Asianet Suvarna News Asianet Suvarna News

ನಿಮ್ಮ ಲೈಫ್‌ಸ್ಟೋರಿ ಹೇಳಿ, ಹತ್ತು ರೂಪಾಯಿ ಕೊಡ್ತೀನಿ!

ಇದು ಒಬ್ಬ ವ್ಯಕ್ತಿಯ ಬದುಕಿನ ನಿಜ ಕಥೆ. ವೈಫಲ್ಯದಿಂದ ಕಂಗೆಟ್ಟು ಆತ್ಮಹತ್ಯೆಗೆ (suicide) ಮುಂದಾದವನು ಇಂದು ಸುಮ್ಮನೇ ನಮ್ಮ ನಿಮ್ಮ ಕಥೆಗಳನ್ನು ಕೇಳಿಸಿಕೊಳ್ಳುವವನಾಗಿ, ಆ ಮೂಲಕವೇ ಮನಸ್ಸಮಾಧಾನ ಮಾಡುವವನಾಗಿ ಬದಲಾಗಿದ್ದಾನೆ.

 

tell me your story i will give you 10 rupees
Author
First Published Nov 24, 2022, 2:29 PM IST

ಹ್ಯೂಮನ್ಸ್‌ ಆಫ್‌ ಬಾಂಬೇ (humans of bombay) ಫೇಸ್‌ಬುಕ್‌ (facebook) ಪುಟದಲ್ಲಿ ಈ ಯುವಕ ಹೇಳಿಕೊಂಡ ಅವನ ಬದುಕಿನ ಕಥೆ ಇಲ್ಲಿದೆ: ʼನನ್ನ ಲವ್‌ ಬ್ರೇಕಪ್‌ ಆದ ನಂತರ ನಾನು ಖಿನ್ನತೆಗೆ (depression) ಜಾರಿದೆ! ಒಬ್ಬ ವ್ಯಕ್ತಿಯನ್ನು ಅತಿಯಾಗಿ ಪ್ರೀತಿಸಿದ ಪರಿಣಾಮ ನಾನು ನನ್ನನ್ನು ಸಂಪೂರ್ಣವಾಗಿ ಕಳೆದುಕೊಂಡೆ. ನನ್ನ ಪರೀಕ್ಷೆಗಳಲ್ಲಿ ಸಹ ವಿಫಲನಾದೆ. ಆಗ ನನಗೆ ನನ್ನ ಬಗ್ಗೆಯೇ ಜಿಗುಪ್ಸೆ ಮೂಡಿತು. ʼನಾನು ಸತ್ತರೆ ಯಾರಿಗೇನು ನಷ್ಟ?ʼ ಹಾಗೆಂದುಕೊಳ್ಳುತ್ತಾ ಬಾಲ್ಕನಿಯಿಂದ ಜಿಗಿಯಲು ಮುಂದಾದೆ.

ಅಷ್ಟರಲ್ಲಿ ನನ್ನ ಹೆತ್ತವರ ಮುಖಗಳು ನನ್ನ ಕಣ್ಣುಗಳ ಮುಂದೆ ಮಿನುಗಿದವು. ಅವರಿಗೆ ಉಂಟಾಗುವ ನೋವನ್ನು ಊಹಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನನ್ನ ಆತ್ಮಸಾಕ್ಷಿ ಚುಚ್ಚಿತು- ನಿನ್ನ ಜೀವನವನ್ನು ಎದುರಿಸದೇ ಪಲಾಯನ ಮಾಡಲು ಹೊರಟಿದ್ದಿʼ ಎಂದಿತು. ಆತ್ಮಹತ್ಯೆ ಯೋಚನೆ ಬಿಟ್ಟುಕೊಟ್ಟೆ.

ಇನ್ನು ಮುಂದೆ ನನ್ನ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಬಾರದು ಅನಿಸಿತು. ನನ್ನ ಸ್ಥಿತಿಯ ಬಗ್ಗೆ ನನ್ನ ಶಿಕ್ಷಕರೊಂದಿಗೆ ಮಾತನಾಡಿದೆ. ಅವರು ತುಂಬಾ ಸಹಾಯ ಮಾಡಿದರು, ಮನೋವೈದ್ಯರನ್ನು (Psychologist) ಸಂಪರ್ಕಿಸಿದರು. ಯಾವುದೇ ನಿರ್ಣಯ ತೆಗೆದುಕೊಳ್ಳದೆಯೂ ಇರಬಹುದು ಎಂಬುದು ಕೂಡ ಆಯ್ಕೆ ಎಂದು ತಿಳಿಯಿತು. ನನ್ನನ್ನು ತೆರೆದುಕೊಳ್ಳಬಹುದು ಎಂಬುದೂ ಗೊತ್ತಾಯಿತು.

ನನ್ನ ಸಮಸ್ಯೆಗಳ ಬಗ್ಗೆ ಮಾತನಾಡಿದೆ, ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡಿದೆ. ಇದು ನನ್ನಲ್ಲಿ ನನಗೆ ನಂಬಿಕೆ ಮೂಡಿಸಿತು. ನಿಧಾನವಾಗಿ ನಾನು ನನ್ನನ್ನೇ ಮರಳಿ ಕಟ್ಟಿಕೊಂಡೆ. ಪರೀಕ್ಷೆಗಳನ್ನು ಬರೆದು ಪಾಸ್‌ ಆದೆ. ನಾನು ನನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಆರೋಗ್ಯಕರ ಆಹಾರ (Healthy Food) ಸೇವಿಸುತ್ತಿದ್ದೆ, ವಿಶ್ರಾಂತಿ (Rest) ಪಡೆದೆ. ಹೀಗೆ ಒಂದು ವರ್ಷ ಕಳೆಯಿತು.

ನಂತರ ಒಂದು ದಿನ ಅಕಸ್ಮಾತ್ತಾಗಿ, ಒಬ್ಬ ವ್ಯಕ್ತಿ ಒಂದು ಫಲಕವನ್ನು ಹಿಡಿದಿರುವುದನ್ನು ನೋಡಿದೆ, ʻನಿಮ್ಮ ಕಥೆಯನ್ನು ಹೇಳಿ, ನಾನು ನಿಮಗೆ ಒಂದು ಡಾಲರ್ ನೀಡುತ್ತೇನೆ’ ಎಂದಿತ್ತು ಅದರಲ್ಲಿ. ಅವರ ಬಳಿ ಯಾರಾದರೂ ಹೋಗಿ ತಮ್ಮ ಅಭದ್ರತೆ (insecurity), ಚಿಂತೆ, ಕಥೆಗಳನ್ನು ಮಾತನಾಡಬಹುದಿತ್ತು.

 

ಇದು ಚಿಂತೆಗಳಿಂದ ನರಳುತ್ತಿರುವ ಜನರ ಬಗ್ಗೆ ನಾನು ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ನಾನೂ ಹಾಗೇ ಇದ್ದೆನಲ್ಲವೇ? ಕೇಳುವ ಕಿವಿಯ ಮಹತ್ವ ನನಗೆ ತಿಳಿದಿತ್ತು. ಹಾಗಾಗಿ, ನಾನು ಕೂಡ ಇದೇ ರೀತಿಯ ಕೆಲಸಕ್ಕೆ ಮುಂದಾದೆ. ʼನಿಮ್ಮ ಕಥೆ (life story) ನನಗೆ ಹೇಳಿ, ಹತ್ತು ರೂಪಾಯಿ ಕೊಡುತ್ತೇನೆʼ ಎಂದು ಫಲಕ ಹಾಕಿಕೊಂಡು ನಿಂತೆ. ಜನ ತಮ್ಮ ಬದುಕಿನ ಹೋರಾಟಗಳ ಬಗ್ಗೆ ನನ್ನ ಮುಂದೆ ತೆರೆದುಕೊಳ್ಳುತ್ತಾರೆ ಎಂದು ಆಶಿಸುತ್ತಾ ಬೀದಿಗಿಳಿದೆ.

ಮೊದಲಿಗೆ ನನಗೆ ವಿಚಿತ್ರವಾದ ನೋಟಗಳು ಎದುರಾದವು. ಆದರೂ ಜನರು ಮುಂದೆ ಬಂದು ಅವರ ಕಥೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಾನು ಪ್ರೋತ್ಸಾಹಿಸುತ್ತೇನೆ. ಮತ್ತು ಅದು ವರ್ಕೌಟ್‌ ಆಗಿದೆ. ಜನ ನಿಜವಾಗಿಯೂ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಜನ ತಮ್ಮ ತೊಂದರೆಗಳ ಬಗ್ಗೆ ಮಾತನಾಡುವಾಗ ಅವರ ಧ್ವನಿಯಲ್ಲಿರುವ ಸಮಾಧಾನವನ್ನು ನಾನು ಅನುಭವಿಸುತ್ತಿದ್ದೆ. ಒಮ್ಮೆ ಹುಡುಗಿಯೊಬ್ಬಳು ನನಗೆ ಹೇಳಿದಳು, ʻನಾನು ಸಂಗಾತಿಯ ಸಂಬಂಧದಲ್ಲಿ ದೈಹಿಕ ಹಿಂಸೆ ಅನುಭವಿಸಿದ್ದೆ. ಆದರೆ ಅವನೊಂದಿಗೇ ಇರಬೇಕೆಂದು ಮನಸ್ಸನ್ನು ಬಲವಂತಪಡಿಸಿಕೊಂಡಿದ್ದೆ. ಆ ರೀತಿ ಆಗ ಭಾವಿಸಿದ್ದಕ್ಕಾಗಿ ನಾನು ನನ್ನನ್ನೇ ದ್ವೇಷಿಸುತ್ತೇನೆ!ʼ ಮಾತಿನ ಕೊನೆಯಲ್ಲಿ ಅವಳು ಅತ್ತಳು ಮತ್ತು ನಾವು ತಬ್ಬಿಕೊಂಡೆವು.

ರೋಚಕ ಬದುಕು, ದಾಂಪತ್ಯ ಸುಖ ಅಂದ್ರೇನು ? ಕೃಷ್ಣೇಗೌಡರು ಏನ್ ಹೇಳ್ತಾರೆ..

ಮತ್ತೊಮ್ಮೆ ಮಹಿಳೆಯೊಬ್ಬರು ಮಾತನಾಡಿದರು. ಅವರು ಆತ್ಮಹತ್ಯೆಯ ಅಂಚಿನಲ್ಲಿದ್ದರು. ʼನನ್ನ ಭಾವನೆ ಯಾರಿಗೂ ಅರ್ಥವಾಗುತ್ತಿಲ್ಲʼ ಎಂದರು. ನಾನು ಅವರನ್ನು ಶಾಂತಗೊಳಿಸಿದೆ. ಆಕೆ ಸಮಾಧಾನಗೊಂಡ ನಂತರ ಮನೋವೈದ್ಯರನ್ನು ಆಕೆಗೆ ಸಂಪರ್ಕಿಸಿಕೊಟ್ಟೆ. ಇಂದು ಅವರು ತುಂಬಾ ಉತ್ತಮ ಜೀವನ ನಡೆಸುತ್ತಿದ್ದಾರೆ. ನಾವು ಸಂಪರ್ಕದಲ್ಲಿದ್ದೇವೆ. ʻಯಾರೂ ನನ್ನ ಮಾತನ್ನು ಕೇಳಿಸಿಕೊಂಡಿರದ ಸಮಯದಲ್ಲಿ ನೀವು ಹಾಗೆ ಮಾಡಿದ್ದಿರಿ!ʼ ಎಂದು ಆಕೆ ಹೇಳುತ್ತಾರೆ. ನಾನು ಅವರ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ.

ನಾನು ಅಪರಿಚಿತರೊಂದಿಗೆ ನಡೆಸಿದ ಸುದೀರ್ಘ ಸಂಭಾಷಣೆಯ ಅವಧಿಯೆಂದರೆ ಒಂದೂವರೆ ಗಂಟೆ. ಆತ ಸುದೀರ್ಘ ಹೋರಾಟದ ಕತೆ ಹೇಳಿದ. ʼನಾನು ನಿಮ್ಮೊಂದಿಗೆ ಇಂದು ಮಾತನಾಡದಿದ್ದರೆ, ನಾನು ಏನು ಮಾಡಿಕೊಳ್ಳಲಿದ್ದೆನೋ ನನಗೇ ಗೊತ್ತಿಲ್ಲʼ ಎಂದ.

ಪ್ರತಿದಿನ ನಾನು ಸುಮಾರು 20-25 ಜನರೊಂದಿಗೆ ಮಾತನಾಡುತ್ತೇನೆ. ನಗರದ ವಿವಿಧ ಜಂಕ್ಷನ್‌ಗಳಲ್ಲಿ ಹಾಗೆ ಜನರ ಮಾತು ಕೇಳಿಸಿಕೊಳ್ಳುವ ಕೆಲವು ಸ್ವಯಂಸೇವಕರ ತಂಡವನ್ನೂ ಹೊಂದಿದ್ದೇನೆ. ಹಲವಾರು ಜನರಿಗೆ ಸಲಹೆ ಮತ್ತು ಸಹಾಯವನ್ನು ಪಡೆಯಲು ಸಹಾಯ ಮಾಡಿದ್ದೇನೆ. ನಾವೆಲ್ಲರೂ ಬದುಕಿನಲ್ಲಿ ಬಲಶಾಲಿಯಾಗಿರಲು ಪ್ರಯತ್ನಿಸುತ್ತೇವೆ. ಆದರೂ ಕೆಲವೊಮ್ಮೆ, ನಮಗೆಲ್ಲರಿಗೂ ಅಳಲು ಭುಜ ಮತ್ತು ಪ್ರೋತ್ಸಾಹವನ್ನು ಅನುಭವಿಸಲು ನಗು ಬೇಕು. ಜನರು ತಮ್ಮನ್ನು ತಾವು ವ್ಯಕ್ತಪಡಿಸಲು ಕಿವಿ ಬೇಕು. ಅವರ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವವರು ಬೇಕು.

Love Story: ಪ್ರೇಯಸಿ ಅನಾರೋಗ್ಯದಿಂದ ಗಾಲಿಕುರ್ಚಿಯಲ್ಲಿ, ಕೈ ಬಿಡದೆ ಕೈ ಹಿಡಿದ ಪ್ರೇಮಿ
 

Follow Us:
Download App:
  • android
  • ios