ಮನೆಯಲ್ಲಿದ್ದ 1 ಕೋಟಿ ಕದ್ದು ಲವರ್ ಜೊತೆ ಪರಾರಿಯಾದ ಮಗಳು : ತಿಂಗಳ ಬಳಿಕ ದೂರು ನೀಡಿದ ಬೆಂಗಳೂರಿನ ಉದ್ಯಮಿ

ತಿಂಗಳ ಹಿಂದೆ  ತನ್ನ ಪ್ರೇಮಿಯೊಂದಿಗೆ ಮನೆಯಿಂದ ಪರಾರಿಯಾಗುವ ಮೊದಲು ತಮ್ಮ 19 ವರ್ಷದ ಮಗಳು ಮನೆಯಲ್ಲಿದ್ದ ಒಂದು ಕೋಟಿ ನಗದನ್ನು ಕೂಡ ಕದ್ದು ಹೊತ್ತೊಯ್ದಿದ್ದಾಳೆ ಎಂದು ಬೆಂಗಳೂರಿನ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. 

The daughter of a Bengaluru businessman eloped with one crore later found married with lover akb

ಬೆಂಗಳೂರು: ತಿಂಗಳ ಹಿಂದೆ  ತನ್ನ ಪ್ರೇಮಿಯೊಂದಿಗೆ ಮನೆಯಿಂದ ಪರಾರಿಯಾಗುವ ಮೊದಲು ತಮ್ಮ 19 ವರ್ಷದ ಮಗಳು ಮನೆಯಲ್ಲಿದ್ದ ಒಂದು ಕೋಟಿ ನಗದನ್ನು ಕೂಡ ಕದ್ದು ಹೊತ್ತೊಯ್ದಿದ್ದಾಳೆ ಎಂದು ಬೆಂಗಳೂರಿನ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.  ಬೆಂಗಳೂರಿನ ಕಾಟನ್ ಪೇಟೆ ನಿವಾಸಿಯೂ ಆಗಿರುವ ಟೆಕ್ಸ್‌ಟೈಲ್ಸ್‌ ಉದ್ಯಮಿ ಗಂಗಾಧರ್‌ ಈ ಆರೋಪ ಮಾಡಿದ್ದಾರೆ. 

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಅವರು ತಮ್ಮ ಪುತ್ರಿ ಕಲಾ( ಹೆಸರು ಬದಲಾಯಿಸಲಾಗಿದೆ)  ಪಿಯು ವಿದ್ಯಾರ್ಥಿನಿಯಾಗಿದ್ದು,  29 ವರ್ಷದ ನರೇಶ್( ಹೆಸರು ಬದಲಾಯಿಸಲಾಗಿದೆ) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು.  ಏಪ್ರಿಲ್ 21 ರಂದು ರಾತ್ರಿ ಮಲಗುವುದಕ್ಕಕೆ ತನ್ನ ಕೋಣೆಗೆ ಹೋಗಿದ್ದ ಆಕೆ ಮಾರನೇ ದಿನ ಬೆಳಗ್ಗಿನ ವೇಳೆ ನಾಪತ್ತೆಯಾಗಿದ್ದಳು. ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ಗಂಗಾಧರ್ ಹಾಗೂ ಕುಟುಂಬ ಮಗಳಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿ ಅಂದೇ ಪೊಲೀಸರಿಗೆ ಮಗಳು ನಾಪತ್ತೆಯಾದ ಬಗ್ಗೆ ಕಾಟನ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೇ ಆಕೆ ನರೇಶ್ ಜೊತೆ ಓಡಿ ಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. 

ಈ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಮನೆ ಮಂದಿಯ ಬಳಿ ಆಕೆ ಏನನ್ನಾದರೂ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆಯೇ ಎಂದು ವಿಚಾರಿಸಿದ್ದರು. ಈ ವೇಳೆ ಗಂಗಾಧರ್ ಪತ್ನಿ ಮನೆಯ ಅಮೂಲ್ಯವಸ್ತುಗಳಿರುವ ಜಾಗವನ್ನು ತಪಾಸಣೆ ಮಾಡಿ, ಆಭರಣಗಳೆಲ್ಲವೂ ಇದೆ ಯಾವುದನ್ನೂ ಆಕೆ ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದ್ದರು. 

ಪತ್ನಿ ಮಾಡಿದ ತಪ್ಪಿಗೆ ಸಂಧಾನಕ್ಕೆಂದು ಕರೆದು ಉದ್ಯಮಿಯಿಂದ ಕಪಾಳ ಮೋಕ್ಷ, ನೋವು ತಾಳಲಾರದೆ ಕ್ಯಾಬ್‌ ಡ್ರೈವರ್ ಬಲಿ!

ಇದಾದ ನಂತರ ಕಲಾ ಹಾಗೂ ನರೇಶ್ ಓಡಿ ಹೋಗಿ ಮದ್ವೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದು, ಅದನ್ನು ಆಕೆಯ ಪೋಷಕರಿಗೂ ತಿಳಿಸಿದ್ದರು. ಅಲ್ಲದೇ ತಮ್ಮ ಪುತ್ರಿ ಕಾನೂನಿನ ಪ್ರಕಾರ ಪ್ರಬುದ್ಧಳಾಗಿದ್ದು,  ನರೇಶ್‌ನನ್ನು ಬಿಟ್ಟು ಬರುವಂತೆ ಆಕೆಗೆ ಒತ್ತಾಯ ಮಾಡಲಾಗದು ಎಂದು ಪೋಷಕರಿಗೆ ತಿಳಿ ಹೇಳಿದ್ದರು. ಇದಾದ ನಂತರ ಗಂಗಾಧರ್ ಅವರು ತಾವು ಈ ಜೋಡಿಗೆ ಯಾವುದೇ ಹಾನಿ ಮಾಡುವುದಿಲ್ಲ, ಆದರೆ ಆಕೆಗೆ ನಾವು ಯಾವುದೇ ಆಸ್ತಿಯನ್ನು ನೀಡುವುದಿಲ್ಲ, ಅಲ್ಲದೇ ಆಕೆ ಅಗತ್ಯವಿರುವ ದಾಖಲೆಗಳಿಗೆ ಸಹಿ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ಆಕೆಯೂ ಒಪ್ಪಿಕೊಂಡಿದ್ದು, ಬಳಿಕ ಕುಟುಂಬದಿಂದ ಯುವತಿ ದೂರಾಗಿದ್ದಳು.  

ಇದಾದ ನಂತರ ಏಪ್ರಿಲ್ 23 ರಂದು ಯುವತಿಯ ತಾಯಿಗೆ ಹುಷಾರು ತಪ್ಪಿದೆ. ಹೀಗಾಗಿ ಕುಟುಂಬವೂ ಅವರ ಮೂಲ ಊರಿಗೆ ಸ್ವಲ್ಪ ದಿನಗಳ ಮಟ್ಟಿಗೆ ಹೋಗುವುದಕ್ಕೆ ನಿರ್ಧರಿಸಿದೆ. ಇದಕ್ಕಾಗಿ ಬಟ್ಟೆ ಪ್ಯಾಕ್ ಮಾಡುವ ವೇಳೆ ಅಲ್ಮೇರಾದಲ್ಲಿದ್ದ ಒಂದು ಕೋಟಿ ರೂ ನಗದು ನಾಪತ್ತೆಯಾಗಿರುವುದು ಗಂಗಾಧರ್ ಪತ್ನಿ ಗಮನಕ್ಕೆ ಬಂದಿದೆ. ಹೀಗಾಗಿ ಅಂದು ಊರಿಗೆ ಹೋದ ಕುಟುಂಬ ಮರಳಿ ಬಂದು ಬಳಿಕ ಪೊಲೀಸರನ್ನು ಸಂಪರ್ಕಿಸಿದೆ. ಅಷ್ಟೊಂದು ದೊಡ್ಡ ಮೊತ್ತವನ್ನು ಮನೆಯಲ್ಲಿ ಏಕೆ ಇರಿಸಿದ್ದೀರಿ ಎಂದು ಕೇಳಿದಾಗ ಅದು ಕಾನೂನಾತ್ಮಕವಾಗಿಯೇ ಗಳಿಸಿದ ಹಣವಾಗಿದ್ದು,  ಜಾಗವೊಂದರ ಖರೀದಿಗಾಗಿ ಮನೆಯಲ್ಲಿ ತಂದು ಇಡಲಾಗಿತ್ತು ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ

ಬರೋಬ್ಬರಿ 17,000 ಕೋಟಿ ಆಸ್ತಿಯಿದ್ರೂ ಅಜ್ಜನ ಹಳೇ ಮನೆಯಲ್ಲಿ ವಾಸಿಸ್ತಾರೆ ಈ ಭಾರತೀಯ ಉದ್ಯಮಿ!

Latest Videos
Follow Us:
Download App:
  • android
  • ios