಲಸ ಮಾಡುತ್ತಿರುತ್ತಾರೆ. ನಂತರ ನಿಧಾನವಾಗಿ ನಡೆಯಲು ಕಲಿಯುತ್ತಾರೆ.
ಮಕ್ಕಳ ಡೈಪರ್ ರಾಶಸ್ ಗೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಅಂಬೆಗಾಲಿಡುವುದು ಮಗುವಿನ ಚಲನೆಯನ್ನು ಪ್ರಾರಂಭಿಸಲು ಮೊದಲ ಹೆಜ್ಜೆಯಾಗಿದೆ. ಕೆಲವು ಶಿಶುಗಳು ಬೇಗನೆ ತೆವಳಲು ಪ್ರಾರಂಭಿಸುತ್ತವೆ ಆದರೆ ಕೆಲವರು ಸಮಯ ತೆಗೆದುಕೊಳ್ಳುತ್ತಾರೆ. ಇದು ಅವರಿಗೆ ಕಲಿಸಲಾಗದ ನೈಸರ್ಗಿಕ ವಿಷಯ. ಆದರೆ ನಡೆಯುವ ಮೊದಲು ತೆವಳುವುದು ಏಕೆ ಮುಖ್ಯ ಎಂಬುವುದು ನಿಮಗೆ ತಿಳಿದಿದೆಯೇ? ಮಗು ಸೀದಾ ನಡೆಯದೆ ಅಂಬೆಗಾಲಿಡಲು ಕಲಿತು ನಂತರ ನಡೆಯುವುದರಿಂದ ಹಲವು ಪ್ರಯೋಜನವಿದೆ. ಅದೇನೆಂದು ತಿಳಿಯೋಣ.
ದೇಹದ ಸಮತೋಲನ ಸುಧಾರಿಸುತ್ತದೆ
ಶಿಶುಗಳು ನಡೆಯುವುದಕ್ಕೂ ಮೊದಲು ತೆವಳಲು ಆರಂಬ\ಭಿಸುತ್ತಾರೆ. ನಂತರ ಅಂಬೆಗಾಲಿಡುತ್ತಾರೆ. ಆ ಬಳಿಕ ಬೇಗನೆ ನಡೆಯಲು ಪ್ರಾರಂಭಿಸುವುದನ್ನು ನೀವು ನೋಡಿರಬೇಕು. ತೆವಳುವುದರಿಂದ ಅವರ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಅಂತಿಮವಾಗಿ ಅವರು ತಮ್ಮದೇ ಕಾಲಿನ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ. ಇದರರ್ಥ ತೆವಳುವುದು ಅಥವಾ ಅಂಬೆಗಾಲಿಡುವುದು ಶಿಶುಗಳಲ್ಲಿ ದೇಹದ ಸಮತೋಲನದ (Body balance) ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮಗುವಿನ ತಿಳುವಳಿಕೆ ಹೆಚ್ಚಿಸುತ್ತದೆ
ಮಗು ತನ್ನ ಮೊಣಕಾಲುಗಳ ಮೇಲೆ ನಡೆಯಲು ಪ್ರಾರಂಭಿಸಿದಾಗ ಜೊತೆಗೇ ಅದರ ಮೆದುಳು (Brain) ಸಹ ಉತ್ತಮವಾಗಿ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ. ಮಕ್ಕಳು ಹೋಗುವಾಗ ಅವರ ದಾರಿಯಲ್ಲಿ ಅನೇಕ ಅಡೆತಡೆಗಳು ಬರುತ್ತವೆ. ಅವರು ಎಲ್ಲವನ್ನೂ ಗಮನಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಾರೆ. ಉದಾಹರಣೆಗೆ, ಅವರು ತಮ್ಮ ದಾರಿಯಲ್ಲಿ ಕೆಲವು ಕೀಟಗಳನ್ನು ನೋಡಿದರೆ, ಅವರು ತಮ್ಮ ದಿಕ್ಕನ್ನು ಬದಲಾಯಿಸುತ್ತಾರೆ ಅಥವಾ ಈ ಚಿಕ್ಕ ಜೀವಿ ಏನೆಂದು ತಿಳಿಯಲು ಪ್ರಯತ್ನಿಸುತ್ತಾರೆ. ಇದರಿಂದ ಮಗುವಿನ ತಿಳುವಳಿಕೆ ಹಾಗೂ ಪ್ರತಿಕ್ರಿಯಿಸುವ ರೀತಿ ಸುಧಾರಿಸುತ್ತದೆ.
ಆಡುವ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ, ಐದು ವರ್ಷಕ್ಕೇ ಮಗುವೊಂದು ಮಡಿಲಿನಲ್ಲಿತ್ತು !
ಮಕ್ಕಳನ್ನು ಚುರುಕಾಗಿಸುತ್ತದೆ
ಮಗು ತನ್ನ ಮೊಣಕಾಲುಗಳ ಮೇಲೆ ನಡೆಯಲು ಪ್ರಾರಂಭಿಸಿದಾಗ, ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿಯು ಹೆಚ್ಚಾಗುತ್ತದೆ. ಅವರು ತಮ್ಮ ಸುತ್ತಲಿನ ವಿವಿಧ ವಿಷಯಗಳನ್ನು ಗಮನಿಸುತ್ತಾರೆ. ಎಲ್ಲವನ್ನೂ ತಿಳಿದುಕೊಳ್ಳುವ ಉತ್ಸಾಹಿಂ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ, ಇದು ಮಕ್ಕಳ ಮಾನಸಿಕ ಮತ್ತು ಅರಿವಿನ ಆರೋಗ್ಯ (Health)ವನ್ನು ಸುಧಾರಿಸುತ್ತದೆ.
ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ
ಅಂಬೆಗಾಲಿಡುವಾಗ ನಿಮ್ಮ ಮಗುವಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಶಕ್ತಿ ಮತ್ತು ನಮ್ಯತೆ ಎರಡನ್ನೂ ಸುಧಾರಿಸುತ್ತದೆ ಅದು ಅವರ ಕಾಲುಗಳ ಮೇಲೆ ನಿಲ್ಲಲು ಮತ್ತು ನಡೆಯಲು ಪ್ರಾರಂಭಿಸಲು ಸಹಾಯ ಮಾಡುತ್ತದೆ. ಇದು ಅವರಲ್ಲಿ ಆತ್ಮವಿಶ್ವಾಸದ (Confidence) ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತಿನ ದಿನಗಳಲ್ಲಿ ಮಕ್ಕಳು ಯಾವುದೇ ಚಟುವಟಿಕೆ (Activity)ಯನ್ನು ಹೆಚ್ಚು ಉತ್ಸಾಹದಿಂದ ಮಾಡಲು ಸಾಧ್ಯವಾಗುತ್ತದೆ.