ಮಕ್ಕಳಿಗೆ ಇಂಥಾ ಮ್ಯಾನರ್ಸ್ ಹೇಳಿ ಕೊಡದಿದ್ದರೆ ಹೋದಲ್ಲಿ ಅವಮಾನ ಆಗೋದು ಖಂಡಿತ !
ಕಾಲಕ್ಕೆ ಚಕ್ರ ಕಟ್ಟಿಕೊಂಡು ಓಡುವ ಜಗತ್ತಿನಲ್ಲಿ ನಾವಿದ್ದೇವೆ. ಇಲ್ಲಿ ಯಾರಿಗೂ ಯಾವುದಕ್ಕೂ ಸಮಯ ಇಲ್ಲ. ಮಕ್ಕಳನ್ನು (Children) ಬೇಬಿ ಕೇರ್, ಸ್ಕೂಲ್‌ಗೆ ಬಿಟ್ಟು ಪೋಷಕರು (Parents) ಆಫೀಸಿಗೆ ಧಾವಿಸುತ್ತಾರೆ. ಪೋಷಕರು ಮಕ್ಕಳ ಕುರಿತು ಕಾಳಜಿ (Care) ವಹಿಸದ ಕಾರಣ ಬೆಳೆಯುತ್ತಾ ಬೆಳೆಯುತ್ತಾ ಕೆಲ ಮಕ್ಕಳು ದುವರ್ತನೆ ಬೆಳೆಸಿಕೊಳ್ಳುತ್ತಾರೆ. ಹಾಗಾದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ಏನು ಹೇಳಿ ಕೊಡಬೇಕು.
ಪೋಷಕರು (Parents) ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕಾದ ವಿಷಯಗಳಲ್ಲೊಂದು ಶಿಷ್ಟಾಚಾರ. ಇದು ಒಂದಲ್ಲ ಆದರೆ ಅನೇಕ ವಿಷಯಗಳನ್ನು ಒಳಗೊಂಡಿದೆ. ಸಮಾಜ (Society), ಶಾಲೆ ಮತ್ತು ಕುಟುಂಬಕ್ಕೆ ಅನುಗುಣವಾಗಿ ತಮ್ಮ ಮಗುವನ್ನು (Children) ರೂಪಿಸಲು, ಪೋಷಕರು ಮಗುವಿಗೆ ಕೆಲವು ನಡವಳಿಕೆಗಳನ್ನು ಕಲಿಸಬೇಕು. ಕೆಲವು ಅಭ್ಯಾಸಗಳು ಅಥವಾ ನಡವಳಿಕೆಗಳು ಈಗ ಹೆತ್ತವರು ಬಹುಶಃ ತಮ್ಮ ಮಗುವಿಗೆ ಕಲಿಸಬೇಕೆಂದು ಮರೆತುಹೋಗಿವೆ. ಈ ಲೇಖನದಲ್ಲಿ, ನಾವು ಮಕ್ಕಳಿಗೆ ಕಲಿಸಲು ಬಹಳ ಮುಖ್ಯವಾದ ಮರೆತುಹೋದ ಅಭ್ಯಾಸಗಳನ್ನು (Habit) ನೋಡುತ್ತಿದ್ದೇವೆ. ಮಕ್ಕಳಿಗೆ ಇವೆಲ್ಲವನ್ನೂ ಹೇಳಿಕೊಟ್ಟರೆ ಭವಿಷ್ಯದಲ್ಲಿ ಅವರು ಉತ್ತಮ ವ್ಯಕ್ತಿಗಳಾಗೋದು ಖಂಡಿತ.
ಮೊಬೈಲ್ ಯಾವಾಗ ಆಫ್ ಮಾಡಬೇಕು
ಇವತ್ತಿನ ದಿನಗಳಲ್ಲಿ ಚಿಕ್ಕ ಮಕ್ಕಳ ಬಳಿಯೂ ಮೊಬೈಲ್ (Mobile) ಇದೆ. ನಿಮ್ಮ ಮಗು ತನ್ನದೇ ಆದ ಮೊಬೈಲ್ ಫೋನ್ ಹೊಂದಿದ್ದರೆ, ನೀವು ಅವನಿಗೆ ಫೋನ್ ಶಿಷ್ಟಾಚಾರವನ್ನು ಕಲಿಸಬೇಕು. ಯಾವಾಗ ಫೋನ್‌ನ್ನು ಬಳಸಬಹುದು, ಯಾವಾಗ ಬಳಸಬಾರದು ಎಂಬುದನ್ನು ತಿಳಿಸಿಕೊಡಬೇಕು. ದೇವಸ್ಥಾನ, ಪೂಜೆ ಮೊದಲಾದ ಸ್ಥಳಗಳಲ್ಲಿ ಮೊಬೈಲ್ ಬಳಸದಂತೆ ಹೇಳಿಕೊಡಬೇಕು. ಮಾತ್ರವಲ್ಲ ಹೋದಲ್ಲಿ, ಬಂದಲ್ಲಿ ಕುಟುಂಬಸ್ಥರು ಮಾತನಾಡುವಾಗಲೂ ನಿರ್ಲಕ್ಷಿಸಿ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಕುಳಿತಿರುವುದು, ಯೂಟ್ಯೂಬ್ ವೀಡಿಯೋ ನೋಡುತ್ತಾ ಕೂರುವುದು ಮೊದಲಾದವನ್ನು ಮಾಡದಂತೆ ಸೂಚಿಸಬೇಕು. ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಸಾಲದು, ಅದರ ಸರಿಯಾದ ಬಳಕೆಯನ್ನು ಸಹ ಅವರಿಗೆ ತಿಳಿಸುವುದು ಅಗತ್ಯವಾಗಿದೆ.
ಗಂಡ-ಹೆಂಡ್ತಿ ಜಗಳದ ಮಧ್ಯೆ ಕೂಸು ಬಡವಾಗ್ಬಾರ್ದು ಅಂದ್ರೆ ಹೀಗೆ ಮಾಡಿ
ಥ್ಯಾಂಕ್ಸ್, ಧನ್ಯವಾದ ಹೇಳಲು ಕಲಿಸಿ
ಹೆಚ್ಚಿನ ಮಕ್ಕಳು ರೂಡ್ ವರ್ತನೆಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗಿ ಯಾರಾದರೂ ಸಹಾಯ ಮಾಡಿದಾಗ ಥ್ಯಾಂಕ್ಸ್ (Thanks) ಎನ್ನುವುದು, ತಮ್ಮಿಂದ ತಪ್ಪಾದಾಗ ಸಾರಿ (Sorry) ಎನ್ನುವುದು ಇವತ್ತಿನ ದಿನದ ಮಕ್ಕಳಿಂದ ನಿರೀಕ್ಷಿಸುವುದು ಕಷ್ಟ. ಹೀಗಾಗಿ ನಿಮ್ಮ ಮಕ್ಕಳಿಗೆ ಇವೆರಡನ್ನು ಹೇಳಿ ಕೊಡಿ. ಯಾರಾದರೂ ಸಹಾಯ ಮಾಡಿದಾಗ ಧನ್ಯತಾ ಭಾವದಿಂದ ಧನ್ಯವಾದಗಳು ಹೇಳುವಂತೆ ಸೂಚಿಸಿ. ಇನ್ನೊಬ್ಬರು ಥ್ಯಾಂಕ್ಸ್ ಹೇಳಿದಾಗ ಮೈ ಪ್ಲೆಶರ್ ಎನ್ನುವುದನ್ನು ರೂಢಿಸಿಕೊಳ್ಳಿ. ಹಾಗೆಯೇ ತನ್ನಿಂದ ತಪ್ಪಾದಾಗಲೂ ಸಾರಿ ಕೇಳಲು ಹಿಂಜರಿಯಬಾರದು ಎಂಬುದನ್ನು ತಿಳಿಸಿ ಹೇಳಿ.
ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ
ಯಾವುದೇ ಜಾತಿ, ಧರ್ಮ, ಹುದ್ದೆಯಿರಲಿ ಎಲ್ಲರನ್ನೂ ಸಮಾನವಾಗಿ (Equal) ಕಾಣುವ ಮನೋಭಾವವನ್ನು ಮಕ್ಕಳಿಗೆ ಕಲಿಸಿಕೊಡಿ. ಎಲ್ಲರನ್ನೂ ಗೌರವದಿಂದ (Respect) ಕಾಣುವಂತೆ ಸೂಚಿಸಿ. ನಾವು ನಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಧನ್ಯವಾದ ಹೇಳುತ್ತೇವೆ ಆದರೆ ರೆಸ್ಟೋರೆಂಟ್‌ಗಳು, ಥಿಯೇಟರ್‌ಗಳು ಅಥವಾ ಕಚೇರಿಗಳಲ್ಲಿ ನಮಗೆ ಸೇವೆ ಸಲ್ಲಿಸುವ ಜನರಿಗೆ ಧನ್ಯವಾದ ಹೇಳಲು ಮರೆಯುತ್ತೇವೆ. ಅವನು ಜನರನ್ನು ತನ್ನ ಕೆಲಸವೆಂದು ಪರಿಗಣಿಸಬಾರದು, ಆದರೆ ಎಲ್ಲರಿಗೂ ಕೃತಜ್ಞರಾಗಿರಬೇಕು ಎಂದು ಮಗುವಿಗೆ ಕಲಿಸಿ.
Parenting Tips : ಮಕ್ಕಳ ಕಣ್ಣಿನ ಮೇಲಿರಲಿ ಪಾಲಕರ ಗಮನ
ಕೆಮ್ಮುವಾಗ ಅಥವಾ ಸೀನುವಾಗ ಕೈ ಅಡ್ಡ ಹಿಡಿಯಬೇಕು
ಮಕ್ಕಳಿಗೆ ಕೆಮ್ಮುವಾಗ ಅಥವಾ ಸೀನುವಾಗ ರೋಗಾಣುಗಳು ಹರಡದಂತೆ ಬಾಯಿ ಅಥವಾ ಮೂಗಿನ ಮೇಲೆ ಕೈ ಇಟ್ಟುಕೊಳ್ಳಬೇಕು ಎಂದು ನಾವು ಆಗಾಗ್ಗೆ ಮಕ್ಕಳಿಗೆ ಕಲಿಸುತ್ತೇವೆ. ಇಂದಿನ ಕಾಲದಲ್ಲಿ ಮಗುವಿಗೆ ಈ ಅಭ್ಯಾಸವನ್ನು ಕಲಿಸುವುದು ಇನ್ನೂ ಹೆಚ್ಚು ಮಹತ್ವದ್ದಾಗಿದೆ ಎಂದು ಗೋಲ್ಡನ್ ರೂಲ್ಸ್ ಚೀಕ್ ಸಂಸ್ಥಾಪಕಿ ಮತ್ತು ಶಿಷ್ಟಾಚಾರ ತಜ್ಞ ಲಿಸಾ ಗ್ರೂಟ್ ಹೇಳುತ್ತಾರೆ. ಈ ಕಾರಣದಿಂದಾಗಿ ಸುತ್ತಮುತ್ತಲಿನ ಜನರು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತಾರೆ. ಹೀಗಾಗಿ ನಿಮ್ಮ ಮಕ್ಕಳಿಗೆ ಈ ಶಿಷ್ಟಾಚಾರವನ್ನು ಹೇಳಿ ಕೊಡುವುದನ್ನು ಮರೆಯದಿರಿ.
ಸಾಮಾಜಿಕ ಮಾಧ್ಯಮ ಶಿಷ್ಟಾಚಾರ
ಈಗ ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ (Social media) ಸಕ್ರಿಯರಾಗಿದ್ದಾರೆ, ಆದರೆ ಅದಕ್ಕೆ ಸಂಬಂಧಿಸಿದ ಶಿಷ್ಟಾಚಾರ ಅಥವಾ ನಡವಳಿಕೆ ಅವರಿಗೆ ತಿಳಿದಿಲ್ಲ. ಅನುಮತಿಯಿಲ್ಲದೆ ಯಾರೊಬ್ಬರ ಚಿತ್ರಗಳನ್ನು ಪೋಸ್ಟ್ ಮಾಡದಂತೆ ಅಥವಾ ಟ್ಯಾಗ್ ಮಾಡದಂತೆ ಮಗುವಿಗೆ ತಿಳಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಯಾರಿಗೂ ನೀಡಬೇಡಿ ಮತ್ತು ನೀವು ಅವರಿಗೆ ಮಾತ್ರ ಹೇಳಬೇಕಾದ ಯಾವುದನ್ನೂ ಆನ್‌ಲೈನ್‌ನಲ್ಲಿ ಹೇಳಬೇಡಿ.