Teddy Day: ಉಡುಗೊರೆಯಾಗಿ ಸಿಕ್ಕ ಟೆಡ್ಡಿಯಲ್ಲಡಗಿದೆ ಸಂಗಾತಿ ಪ್ರೀತಿ
ಫೆಬ್ರವರಿ 10ರಂದು ಟೆಡ್ಡಿ ಆಚರಣೆ ಮಾಡಲಾಗ್ತಿದೆ. ಮುದ್ದು ಮುದ್ದಾಗಿರುವ ಟೆಡ್ಡಿ ನೋಡಲು ಬಲು ಸುಂದರ. ಎಲ್ಲರನ್ನೂ ಆಕರ್ಷಿಸುವ ಈ ಟೆಡ್ಡಿ, ಪ್ರೀತಿಯನ್ನು ವ್ಯಕ್ತಪಡಿಸಲು ಒಳ್ಳೆಯ ಮಾರ್ಗವಾಗಿದೆ. ಆಪ್ತರಿಗೆ ಟೆಡ್ಡಿ ನೀಡುವ ಮೊದಲು ಅದರ ಅರ್ಥ ತಿಳಿದುಕೊಳ್ಳಿ.
ಫೆಬ್ರವರಿ 10ರಂದು ಟೆಡ್ಡಿ ಡೇ ಆಚರಣೆ ಮಾಡಲಾಗುತ್ತದೆ. ಸಂಗಾತಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದೊಳ್ಳೆ ಅವಕಾಶವಿದು. ಪ್ರೀತಿಯನ್ನು ವ್ಯಕ್ತಪಡಿಸಲು ಇದು ಉತ್ತಮ ವಿಧಾನವೆಂದು ನಂಬಲಾಗಿದೆ. ಟೆಡ್ಡಿ ಯಾರಿಗೆ ಇಷ್ಟವಾಗಲ್ಲ ಹೇಳಿ. ವಿಶೇಷವಾಗಿ ಹುಡುಗಿಯರನ್ನು ಆಕರ್ಷಿಸುವ ವಸ್ತುಗಳಲ್ಲಿ ಟೆಡ್ಡಿ ಕೂಡ ಒಂದು. ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಣ್ಣದ, ವೆರೈಟಿ ಡಿಸೈನ್ ಟೆಡ್ಡಿ ಲಭ್ಯವಿದೆ. ನಾವಿಂದು ಟೆಡ್ಡಿ ಡೇ ಇತಿಹಾಸ ಹಾಗೂ ಯಾವ ಟೆಡ್ಡಿ ಏನನ್ನು ಸೂಚಿಸುತ್ತೆ ಎಂಬುದನ್ನು ನಿಮಗೆ ಹೇಳ್ತೆವೆ.
ಟೆಡ್ಡಿ (Teddy) ಬೇರ್ ಹಿಂದಿದೆ ಈ ಇತಿಹಾಸ (History) : ಟೆಡ್ಡಿ ಡೇ ಅಮೆರಿಕಾ ರಾಷ್ಟ್ರಪತಿ ಜೊತೆ ಸಂಬಂಧ ಹೊಂದಿದೆ. ಅಮೆರಿಕದ 26 ನೇ ಅಧ್ಯಕ್ಷರಾದ ಥಿಯೋಡರ್ ಟೆಡ್ಡಿ ರೂಸ್ವೆಲ್ಟ್ ಮಿಸ್ಸಿಸ್ಸಿಪ್ಪಿ ರಾಜ್ಯದ ಗವರ್ನರ್ ಆಂಡ್ರ್ಯೂ ಹೆಚ್. ಲಾಂಗಿನೊ ಆಹ್ವಾನದ ಮೇರೆಗೆ ಕರಡಿಯನ್ನು ಬೇಟೆಯಾಡಲು ಹೋಗಿದ್ದರು. ಆದ್ರೆ ಅವರಿಗೆ ಕರಡಿ ಬೇಟೆಯಾಡಲು ಸಾಧ್ಯವಾಗ್ಲಿಲ್ಲ. ಇದನ್ನು ನೋಡಿದ ರೂಸ್ವೆಲ್ಟ್ ಅವರ ಸಹಾಯಕ ಹೋಲ್ಟ್ ಕೊಲಿಯರ್, ಕಪ್ಪು ನಕಲಿ ಕರಡಿಯನ್ನು ಮರಕ್ಕೆ ಕಟ್ಟಿ ಹಾಕಿ, ಶೂಟ್ ಮಾಡುವಂತೆ ಹೇಳಿದ. ಆದ್ರೆ ಕರಡಿಯ ಮುಗ್ದತೆ ನೋಡಿ ರೂಸ್ವೆಲ್ಟ್ ರಿಗೆ ಗುಂಡು ಹಾರಿಸಲು ಸಾಧ್ಯವಾಗ್ಲಿಲ್ಲ. ಈ ಸುದ್ದಿ ಎಲ್ಲೆಡೆ ಹರಡಿತು. ಇದನ್ನು ತಿಳಿದ ಬ್ರೂಕ್ಲಿನ್ ಎಂಬ ಅಂಗಡಿ ವ್ಯಾಪಾರಿ ಕರಡಿ ತಯಾರಿಸಿ ಅದಕ್ಕೆ ಟೆಡ್ಡಿ ಬೇರ್ ಎಂದು ಹೆಸರಿಟ್ಟರು. ಅದನ್ನು ಅಮೆರಿಕಾ (America) ಅಧ್ಯಕ್ಷರಿಕೆ ನೀಡಿದ್ರು. ನಂತ್ರ ಇದು ಹೆಚ್ಚು ಪ್ರಸಿದ್ಧಿಯಾಯಿತು.
ಯಾವ ಟೆಡ್ಡಿ ನೀಡಿದ್ರೆ ಯಾವ ಅರ್ಥ ಗೊತ್ತಾ? :
ಕೆಂಪು ಬಣ್ಣದ ಟೆಡ್ಡಿ : ನಿಮಗೆ ಈ ದಿನ ಕೆಂಪು ಬಣ್ಣದ ಟೆಡ್ಡಿ ಸಿಕ್ಕಿದ್ರೆ ಅದನ್ನು ಕೊಟ್ಟವರು ನಿಮ್ಮನ್ನು ಅಪರಾವಾಗಿ ಪ್ರೀತಿಸುತ್ತಾರೆಂದು ಅರ್ಥೈಸಿಕೊಳ್ಳಿ. ಕೆಂಪು ಪ್ರೀತಿಯ ಸಂಕೇತವಾಗಿದೆ. ಕೆಂಪು ಟೆಡ್ಡಿ ಬೇರ್ ಹಿಡಿದು ವ್ಯಕ್ತಿ ನಿಮ್ಮ ಬಳಿ ಬಂದ್ರೆ ಐ ಲವ್ ಯು ಎನ್ನುತ್ತಿದ್ದಾರೆ ಎಂದರ್ಥ.
Relationship Tips: ನೀವಿಬ್ಬರು ಜೊತೆಗಿರಲು ಸಾಧ್ಯಾನೇ ಇಲ್ಲ ಅನ್ನೋ ಸೂಚನೆಯಿದು!
ಪಿಂಕ್ ಟೆಡ್ಡಿ ಬೇರ್ : ಇನ್ನು ನಿಮಗೆ ಪಿಂಕ್ ಬಣ್ಣದ ಟೆಡ್ಡಿ ಬೇರ್ ನೀಡಿದ್ರೆ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರೆ ಎಂದರ್ಥ. ಸ್ನೇಹಿತ ನಿಮ್ಮತ್ತ ಆಕರ್ಷಿತನಾಗಿದ್ದಾನೆ, ನಿಮ್ಮ ಜೊತೆ ಸಂಬಂಧ ಬೆಳೆಸಲು ಅನುಮತಿ ಕೇಳುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ಗುಲಾಬಿ ಬಣ್ಣದ ಟೆಡ್ಡಿ : ಗುಲಾಬಿ ಬಣ್ಣದ ಟೆಡ್ಡಿ ಬೇರ್ ಅಂದ್ರೆ ಅದು ಪ್ರೀತಿಯ ಪತ್ರದ ಸೂಚನೆ. ಪ್ರೇಮಿಗೆ ನಿಮ್ಮ ಅಗತ್ಯವಿದೆ. ನಿಮ್ಮ ಕಂಪನಿಯನ್ನು ಆತ ಬಯಸುತ್ತಿದ್ದಾನೆ ಎಂಬುದನ್ನು ಅರ್ಥೈಸುತ್ತದೆ.
ಹಳದಿ ಬಣ್ಣದ ಟೆಡ್ಡಿ : ಹಳದಿ ಬಣ್ಣದ ಟೆಡ್ಡಿ ಜೊತೆ ಪ್ರೇಮ ಪತ್ರ ನೀಡಿದ್ರೆ ನಿಮ್ಮ ಸಂಗಾತಿ ನಿಮ್ಮನ್ನು ನೆನಪು ಮಾಡಿಕೊಳ್ತಿದ್ದಾರೆ ಎಂದರ್ಥ.
ಎರಡು ಪಿಂಕ್ ಟೆಡ್ಡಿ ಕೈಗಿತ್ತರೆ ಏನು ಸೂಚನೆ ಗೊತ್ತಾ? : ನಿಮ್ಮ ಸಂಗಾತಿ ನಿಮಗೆ ಎರಡು ಪಿಂಕ್ ಬಣ್ಣದ ಟೆಡ್ಡಿ ನೀಡಿದ್ರು ಅಂದ್ರೆ ಅವರು ನಿಮ್ಮ ಸಮಯ ಕೇಳ್ತಿದ್ದಾರೆ. ಸಿನಿಮಾ ಅಥವಾ ಡೇಟ್ ಗೆ ಒಪ್ಪಿಗೆ ಕೇಳ್ತಿದ್ದಾರೆ.
ಸೆಕ್ಸ್‌ಗಿಂತ ಮೊದಲು ಚ್ಯೂಯಿಂಗ್ ಗಮ್ ಅಗಿಯೋ ಅಭ್ಯಾಸ ಎಷ್ಟು ಒಳ್ಳೇದು ?
ಎರಡು ಕೆಂಪು ಬಣ್ಣದ ಟೆಡ್ಡಿ : ಸಂಗಾತಿ ಜೊತೆ ಲಾಂಗ್ ಡ್ರೈವ್ ಗೆ ಹೋಗುವ ಪ್ಲಾನ್ ಮಾಡಿದ್ದರೆ ನೀವು ಅವರಿಗೆ ಎರಡು ಕೆಂಪು ಬಣ್ಣದ ಟೆಡ್ಡಿ ನೀಡಿ.
ಮೂರು ಹಳದಿ ಬಣ್ಣದ ಟೆಡ್ಡಿ : ಯಾವುದೇ ವ್ಯಕ್ತಿ ನಿಮಗೆ ಮೂರು ಹಳದಿ ಬಣ್ಣದ ಟೆಡ್ಡಿ ನೀಡಿದ್ರೆ ಆತ ನಿಮ್ಮ ಪ್ರೀತಿಯನ್ನಲ್ಲ ಸ್ನೇಹವನ್ನು ಬಯಸುತ್ತಿದ್ದಾರೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.