Asianet Suvarna News Asianet Suvarna News

ಬ್ರೇಕಪ್‌ ಆಗಿರೋ ಮಕ್ಕಳ ಜೊತೆ ಪೋಷಕರು ಹೀಗಿದ್ರೆ ಎಲ್ಲಾ ಸರಿಯಾಗುತ್ತೆ

ಪ್ರೀತಿ ಅನ್ನೋದು ಅತ್ಯಂತ ಸುಂದರ ಭಾವನೆ. ಹಾಗೆಯೇ ಬ್ರೇಕಪ್ ಅನ್ನೋದು ಅತ್ಯಂತ ಕೆಟ್ಟ ಭಾವನೆ. ಹದಿಹರೆಯದವರು ಹೆಚ್ಚಾಗಿ ಈ ಭಾವೆನಗಳಿಂದ ಒದ್ದಾಡುತ್ತಾರೆ. ಹೀಗಿದ್ದಾಗ ಪೋಷಕರು ಅವರಿಗೆ ಯಾವ ರೀತಿ ನೆರವಾಗಬಹುದು ಎಂಬುದರ ಕುರಿತಾದ ವಿವರ ಇಲ್ಲಿದೆ.

Teenagers Going Through Their First Heartbreak, Here Are Parental Tips Vin
Author
First Published Sep 18, 2022, 12:20 PM IST

ದೀರ್ಘಕಾಲದ ಯಾವುದೇ ಸಂಬಂಧದಿಂದ ಹೊರಬರೋದು ಎಲ್ಲರಿಗೂ ತುಂಬಾ ಕಷ್ಟ. ಆದರೆ ಅನೇಕ ಬಾರಿ ಪರಿಸ್ಥಿತಿ ಹೇಗಿರುತ್ತದೆ ಎಂದರೆ, ಸಂಬಂಧವನ್ನು ಕಾಪಾಡಿಕೊಳ್ಳೋದು ತುಂಬಾ ಕಷ್ಟ. ಅನಿವಾರ್ಯವಾಗಿ ಅದರಿಂದ ಹೊರಬರಲೇಬೇಕಾಗುತ್ತದೆ. ಮನೆಯಲ್ಲಿ ಹದಿಹರೆಯದ ಮಕ್ಕಳಿದ್ದರೆ, ಪ್ರೀತಿಯಲ್ಲಿ ಬ್ರೇಕಪ್ ಆಗಿ ನೋವಲ್ಲಿದ್ದಾಗ  ಪೋಷಕರಾಗಿ ಅವರ ದುಃಖವನ್ನು ನೋಡುವುದು ನಿಮಗೆ ಕಷ್ಟವಾಗಬಹುದು. ಕೆಲವು ಹದಿಹರೆಯದವರು ತಮ್ಮ ಕೋಣೆಯಲ್ಲಿ ಜೋರಾಗಿ ಮ್ಯೂಸಿಕ್ ಹಾಕಿ ಕುಳಿತುಕೊಳ್ಳುತ್ತಾರೆ. ತಮ್ಮ ಆಲೋಚನೆಗಳಲ್ಲಿ ಮುಳುಗುತ್ತಾರೆ ಮತ್ತು ಯಾರೊಂದಿಗೂ ಹಂಚಿಕೊಳ್ಳದೆ ತಮ್ಮ ಹೃದಯ ನೋವನ್ನು ಅನುಭವಿಸುತ್ತಾರೆ. ಇನ್ನು ಕೆಲವರು ತಿನ್ನುವುದನ್ನು ಬಿಟ್ಟುಬಿಡುತ್ತಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಚಿಹ್ನೆಗಳು ಖಿನ್ನತೆಗೆ ಕಾರಣವಾಗಬಹುದು.

ಪೋಷಕರಾಗಿ (Parents) ನೀವು ಮಧ್ಯಪ್ರವೇಶಿಸಿ ಮಕ್ಕಳನ್ನು (Children) ಸಮಾಧಾನಪಡಿಸಲು ಉತ್ಸುಕರಾಗಿರುತ್ತೀರಿ ಮತ್ತು ಅವರಿಗೆ ಉತ್ತಮ ಭಾವನೆ (Feelings) ಮೂಡಿಸುತ್ತೀರಿ, ಆದರೆ ನೀವು ಅವರ ಗಡಿಯನ್ನು ಗೌರವಿಸಬೇಕು. ಅವರ ಮಿತಿಗಳನ್ನು ದಾಟದೆ ಅವರಿಗೆ ಸಹಾಯ ಮಾಡಲು ಮತ್ತು ಅವರಿಗೆ ಉತ್ತಮವಾಗಲು ಸಹಾಯ ಮಾಡಲು ಇಲ್ಲಿ ಕೆಲವು ಮಾರ್ಗಗಳಿವೆ.

ಹಳೆಯ ಬಾಯ್‌ಫ್ರೆಂಡ್ ಗಿಫ್ಟ್ ಕೊಟ್ಟ ಕಾರಲ್ಲೇ ಹೊಸ ಪ್ರಿಯಕರನ ಜೊತೆ ಯುವತಿಯ ಸುತ್ತಾಟ !

ಪ್ರೀತಿ (Love) ಮಾಡಿದ್ದಕ್ಕಾಗಿ ಮಕ್ಕಳನ್ನು ಬೈಯಬೇಡಿ: ಹದಿಹರೆಯದಲ್ಲಿ ಪ್ರೀತಿಯ ಭಾವನೆ ಮೂಡುವುದು ಸಹಜ. ಅದಕ್ಕಾಗಿ ಪೋಷಕರು ಅವರನ್ನು ಬೈಯಲು ಹೋಗಬಾರು.  ಹೆಚ್ಚಿನ ಪೋಷಕರು ಹದಿಹರೆಯದವರು (Teenagers) ಪ್ರೀತಿಯಲ್ಲಿ ಬಿದ್ದಿರುವುದು ಸಮಸ್ಯೆಯೆಂದುಕೊಳ್ಳುತ್ತಾರೆ. ಆದರೆ ಅದು ಸಹಜ ಪ್ರಕ್ರಿಯೆಯಾಗಿದೆ. ಪ್ರೀತಿಯಿಂದ ಮೋಸ ಹೋದಾಗ ಅವರಿಗೆ ತಪ್ಪಿನ ಅರಿವಾಗುತ್ತದೆ. ಹೀಗಾಗಿ ಅವರನ್ನು ನಿಂದಿಸುವುದನ್ನು ಬಿಟ್ಟುಬಿಡಿ. ಬೈಗುಳ ನಿಮ್ಮ ಬಗ್ಗೆ ಅವರಲ್ಲಿ ತಪ್ಪು ಭಾವನೆಯನ್ನು ಹುಟ್ಟು ಹಾಕುತ್ತದೆ. ನಂತರದ ದಿನಗಳಲ್ಲಿ ಅವರು ಯಾವುದೇ ವಿಚಾರವನ್ನು ನಿಮ್ಮ ಬಳಿ ಹೇಳಲು ಹಿಂಜರಿಯಬಹುದು. ಅವರು ನಿಮ್ಮೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುವುದು  ಒಳ್ಳೆಯ ಸಂಕೇತವಲ್ಲ.

ಖಾಸಗೀತನವನ್ನು ಗೌರವಿಸಿ: ಅವರು ನಿಮ್ಮ ಮಕ್ಕಳೇ ಆಗಿದ್ದರೂ ಅವರಿಗೆ ಪ್ರೈವೆಸಿ ನೀಡುವುದು ಮುಖ್ಯ. ಎಲ್ಲಾ ವಿಚಾರಲ್ಲಿ ಮಧ್ಯಪ್ರವೇಶಿಸದಿರುವುದು ಯಾವಾಗಲೂ ಅತ್ಯಗತ್ಯ, ಆದ್ದರಿಂದ ಅವರ ವೈಯಕ್ತಿಕ ಜಾಗವನ್ನು ಗೌರವಿಸುವುದು (Respect) ಯಾವಾಗಲೂ ಒಳ್ಳೆಯದು. ಅವರ ಫೋನ್‌ಗಳು ಮತ್ತು ವೈಯಕ್ತಿಕ ಜರ್ನಲ್‌ಗಳನ್ನು ಪರಿಶೀಲಿಸುವ ಮೂಲಕ ನೀವು ಗುಟ್ಟಾಗಿ ವರ್ತಿಸುತ್ತಿಲ್ಲ ಎಂದು ನೀವು ಅವರಿಗೆ ಭರವಸೆ ನೀಡಿದರೆ ಅದು ಸಹಾಯ ಮಾಡುತ್ತದೆ. ಇದು ನಿಮ್ಮ ಮೇಲಿನ ಅವರ ನಂಬಿಕೆಯನ್ನು ಹೆಚ್ಚಿಸುತ್ತದೆ.

ಬಾಯ್‌ಫ್ರೆಂಡ್ ಜೊತೆ ಹೀಗೆಲ್ಲಾ ಮಾಡಿದ್ರೆ ಬ್ರೇಕಪ್ ಆಗೋದು ಖಂಡಿತ !

ಮಕ್ಕಳೊಂದಿಗೆ ಸ್ನೇಹದಿಂದಿರಿ: ಹದಿಹರೆಯದವರೊಂದಿಗೆ ನೀವು ಸ್ನೇಹ (Friendship)ದಿಂದಿರುವಾಗ, ಅವರು ನಿಮ್ಮೊಂದಿಗೆ ಹೆಚ್ಚಿನ ವಿಷಯಗಳನ್ನು ಹಂಚಿಕೊಳ್ಳಲು ಒಲವು ತೋರುತ್ತಾರೆ ಮತ್ತು ಅವರು ವೈಯಕ್ತಿಕವಾಗಿ ಎದುರಿಸುತ್ತಿರುವ ವಿಷಯಗಳ ಬಗ್ಗೆ ಹೆಚ್ಚು ಮುಕ್ತವಾಗಿರುತ್ತಾರೆ. ಇದು ಅವರೊಂದಿಗೆ ನೀವು ಹೊಂದಿರುವ ಸೌಕರ್ಯದ ಮಟ್ಟವನ್ನು ಹೆಚ್ಚಿಸುತ್ತದೆ. ಹದಿಹರೆಯದಲ್ಲಿ ನೀವು ಅನುಭವಿಸಿದ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಅವರೊಂದಿಗಿನ ನಿಮ್ಮ ಮೊದಲ ಮೋಹದ ಬಗ್ಗೆ ಮಾತನಾಡುವ ಮೂಲಕ ನೀವು ಅದನ್ನು ಪ್ರಾರಂಭಿಸಲು ಮೊದಲಿಗರಾಗಬಹುದು. ಸ್ನೇಹಪರವಾಗಿರುವುದು ನಿಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ (Relationship)ವನ್ನು ಸೃಷ್ಟಿಸುತ್ತದೆ.

Teenagers Going Through Their First Heartbreak, Here Are Parental Tips Vin

Follow Us:
Download App:
  • android
  • ios