ಪತಿ ಉದ್ಯೋಗದಿಂದ  ಮನೆಗೆ  ಮರಳುವ ಹೊತ್ತಿಗೆ ಕೆಲಸದ ಟೆನ್ಷನ್, ಹೆವೀ ಟ್ರಾಫಿಕ್ ಜಾಮ್, ಅವರಿವರು ಆಡಿದ  ಮಾತುಗಳು, ಸರಿಯಾಗಿ ತುಂಬದ ಹೊಟ್ಟೆ, ಕಣ್ಣೆಳೆವ ನಿದ್ದೆ ಎಲ್ಲವೂ ಸೇರಿ- ನಿದ್ದೆಯೊಂದು ಮಾಡಿದರೆ ಸಾಕು, ಇನ್ನೇನೂ ಬೇಡಪ್ಪಾ ಬೇಡ ಎಂಬಂತಾಗಿರುತ್ತದೆ. ಆದರೆ, ನೀವು ಮಾತ್ರ ಬೆಳಗ್ಗೆಯಿಂದ ಪತಿಯ ಬರುವಿಕೆಗೆ ಕಾಯುತ್ತಾ, ಸ್ವಪ್ನದಂತಾ ರಾತ್ರಿಗೆ ಕನವರಿಸುತ್ತೀರಿ. ಆದರೆ, ಕಡೆಗೆ ನಿರಾಸೆಯೊಂದೇ ನಿಮ್ಮದು ಎಂಬಂತಾಗುತ್ತದೆಯೇ? ಇಂದಿನ ಜೀವನಶೈಲಿಯಲ್ಲಿ ಬಹುತೇಕ ಮನೆಗಳ ದಾಂಪತ್ಯದ ಪಾಡು ಇದೇ. ಹಾಗಾಗಿ, ಬದುಕಿನಶೈಲಿ  ಬಯ್ದುಕೊಳ್ಳುವ  ಅಥವಾ ಆತನ  ಸೆಕ್ಸ್ ಡ್ರೈವ್‌ನ್ನು ದೂಷಿಸುವ ಬದಲು ಇಂಥ  ಸಂದರ್ಭಗಳಲ್ಲಿ ಪತಿಯ ಲೈಂಗಿಕ ಆಸಕ್ತಿ ಕೆರಳಿಸಲು ಪತ್ನಿಯು ಸ್ವಲ್ಪ ಹೆಚ್ಚಿನ ಪ್ರಯತ್ನ  ಹಾಕಬೇಕು. ಕೆಲವೊಂದು ಟ್ರಿಕ್‌ಗಳನ್ನು ಮಾಡಬೇಕು.  ಅಂಥ ಟ್ರಿಕ್ ‌ಗಳು ಯಾವುವು ತಿಳ್ಕೋಬೇಕಾ....

ಕನ್ನಡಿ ಎದುರು ನಗ್ನರಾಗಿ
ಆತನೆದುರು ನಿಂತು ಬಟ್ಟೆ ತೆಗೆಯುವುದು- ಗಮನ ಸೆಳೆಯಲು ನೀವು ಮಾಡುತ್ತಿರುವ ತಂತ್ರ ಎಂಬುದನ್ನು ಸಾರಿ ಹೇಳುತ್ತದೆ. ಹಾಗಾಗಿ, ಅದೇನು ಅಂಥ ಕೆಲಸ ಮಾಡಲಾರದು. ಅದರ ಬದಲು ಕೋಣೆಯಲ್ಲಿ ಆತನ ಇರುವಿಕೆ ಇಲ್ಲವೆಂಬಂತೆ ನಿಮ್ಮ ಪಾಡಿಗೆ ನೀವು ನಿಧಾನವಾಗಿ ಬಟ್ಟೆ ಬದಲಿಸುವಂತೆ ಬಟ್ಟೆ ಬಿಚ್ಚುತ್ತಾ ಹೋಗಿ. ಪ್ರತಿಫಲನ ಅವನ ಕಣ್ಣಿಗೆ ಬೀಳುತ್ತಿರಲಿ. ಆದರೆ, ಆತ ನೋಡುತ್ತಿರುವುದು ನಿಮಗೆ ಗೊತ್ತೇ ಇಲ್ಲ ಎಂಬಂತೆ ನಟಿಸಿ. 

#FeelFree ಈ ಹುಡುಗನಿಗೆ ಆಂಟಿಯರನ್ನು ಕಂಡ್ರೇ ಆಕರ್ಷಣೆಯಂತೆ!...

ಸೆಕ್ಸೀ ಲಿಂಗರೀ
ಭಾರತೀಯ ಮಹಿಳೆಯರು ಹೊರ ಉಡುಪಿಗೆ ಕೊಟ್ಟಷ್ಟು ಮಹತ್ವ ಒಳಉಡುಪಿಗೆ ಕೊಡುವುದಿಲ್ಲ. ಆದ್ದರಿಂದ ಮುಂದಿನ ಬಾರಿ ಒಳಉಡುಪು ಖರೀದಿಸುವಾಗ ಸೆಕ್ಸೀ ಲಿಂಗರಿ ಒಂದೆರಡು ಸೆಟ್ ಖರೀದಿಸಿ. ನೀವು ಈ ಬಗ್ಗೆ ಕಾಳಜಿ ವಹಿಸುವ ವಿಷಯ ಪತಿಗೆ ಹಿಡಿಸುತ್ತದೆ. ಅವರ ಸಂತೋಷಕ್ಕಾಗಿಯೇ ಖರೀದಿಸಿದ್ದನ್ನು ತಿಳಿಸಿ. ಅದನ್ನು ಹಾಕಿಕೊಂಡ ಬಳಿಕ ನಿಮ್ಮ ಪಾಡಿಗೆ ನೀವು ಚೆಂದದ ಪರಿಮಳ ಹೊಂದಿರುವ ಬಾಡಿ ಲೋಶನ್ ಹಚ್ಚಿಕೊಳ್ಳಿ. ಇವೆಲ್ಲ ಮಾಡುವಾಗ ಪತಿ ಅಲ್ಲಿರುವುದು ನಿಮಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸಿ. ಹಾಗಿದ್ದಾಗಲೇ ಆತನಿಗೆ ನೀವು ಇನ್ನೂ ಹೆಚ್ಚು ಬೇಕೆನಿಸುವುದು. 

ಸ್ವಚ್ಛತೆ
ಸೆಕ್ಸ್ ಎಂಬುದು ಚೆಂದದ ಅನುಭವವಾಗಬೇಕೆಂದರೆ ಸುಗಂಧ, ಸ್ವಚ್ಛತೆ ಎಲ್ಲವೂ ಮುಖ್ಯ. ಹಾಗಾಗಿ, ಸದಾ ನಿಮ್ಮ ಬೇಡದ ಕೂದಲುಗಳನ್ನು ಶೇವ್ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ತ್ವಚೆಯ ಕಡೆ ಗಮನ ವಹಿಸಿ. ಪರಿಮಳದ ಶಾಂಪೂ, ಬಾಡಿ ಲೋಶನ್, ಪೌಡರ್, ಸೆಂಟ್ ಬಳಸಿ. ಈ ಪರಿಮಳ ಹಾಗೂ ಸ್ವಚ್ಛತೆ ನಿಮ್ಮ ಪತಿಯನ್ನು ನಿಮ್ಮತ್ತ ತಾನಾಗಿಯೇ ಸೆಳೆಯುತ್ತವೆ. 

ಆಡಿಯೋಪೋರ್ನ್
ಅಧ್ಯಯನಗಳ ಪ್ರಕಾರ, ಪೋರ್ನ್ ವಿಡಿಯೋಗಳಿಗಿಂತ ಆಡಿಯೋವೇ ಜನರನ್ನು ಹೆಚ್ಚು ಕೆರಳಿಸುವುದು. ಹಾಗಾಗಿ, ಪೋರ್ನ್ ನೋಡುವ ಬದಲು, ಅದರ ಆಡಿಯೋವನ್ನು ಹಾಕಿ ಪತಿಗೆ ಕೇಳಿಸಿ. ಹಾಗಂಥ ಪಕ್ಕದ ಮನೆಯವರಿಗೂ ಕೇಳಿಸುವಷ್ಟು ವಾಲ್ಯೂಮ್ ಇಡಬೇಡಿ. 

ಮಸಾಜ್
ಸುಸ್ತಾಗಿ ಬಂದ ಪತಿಗೆ ಮಸಾಜ್ ಮಾಡುತ್ತೇನೆ ಎಂದರೆ ಇಷ್ಟವಾಗದೆ ಇದ್ದೀತೇ? ಮಸಾಜ್ ಮಾಡುವುದೂ ಒಂದು ಕಲೆ. ಅದು ಸರಿಯಾಗುತ್ತಲೇ ಪತಿ ದೈಹಿಕವಾಗಿ, ಮಾನಸಿಕವಾಗಿ ರಿಲ್ಯಾಕ್ಸ್ ಆಗುತ್ತಾನೆ. ಬಳಿಕ ನಿಧಾನವಾಗಿ, ಕೈಯನ್ನು ಸೆನ್ಷುಯಲ್ ಆಗಿ ಮಸಾಜ್ ಮಾಡುತ್ತಾ ಸಾಗಿ. ಇದರಿಂದ ಆತ ಉದ್ವೇಗಗೊಳ್ಳುವುದರಲ್ಲಿ ಅನುಮಾನವಿಲ್ಲ. 

ಮದುವೆಯಾದ್ರೆ ಹೆಣ್ಣಿಗೆ ಮಾತ್ರವಲ್ಲ, ಗಂಡಿಗೂ ತಪ್ಪೋಲ್ಲ ತಾಪತ್ರಯ...

ಡರ್ಟಿ ಟಾಕ್
ಹಾಸಿಗೆಗೆ ಹೋದ ಬಳಿಕ ನೀವು ಮೊದಲು ಮೀಟ್ ಆದದ್ದು, ಮೊದಲ ಬಾರಿ ಸೆಕ್ಸ್ ನಡೆಸಿದ್ದು, ಆ ಸಮಯದಲ್ಲಿ ನಿಮಗಿದ್ದ ಕಲ್ಪನೆಗಳು, ನೀವು ನೋಡಿದ ಎರೋಟಿಕ್ ಕ್ಲಿಪ್ ಮುಂತಾದ ವಿಷಯ ಮಾತನಾಡಿ. ಇಂಥ ಮಾತುಗಳು ನಿಧಾನವಾಗಿ ಆತನ ಆಸಕ್ತಿ ಕೆರಳಿಸುತ್ತವೆ. 

ಆ್ಯಕ್ಸಿಡೆಂಟಲ್ ಟಚ್
ಪತಿಯ ಬಳಿ ನಿಮ್ಮ ಪ್ರೀತಿಯ ಕುರಿತು ಮಾತನಾಡುತ್ತಾ ಮಾತಿನ ಮಧ್ಯೆ ನಿಧಾನವಾಗಿ ಫೋರ್‌ಪ್ಲೇ ಆರಂಭಿಸಿ. ಹಾಗಂಥ ಯಾವುದಕ್ಕೂ ಗಡಿಬಿಡಿ ಬೇಡ. ಸಂದರ್ಭವೊಂದು ತಾನಾಗಿಯೇ ಸೃಷ್ಟಿಯಾಗುವವರೆಗೆ ಕಾಯಿರಿ. ಆಗ ಯಾವುದೂ ಆರ್ಟಿಫಿಶಿಯಲ್ ಎನಿಸುವುದಿಲ್ಲ.