Asianet Suvarna News Asianet Suvarna News

Teachers Day: ಶಿಕ್ಷಕರೆಂದು ಮರೆತು ಫ್ರೆಂಡ್ಸ್‌ನಂತೆ ಆಟವಾಡಿ!

ಶಾಲಾ ದಿನಗಳಲ್ಲಿ ನಾವೆಲ್ಲ ಹೆಚ್ಚು ಹೆದರುತ್ತಿದ್ದದ್ದು ಒಂದು ಟೀರ‍್ಸ್ಗೆ ಇನ್ನೊಂದು ಪೋಷಕರಿಗೆ. ಶಿಕ್ಷಕರು ಕೇವಲ ಶಿಕ್ಷೆ ನೀಡುವುದಿಲ್ಲ. ಬದಲಾಗಿ ಜೀವನದ ಅದೆಷ್ಟೋ ಮೌಲ್ಯಗಳು ಕಲಿಸಿಕೊಟ್ಟಿದ್ದಾರೆ. ಟೀರ‍್ಸ್ಗಳಿಗಾಗಿ ಈ ದಿನ ವಿಶೇಷವಾಗಿಸಲು ಫನ್ ಗೇಮ್ಸ್ಗಳ ಪಟ್ಟಿ ಇಲ್ಲಿದೆ.
 

Teachers Day 2022 have fund with your teachers as with friends
Author
First Published Sep 5, 2022, 3:14 PM IST

ಶಾಲಾ ದಿನಗಳಲ್ಲಿ ನಾವೆಲ್ಲ ಹೆಚ್ಚು ಹೆದರುತ್ತಿದ್ದದ್ದು ಒಂದು ಟೀರ‍್ಸ್ಗೆ ಇನ್ನೊಂದು ಪೋಷಕರಿಗೆ. ಶಿಕ್ಷಕರು ಕೇವಲ ಶಿಕ್ಷೆ ನೀಡುವುದಿಲ್ಲ. ಹಾಗೆ ಅವರು ಕೇವಲ ಪಠ್ಯದಲ್ಲಿನ ಸಿಲಬಸ್ ಅನ್ನು ಪಾಠ ಮಾಡಿಲ್ಲ. ಬದಲಾಗಿ ಜೀವನದ ಅದೆಷ್ಟೋ ಮೌಲ್ಯಗಳು ಕಲಿಸಿಕೊಟ್ಟಿದ್ದಾರೆ. ನಮ್ಮ ಏಳ್ಗೆಗಾಗಿ ಒಂದಿಲ್ಲೊAದು ರೀತಿಯಲ್ಲಿ ಶ್ರಮಿಸಿದ್ದಾರೆ. ಅಂತಹ ಶಿಕ್ಷಕರನ್ನು ನೆನೆಯುವ ಸದಾವಕಾಶ ವರ್ಷದಲ್ಲಿ ಒಮ್ಮೆ ಬರುತ್ತದೆ. ಅದೇ ಶಿಕ್ಷಕರ ದಿನಾಚರಣೆ. 
ಶಿಕ್ಷಕರ ದಿನಾಚರಣೆಯನ್ನು ನಮ್ಮ ನೆಚ್ಚಿನ ಟೀರ‍್ಸ್ಗೆ ಥ್ಯಾಂಕ್ಸ್ ಹೇಳಿ ಒಂದು ಕೃತಜ್ಞತೆ ಸಲ್ಲಿಸುವ ಕಾರ್ಯ ಜೀವನ ಪರ್ಯಂತ ಮಾಡಬೇಕು. ಏಕೆಂದರೆ ಅವರು ತೋರಿಸಿಕೊಟ್ಟ ದಾರಿ ಅಂತಹದು, ಅವರಿಂದ ಕಲಿತ ವಿಷಯಗಳು ಹಾಗೂ ನಮ್ಮ ಏಳ್ಗೆಗೆ ಕಾರಣರಾದರು. ಸ್ಕೂಲ್‌ಗೆ ಹೋಗುವ ಮಕ್ಕಳು ಈ ದಿನವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಸ್ಕೂಲ್ ಲೆವೆಲ್‌ನಲ್ಲಿ ಬೆಸ್ಟ್ ಟೀರ‍್ಸ್ ಅನ್ನು ಆಯ್ಕೆ ಮಾಡುತ್ತಾರೆ. ಇದೆಲ್ಲಾ ಅವರಿಗೆ ಸಲ್ಲಲೇ ಬೇಕಾದ ಗೌರವ.

ಪ್ರತೀ ವರ್ಷ ಶಿಕ್ಷಕರ ದಿನವನ್ನು ಸೆಪ್ಟೆಂಬರ್ 5ರಂದು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದ ಎರಡನೇ ರಾಷ್ಟçಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಅವರು ಸ್ವತಃ ಉತ್ತಮ ಶಿಕ್ಷಕರಾಗಿದ್ದರು. ಹಾಗಾಗಿ ನಿಮ್ಮ ಶಿಕ್ಷಕರನ್ನು ಬರೀ ಗೌರವ ಸಲ್ಲಿಸಿ, ಒಂದು ಕಾರ್ಯಕ್ರಮ ಮಾಡಿದರೆ ಸಾಕೇ? ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಸ್ಕೂಲ್‌ನಲ್ಲಿ ಮಕ್ಕಳಿಗಾಗಿ ಹಮ್ಮಿಕೊಳ್ಳುವ ಫನ್ ಗೇಮ್ಸ್ ರೀತಿ ಟೀರ‍್ಸ್ಗಳಿಗೂ ಮಾಡಬೇಕು. ಹಾಗಾದರೆ ಟೀರ‍್ಸ್ ಡೇ ಸ್ಪೆಷಲ್‌ನಲ್ಲಿ ನಿಮ್ಮ ಗುರುಗಳಿಗೆ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂಬುದನ್ನು ನಾವು ನಿಮಗೆ ಹೇಳ್ತೇವೆ ಕೇಳಿ. ಅವರಿಗೆ ನೆನಪಿನಂಗಳದಲ್ಲಿ ಸದಾ ಅಚ್ಚಳಿಯದ ದಿನವನ್ನಾಗಿಸಲು ಸುಸಂದರ್ಭವಿದು. ಟ್ರೀಟ್ ಮಾಡಿ ನೋಡಿ.

Teachers Day : ನಿಮ್ಮ ಫೆವರಿಟ್ ಟೀಚರ್ ಗೆ ಕೊಡಬಹುದಾದ ಬೆಸ್ಟ್ ಗಿಫ್ಟ್!

ಟೀರ‍್ಸ್ಗಳಿಗಿರುವ ಫನ್ ಗೇಮ್ಸ್ ಇಲ್ಲಿವೆ
1. ವೇದಿಕೆ ಪ್ರದರ್ಶನಗಳು

ಮಕ್ಕಳು ತಮ್ಮ ಗುರುವಿನ ಕುರಿತಾದ ಪ್ರತೀ, ಗೌರವ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಲು ಇದು ಅತ್ಯುತ್ತಮ ಸಂದರ್ಭವಾಗಿದೆ.ಇದಕ್ಕಾಗಿ ಮಕ್ಕಳು ಶಿಕ್ಷಕರಿಗಾಗಿ ಶಾಲಾ ಬ್ಯಾಂಡ್‌ನ ಲೈವ್ ಬ್ಯಾಂಡ್ ಪ್ರದರ್ಶನಗಳು, ಮಿಮಿಕ್ ಕಾರ್ಯಕ್ರಮಗಳಂತಹ ಕೆಲವು ಆಸಕ್ತಿದಾಯಕ ಸ್ಟೇಜ್ ಪರ್ಫಾಮೆನ್ಸ್ ಆಯೋಜಿಸಬಹುದು. ಅಲ್ಲಿ ತಮ್ಮ ನೆಚ್ಚಿನ ಶಿಕ್ಷಕರ ಪಾಠ ಮಾಡುವ ವಿಧಾನ, ಮಾತನಾಡುವ ವಿಧಾನ, ಸಿಗ್ನೇಚರ್ ಸ್ಟೆöÊಲ್, ಉಡುಗೆ ತೊಡುಗೆಗಳ ಪ್ರದರ್ಶನ ಮಾಬಹುದು. ಶಿಕ್ಷಕರಿಗೆ ಗಾಯನದ ಕಾರ್ಯಕ್ರಮ ಹಾಗೂ ಅವರನ್ನೂ ಹಾಡಲು ಉತ್ತೇಜಿಸುವುದು, ನೃತ್ಯ ಸ್ಪರ್ಧೆ ಹೀಗೆ ನಾನಾ ರೀತಿಯ ಕಾರ್ಯಕ್ರಮ ನೀಡಬಹುದು.

2. ಫನ್ ಗೇಮ್ (Fun Game)
ಮಕ್ಕಳು ಎಲ್ಲಾ ಶಿಕ್ಷಕರಿಗೆ ಹೋರಾಂಗಣ ಮತ್ತು ಒಳಾಂಗಣ ಆಟಗಳನ್ನು ಆಡಿಸಬಹುದು. ಏಕೆಂದರೆ ಆಟ ಆಡುವುದರಿಂದ ಅವರ ಒತ್ತಡವೂ ನಿವಾರಿಸುತ್ತದೆ. ಫುಟ್‌ಬಾಲ್ ಪಂದ್ಯ, ಸ್ಕಾçಬಲ್ ಸ್ಪರ್ಧೆ, ಕೇರಂ ಸ್ಪರ್ಧೆ, ಬ್ಯಾಸ್ಕೆಟ್‌ಬಾಲ್, ಮ್ಯೂಸಿಕಲ್ ಚೇರ್ (Musical Chair), ಬ್ಯಾಡ್ಮಿಂಟನ್ ಹೀಗೆ ರೋಮಾಂಚನಕಾರಿ ಆಟಗಳನ್ನು ಆಡಿಸಬಹುದು. 

Teacher Day ಯಾಕೆ ಆಚರಣೆ ಮಾಡ್ತಾರೆ ಗೊತ್ತಾ?

3. ಪಿಕ್‌ನಿಕ್ (Picnic) 
ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿಸಲು ಮತ್ತೊಂದು ಆಸಕ್ತಿದಾಯಕ ಮಾರ್ಗವೆಂದರೆ ಪಿಕ್‌ನಿಕ್ ಏರ್ಪಡಿಸುವುದು. ಈ ಪಿಕ್‌ನಿಕ್‌ಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದರ ಜೊತೆಗೆ ಅಲ್ಲಿ ಶಿಕ್ಷಕರಿಂದ ಕೆಲ ಆಟಗಳನ್ನೂ ಆಡಿಬಹುದು. ಪಾಸಿಂಗ್ ದ ಬಾಲ್, ಕಣ್ಣಿಗೆ ಬಟ್ಟೆ ಕಟ್ಟಿ ಹುಡುಕಾಟ ಮಾಡಿಸುವುದು ಹೀಗೆ.

4.ಡಂಬ್ ಚಾರಡೆ
ಶೀಕ್ಷಕರೊಂದಿಗೆ ಮೋಜು ಮಸ್ತಿ ಮಾಡಲು ಇದು ಅದ್ಭುತ ದಿನವಾಗಿದೆ. ನಿಮ್ಮ ಗುರುಗಳನ್ನು ಒಳಗೊಂಡಂತೆ ಎರಡು ತಂಡಗಳ ಗುಂಪನ್ನು ಮಾಡಬಹುದು ಮತ್ತು ಎಲ್ಲರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯುವ ಡಂಬ್ ಚಾರಡೆಯನ್ನು ಆಡಬಹುದು. ಇದರಲ್ಲಿ ಹೆಚ್ಚು ಅಂಕ ಗಳಿಸಿದ ತಂಡ ಪಂದ್ಯವನ್ನು ಗೆಲ್ಲುತ್ತದೆ.

 

Teachers Day 2022 have fund with your teachers as with friends

 

Follow Us:
Download App:
  • android
  • ios