Extra Marital Relationship; ಸಂಗಾತಿ ವಂಚನೆ ಮಾಡ್ತಿದಾರಾ? ಗುರುತಿಸುವುದು ಹೇಗೆ?

ನಿಮ್ಮ ಸಂಗಾತಿ ಬೇರೊಬ್ಬರೊಂದಿಗೆ ವಿವಾಹದಾಚೆಗೆ ಸಂಬಂಧ ಹೊಂದಿದ್ದೇ ಆದರೆ, ಅವರ ಕೆಲವು ವರ್ತನೆಗಳಲ್ಲಿ ಅದು ಖಂಡಿತವಾಗಿಯೂ ಗೊತ್ತಾಗುತ್ತದೆ. ಆ ವರ್ತನೆಗಳು ಏನು ಎಂಬುದನ್ನು ಇಲ್ಲಿ ನೋಡಿ.
 

Know less known signs of infidelity in cheating spouse

ಇನ್‌ಫಿಡೆಲಿಟಿ (infidelity) ಅಥವಾ ದಾಂಪತ್ಯ ದ್ರೋಹ, (cheating) ಅಥವಾ ವಿವಾಹೇತರ ಸಂಬಂಧವು ಯಾವುದೇ ದಾಂಪತ್ಯವನ್ನು (Marriage) ನಾಶಪಡಿಸಲು ಸಾಕು. ಆದರೆ ಕೆಲವೊಮ್ಮೆ ಈ ದ್ರೋಹ ಎಷ್ಟೋ ಕಾಲ ಗೊತ್ತೇ ಆಗದಂತೆ ಒಳಗೊಳಗೇ ನಡೆಯುತ್ತಿರುತ್ತದೆ. ಆದರೂ ಇದರ ಲಕ್ಷಣಗಳನ್ನು ಸಂಗಾತಿಯಲ್ಲಿ ಗುರುತಿಸಬಹುದು. ದಾಂಪತ್ಯ ದ್ರೋಹವೆಂದರೆ ಸಂಗಾತಿಗಿಂತ ಭಿನ್ನವಾದ ಬೇರೊಬ್ಬ ವ್ಯಕ್ತಿಯೊಂದಿಗೆ ಮಲಗುವುದಕ್ಕಿಂತ ಹೆಚ್ಚು. ದಾಂಪತ್ಯ ದ್ರೋಹದಲ್ಲಿ ಸಾಕಷ್ಟು ಭಾವನಾತ್ಮಕ ಮತ್ತು ಮಾನಸಿಕ ಒತ್ತಡವಿದೆ, ಅದನ್ನು ಮುಚ್ಚಿಡಲು ಮೋಸ ಮಾಡುವ ಪಾಲುದಾರರು ಮಾಡುವ ಪ್ರಯತ್ನದಿಂದಾಗಿ ಕೆಲವೊಮ್ಮೆ ಗುರುತಿಸಲಾಗುವುದಿಲ್ಲ. ನಿಮ್ಮ ಸಂಗಾತಿಯು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳುವ ಕೆಲವು ಕ್ರಿಯೆಗಳಿವೆ. ಆದರೆ ಕೆಲವು ಇತರ ಕ್ರಿಯೆಗಳು ನಿಮ್ಮ ಸಂಗಾತಿಯ (spouse) ಬಗ್ಗೆ ಅನುಮಾನ ಬರುವ ಅವಕಾಶವನ್ನೇ ನಿಮಗೆ ನೀಡುವುದಿಲ್ಲ. ನೀವು ಸುಲಭವಾಗಿ ಗುರುತಿಸಲು ಸಾಧ್ಯವಾಗದ ಮೋಸದ ಕೆಲವು ಚಿಹ್ನೆಗಳನ್ನು ನೋಡೋಣ.

ಇದ್ದಕ್ಕಿದ್ದಂತೆ ಹೆಚ್ಚು ಪ್ರೀತಿ (Love)
ನಿಮ್ಮ ಸಂಗಾತಿಯು ಇದ್ದಕ್ಕಿದ್ದಂತೆ ನಿಮ್ಮ ಕಡೆಗೆ ಹೆಚ್ಚು ಗಮನ ಹರಿಸುವುದು ಪ್ರಶ್ನಾರ್ಹ ಸೂಚಕವಾಗಿರುತ್ತದೆ, ವಿಶೇಷವಾಗಿ ನಿಮ್ಮ ಸಂಗಾತಿಯು ಸುಲಭವಾಗಿ ಪ್ರೀತಿಯನ್ನು ತೋರಿಸುವ ವ್ಯಕ್ತಿಯಲ್ಲದಿದ್ದರೆ. ಆದರೆ ನಿಮ್ಮ ಸಂಗಾತಿ ಹೆಚ್ಚು ಪ್ರೀತಿಯಿಂದ ಇರಲು ಪ್ರಯತ್ನಿಸುತ್ತಿದ್ದರೆ ಬಹುಶಃ ಅವರು ನಿಮಗೆ ತಾವೆಲ್ಲೋ ಮೋಸ ಮಾಡಿದ ತಪ್ಪಿತಸ್ಥರೆಂದು ಭಾವಿಸುತ್ತಿದ್ದಾರೆ ಎಂದರ್ಥ. ಮತ್ತು ಆದ್ದರಿಂದ, ಅವರು ನಿಮಗೆ ನೀವೇ ಹೆಚ್ಚೆಂಬ ವಿಶೇಷ ಭಾವನೆ ಮೂಡಿಸುವ ಮೂಲಕ ಆ ನಡವಳಿಕೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿರುತ್ತಾರೆ.

ಹಠಾತ್ ಮನಸ್ಥಿತಿ ಬದಲಾವಣೆಗಳು (Mood swing)
ಕೆಲಸದ ಒತ್ತಡ, ಕುಟುಂಬದೊಳಗಿನ ವಿವಾದಗಳು, ಸ್ನೇಹಿತರು ಇತ್ಯಾದಿ ಕಾರಣಗಳಿಂದ ಮೂಡ್ ಸ್ವಿಂಗ್‌ಗಳು ಉಂಟಾಗಬಹುದು. ಆದ್ದರಿಂದ, ನಿಮ್ಮ ಸಂಗಾತಿಯು ನಿಮಗೆ ಮೋಸ ಮಾಡುತ್ತಿರುವುದರಿಂದ ಅವರು ಸ್ವಲ್ಪ ಮೂಡ್‌ ಬದಲಾವಣೆಯಲ್ಲಿದ್ದಾರೆ ಎಂದು ಮೊದಲಿಗೆ ನಿಮಗೆ ಅನಿಸದೇ ಇರಬಹುದು. ತಮ್ಮ ಮನಸ್ಥಿತಿಯ ಬದಲಾವಣೆಯ ಹಿಂದಿನ ಕಾರಣವನ್ನು ಅವರಿಗೆ ವಿವರಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮ ಸಂಗಾತಿಯು ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುದಕ್ಕೆ ಸಂಕೇತವಾಗಿದೆ.

ಸಂಬಂಧವಿಲ್ಲದ ನಡವಳಿಕೆ (detached)
ನಿಮ್ಮ ಸಂಗಾತಿಯು ಅವರು ಹೆದರುತ್ತಿದ್ದ ವಿಷಯಗಳ ಬಗ್ಗೆ ಈಗ ಕಾಳಜಿ ವಹಿಸದ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ನೀವು ಗಮನಿಸಬಹುದು. ನಿಮ್ಮ ಸಂಗಾತಿಯು ನಿಮ್ಮ ಅಗತ್ಯಗಳು ಮತ್ತು ಅಪೇಕ್ಷೆಗಳ ಕಡೆಗೆ ಅಸಡ್ಡೆ ಮತ್ತು ತಾತ್ಕಾಲಿಕ ವರ್ತನೆಗಳನ್ನು ಪ್ರದರ್ಶಿಸುತ್ತಾರೆ. ಇದರರ್ಥ, ಅವರು ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ.

Hindu Wedding Ritual: ಪತಿ-ಪತ್ನಿ ಜೊತೆಯಾಗಿಡುವ ಏಳು ಹೆಜ್ಜೆಗಳ ಅರ್ಥವೇನು?

ಪ್ರೀತಿ ತೋರುವುದರಲ್ಲಿ ಆಸಕ್ತಿಯಿಲ್ಲ (PDA)
ಪಿಡಿಎ ಅಥವಾ ಸಾರ್ವಜನಿಕ ಪ್ರೀತಿಯ ಪ್ರದರ್ಶನದಲ್ಲಿ ಅಷ್ಟೇನೂ ಆಸಕ್ತಿ ಹೊಂದಿರದ ದಂಪತಿಗಳು ಬಹಳಷ್ಟು ಇದ್ದಾರೆ. ಆದ್ದರಿಂದ ನಿಮ್ಮ ಸಂಗಾತಿ ಪಿಡಿಎ ಅನ್ನು ತಪ್ಪಿಸುತ್ತಿದ್ದಾರೆಯೇ ಎಂದು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಏಕೆಂದರೆ ಅವರು ಅದನ್ನು ಮೂಲತಃ ಇಷ್ಟಪಡಲಿಕ್ಕಿಲ್ಲ. ಆದರೆ ಮೊದಲು ಅದನ್ನು ಮಾಡುತ್ತಿದ್ದರೆ, ಈಗ ಅವರು ನಿಮಗೆ ಮೋಸ ಮಾಡುತ್ತಿದ್ದರೆ, ಈಗ ಪಿಡಿಎ ಅನ್ನು ಬಯಸುವುದಿಲ್ಲ. ಅವರು ನಿಮ್ಮೊಂದಿಗೆ ನೋಡಲು ಇಷ್ಟಪಡದ ಭಂಗಿಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡಲಾರರು.

Love Obsession: ಹಾಗಂದ್ರೇನು? ಪಾರಾಗಲು ಇಲ್ಲಿವೆ ಪರಿಹಾರ

ಕರುಳಿನ ಭಾವನೆ (Gut feeling)
ಗಟ್‌ ಫೀಲಿಂಗ್‌ ಎನ್ನುತ್ತಾರೆ ಇದನ್ನು. ನಿಮ್ಮ ಹೊಟ್ಟೆ ಅಥವಾ ಕರುಳು ಅಥವಾ ಮನಸ್ಸು, ಏನೋ ಮಿಸ್ ಹೊಡೆಯುತ್ತಿದೆ ಎಂದು ನಿಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ! ಅದರ ಬಗ್ಗೆ ಗಮನ ಕೊಡಿ. ಆದರೆ ಯಾವುದೇ ಪುರಾವೆಗಳನ್ನು ಒದಗಿಸದೆ ನಿಮ್ಮ ಸಂಗಾತಿಯನ್ನು ದೂಷಿಸುವುದು ನ್ಯಾಯೋಚಿತವಲ್ಲ. ಹೀಗಾಗಿ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿರುವುದನ್ನು ಖಚಿತಪಡಿಸುವ ಹೆಚ್ಚು ಚಿಹ್ನೆಗಳಿಗಾಗಿ ಹತ್ತಿರದಿಂದ ನೋಡಿ.

Relationship: ಈ ರಾಶಿಯವರನ್ನು ಮದುವೆಯಾದ್ರೆ ಫಸ್ಟ್ ನೈಟ್ ನೀವೇ ಎಲ್ಲಾ ಹೇಳಿಕೊಡಬೇಕು!

 

Latest Videos
Follow Us:
Download App:
  • android
  • ios