Asianet Suvarna News Asianet Suvarna News

Sexual health: ಲೈಂಗಿಕ ಜೀವನಕ್ಕೆ ಆಧ್ಯಾತ್ಮದ ಲಾಭ ತರುವ ತಾಂತ್ರಿಕ್ ಸೆಕ್ಸ್

ಲೈಂಗಿಕ ಜೀವನದಲ್ಲಿ ಹೊಸತೇನೂ ಇಲ್ಲ ಎಂದರೆ ಪತಿ ಪತ್ನಿ ಇಬ್ಬರೂ ಒಬ್ಬರನ್ನೊಬ್ಬರು ದೂರತೊಡಗುತ್ತಾರೆ. ನಿಧಾನವಾಗಿ ಈ ಏಕತಾನತೆ ಅವರ ವಿವಾಹ ಜೀವನದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ, ಸೆಕ್ಷುಯಲ್ ಲೈಫ್‌ನಲ್ಲಿ ಪ್ರಯೋಗಗಳಾಗುತ್ತಿರಬೇಕು. ಆಧ್ಯಾತ್ಮದೊಂದಿಗೆ ಬೆಸೆದ ತಾಂತ್ರಿಕ್ ಸೆಕ್ಸ್ ಸಧ್ಯ ಕಪಲ್‌ಗಳನ್ನು ಸೆಳೆಯುತ್ತಿದೆ. ಏನು ಹಾಗೆಂದರೆ?

tantric sex and its benefits skr
Author
Bangalore, First Published Nov 26, 2021, 1:10 PM IST

ಇದು ಹೊಸತೇನೂ ಅಲ್ಲ. ಆದರೆ, ಎಲ್ಲದರ ಹಾಗೆ ಕಾಲಕಾಲಕ್ಕೆ ಹೊಸತು ಹಳತಾಗುತ್ತಿರುತ್ತದೆ, ಹಳತು ಮತ್ತೆ ಹೊಸತರ ವೇಷ ಹಾಕಿ ಬರುತ್ತಿದೆ. ಹಾಗೇ ಸಧ್ಯ ಕಪಲ್ ನಡುವಿನ ಸೆಕ್ಷುಯಲ್ ಸಂಬಂಧವನ್ನು ಇನ್ನೊಂದೇ ಮಟ್ಟಕ್ಕೆ ಕೊಂಡುಯ್ಯುವುದಾಗಿ ಸದ್ದು ಮಾಡುತ್ತಿದೆ ತಾಂತ್ರಿಕ್ ಸೆಕ್ಸ್ (Tantric sex). ಇದು ಜೋಡಿಗಳ ನಡುವೆ ಆಳವಾದ ಸಂಪರ್ಕ(deep connection) ಹುಟ್ಟು ಹಾಕುತ್ತದೆ ಎನ್ನಲಾಗುತ್ತಿದೆ. ಹಾಗಿದ್ದರೆ ತಾಂತ್ರಿಕ್ ಸೆಕ್ಸ್ ಎಂಬುದು ಹೇಗೆ ವಿಭಿನ್ನ? ಹಾಗೆಂದರೇನು? ಇದರ ಲಾಭಗಳೇನು ಎಲ್ಲ ಇಲ್ಲಿದೆ...

ತಾಂತ್ರಿಕ್  ಸೆಕ್ಸ್
ಈ ಅಭ್ಯಾಸದ ಬೇರು ಸುಮಾರು 600 ಸಿಇ ಸಮಯದ ಪ್ರಾಚೀನ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯಲ್ಲಿದೆ. ಹಿಂದೂ, ಬೌದ್ಧ ಹಾಗೂ ಜೈನ ಸಂಪ್ರದಾಯಗಳಲ್ಲಿ ತಂತ್ರವನ್ನು ಬಳಸಲಾಗುತ್ತಿತ್ತು. ಪೂರ್ತಿ ಮೈಂಡ್‌ಫುಲ್ಲಾಗಿ ಮತ್ತೊಬ್ಬರ ಜೊತೆ ಕನೆಕ್ಷನ್ ಸಾಧಿಸುವುದು, ಚಕ್ರಗಳನ್ನು ಒಂದಾಗಿಸುವುದು ಇದರ ಉದ್ದೇಶವಾಗಿತ್ತು. ಇದು ವ್ಯಕ್ತಿಯ ಮನಸ್ಸು, ದೇಹವನ್ನು ಸಂಗಾತಿಯ ಮನಸ್ಸು, ದೇಹದೊಂದಿಗೆ ಒಂದೇ ಕ್ಷಣದಲ್ಲಿ ಬೆಸೆಯುತ್ತದೆ. ತಾಂತ್ರಿಕದ ಮೂಲ ರೂಪ 'ತಂತ್ರ' ಎಂದು. ಸಂಸ್ಕೃತದಲ್ಲಿ ತಂತ್ರ ಎಂದರೆ ನೇಯ್ಗೆ ಎಂದರ್ಥ. ಪುರುಷ ಹಾಗೂ ಸ್ತ್ರೀ ಶಕ್ತಿಗಳನ್ನು ನೇಯ್ದು ದೇಹ ಮನಸ್ಸುಗಳೆರಡನ್ನೂ ಒಂದೇ ಸಮಯದಲ್ಲಿ ಒಂದಾಗಿಸುವ ಕ್ರಿಯೆಯೇ ತಾಂತ್ರಿಕ್ ಸೆಕ್ಸ್. ಇದೊಂತರಾ ಭಕ್ತಿ ಮಾರ್ಗದಲ್ಲಿ ಸಂಗಾತಿಗಳಿಬ್ಬರೂ ನಡೆದು ಒಬ್ಬರಿಗೊಬ್ಬರು ಸಂಪೂರ್ಣ ಸಮರ್ಪಣಾ ಭಾವದಲ್ಲಿ ಶರಣಾಗುವ ಪ್ರಕ್ರಿಯೆ. ಇದೇ ಈಗ ಪಾಶ್ಚಾತ್ಯ ರಾಷ್ಟ್ರಗಳಲ್ಲಿ 'ನಿಯೋತಂತ್ರ' (Neotantra) ಹೆಸರಿನಲ್ಲಿ ಜನಪ್ರಿಯವಾಗಿದೆ. 

Extra Marital Relationship; ಸಂಗಾತಿ ವಂಚನೆ ಮಾಡ್ತಿದಾರಾ? ಗುರುತಿಸುವುದು ಹೇಗೆ?

ವಿಶೇಷತೆ(Speciality)
ತಾಂತ್ರಿಕ ಎಂದೊಡನೆ ವೈಲ್ಡ್, ಚಿತ್ರವಿಚಿತ್ರ ಸೆಕ್ಷುಯಲ್ ಪ್ರಾಕ್ಟೀಸ್ ಎಂದು ಅಂದುಕೊಳ್ಳುವವರು ಹಲವರು. ಆದರೆ, ಅಂಥದ್ದೇನೂ ಇಲ್ಲದೆ, ಆಧ್ಯಾತ್ಮ(Spirituality)ದಂತೆ ಮನಸ್ಸಿನ ಸಹಾಯದಿಂದ ಹೊಸ ಹೊಸ ಸೆನ್ಸೇಶನ್‌ಗೆ ತೆರೆದುಕೊಳ್ಳುವ ಟೆಕ್ನಿಕ್ ಇದಾಗಿದೆ. ಇದರಲ್ಲಿ ಉಸಿರಾಟ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪಾರ್ಟ್ನರ್‌ಗಳ ನಡುವೆ ಸೆಕ್ಷುಯಲ್ ಅವೇರ್‌ನೆಸ್ ಹೆಚ್ಚಿಸುತ್ತದೆ. ಉಸಿರಾಟದಿಂದ ಆರಂಭವಾಗಿ ಕಣ್ಣುಗಳ ಮೂಲಕ ಮುಂದುವರಿಯುತ್ತದೆ. ಹೆಚ್ಚು ಸಮಯಗಳ ಕಾಲ ದೃಷ್ಟಿ ಮಿಲನ ನಡೆಸಿ ಕಣ್ಣಿನಲ್ಲೇ ಪ್ರೀತಿಯ ಮಾತುಗಳನ್ನು ಪಿಸುಗುಡುವುದೂ ಇದರ ಒಂದು ಭಾಗ. 'ಕಣ್ಣು ಕಣ್ಣು ಕಲೆತಾಗ... ಮನವು ಉಯ್ಯಾಲೆಯಾಡಿದೆ ತೂಗಿ' ಹಾಡಿನ ಅನುಭವವನ್ನು ಖಾಸಗಿ ಕ್ಷಣದಲ್ಲಿ ಗಳಿಸಿ ನೋಡುವುದರಿಂದ ಇಬ್ಬರ ಮನಸ್ಸೂ ಬೇರೆತ್ತಲೋ ಹೊಯ್ದಾಡದೆ ಪರಸ್ಪರ ಮಿಳಿತವಾಗುತ್ತದೆ. ನಂತರ ಮಸಾಜ್, ಯೋಗ(yoga),ಪ್ರಾಣಾಯಾಮ(meditation)ಗಳ ಸಹಾಯದಿಂದ ಒಬ್ಬರ ಹೃದಯದ ಪ್ರೀತಿಯನ್ನು ಮತ್ತೊಬ್ಬರ ಹೃದಯಕ್ಕೆ ರವಾನಿಸುತ್ತಾ ಸೆಕ್ಷುಯಲ್ ಎನರ್ಜಿ ಹೆಚ್ಚಿಸಲಾಗುತ್ತದೆ. 

Obesity: ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ, ಲೈಂಗಿಕ ಜೀವನದ ಶತ್ರುವಿದು

ಪಾರ್ಟ್‌ನರ್ ಅನಿವಾರ್ಯವಲ್ಲ!
ಸೆಕ್ಸ್ ಎಂದೊಡನೆ ಪಾರ್ಟ್‌ನರ್ ಇರಲೇಬೇಕೆಂದೇನಿಲ್ಲ. ಇದು ಹೊರಗಿನಿಂದ ದೇಹಕ್ಕೆ ಸಂಬಂಧಿಸಿದ್ದೆನಿಸಿದರೂ, ಹೆಚ್ಚು ಮನಸ್ಸಿಗೆ ಸಂಬಂಧಿಸಿದ್ದೇ ಆಗಿದೆ. ತಾಂತ್ರಿಕ್ ಸೆಕ್ಸ್ ಕೂಡಾ ಹಾಗೆಯೇ. ಇಲ್ಲಿ ನಿಜಾರ್ಥದಲ್ಲಿ ಸೆಕ್ಸ್ ನಡೆಯಬೇಕೆಂದೇನಿಲ್ಲ. ಬದಲಿಗೆ, ವ್ಯಕ್ತಿಯು ತನ್ನದೇ ದೇಹ ಹಾಗೂ ಮನಸ್ಸನ್ನು ಏಕಾಗ್ರಗೊಳಿಸಿ, ಸಿಗುವ ಸಂತೋಷದಲ್ಲಿ ಲೀನವಾದರೂ ಸಾಕು. 

ಏನೆಲ್ಲ ಲಾಭಗಳು?(benefits)
ಈಗಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ಸಿಕ್ಕಾಪಟ್ಟೆ ಒತ್ತಡ ಅನುಭವಿಸುತ್ತಾರೆ. ಈ ಒತ್ತಡ, ನಿರೀಕ್ಷೆ ಇತ್ಯಾದಿ ಕಾರಣಗಳು ಬೆಡ್‌ರೂಂಗೂ ಲಗ್ಗೆ ಇಟ್ಟು ಜೋಡಿಗಳು ಖಾಸಗಿತನವನ್ನು ಎಂಜಾಯ್ ಮಾಡಲು ಕೂಡಾ ಬಿಡುವುದಿಲ್ಲ. ಖಾಸಗಿ ಕ್ಷಣಗಳೂ ಕೂಡಾ ಡ್ರೈಯಾಗಿ ಸುಮ್ಮನೇ ಯಾವುದೋ ಅನಿವಾರ್ಯಕ್ಕೆ ಸಂಭವಿಸುವಂತೆ ನಡೆಯುತ್ತದೆ. ಇದರಿಂದ ಸೆಕ್ಷುಯಲ್ ಪ್ಲೆಶರ್ ಹೆಚ್ಚಿನವರಿಗೆ ಸಿಗುವುದೇ ಇಲ್ಲ. ಆದರೆ, ತಾಂತ್ರಿಕ್ ಸೆಕ್ಸ್ ಇಬ್ಬರ ನಡುವೆ ಮೈಂಡ್‌ಫುಲ್‌ನೆಸ್ ತರುವುದರಿಂದ ಪಾರ್ಟ್ನರ್ ಜೊತೆ ಸಂಬಂಧ ಹೆಚ್ಚು ಗಟ್ಟಿಯಾಗುತ್ತದೆ. ಡೀಪ್ ಕನೆಕ್ಷನ್ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮನ್ನು ತಡೆ ಹಿಡಿದಿರಬಹುದಾದ ಸೆಕ್ಷುಯಲ್ ಶೇಮ್ ಬಿಡುಗಡೆಗೆ ಸಹಾಯವಾಗುತ್ತದೆ. ಇವಿಷ್ಟೇ ಅಲ್ಲದೆ, ಲೈಂಗಿಕ ಕ್ರಿಯೆ ಎಂದರೆ ಕೇವಲ ಸೆಕ್ಸ್ ಅಲ್ಲದೆ, ಪರಸ್ಪರ ಮಾನಸಿಕವಾಗಿ ಮಿಳಿತವಾಗುವುದರಿಂದ, ಜೊತೆಯಿರುವ ಸಮಯವೇ ಎಲ್ಲಕ್ಕಿಂತ ಸಂತಸ ನೀಡುವಂಥದ್ದು ಎಂಬುದು ಅರಿವಾಗುತ್ತದೆ. 

Follow Us:
Download App:
  • android
  • ios