ನವ ವಧುವರರಿಗೆ ಎದುರಾಗುವ ಶೃಂಗಾರ ಸಮಸ್ಯೆಗಳಿವು!

ಹೊಸದಾಗಿ ಮದುವೆಯಾದವರ ಸೆಕ್ಸ್ ಲೈಫ್ ಮಜವಾಗಿರುತ್ತದೆ ಎಂದು ಅವಿವಾಹಿತರು ಅಂದುಕೊಳ್ಳಬಹುದು. ಆದರೆ ಅವರಿಗೆ ಅವರದೇ ಆದ ಸಮಸ್ಯೆಗಳಿರುತ್ತವೆ. ಅದೇನು, ಪರಿಹಾರ ಹೇಗೆ, ತಿಳಿಯೋಣ.
 

These are problems faced by newly wed couple

ಮದುವೆಯಾಗುವ ಮುನ್ನ ಸಾಮಾನ್ಯವಾಗಿ ತಮ್ಮ ಮಧುಚಂದ್ರವನ್ನು ಎಲ್ಲಿ ಕಳೆಯಬೇಕು, ಯಾವಾಗ ಹೋಗಬೇಕು ಎಂಬ ಬಗ್ಗೆ, ಹೊಸ ಮನೆ ಹೇಗಿರಬೇಕು ಎಂಬ ಬಗ್ಗೆ ಹುಡುಗ- ಹುಡುಗಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಸೆಕ್ಸ್ ವಿಷಯ ಬಂದಾಗ ಮುಕ್ತವಾಗಿ ಮಾತಾಡಲು ಸಾಧ್ಯವಿರುವುದಿಲ್ಲ. ಹೀಗಾಗಿ ಬೆಡ್‌ರೂಮಿನ ಕ್ರಿಯಾಕಲಾಪಗಳನ್ನೆಲ್ಲ ಟ್ರಯಲ್ ಆಂಡ್ ಎರರ್ ಮಾಡಿಯೇ ಕಲಿಯಬೇಕಾಗುತ್ತದೆ. ಎಲ್ಲವನ್ನೂ ಅನುಭವದ ಮೂಲಕವೇ ಕಂಡುಕೊಳ್ಳಬೇಕಾಗುತ್ತದೆ. ನವವಿವಾಹಿತರು ಎದುರಿಸುವ ಕೆಲವು ಸಾಮಾನ್ಯ ಲೈಂಗಿಕ ಸಂಬಂಧಿತ ಸಮಸ್ಯೆಗಳು ಮತ್ತು ಪರಿಹಾರಗಳು ಇಲ್ಲಿ ತಿಳಿದುಕೊಳ್ಳಿ.

ಎಷ್ಟು ಬಾರಿ?

ಕೆಲವೊಮ್ಮೆ ನವವಿವಾಹಿತರು, ಯಾವ ಉಪಟಳವೂ ಇಲ್ಲದೇ ಇದ್ದರೆ ದಿನದಲ್ಲಿ ಎರಡು ಅಥವಾ ಮೂರು ಬಾರಿ ಸೆಕ್ಸ್ ಮಾಡಲು ಸಾಧ್ಯವಾಗಬಹುದು. ಆದರೆ ಕೆಲವೊಮ್ಮೆ ಹೆಣ್ಣಿಗೆ ಸಾಧ್ಯವಿದ್ದರೆ ಗಂಡಿಗೆ ಸಾಧ್ಯವಿಲ್ಲದೇ ಹೋಗಬಹುದು. ಅಥವಾ ಉಲ್ಟಾ ಆಗಲೂಬಹುದು. ಇಬ್ಬರಿಗೂ ಏಕಕಾಲದಲ್ಲಿ ಮೂಡ್ ಇರಬೇಕೆಂದಿಲ್ಲ. ಹೆಣ್ಣು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಗಂಡು ಬೇಗ ಉದ್ರಿಕ್ತನಾಗಬಹುದು; ಇಬ್ಬರೂ ಒಂದೇ ಸ್ಥಿತಿಯಲ್ಲಿರುವುದನ್ನು ಸಾಧಿಸಲು ಸಮಯ ಬೇಕು. 

ಪರಾಕಾಷ್ಠೆ

ಕೆಲವೊಮ್ಮೆ ಪುರುಷರು ಬೇಗನೆ ಸ್ಖಲನ ಅನುಭವಿಸುತ್ತಾರೆ. ಆಗ ಸ್ತ್ರೀಗೆ ತೃಪ್ತಿ ಆಗದೆ ಹೋಗಬಹುದು. ಮಹಿಳೆಯನ್ನು ತೃಪ್ತಿಪಡಿಸುವ ಕಲೆಯನ್ನು ಪುರುಷ ಕಲಿಯಲು ಸಮಯ ತೆಗೆದುಕೊಳ್ಳುತ್ತದೆ. ಪ್ರತಿಯೊಬ್ಬರಿಗೂ ಆ ಬಗ್ಗೆ ಅರಿವು ಇರುವುದಿಲ್ಲ. ಕೆಲವು ಸ್ತ್ರೀಯರು ಬಹಳ ಸಮಯ ತೆಗೆದುಕೊಳ್ಳಬಹುದು, ಕೆಲವರು ಬೇಗನೆ ಉದ್ರೇಕದ ತುದಿ ತಲುಪಬಹುದು.

Feelfree: ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

ಇದನ್ನು ಗಂಡು ಅರಿಯಬೇಕು. ಇನ್ನು ಕೆಲವು ಸ್ತ್ರೀಯರು ಕಾಮೋತ್ತುಂಗವನ್ನು ನಟಿಸಬಹುದು. ಗಂಡನಿಗೆ ಇಷ್ಟವಾಗಲಿ ಎಂದು ಹಾಗೆ ಮಾಡುತ್ತಾರೆ. ಇದು ಅಗತ್ಯವಿಲ್ಲ. ಗಂಡು ಕಲಿಯಲು ಅವಕಾಶ ನೀಡಿ. ಇದಕ್ಕೆ ಸಾಕಷ್ಟು ತಾಳ್ಮೆ, ತಿಳಿವಳಿಕೆ ಬೇಕು ಮತ್ತು ಸಂವಹನ ನಡೆಸಬೇಕು.

#Feelfree: ಹುಡುಗಿಯರ ಬಗ್ಗೆ ಕುತೂಹಲವಿಲ್ಲ, ಆಂಟಿಯನ್ನು ಕಂಡರೆ ಕಾಮೋದ್ರೇಕ!

ಕಾಂಡೋಮ್ ಬಳಸುವಿಕೆ

ಮದುವೆಯ ಮೊದಲ ರಾತ್ರಿಯಿಂದಲೇ ನಿಯಮಿತವಾದ ಗರ್ಭನಿರೋಧಕ ಬಳಸುವುದು ಕೆಲವರಿಗೆ ಮರೆತುಹೋಗಬಹುದು. ಆದರೆ ಅದನ್ನು ಪಾಲಿಸಬೇಕು. ವಧುವಿಗೆ ಸೇಫ್ಟಿ ಪೀರಿಯಡ್ ಆಗಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಗಂಡು ಕಾಂಡೋಮ್ ಬಳಸಲು ಹೇಳಬಹುದು. ಮದುವೆಯಾದ ಕೂಡಲೇ ಗರ್ಭ ಧರಿಸುವುದು, ಮಕ್ಕಳನ್ನು ಹೆರುವುದು ಯಾರಿಗೆ ಇಷ್ಟವಿಲ್ಲವೋ ಅವರು ಯಾವುದಾದರೂ ಒಂದು ಬಗೆಯ ಗರ್ಭನಿರೋಧಕವನ್ನು ಬಳಸುವುದು ಮುಖ್ಯ. ಕೆಲವು ಪುರುಷರು ಕಾಂಡೋಮ್ ಬಳಸಲು ಒಪ್ಪುವುದಿಲ್ಲ. ಅದು ಮಹಿಳೆಗೂ ಇಷ್ಟವಿರುವುದಿಲ್ಲ. ಅಂಥವರು ಬೇರೆ ಮಾರ್ಗಗಳನ್ನು ಕಂಡುಕೊಳ್ಳಬೇಕು.

ಮೂಡ್

ನೀವು ಯಾವಾಗಲೂ ಸೆಕ್ಸ್ ಮಾಡುವ ಮೂಡ್ ಹೊಂದಿರಬೇಕಾಗಿಲ್ಲ. ಕೆಲವೊಮ್ಮೆ ನೀವು ಅದನ್ನು ಮಾಡಲು ಬಯಸದ ಸಂದರ್ಭಗಳು ಇರಬಹುದು. ಇದನ್ನು ಸಂಗಾತಿ ಅರ್ಥ ಮಾಡಿಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು. ಇದು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಅನ್ವಯಿಸುತ್ತದೆ.

40ರ ವಯಸ್ಸಿನ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನಾಗುತ್ತದೆ?

ಅವಾಸ್ತವಿಕ ನಿರೀಕ್ಷೆ

ಕಲ್ಪನೆ ಒಳ್ಳೆಯದು. ಆದರೆ ಹಾಗೇ ಮಾಡುವಂತೆ ನಿಮ್ಮ ಸಂಗಾತಿಯ ಮೇಲೆ ಒತ್ತಡ ಹೇರುವುದು ಸರಿಯಲ್ಲ. ನೀವು ಓದಿರುವುದು, ಟಿವಿಯಲ್ಲಿ ನೋಡಿರುವುದು ಎಲ್ಲವೂ ಕೇವಲ ಸೃಷ್ಟಿ, ಕಲ್ಪಿತ ಹಾಗೂ ಅವಾಸ್ತವ. ಯಾರೂ ಸೌಂದರ್ಯ, ದೇಹದ ಶಕ್ತಿಗಳಲ್ಲಿ ದೋಷರಹಿತರಾಗಿರಲು ಸಾಧ್ಯವಿಲ್ಲ.

ಹನಿಮೂನ್ ಸೋಂಕು

ಕೆಲವೊಮ್ಮೆ ಹೊಸದಾಗಿ ನಿರಂತರ ಸೆಕ್ಸ್ ಮಾಡುವುದರಿಂದ ಗಂಡು- ಹೆಣ್ಣು ಇಬ್ಬರಲ್ಲೂ ಮೂತ್ರನಾಳಗಳಲ್ಲಿ ಸೋಂಕು ಉಂಟಾಗಬಹುದು. ಇದನ್ನು ಹನಿಮೂನ್ ಸಿಸ್ಟಿಸಿಸ್ ಅಥವಾ ಹನಿಮೂನು ಕಾಯಿಲೆ ಎನ್ನುತ್ತಾರೆ. ಹೆಚ್ಚು ನೀರು ಕುಡಿಯುವುದು, ಕಾಂಡೋಮ್ ಬಳಕೆ, ತಂಪು ಆಹಾರ ಸೇವನೆ ಇದಕ್ಕೆ ಪರಿಹಾರ.

Latest Videos
Follow Us:
Download App:
  • android
  • ios