Asianet Suvarna News Asianet Suvarna News

ಪೋಷಕರು ಮೊದಲು ತಪ್ಪನ್ನು ಒಪ್ಕೊಳ್ಳಿ, ಆಗ ಮಕ್ಕಳೂ ತಮ್ಮನ್ನು ತಿದ್ದಿಕೊಳ್ಳುತ್ತವೆ!

ಮಕ್ಕಳು ಮನೆಯ ಮುದ್ದು. ಮಕ್ಕಳು ದೊಡ್ಡವರಾಗಿ ಅವರಿಗೆ ಮಕ್ಕಳಾದ್ರೂ ಅವರನ್ನು ಪಾಲಕರು ಮಕ್ಕಳಂತೆ ನೋಡ್ತಾರೆ. ಆದ್ರೆ ಪಾಲಕರಾದವರು ಮಕ್ಕಳ ಮಾತನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು. ಮಕ್ಕಳಿಗೆ ಅನುಭವವಿಲ್ಲವೆಂದು ಎಂದೂ ಭಾವಿಸಬಾರದು.

These Parenting Myths Are Harmful For Parent And Child
Author
First Published Sep 30, 2022, 4:01 PM IST

ಮಕ್ಕಳು ಈಗ ಎಲ್ಲಿದ್ರೂ ಸುರಕ್ಷಿತರಲ್ಲ. ಮನೆಯಲ್ಲಿಯೇ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತದೆ. ಆದ್ರೆ ಪಾಲಕರು ಮಕ್ಕಳ ಮಾತುಗಳನ್ನು ಕೇಳೋದಿಲ್ಲ. ಮಕ್ಕಳನ್ನು ನಿರ್ಲಕ್ಷ್ಯ ಮಾಡ್ತಾರೆ. ಪಾಲಕರು ಮಕ್ಕಳಿಗೆ ಅನೇಕ ಸಂಗತಿಯನ್ನು ಕಲಿಸಬೇಕು. ಮನೆಯ ಹಿರಿಯರನ್ನು ಕಣ್ಮುಚ್ಚಿ ನಂಬುವಂತೆ ಮಕ್ಕಳಿಗೆ ಎಂದೂ ಕಲಿಸಬಾರದು. ಅವರಿಗೆ ಸೂಕ್ಷ್ಮವಾಗಿ ವಿವರಿಸುವು ಮೂಲಕ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದನ್ನು ಕೂಡ ಹೇಳಬೇಕು. ಮಕ್ಕಳಿಗೆ ಬುದ್ಧಿವಂತಿಕೆ ಬಳಸೋದು ಹೇಗೆ ಎಂಬುದನ್ನು ಕಲಿಸಬೇಕಾಗುತ್ತದೆ. ಮನೆಯಲ್ಲಿ ಪಾಲಕರು ತಪ್ಪು ಮಾಡಿದಾಗ ಅದನ್ನು ಕೂಡ ಮಕ್ಕಳಿಗೆ ಹೇಳುವ ಸ್ವಾತಂತ್ರ್ಯವನ್ನು ನೀಡಬೇಕು. 

ಮನೆ (House) ಯಲ್ಲಿರುವ ಎಲ್ಲ ಸದಸ್ಯರ ಜೊತೆ ಅಥವಾ ಸಂಬಂಧಿಕರು, ಸ್ನೇಹಿತರ ಜೊತೆ ಮಕ್ಕಳು (Children) ಮಾತನಾಡಬೇಕು, ಬೆರೆಯಬೇಕೆಂದು ಪಾಲಕರು ಬಯಸ್ತಾರೆ. ಮಕ್ಕಳಿಗೆ ಮಾತನಾಡುವಂತೆ ಒತ್ತಡ ಹೇರುತ್ತಾರೆ. ಆದ್ರೆ ಮಕ್ಕಳಿಗೆ ಕೆಲವರ ಜೊತೆ ಮಾತನಾಡಲು ಇಷ್ಟವಾಗುವುದಿಲ್ಲ. ಅವರಿಗೆ ಕೆಟ್ಟ ಅನುಭವವಾಗಿರಬಹುದು ಅಥವಾ ಬೇರೆ ಕಾರಣವಿರಬಹುದು. ಅಂಥ ಸಂದರ್ಭದಲ್ಲಿ ಮಕ್ಕಳನ್ನು ಎಂದಿಗೂ ಪಾಲಕರು ಒತ್ತಾಯಿಸಬಾರದು. ಹಾಗೆಯೇ ಪಾಲಕರು ಮಕ್ಕಳ ಜೊತೆ ಸೂಕ್ಷ್ಮವಾಗಿ ವರ್ತಿಸಬೇಕು. ಅವರ ಜೊತೆ ಹೇಗಿರಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಮಕ್ಕಳ ಜೊತೆ ಹೀಗೆ ವರ್ತಿಸಬೇಡಿ : 
ವಯಸ್ಸು (Age) ಹಾಗೂ ಅನುಭವ ಬೇರೆ :
ಪಾಲಕರು ಮಾಡುವ ದೊಡ್ಡ ತಪ್ಪು ಇದು. ಮಕ್ಕಳಿಗಿಂತ ಹೆಚ್ಚು ಅನುಭವ ನಮಗಿದೆ ಎಂದು ಭಾವಿಸ್ತಾರೆ. ಇದೇ ಕಾರಣಕ್ಕೆ ಮಕ್ಕಳು ಏನು ಹೇಳಲು ಬಂದ್ರೂ ಅದನ್ನು ಇಗ್ನೋರ್ ಮಾಡ್ತಾರೆ. ಚೂಟುದ್ದ ಇಲ್ಲ ನನಗೆ ಹೇಳ್ತಿಯಾ ಎಂದು ಅನೇಕ ಪಾಲಕರು ಕೇಳ್ತಾರೆ. ಅನುಭವಕ್ಕೆ ವಯಸ್ಸುಬೇಕಾಗಿಲ್ಲ. ಮನೆಯಲ್ಲಿರುವ ಅಜ್ಜ –ಅಜ್ಜಿಗಿಂತ ಶಾಲೆಗೆ ಹೋಗುವ ಮಕ್ಕಳು ಶಾಲೆ ಬಗ್ಗೆ ಹೆಚ್ಚು ಅನುಭವ ಹೊಂದಿರುತ್ತಾರೆ ಎಂಬುದನ್ನು ಪಾಲಕರು ತಿಳಿಯಬೇಕು. 

ಮಕ್ಕಳ ಮಾತನ್ನು ಆಲಿಸಿ : ಮಕ್ಕಳು ಮಾತನಾಡ್ತಿದ್ದರೆ ಪಾಲಕರು ಅದಕ್ಕೆ ಹೆಚ್ಚು ಗಮನ ನೀಡುವುದಿಲ್ಲ. ಮಕ್ಕಳ ಮಾತನ್ನು ಸರಿಯಾಗಿ ಗಮನಿಸೋದಿಲ್ಲ. ಮಕ್ಕಳು ಏನೋ ಮಾತಾಡ್ತಿದ್ದಾರೆ ಎಂದು ನಿರ್ಲಕ್ಷ್ಯ ಮಾಡ್ತಾರೆ. ಅನೇಕ ಬಾರಿ ಮಕ್ಕಳು, ಮುಖ್ಯವಾದ ವಿಷ್ಯವನ್ನು ಹೇಳಲು ಪಾಲಕರ ಮುಂದೆ ಬರ್ತಾರೆ. ಆದ್ರೆ ಕೆಲಸದ ಒತ್ತಡ ಹಾಗೂ ಬೇರೆ ಕಾರಣಕ್ಕೆ ಮಕ್ಕಳ ಮಾತನ್ನು ಪಾಲಕರು ಕೇಳೋದಿಲ್ಲ. ಇದ್ರಿಂದ ಅನೇಕ ವಿಷ್ಯಗಳು ಪಾಲಕರಿಗೆ ತಿಳಿಯೋದಿಲ್ಲ.

Parenting Tips : ಮಕ್ಕಳ ಮುಂದೆ ಈ ಕೆಲಸ ಮಾಡಿ ಅವ್ರ ಭವಿಷ್ಯ ಹಾಳ್ಮಾಡ್ಬೇಡಿ 

ತಪ್ಪನ್ನು ಒಪ್ಪಿಕೊಳ್ಳಿ : ತಪ್ಪನ್ನು ಎಲ್ಲರೂ ಮಾಡ್ತಾರೆ. ಆದ್ರೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬಾರದು. ಈ ವಿಷ್ಯವನ್ನು ನೀವು ಮಕ್ಕಳಿಗೆ ಕಲಿಸಬೇಕು. ನಾವು ತಪ್ಪು ಮಾಡ್ತಿಲ್ಲ, ನೀವೂ ಮಾಡ್ಬೇಡಿ ಎಂದು ಹೇಳುವ ಪಾಲಕರು ತಪ್ಪನ್ನು ಮುಚ್ಚಿಡುವ ಪ್ರಯತ್ನ ಮಾಡ್ತಾರೆ. ಮಕ್ಕಳ ಮುಂದೆ ನಾಟಕೀಯವಾಗಿ ವರ್ತಿಸುತ್ತಾರೆ. ಇದು ತಪ್ಪು. ಇದ್ರಿಂದ ಪಾಲಕರಲ್ಲಿ ಒತ್ತಡ ಹೆಚ್ಚಾಗುತ್ತದೆ. ಮಕ್ಕಳ ಜೀವನ ಚೆನ್ನಾಗಿರಬೇಕೆಂದ್ರೆ ಪಾಲಕರು ತೆರೆದ ಪುಸ್ತಕವಾಗಿರಬೇಕು. 

ಮಕ್ಕಳ ಭಾವನೆಗೆ ಸ್ಪಂದಿಸಿ : ಮಕ್ಕಳಿಗೂ ಭಾವನೆ ಇರುತ್ತದೆ. ಆದ್ರೆ ಮಕ್ಕಳ ಭಾವನೆ ಬಗ್ಗೆ ಪಾಲಕರು ಹೆಚ್ಚು ಗಮನ ಹರಿಸುವುದಿಲ್ಲ. ಮಕ್ಕಳು ಶಾಂತವಾಗಿದ್ರೆ, ಮೌನವಾಗಿದ್ದರೆ, ಭಯಗೊಂಡಿದ್ದರೆ ಅದನ್ನು ಗಮನಿಸಿ ಮಕ್ಕಳ ಜೊತೆ ಇದ್ರ ಬಗ್ಗೆ ಮಾತನಾಡಿ. ಅವರಿಗೆ ಧೈರ್ಯ ನೀಡಿ, ಅವರ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿ. 

ಮಕ್ಕಳ ಜೊತೆ ಮಾತನಾಡುವಾಗ ಪದ ಬಳಕೆ ಬಗ್ಗೆ ಎಚ್ಚರಿಕೆಯಿರಲಿ

ಅಮ್ಮ ಸೂಪರ್ : ಕುಟುಂಬದ ನಿರ್ವಹಣೆ, ಮಕ್ಕಳ ಪಾಲನೆ, ತಂದೆ – ತಾಯಿ ಇಬ್ಬರ ಮೇಲೂ ಇರುತ್ತದೆ. ಎಂದೂ ತಾಯಿ ಮಾತ್ರ ಸೂಪರ್ ಎಂಬ ಭಾವನೆ ಬರದಂತೆ ನೋಡಿಕೊಳ್ಳಿ. ತಂದೆಗೂ ಗೌರವ, ಪ್ರೀತಿ ನೀಡುವುದನ್ನು ಮಕ್ಕಳಿಗೆ ಕಲಿಸಿ.  
 

These Parenting Myths Are Harmful For Parent And Child


 

Follow Us:
Download App:
  • android
  • ios