ಮಕ್ಕಳನ್ನು ಬೆಳೆಸೋದು ಒಂದು ಕಲೆ… ಆಟದ ಮೂಲಕ ಜಗತ್ತು ಗೆಲ್ಲುವ ಪಾಠ ನೀಡಿ

ಮಕ್ಕಳು ಯಶಸ್ವಿಯಾಗ್ಬೇಕು ಅಂತಾ ಪಾಲಕರು ಬರೀ ಕನಸು ಕಂಡರೆ ಸಾಲದು. ದೊಡ್ಡ ಹುದ್ದೆ, ಕೈತುಂಬ ಹಣಕ್ಕಿಂತ ನೆಮ್ಮದಿಯ, ಬುದ್ಧಿವಂತಿಕೆಯ ಜೀವನ ನಡೆಸುವ ಕಲೆಯನ್ನು ಪಾಲಕರು ಮಕ್ಕಳಿಗೆ ಕಲಿಸಬೇಕು. ಸ್ವಾವಲಂಬಿ, ಸ್ವಾತಂತ್ರ್ಯದ ಬದುಕು ಮಕ್ಕಳಿಗೆ ಗೊತ್ತಿದ್ರೆ ಅಂತಿಮ ಗೆಲುವು ಅವರದ್ದೆ. 
 

Teach This Habit To Children At An Early Age parenting tips roo

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಇದೆ. ನೀವು ಮಕ್ಕಳನ್ನು ಹೇಗೆ ಬೆಳೆಸ್ತಿರಿ ಮಕ್ಕಳು ಹಾಗೆ ಬೆಳೆಯುತ್ತಾರೆ. ಪ್ರತಿಯೊಂದು ಕೆಲಸಕ್ಕೂ ಮಕ್ಕಳು, ಪಾಲಕರನ್ನು ಅವಲಂಭಿಸೋದು ಒಳ್ಳೆಯದಲ್ಲ. ಮಕ್ಕಳು ಬೆಳೆದು ದೊಡ್ಡವರಾದ್ಮೇಲೆ ಅವರಿಗೆ ಇದು ಸಮಸ್ಯೆ ತಂದೊಡ್ಡುತ್ತದೆ. ಎಲ್ಲ ಕೆಲಸಕ್ಕೆ ಪಾಲಕರನ್ನು ಆಶ್ರಯಿಸುವ ಮಕ್ಕಳು ದೊಡ್ಡವರಾದ್ಮೇಲೂ ತಮ್ಮ ಜೀವನವನ್ನು ತಾವು ನಡೆಸಲು ಕಷ್ಟಪಡ್ತಾರೆ. ದೃಢ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕ್ತಾರೆ. ಒಬ್ಬ ಸಲಹೆಗಾರರನ್ನು ಆಶ್ರಯಿಸುತ್ತಾರೆ.  ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ, ತನ್ನ ಮುಂದಿರುವ ವ್ಯಕ್ತಿಯ ಭಾವನೆಗಳಿಗೆ ಮನ್ನಣೆ ನೀಡಿ, ಅವರನ್ನು ಅರ್ಥಮಾಡಿಕೊಂಡು ಜೀವನ ನಡೆಸುವ ವ್ಯಕ್ತಿ ನಿಮ್ಮ ಮಗು ಆಗ್ಬೇಕು ಅಂದ್ರೆ ಬಾಲ್ಯದಲ್ಲಿಯೇ ಅದಕ್ಕೊಂದಿಷ್ಟು ಶಿಕ್ಷಣ ಬೇಕು.

ಮಕ್ಕಳ (Children) ಭವಿಷ್ಯ ಉಜ್ವಲವಾಗಿರಬೇಕು. ಅವರು ಆತ್ಮವಿಶ್ವಾಸದಿಂದ, ಸ್ವಾವಲಂಬಿಯಾಗಿ ಜೀವನ (Life) ನಡೆಸಬೇಕು ಅಂದ್ರೆ ಪಾಲಕರು, ಸಣ್ಣವರಿರುವಾಗ್ಲೇ ಮಕ್ಕಳಿಗೆ ಕೆಲ ವಿಷ್ಯಗಳನ್ನು ಕಲಿಸಬೇಕು. ನೀವು ಪುಸ್ತಕ ಹಿಡಿದು ಮಕ್ಕಳಿಗೆ ಪಾಠ ಮಾಡಿದ್ರೆ ಸಾಲದು, ಆಟವಾಡ್ತಾ, ಮನೆ ಕೆಲಸ ಮಾಡ್ತ ಮಕ್ಕಳಿಗೆ ಅರಿವಿಲ್ಲದೆ ಮಕ್ಕಳಿಗೆ ಜ್ಞಾನ (Knowledge) ತುಂಬಬಹುದು. ಮಕ್ಕಳಿಗೆ ಸಣ್ಣ ಸಣ್ಣ ಟಾಸ್ಕ್ ಮೂಲಕವೇ ಒಳ್ಳೆಯ ಅಭ್ಯಾಸ, ಅವರ ಆಯ್ಕೆ, ಅವರಿಷ್ಟದ ಬಗ್ಗೆ ತಿಳಿಸೋದು ಹೇಗೆ ಎಂಬುದು ಇಲ್ಲಿದೆ.

ನಿಮ್ ಜೊತೆ ಮಾತನಾಡುತ್ತಿರುವವರು ಏನನ್ನೋ ಮುಚ್ಚಿಡುತ್ತಿದ್ದಾರಾ? ಹೀಗ್ ಕಂಡು ಹಿಡೀರಿ

ಮಕ್ಕಳಿಗೆ ಆರಂಭದಲ್ಲಿಯೇ ನೀವು ನಿರ್ಧಾರ ತೆಗೆದುಕೊಳ್ಳೋದನ್ನು ಕಲಿಸುವ ಅಗತ್ಯತೆ ಈಗಿದೆ. ಇದಕ್ಕೆ ನೀವು ಸಣ್ಣ ಮಾರ್ಗವನ್ನು ಅನುಸರಿಸಬಹುದು. ಸಾಮಾನ್ಯವಾಗಿ ಬಟ್ಟೆ ಖರೀದಿ ಅಥವಾ ತರಕಾರಿ ಸೇರಿದಂತೆ ಮನೆ ವಸ್ತುಗಳ ಖರೀದಿ ವೇಳೆ ಪಾಲಕರು ಮೇಲುಗೈ ಸಾಧಿಸುತ್ತಾರೆ. ನಿಮಗೆನೂ ತಿಳಿಯೋದಿಲ್ಲ, ನಿಮ್ಮ ಬಟ್ಟೆಯನ್ನು ನಾವು ಆಯ್ಕೆ ಮಾಡುತ್ತೇವೆ ಎನ್ನುವ ಪಾಲಕರೆ ಹೆಚ್ಚು. ಆದ್ರೆ ಬಟ್ಟೆ ಖರೀದಿ ವೇಳೆ ಅವರಿಗೆ ಅವರಿಷ್ಟದ ಬಟ್ಟೆ ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ಮಾರುಕಟ್ಟೆಯಲ್ಲಿ ಅವರಿಗೆ ಪ್ರಿಯವಾದ ತರಕಾರಿ, ಹಣ್ಣು ಖರೀದಿಗೆ ಅವಕಾಶ ನೀಡಬೇಕು. ಮನೆಗೆ ಯಾವುದೇ ವಸ್ತು ತರುವ ಮುನ್ನ ಮಕ್ಕಳ ಅಭಿಪ್ರಾಯವನ್ನು ಕೇಳಿ ತಿಳಿಯಬೇಕು. ಇದ್ರಿಂದ ಮಕ್ಕಳು ಸಾಕಷ್ಟು ಕಲಿಯುತ್ತಾರೆ.

ಮಕ್ಕಳಿಗೆ ಸವಾಲುಗಳು ಎದುರಾದಾಗ ಪಾಲಕರು ಅದನ್ನು ಬಗೆಹರಿಸುವ ಬದಲು, ಅವರೇ ಅವರ ಸವಾಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳನ್ನು ತಿದ್ದುವ ಕೆಲಸವನ್ನು ನೀವು ಮಾಡ್ಬೇಕೆ ಹೊರತು, ನೀವೇ ಎಲ್ಲವನ್ನು ಮಾಡಬಾರದು. ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯನ್ನು ಹೂವಿನಂತೆ ಬಗೆಹರಿಸುವ ಕಲೆ ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಈ ತರಬೇತಿಯಿಂದ ಬರುತ್ತದೆ. 

ಹಾಗೆಯೇ ಮಕ್ಕಳ ಕಲಿಕೆಗೆ ಅವಕಾಶ ನೀಡಬೇಕು. ಹೊಸ ಕಲೆ, ಹೊಸ ಹವ್ಯಾಸ, ಹೊಸ ಆಟಗಳ ಬಗ್ಗೆ ಮಕ್ಕಳು ಆಸಕ್ತಿ ಹೊಂದಿದ್ದರೆ ಅದನ್ನು ಪ್ರೋತ್ಸಾಹಿಸೋದು ಪಾಲಕರ ಕೆಲಸವಾಗಬೇಕು. ಓದು ಮಾತ್ರ ಮುಖ್ಯ, ಬೇರೆ ಕಲೆ, ಹವ್ಯಾಸದ ಅಗತ್ಯವಿಲ್ಲ ಎಂದು ಅವರನ್ನು ನಿರುತ್ಸಾಹಗೊಳಿಸುವ ಬದಲು ಅವರನ್ನು ಪ್ರೋತ್ಸಾಹಿಸಬೇಕು.  

ಮದುವೆಯಾದ ಮೇಲೂ ಮದುವೆಯ ಕನಸು ಬೀಳುತ್ತಾ. ಜೀವನದಲ್ಲಿ ಏನಾಗುತ್ತದೆ ಗೊತ್ತಾ..?

ಮಕ್ಕಳಿಗೆ ಸ್ವಾತಂತ್ರ್ಯ ನೀಡೋದು ಕೂಡ ಬಹಳ ಮುಖ್ಯ. ಯಾವ ಪಾರ್ಟಿಗೆ ಹೋಗ್ಬೇಕು, ಯಾರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಸ್ವಾತಂತ್ರ್ಯವನ್ನು ಅವರಿಗೆ ನೀಡಿ. ಹಾಗೆ ಅವರ ನಿರ್ಧಾರವನ್ನು ಗೌರವಿಸಿ. ಅವರನ್ನು ಸಂಪೂರ್ಣವಾಗಿ ನೀವು ನಂಬಬೇಕು. ಪಾಲಕರು ತಮ್ಮ ಮೇಲೆ ನಂಬಿಕೆ ಹೊಂದಿದ್ದಾರೆ, ನಮ್ಮ ಮೇಲೆ ಪಾಲಕರಿಗೆ ವಿಶ್ವಾಸವಿದೆ ಎಂಬುದು ಮಕ್ಕಳ ಅರಿವಿಗೆ ಬರ್ತಿದ್ದಂತೆ ಅವರು ಎಚ್ಚರಗೊಳ್ತಾರೆ. ಪಾಲಕರಿಗೆ ನೋವಾಗದಂತೆ ಅವರು ಹೆಜ್ಜೆಯನ್ನಿಡುತ್ತಾರೆ. ಸ್ನೇಹಿತರ ಆಯ್ಕೆಯಲ್ಲೂ ಎಚ್ಚರಿಕೆವಹಿಸುತ್ತಾರೆ. ಮಕ್ಕಳ ನಿರ್ಧಾರವನ್ನು ನೀವು ಸದಾ ತೆಗಳುತ್ತಿದ್ದರೆ, ಅವರ ಸ್ವಾತಂತ್ರ್ಯವನ್ನು (Freedom) ಸಂಪೂರ್ಣ ಕಸಿದುಕೊಂಡಿದ್ದರೆ ಅವರು ದಾರಿತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. 

Latest Videos
Follow Us:
Download App:
  • android
  • ios