Asianet Suvarna News Asianet Suvarna News

ಕ್ಯಾನ್ಸರ್ ಕೊನೆ ಸ್ಟೇಜಿನಲ್ಲಿರೋ ಬಾಯ್ ಫ್ರೆಂಡ್ ವರಿಸಿದ ನಾರಿ, ಗಿಳಿಯಾಗಿ ಬರ್ತೇನೆಂದ ಪತಿ!

ನಿಜವಾಗಿ ಪ್ರೀತಿ ಮಾಡುವವರು ಜೀವನ ಮಾತ್ರವಲ್ಲ ಜನ್ಮ ಜನ್ಮಾಂತರದವರೆಗೂ ಜೊತೆಗಿರುವ ಪ್ರಮಾಣ ಮಾಡ್ತಾರೆ. ಅದನ್ನು ನಡೆಸಿಕೊಡಲು ಜನರು ಏನು ಮಾಡಲೂ ಸಿದ್ಧವಿರ್ತಾರೆ. ಇದಕ್ಕೆ ಈ ಮಹಿಳೆ ಕೂಡ ಉತ್ತಮ ಉದಾಹರಣೆ.
 

Tears Flow Online Woman In China Weds Cancer Dying Boyfriend Ask Him To Visit As Bird roo
Author
First Published Oct 20, 2023, 1:25 PM IST

ಪ್ರೀತಿ, ಪ್ರೇಮದಲ್ಲಿ ನಂಬಿಕೆ ಇಡುವ ಜನರು ದೇಹಕ್ಕಿಂತ ಆತ್ಮಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಜನ್ಮ ಜನ್ಮಗಳ ಕಾಲ ಜೊತೆಗಿರುವ ವಾದ ಮಾಡ್ತಾರೆ. ಜೀವನದಲ್ಲಿ ಒಮ್ಮೆ ಮದುವೆಯಾದ್ರೆ ಮದುವೆಯಾದ ವ್ಯಕ್ತಿಯನ್ನೇ ಉಸಿರಿರುವವರೆಗೆ ಪ್ರೀತಿ ಮಾಡ್ತಾರೆ, ಗೌರವಿಸ್ತಾರೆ. ಅವರನ್ನೇ ಸರ್ವಸ್ವ ಎಂದುಕೊಳ್ತಾರೆ. ಸತ್ತ ನಂತ್ರವೂ ಅವರನ್ನೇ ತಮ್ಮ ಸಂಗಾತಿ ಎಂದುಕೊಂಡು ಜೀವನ ಮಾಡ್ತಾರೆ. ಸಾವಿನ ಕೊನೆ ದಿನಗಳನ್ನು ಎಣಿಸುತ್ತಿರುವ ವ್ಯಕ್ತಿಯನ್ನು ಕೂಡ ಮದುವೆಯಾಗಿ, ಅವರ ನೆನಪಿನಲ್ಲೇ ಜೀವನ ನಡೆಸುವ ಜನರಿದ್ದಾರೆ. ಇದಕ್ಕೆ ಚೀನಾದ ಮಹಿಳೆ ಉತ್ತಮ ನಿದರ್ಶನ. ಅನಾರೋಗ್ಯದಿಂದ ಸಾವಿಗಾಗಿ ಕಾಯುತ್ತಿರುವ ಪುರುಷ ಹಾಗೂ ಚೀನಾದ ಮಹಿಳೆ ಪ್ರೇಮಕಥೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಜನರು ಇವರ ಕಥೆ ಕೇಳಿ ಕಣ್ಣಲ್ಲಿ ನೀರಾಗ್ತಿದ್ದಾರೆ.

ಕ್ಯಾನ್ಸರ್ (Cancer) ಕೊನೆ ಸ್ಟೇಜ್ ನಲ್ಲಿದ್ದಾನೆ ಬಾಯ್ ಫ್ರೆಂಡ್ : ಚೀನಾದ ಮಹಿಳೆ ಹಾಗೂ ಆಕೆ ಬಾಯ್ ಫ್ರೆಂಡ್ (Boy Friend) ಪ್ರೇಮ ಕಥೆ ಸಾಮಾಜಿಕ ಜಾಲತಾಣ (Social Network) ಬಳಕೆದಾರರಿಗೆ ನೋವು ತಂದಿದೆ. ವಾಸ್ತವವಾಗಿ ಮಹಿಳೆ ಬಾಯ್ ಫ್ರೆಂಡ್ ಕ್ಯಾನ್ಸರ್ ಲಾಸ್ಟ್ ಸ್ಟೇಜ್ ನಲ್ಲಿದ್ದಾನೆ. ಆತನ ಜೊತೆ ಇಡೀ ಜೀವನವನ್ನು ಒಟ್ಟಿಗೆ ಕಳೆಯುವ ಕನಸನ್ನು ಮಹಿಳೆ ಕಂಡಿದ್ದಳು. ಆದ್ರೆ ಇದು ಸಾಧ್ಯವಾಗ್ತಿಲ್ಲ. ಹಾಗಾಗಿ ಕೊನೆ ದಿನಗಳನ್ನಾದ್ರೂ ಆತನ ಜೊತೆ ಆತನ ಪತ್ನಿಯಾಗಿ ಕಳೆಯುವ ತೀರ್ಮಾನಕ್ಕೆ ಬಂದಿದ್ದಾಳೆ ಮಹಿಳೆ. ಹಾಗಾಗಿ ಕೊನೆ ಸ್ಟೇಜ್ ನಲ್ಲಿದ್ದ ಬಾಯ್ ಪ್ರೆಂಡ್ ಮದುವೆಯಾಗಿದ್ದಾಳೆ ಮಹಿಳೆ.  ದೇಶದ ನೈಋತ್ಯ ಭಾಗದಲ್ಲಿರುವ ಸಿಚುವಾನ್ ಪ್ರಾಂತ್ಯದ ಮಹಿಳೆಯೊಬ್ಬರು @Tongxiangyu ID ಯೊಂದಿಗೆ ಡೌಯಿನ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಮಹಿಳೆ, ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿರುವ ಬಾಯ್ ಫ್ರೆಂಡ್ ಜೊತೆಗಿರುವ ಸೆಲ್ಫಿಯನ್ನು ಫೋಸ್ಟ್ ಮಾಡಿದ್ದಾಳೆ. ಜೀವನದ ಕೊನೆ ದಿನಗಳು ಬಂದಿವೆ. ಜೀವನದ ಕೊನೆಯ ಕ್ಷಣ ಬಂದಾಗಲೂ ನಾವು ಒಟ್ಟಿಗೆ ಇರುತ್ತೇವೆ ಎಂದು ಮಹಿಳೆ ಶೀರ್ಷಿಕೆ ಹಾಕಿದ್ದಾಳೆ.

ಐಶ್ವರ್ಯಾರನ್ನು ಜಯಾ ಹೊಗಳ್ತಿದ್ದಂತೆಯೇ ನಾದಿನಿ ಶ್ವೇತಾ ಬಚ್ಚನ್‌ಗೆ ಇದೇನಾಯ್ತು? ಹಳೆಯ ವಿಡಿಯೋ ವೈರಲ್‌!

ಬಾಯ್ ಫ್ರೆಂಡ್ ಹೆಸರು ಯಂಗ್. ಆತ ದುಗ್ಧರಸ ಕ್ಯಾನ್ಸರಿನೊಂದಿಗೆ ಹೋರಾಡುತ್ತಿದ್ದಾನೆ. ಇನ್ನು ಕೇವಲ ಒಂದು ತಿಂಗಳು ಯಂಗ್ ಬದುಕಿರ್ತಾನೆ ಎಂದು ವೈದ್ಯರು ಹೇಳಿದ್ದಾರೆ. 

ದ್ರಾಕ್ಷಿ ನೀಡಿ ಪ್ರಫೋಸ್ ಮಾಡಿದ ಮಹಿಳೆ : ಇದಲ್ಲದೆ ಮಹಿಳೆ ವಿಡಿಯೋ ಒಂದನ್ನು ಕೂಡ ಪೋಸ್ಟ್ ಮಾಡಿದ್ದಾಳೆ. ಆ ವಿಡಿಯೋದಲ್ಲಿ ಮಹಿಳೆ ಆಸ್ಪತ್ರೆ ಬೆಡ್ ಮೇಲಿರುವ ತನ್ನ ಬಾಯ್ ಫ್ರೆಂಡ್ ಗೆ ದ್ರಾಕ್ಷಿ ನೀಡಿ ಪ್ರಫೋಸ್ ಮಾಡಿದ್ದನ್ನು ನೀವು ನೋಡ್ಬಹುದು. ತಕ್ಷಣ ಯಂಗ್ ಇದಕ್ಕೆ ಯಸ್ ಎಂದು ಉತ್ತರ ನೀಡೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು.  ಯಂಗ್ ಸರಿಯಾಗಲು ಸಾಧ್ಯವೇ ಇಲ್ಲ. ಆದ್ರೆ ಕೆಲ ಸಮಯ ಮಾತ್ರ ನನ್ನ ಜೊತೆ ಯಂಗ್ ಇರೋದಿಲ್ಲ. ನಾನು ಒಂದು ದಿನ ಅವನಿಗೆ ಸಿಗ್ತೇನೆ. ಕೊನೆಯಲ್ಲಿ ನಾವಿಬ್ಬರೂ ಒಟ್ಟಿಗೆ ಇರ್ತೇವೆ ಎಂದು ಮಹಿಳೆ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾಳೆ. ಯಂಗ್ ಸಾವನ್ನಪ್ಪಿದ್ರೂ ಅವ ನನ್ನನ್ನು ಆರೈಕೆ ಮಾಡ್ತಿರ್ತಾನೆ ಎಂಬ ನಂಬಿಕೆ ನನಗಿದೆ ಎಂದು ಮಹಿಳೆ ಹೇಳಿದ್ದಾಳೆ. 

ಮಹಿಳೆಯರು Orgasm ಸಮಸ್ಯೆಯಿಂದ ಬಳಲೇನು ಕಾರಣ?

ಅವನು ಗಿಳಿ ರೂಪದಲ್ಲಿ ಬರ್ತಾನೆ : ಯಂಗ್ ನನಗೆ ಪ್ರಮಾಣ (Promise) ಮಾಡಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ಯಂಗ್, ಯಾವುದಾದ್ರೂ ಪಕ್ಷಿಯಾಗಿ ಅವಳಿಗೆ ಸಿಗೋದಾಗಿ ಹೇಳಿದ್ದಾನಂತೆ. ಗೂಬೆಯಾಗ್ಬೇಕು ಎಂದು ಆತ ಅಂದುಕೊಂಡಿದ್ದನಂತೆ. ಆದ್ರೆ ಕೊನೆಯಲ್ಲಿ ಮನಸ್ಸು ಬದಲಿಸಿ ಗಿಳಿ ಆಗ್ತೇನೆ ಎಂದು ಹೇಳಿದ್ದಾನಂತೆ. ಜನರು ಈ ವಿಡಿಯೋ ನೋಡಿ ಮರುಗಿದ್ದಾರೆ. ನೂರಾರು ಮಂದಿ ಮಹಿಳೆ ಫೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. 

Follow Us:
Download App:
  • android
  • ios