Relationship Tips: ನೀವಿಬ್ಬರು ಜೊತೆಗಿರಲು ಸಾಧ್ಯಾನೇ ಇಲ್ಲ ಅನ್ನೋ ಸೂಚನೆಯಿದು!

ಸಂಬಂಧದಲ್ಲಿ ಸಮಸ್ಯೆಗಳು ತಲೆದೋರುವುದು ಸಹಜ. ಸಾಕಷ್ಟು ಬಾರಿ ಅವು ತಾತ್ಕಾಲಿಕವಾಗಿರುತ್ತವೆ. ಆದರೆ, ಸಂಗಾತಿಯ ಮನಸ್ಥಿತಿ, ವರ್ತನೆಗಳಲ್ಲೇ ಸಮಸ್ಯೆ ಇದ್ದರೆ ಅವುಗಳನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಅವು ನಿಮ್ಮ ಸಂಬಂಧಕ್ಕೆ ಕೆಂಪು ಬಾವುಟದಂತೆ ಎಚ್ಚರಿಕೆ ನೀಡುವಂಥವು. ಅಂತಹ ಕೆಂಪು ಬಾವುಟಗಳು ನಿಮ್ಮ ಸಂಬಂಧದಲ್ಲೂ ಹಾರುತ್ತಿದೆಯಾ? ಚೆಕ್‌ ಮಾಡಿಕೊಳ್ಳಿ. 
 

Is there red flag in your relationship take step now

ಸಂಬಂಧದಲ್ಲಿ ಕೆಲವೊಮ್ಮೆ ಎಲ್ಲವೂ ಸರಿಯಿಲ್ಲ ಎನ್ನುವ ಭಾವನೆ ಮೂಡುತ್ತಿರುತ್ತದೆ. ಮುನಿಸು ತಲೆದೋರುತ್ತದೆ. ಭಿನ್ನಾಭಿಪ್ರಾಯಗಳು ವಾಗ್ವಾದವಾಗಿ ಮಾರ್ಪಡಬಹುದು. ಏನೇ ಆದರೂ ಅದು ಕೆಲವೇ ಹೊತ್ತು. ಮತ್ತೆ ಅವರು ನಮ್ಮವರೆನ್ನುವ ನಂಬಿಕೆ ದೃಢವಾಗುತ್ತದೆ. ನಿಮ್ಮ ಸಂಬಂಧ ಗಟ್ಟಿಯಾಗಿದ್ದರೆ ಅವರು ನಮ್ಮಿಂದ ದೂರವಾಗುತ್ತಿದ್ದಾರೆ ಎಂದೋ ಅಥವಾ ಅವರಿಂದ ದೂರವಾಗಬೇಕು ಎಂದೋ ಅನಿಸುವುದಿಲ್ಲ. ಆದರೆ, ಎಲ್ಲ ಸಂಬಂಧಗಳೂ ಹೀಗಿರುವುದಿಲ್ಲ. ಆಗಾಗ ಕೆಂಪು ಬಾವುಟಗಳು ಹಾರುತ್ತಿರುತ್ತವೆ. ಅಂದರೆ, ಸಂಬಂಧದ ಬಗ್ಗೆ ಅನುಮಾನ ಹೊಗೆಯಾಡುತ್ತದೆ. ಅವರು ನಿಜಕ್ಕೂ ನಿಮ್ಮನ್ನು ಪ್ರೀತಿಸುತ್ತಿದ್ದಾರಾ, ಸಂಬಂಧದಲ್ಲಿ ಮುಂದುವರಿಯಲು ಇಷ್ಟಪಡುತ್ತಿದ್ದಾರಾ ಇಲ್ಲವಾ ಎನ್ನುವುದು ಸ್ಪಷ್ಟವಾಗುವುದಿಲ್ಲ. ಏಕೆಂದರೆ, ಸಂಬಂಧದಲ್ಲಿದ್ದೂ ಅವರು ನಿಮ್ಮಿಂದ ದೂರ ದೂರ ಓಡುತ್ತಿರುತ್ತಾರೆ.

ಮಾನಸಿಕವಾಗಿ ನಿಮ್ಮೊಂದಿಗೆ ಇರುವುದಿಲ್ಲ. ಆದರೆ, ಅದನ್ನು ನೇರವಾಗಿ ಹೇಳದೆ ಬೇರೆ ಬೇರೆ ವರ್ತನೆಗಳ ಮೂಲಕ ತೋರಿಸಿಕೊಳ್ಳುತ್ತಾರೆ. ಜತೆಗೆ, ಹಲವು ಸಮಸ್ಯೆಗಳೂ ಅವರಲ್ಲಿರಬಹುದು. ಹೀಗಾಗಿ, ಇಂತಹ ಕೆಂಪು ಬಾವುಟಗಳು ಆಗಾಗ ಕಂಡುಬಂದರೆ ನಿಮ್ಮ ಸಂಬಂಧದ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಮ್ಮ ನಡುವೆ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆ ನಿಜಕ್ಕೂ ಇದೆ ಎನ್ನುವುದರ ಸೂಚಕ ಅವು. ಅಂತಹ ಸಂಬಂಧ ಮುಂದುವರಿಸುವ ಬಗ್ಗೆ ಮರುಪರಿಶೀಲನೆ ಮಾಡುವುದು ಸೂಕ್ತ.

ಇದೆಂಥಾ ವಿಚಿತ್ರ ಸಂಪ್ರದಾಯ, ಕುಟುಂಬದ ಎಲ್ಲಾ ಸಹೋದರರು ಒಬ್ಬಳನ್ನೇ ಮದ್ವೆಯಾಗ್ತಾರೆ!

•    ಖಾಸಗಿತನದ (Privacy) ಮೇಲೆ ದಾಳಿ (Invasion)
ನಿಮ್ಮ ಸಂಗಾತಿ (Partner) ನಿಮ್ಮನ್ನು ನಂಬದಿದ್ದರೆ ಹಲವು ರೀತಿಯಿಂದ ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುತ್ತಿರುತ್ತಾರೆ. ಪದೇ ಪದೆ ನೀವೆಲ್ಲಿದ್ದೀರಿ ಎಂದು ಪ್ರಶ್ನಿಸುವುದು, ಫೋನ್‌ ಚೆಕ್‌ (Phone Check) ಮಾಡುವುದು, ನಿಮ್ಮ ಸ್ನೇಹ ಬಳಗದಲ್ಲಿ (Friend Circle) ನಿಮ್ಮ ನಡತೆಯ (Behavior) ಬಗ್ಗೆ ಅಥವಾ ಸ್ನೇಹಿತರ ಬಗ್ಗೆ ನಿಮ್ಮನ್ನು ಪದೇ ಪದೆ ವಿಚಾರಿಸಬಹುದು. ಇದು ನಿಯಂತ್ರಣ (Control) ಮಾಡುವ ಸ್ವಭಾವವಾಗಿದ್ದು, ಉತ್ತೇಜನ ಮಾಡುವುದು ಸಲ್ಲದು. ಸಂಬಂಧದಲ್ಲೂ ಖಾಸಗಿತನದ ಅಗತ್ಯವಿರುತ್ತದೆ. 

•    ಸುಳ್ಳುಗಳ (Lie) ಸರಮಾಲೆ 
ನಿಮ್ಮ ಸಂಗಾತಿ ನಿಮ್ಮೊಂದಿಗೆ ಬರೀ ಸುಳ್ಳು ಹೇಳುವುದು ಗಮನಕ್ಕೆ ಬಂದರೆ ಅವಾಯ್ಡ್‌ (Avoid) ಮಾಡಬೇಡಿ. ಸುಳ್ಳಿನ ಮೇಲೆ ನಿಂತ ಸಂಬಂಧ ಅಶಾಶ್ವತ. ಹಾಗೂ ಅವರು ಪದೇ ಪದೆ ಕೆಲವು ವಿಚಾರಕ್ಕೆ ಯುಕ್ತಿಯನ್ನೇ (Manipulation) ಹೆಚ್ಚು ಬಳಕೆ ಮಾಡುತ್ತಿದ್ದರೆ ಅದು ಸಹ ಉತ್ತಮ ಹವ್ಯಾಸವಲ್ಲ. ಅನಾರೋಗ್ಯಕರ (Unhealthy) ವ್ಯಕ್ತಿತ್ವವನ್ನು ಇದು ತೋರುತ್ತದೆ. 
 
•    ಇತಿಹಾಸದಲ್ಲಿ (History) ಜೀವಿಸುವವರು
ನಮಗೆಲ್ಲರಿಗೂ ಇತಿಹಾಸವಿದೆ. ಅಲ್ಲಿ ಕೆಟ್ಟ, ಒಳ್ಳೆಯ ಘಟನೆಗಳಿವೆ. ಆದರೆ, ಅವುಗಳನ್ನಾಧರಿಸಿ ಬದುಕಲು ಸಾಧ್ಯವಿಲ್ಲ. ಕೆಲವು ಜನ ಕೇವಲ ಇತಿಹಾಸದ ಘಟನಾವಳಿಗಳನ್ನು ಪದೇ ಪದೆ ನೆನಪಿಸಿಕೊಂಡು ಇಂದಿನ ವರ್ತಮಾನವನ್ನು (Present) ಹಾಳುಮಾಡಿಕೊಳ್ಳುತ್ತಾರೆ. ಅವರು ಸದಾಕಾಲ ಇತಿಹಾಸದಲ್ಲೇ ಬದುಕುತ್ತ ಹಾಲಿ ಜೀವನವನ್ನು ಎಂಜಾಯ್‌ ಮಾಡುವುದಿಲ್ಲ. ನಿಮ್ಮ ಸಂಗಾತಿಗೆ ಈ ಗುಣವಿದ್ದರೆ ಅದು ಸಹ್ಯವಲ್ಲ. 

•    ನಿಮ್ಮ ದೇಹದ ಬಗ್ಗೆ ಶೇಮ್‌ (Body Shaming) ಮಾಡ್ತಾರಾ?
ದೇಹದ ಆಕಾರವನ್ನು ಆಧರಿಸಿ ವ್ಯಕ್ತಿಯನ್ನು ಲೇವಡಿ ಮಾಡುವುದು ಅತ್ಯಂತ ಕೆಟ್ಟ ಗುಣ. ನಿಮ್ಮ ಸಂಗಾತಿ ನಿಮ್ಮನ್ನು ಈ ವಿಚಾರಕ್ಕೆ ಟೀಕೆ (Criticise), ಹಾಸ್ಯ, ಲೇವಡಿ ಮಾಡುತ್ತಿದ್ದರೆ ಅದನ್ನು ಸಾಮಾನ್ಯವಾಗಿ ಪರಿಗಣಿಸಬೇಕಾಗಿಲ್ಲ. ಅವರು ಕ್ರಮೇಣ ನಿಮ್ಮ ಆತ್ಮವಿಶ್ವಾಸ (Self Esteem) ಹಾಳುಮಾಡುತ್ತಾರೆ. 

ಸಂಬಂಧ ಚೆನ್ನಾಗಿರ್ಬೇಕಾ? ಮೂರು ವಿಚಾರಗಳನ್ನ ಕಲಿತುಕೊಳ್ಬೇಡಿ

•    ಭಾವನಾತ್ಮಕವಾಗಿ ಅಲಭ್ಯ (Emotionally Unavailable)
ನೀವು ಮಾನಸಿಕವಾಗಿ ದಣಿದಿರುವಾಗ, ಭಾವನಾತ್ಮಕ ಬೆಂಬಲ (Support) ಅಗತ್ಯವಿದ್ದಾಗ ಸಂಗಾತಿ ನಿಮಗೆ ಲಭ್ಯವಿರುತ್ತಾರಾ? ಧೈರ್ಯ ನೀಡುತ್ತಾರಾ? ಉತ್ತೇಜನ (Inspiration) ತುಂಬುತ್ತಾರಾ? ಅಥವಾ ನಿಮ್ಮ ಸಮಸ್ಯೆ ನಿಮಗೆ ಎನ್ನುವ ಧೋರಣೆ ಹೊಂದಿದ್ದಾರಾ? ಮಾನಸಿಕವಾಗಿ (Mentally) ಅವರು ನಿಮ್ಮೊಂದಿಗಿಲ್ಲ ಎಂದಾದರೆ, ನಿಮ್ಮ ಅಗತ್ಯ ಅವರಿಗೆ ಇಲ್ಲ ಎಂದರ್ಥ. ಇಂತಹ ಸಂಬಂಧವನ್ನು (Relation) ಮುಂದುವರಿಸುವುದು ಅನಗತ್ಯ.

•    ಹಲವು ಸಮಸ್ಯೆ
ಸಂಗಾತಿ ಹಲವು ವಿಚಾರಕ್ಕೆ ನಿಮ್ಮನ್ನೇ ಅವಲಂಬಿಸುತ್ತಿದ್ದರೆ, ತಮ್ಮ ಫೋನ್‌ ಗೆ ಅಂಟಿಕೊಳ್ಳುತ್ತಿದ್ದರೆ, ತಮ್ಮ ಕುಟುಂಬ (Family) ಹಾಗೂ ಸ್ನೇಹಿತರೊಂದಿಗೆ ನಿಮ್ಮನ್ನು ಭೇಟಿ (Meet) ಮಾಡಿಸಲು ಉತ್ಸುಕರಾಗಿಲ್ಲದಿದ್ದರೆ, ಎಲ್ಲದಕ್ಕೂ ನಿಮ್ಮನ್ನೇ ದೂಷಿಸುತ್ತಿದ್ದರೆ (Blame) ಎಚ್ಚೆತ್ತುಕೊಳ್ಳಿ.  

Latest Videos
Follow Us:
Download App:
  • android
  • ios