ಶಾಲಾ-ಕಾಲೇಜುಗಳಲ್ಲಿ ಪ್ರೇಮ ಪ್ರಕರಣಗಳು ಹೆಚ್ಚುತ್ತಿವೆ. ಬಿಹಾರದ ಮುಜಫರ್‌ಪುರದಲ್ಲಿ 12ನೇ ತರಗತಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ವಾಟ್ಸ್ಆ್ಯಪ್ನಲ್ಲಿ 'ಕುಬೂಲ್ ಹೈ' ಎಂದು ಮೂರು ಬಾರಿ ಹೇಳಿ ಮದುವೆಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟುಕೊಡಲು ಸಿದ್ಧರಿಲ್ಲ. ಪೊಲೀಸರು ಕುಟುಂಬದವರೊಂದಿಗೆ ಮಾತನಾಡುತ್ತಿದ್ದಾರೆ.
ಶಾಲಾ-ಕಾಲೇಜುಗಳ ಮಟ್ಟದಲ್ಲಿ ಲವ್ ಪ್ರಕರಣಗಳು ಹೆಚ್ಚುತ್ತಲೇ ಸಾಗುತ್ತಿವೆ. ಇದೇನೂ ಇಂದು-ನಿನ್ನೆಯ ವಿಷಯವಲ್ಲ. ಬಹಳ ಹಿಂದಿನಿಂದಲೂ ನಡೆದು ಬಂದದ್ದೇ. ಆದರೆ ಇದೀಗ, ಮಕ್ಕಳು ತಮ್ಮ ವಯಸ್ಸಿಗಿಂತಲೂ ಹೆಚ್ಚು ಮೆಚ್ಯುರ್ ಆಗುತ್ತಿರುವ ಹಿನ್ನೆಲೆಯಲ್ಲಿ, ಇಂಥ ಘಟನೆಗಳಲ್ಲಿ ಪಾಲಕರು ಮಧ್ಯೆ ಪ್ರವೇಶಿಸಿದರೂ ಅಸಾಧ್ಯ ಎನ್ನುವಂಥ ಸನ್ನಿವೇಶಗಳೂ ನಡೆಯುವುದು ಇವೆ. ಇದು ಆ ವಯಸ್ಸಿನ ಆಕರ್ಷಣೆಯಷ್ಟೇ, ಪ್ರೀತಿಯಲ್ಲ ಎಂದೆಲ್ಲಾ ಬುದ್ಧಿಮಾತು ಹೇಳಿದರೂ ಕೇಳದ ವಯಸ್ಸು ಅದು. ಇದೇ ಕಾರಣಕ್ಕೆ ಇಂದಿನ ಯುವ ಪೀಳಿಗೆಯ ಮೇಲೆ ಸಾಕಷ್ಟು ಆತಂಕ ಪಡುವ ಪರಿಸ್ಥಿತಿಯೂ ಎದುರಾಗಿರುವ ನಡುವೆಯೇ, ಇಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಬಿಹಾರದ ಮುಜಫರ್ಪುರ್ ಜಿಲ್ಲೆಯಿಂದ ಒಂದು ವಿಚಿತ್ರ ಪ್ರಕರಣ ನಡೆದಿದೆ. 12 ನೇ ಕ್ಲಾಸ್ನಲ್ಲಿ ಓದುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ, ವಾಟ್ಸ್ಆ್ಯಪ್ ಮೂಲಕ ಮದುವೆಯಾಗಿದ್ದಾರೆ. ವಾಟ್ಸ್ಆ್ಯಪ್ ಚಾಟ್‌ನಲ್ಲಿ ಪರಸ್ಪರ ಮೂರು ಬಾರಿ "ಕುಬೂಲ್ ಹೈ.. ಕುಬೂಲ್ ಹೈ.. ಕುಬೂಲ್ ಹೈ" ಎಂದು ಬರೆದು ತಮ್ಮನ್ನು ತಾವು ವಿವಾಹಿತರೆಂದು ಪರಿಗಣಿಸಿದ್ದಾರೆ. ಇಷ್ಟೇ ಅಲ್ಲ, ಈಗ ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರನ್ನೂ ಒಟ್ಟಿಗೇ ಕರೆಸಿದಾಗ, 2 ಗಂಟೆಗಳ ಕಾಲ ಹೈ ವೋಲ್ಟೇಜ್ ನಾಟಕ ನಡೆದಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡಲು ರೆಡಿಯಿಲ್ಲದೇ ಪೊಲೀಸರೇ ಹೈರಾಣಾಗಿ ಹೋಗಿದ್ದಾರೆ.
ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಸೇಫ್? ಅವರಿಗಾಗಿ ಟೈಂ ಕೊಡ್ತಿದ್ದೀರಾ? ಸಾವಿನ ಹಾದಿ ತುಳಿದ ಈತನ ಕಥೆ ಕೇಳಿ...
ಮಾಹಿತಿಯ ಪ್ರಕಾರ, ಹುಡುಗ ನಗರ ಪೊಲೀಸ್ ಠಾಣೆ ಪ್ರದೇಶದ ಪಂಕಜ್ ಮಾರುಕಟ್ಟೆಯ ನಿವಾಸಿಯಾಗಿದ್ದು, ಅವನ ಗೆಳತಿ ಬೋಚಹಾನ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿ. ಅವರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಮತ್ತು ಪ್ರಸ್ತುತ ಇಂಟರ್ಮೀಡಿಯೇಟ್ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಇಬ್ಬರೂ ವಾಟ್ಸ್ಆ್ಯಪ್ ಚಾಟ್‌ನಲ್ಲಿ ಪರಸ್ಪರ 'ಕುಬೂಲ್ ಹೈ' ಎಂದು ಮೂರು ಬಾರಿ ಬರೆದಿದ್ದಾರೆ ಮತ್ತು ತಮ್ಮನ್ನು ತಾವು ವಿವಾಹಿತರೆಂದು ಪರಿಗಣಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಯಾಗಿರುವ ಹಿನ್ನೆಲೆಯಲ್ಲಿ, ಹುಡುಗ ಆ ಹುಡುಗಿಯ ಜೊತೆ ವಾಸಿಸಲು ಹಠ ಹಿಡಿದಿದ್ದಾನೆ. ವಿಷಯ ಎಷ್ಟು ಗಂಭೀರವಾಯಿತು ಎಂದರೆ ಹುಡುಗನ ಸಹೋದರಿ ನಗರ ಪೊಲೀಸ್ ಠಾಣೆಗೆ ಹೋಗಿ ಸಹಾಯ ಕೋರಿದರು. ಮುಜಫರ್‌ಪುರ ನಗರ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ನಾಟಕೀಯ ಘಟನೆಗಳು ನಡೆದವು. ಸುಮಾರು ಎರಡು ಗಂಟೆ ಗಲಾಟೆ ನಡೆದವು. ಪೊಲೀಸರು ಅವರಿಬ್ಬರನ್ನೂ ಮನವೊಲಿಸಲು ಪ್ರಯತ್ನಿಸುತ್ತಿದ್ದರೂ ಸದ್ಯ ಸಾಧ್ಯವಾಗಲಿಲ್ಲ.
ಆ ಹುಡುಗ ತನ್ನ ಗೆಳತಿಯನ್ನು ಹೆಂಡತಿಯಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾನೆ. ಮೂರು ಬಾರಿ ಕುಬೂಲ್ ಹೈ ಹೇಳಿಯಾಗಿದೆ. ಇನ್ನು ನಮ್ಮಮದುವೆಯಾದಂತೆ ಎಂದಿದ್ದಾರೆ. ಪ್ರಸ್ತುತ, ಪೊಲೀಸರು ಇಬ್ಬರ ಕುಟುಂಬಗಳೊಂದಿಗೆ ಮಾತನಾಡುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆ ಹುಡುಗನ ಸಹೋದರಿ ತನ್ನ ಸಹೋದರ ಪ್ರೀತಿಯಲ್ಲಿ ಹುಚ್ಚನಾಗಿದ್ದಾನೆ ಎಂದು ಹೇಳುತ್ತಾಳೆ. ಅವನು ಇಡೀ ಕುಟುಂಬದಿಂದ ದೂರವಾಗಿದ್ದಾನೆ. ಪೊಲೀಸರು ಹುಡುಗನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಅವನ ಹಲವು ಫೋಟೋಗಳು ಮತ್ತು ಚಾಟ್‌ಗಳು ಕಂಡುಬಂದಿವೆ.
ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ, ಪಾಪ ತೊಳೆದುಕೊಳ್ಳಲು ಕುಂಭಮೇಳಕ್ಕೆ ಹೋದ ಪುತ್ರ! ಆಗಿದ್ದೇನು ನೋಡಿ...
