ಗಂಡ-ಹೆಂಡ್ತಿ ಜಗಳ ಉಂಡು ಮಲಗುವ ತನಕ ಅಂತಾರೆ.ಅಂದ್ರೆ ಅದೆಷ್ಟೇ ಜಗಳವಾಗಿದ್ರೂ ಮಲಗೋ ಸಮಯದಲ್ಲಿ ಗಂಡ-ಹೆಂಡ್ತಿಯನ್ನು ಒಂದು ಮಾಡುವ ಶಕ್ತಿ ಸೆಕ್ಸಿಗಿದೆ ಅನ್ನೋದು. ಆದ್ರೆ ಬರೀ ಸೆಕ್ಸ್ ಅಷ್ಟೇ ದಾಂಪತ್ಯ ಬದುಕನ್ನು ಸುಭದ್ರವಾಗಿ ಹಿಡಿದಿಡಬಲ್ಲದಾ? ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುವ ಪತಿ ಲೈಂಗಿಕ ಸುಖ ನೀಡುತ್ತಾನೆ ಎಂಬ ಕಾರಣಕ್ಕೆ ಹೆಂಡ್ತಿ ಆತನೊಂದಿಗೆ ಬದುಕು ಸಾಗಿಸಲು ಖಂಡಿತಾ ಸಾಧ್ಯವಿಲ್ಲ. ಅದೇರೀತಿ ಹೊಂದಾಣಿಕೆ ಎಂಬ ಪದದ ಅರ್ಥವೇ ತಿಳಿಯದ ಪತ್ನಿಯೊಂದಿಗೆ ರಾತ್ರಿ ಸುಖವ ನೆನೆದು ಒಂದೇ ಸೂರಿನಡಿ ಇಡೀ ಜೀವನ ನೂಕುವುದು ಗಂಡಸಿಗೂ ಕಷ್ಟವೇ. ಪತಿ-ಪತ್ನಿಯ ನಡುವೆ ಅನುರಾಗ ಬೆಳೆಯಲು ಸೆಕ್ಸ್ಗೆ ಹೊರತಾದ ರೊಮ್ಯಾನ್ಸ್ ಕೂಡ ಅಗತ್ಯ. ದಾಂಪತ್ಯ ಬದುಕಿನ ಸವಿ ಹೆಚ್ಚಿಸುವ, ಒಬ್ಬರನ್ನೊಬ್ಬರು ಇನ್ನಷ್ಟು ನೆಚ್ಚಿಕೊಳ್ಳಲು, ಹಚ್ಚಿಕೊಳ್ಳಲು ಕಾರಣವಾಗೋದು ಇಂಥ ಚಿಕ್ಕಪುಟ್ಟ ಸಂಗತಿಗಳೇ ಎಂಬುದಂತೂ ವಾಸ್ತವ. 

ಅಂತರ್ಮುಖಿ ಮಗುವಿನ ಪೋಷಕರಿಗಿಷ್ಟು ಟಿಪ್ಸ್

ಕೇಳದಿದ್ದರೂ ಅಡುಗೆಗೆ ನೆರವು
ಕೆಲವೊಮ್ಮೆ ಯಾವುದೋ ಕಾರಣಕ್ಕೆ ಅಡುಗೆ ಮಾಡುವ ಮೂಡ್ ಇರೋದಿಲ್ಲ. ಅಯ್ಯೋ ಯಾರಾದ್ರೂ ಹೆಲ್ಪ್ ಮಾಡೋರು ಇದ್ದಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮನಸ್ಸಿನಲ್ಲೇ ಪತ್ನಿ ಮಂಡಿಗೆ ತಿನ್ನುತ್ತಿರುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಪತಿ ಕಿಚನ್‍ಗೆ ಬಂದು ಸಿಂಕ್‍ನಲ್ಲಿರುವ ಪಾತ್ರೆಗಳನ್ನು ತೊಳೆಯಲಾರಂಭಿಸುತ್ತಾರೆ ಅಥವಾ ತೊಳೆದಿಟ್ಟಿರುವ ತರಕಾರಿಗಳನ್ನು ಹೆಚ್ಚಲು ಶುರು ಮಾಡ್ತಾರೆ. ಆಗ ಪತ್ನಿಗಾಗುವ ಸಂತೋಷವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ ಬಿಡಿ.ಪತಿ ಮೇಲೆ ಅದೆಷ್ಟೇ ಸಿಟ್ಟಿದ್ರೂ, ಅಸಮಾಧಾನವಿದ್ರೂ ಆ ಕ್ಷಣಕ್ಕೆ ಕರಗಿ ನೀರಾಗುತ್ತದೆ. ಇನ್ನು ಇಬ್ಬರು ಜೊತೆಯಾಗಿ ಅಡುಗೆ ಮಾಡೋದಕ್ಕೆ ಪ್ರಾರಂಭಿಸಿದ್ರೆ ಅಲ್ಲೊಂದು ರೊಮ್ಯಾಂಟಿಕ್ ಸೀನ್ ಕ್ರಿಯೇಟ್ ಆಗಿಯೇ ಆಗುತ್ತೆ. 

ಜೊತೆಯಾಗಿ ಬಟ್ಟೆ ಒಣಗಿಸೋದು
ಬಟ್ಟೆ ವಾಷ್ ಮಾಡೋದಕ್ಕೆ ವಾಷಿಂಗ್ ಮಷಿನ್ ಇದೆ, ಆದ್ರೆ ಒಣಗಿಸೋದು ಯಾರಪ್ಪ ಎನ್ನುವುದು ವಾರಂತ್ಯದಲ್ಲಿ ಮಾತ್ರ ಬಟ್ಟೆಗಳನ್ನು ವಾಷ್ ಮಾಡೋ ಉದ್ಯೋಗಸ್ಥ ದಂಪತಿಗಳ ಪ್ರಶ್ನೆಯಾಗಿರುತ್ತೆ. ಈ ಬಟ್ಟೆ ಒಣಗಿಸುವ ಕೆಲಸವನ್ನು ಒಬ್ಬರೇ ಮಾಡೋದಕ್ಕಿಂತ ಇಬ್ಬರು ಜೊತೆಯಾಗಿ ಮಾಡಿದ್ರೆ ಪತಿ, ಪತ್ನಿಗೆ ಪರಸ್ಪರ ಪ್ರೀತಿ ಮೂಡದಿರಲು ಸಾಧ್ಯವೇ? ಬಟ್ಟೆ ಒಣಗಿಸೋದು ಪುಟ್ಟ ವಿಷಯವೇ ಇರಬಹುದು. ಆದ್ರೆ ಎಷ್ಟೋ ಬಾರಿ ಇಂಥ ವಿಷಯವೇ ದಾಂಪತ್ಯದ ಸುಖವನ್ನು ಇನ್ನಷ್ಟು ಹೆಚ್ಚಿಸೋದು.

ಯಾವುದು ಸೂಕ್ತ? ಮೊದಲ ರಾತ್ರಿಯೋ ಅಥವಾ ಎರಡನೇ ರಾತ್ರಿಯೋ!

ಮುಖ ನೋಡಿ ಅನಾರೋಗ್ಯದ ಜಾಡು ಹಿಡಿಯೋದು
ತಲೆನೋವು, ಶೀತ, ಜ್ವರ ಹೀಗೆ ದೇಹಕ್ಕೆ ಏನೋ ವ್ಯಾಧಿ ಅಂಟಿರುತ್ತೆ. ಆಫೀಸ್‍ನಿಂದ ಮನೆಗೆ ಬಂದ ತಕ್ಷಣ ನಿಮ್ಮ ಮುಖ ನೋಡಿಯೇ ಆ ಬಗ್ಗೆ ನಿಮ್ಮ ಪತಿ ಅಥವಾ ಪತ್ನಿ ಕೇಳಿದ್ರೆ ಅಚ್ಚರಿಯ ಜೊತೆಗೆ ಖುಷಿಯೂ ಆಗುತ್ತೆ ಅಲ್ವಾ? ಕುಂದಿದ ಮುಖ ನೋಡಿದ್ರೆ ಇವರಿಗೆ ಏನೋ ಆಗಿದೆ ಎಂಬುದು ಸಾಮಾನ್ಯವಾಗಿ ಯಾರಿಗಾದ್ರೂ ತಿಳಿಯುತ್ತೆ. ಇದೇ ಆಧಾರದಲ್ಲಿ ಸಂಗಾತಿಯ ಅನಾರೋಗ್ಯದ ಜಾಡು ಹಿಡಿದು ವಿಚಾರಿಸುವ ಗುಣ ದಾಂಪತ್ಯದಲ್ಲಿ ಪ್ರೀತಿ ಹೆಚ್ಚಿಸುತ್ತೆ. 

ಟೆನ್ಷನ್‍ನಿಂದ ತಲೆಸಿಡಿಯುವಾಗ ಬಿಸಿ ಕಾಫಿ ಮುಂದಿಡೋದು
ಆಫೀಸ್ ಒತ್ತಡ ಅಥವಾ ಇನ್ಯಾವುದೋ ಸಮಸ್ಯೆ ತಲೆಯನ್ನು ಕೊರೆಯುತ್ತಿರುತ್ತೆ. ಜೊತೆಗೆ ತಲೆ ಬೇರೆ ಸಣ್ಣಗೆ ನೋಯುತ್ತಿರುತ್ತೆ. ಇಂಥ ಸಮಯದಲ್ಲಿ ನಿಮ್ಮ ಮೂಡ್ ಅರಿತು ಪತ್ನಿ ಅಥವಾ ಪತಿ ಒಂದು ಕಪ್ ಬಿಸಿ ಬಿಸಿ ಕಾಫಿಯನ್ನು ನಿಮ್ಮ ಮುಂದಿಟ್ಟರೆ ಆ ಕ್ಷಣಕ್ಕೆ ತುಟಿಯಂಚಿನಲ್ಲೊಂದು ಸಣ್ಣ ನಗೆ ಮೂಡದೆ ಇರದು ಅಲ್ವಾ? ಇನ್ನು ಕಾಫಿ ಗಂಟಲನ್ನು ಒದ್ದೆ ಮಾಡುತ್ತಿದ್ದರೆ ತಲೆನೋವು ತಣ್ಣಗಾಗುವ ಜೊತೆಗೆ ಒತ್ತಡವೂ ತಗ್ಗುತ್ತದೆ. ಜೊತೆಗೆ ಇಬ್ಬರ ನಡುವಿನ ಬಾಂಧವ್ಯದ ಬೆಸುಗೆ ಗಟ್ಟಿಯಾಗುತ್ತದೆ. 

ಎಂದೋ ಇಷ್ಟವೆಂದ ವಸ್ತುವನ್ನು ಗಿಫ್ಟ್ ನೀಡೋದು
ಯಾವುದೋ ಒಂದು ಸಂದರ್ಭದಲ್ಲಿ ನನಗೆ ಈ ವಸ್ತು ಇಷ್ಟವೆಂದು ನೀವು ಹೇಳಿರುತ್ತೀರಿ. ನಿಮ್ಮ ಸಂಗಾತಿ ಒಂದು ದಿನ ನಿಮಗೆ ಆ ವಸ್ತುವನ್ನೇ ಸಪ್ರ್ರೈಸ್ ಗಿಫ್ಟ್ ಆಗಿ ನೀಡಿದ್ರೆ ಖುಷಿಯಲ್ಲಿ ಮನಸ್ಸು ಹಿರಿ ಹಿರಿ ಹಿಗ್ಗೋದಂತೂ ಹೌದು. ಪ್ರೀತಿ ಹೆಚ್ಚಿಸಲು, ಒಬ್ಬರನ್ನೊಬ್ಬರು ಅರಿತುಕೊಳ್ಳಲು ಇಂಥ ಸಣ್ಣ ಪುಟ್ಟ ಗಿಫ್ಟ್‍ಗಳು ಕೂಡ ಕಾರಣವಾಗುತ್ತವೆ. 

ಸಂಭೋಗದ ನಂತರ ಹೀಗೆ ಮಾಡಿದರೆ ಪತ್ನಿಗೆ ಇರಲ್ಲ ಲೈಂಗಿಕ ಆಸಕ್ತಿ

ಒಟ್ಟಿಗೆ ಕೂತು ಇಷ್ಟದ ಸಿನಿಮಾ ನೋಡೋದು
ಇಬ್ಬರಿಗೂ ರಜೆಯಿದ್ದಾಗ ಅಥವಾ ಬಿಡುವು ದೊರೆತಾಗ ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋದು ಒಳ್ಳೆಯ ಅಭ್ಯಾಸವೇ. ಅದೂ ಸಾಧ್ಯವಿಲ್ಲವೆಂದ್ರೆ ಮನೆಯಲ್ಲೇ ಒಟ್ಟಿಗೆ ಕುಳಿತು ಸಿನಿಮಾ ನೋಡುತ್ತ ಜೊತೆ ಜೊತೆಯಾಗಿ ಸಮಯ ಕಳೆಯೋದ್ರಿಂದ ಇಬ್ಬರ ನಡುವಿನ ಪ್ರೀತಿ ಇನ್ನಷ್ಟು ಬೆಳೆಯುತ್ತೆ. 

ಒಂದೇ ಒಂದು ಸಾರಿ
ಇತ್ತೀಚಿನ ದಿನಗಳಲ್ಲಿ ಬಹುತೇಕ ವಿಚ್ಛೇದನಗಳಿಗೆ ಅಹಂ ಬಹುಮುಖ್ಯ ಕಾರಣ ಅಂದ್ರೆ ತಪ್ಪಿಲ್ಲ. ದಾಂಪತ್ಯದಲ್ಲಿ ಅಹಂ ಅಡ್ಡಗೋಡೆಯಾಗಿ ನಿಲ್ಲದಂತೆ ಎಚ್ಚರ ವಹಿಸೋದು ಅತ್ಯಗತ್ಯ. ತಪ್ಪು ಎಲ್ಲರಿಂದಲೂ ಆಗುತ್ತೆ. ಹಾಗಾದಾಗ ಮನಸ್ಸು ತುಂಬಿ ಸಾರಿ ಕೇಳಿದ್ರೆ ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತೆ. ಆದಕಾರಣ ತಪ್ಪು ನಿಮ್ಮಿಂದ ಆದಾಗ ಸಾರಿ ಕೇಳಲು ಮರೆಯಬೇಡಿ. ಒಂದೇ ಒಂದು ಸಾರಿ ಬಾಂಧವ್ಯವನ್ನು ಬೆಸೆಯುತ್ತೆ.