ತಾಯಿ ಹಾಗೂ ಮಗನ ವಿಡಿಯೋ ಒಂದು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ವಿವಾದವೂ ಜೋರಾಗಿದೆ. ರೊಮ್ಯಾಂಟಿಕ್ ವಿಡಿಯೋದಲ್ಲಿ ಏನಿದೆ? ಇದು ವಿವಾದವಾಗಿರುವುದೇಕೆ?
ಪೋಷಕರು ಹಾಗೂ ಮಕ್ಕಳ ನಡುವಿನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ತಂದೆ ಹಾಗೂ ಮಗಳ ಪ್ರೀತಿ, ತಾಯಿ ಹಾಗೂ ಮಗನ ಪ್ರೀತಿ ಸಾಮಾನ್ಯ. ಆದರೆ ಸೋಶಿಯಲ್ ಮೀಡಿಯಾ ಟ್ರೆಂಡ್ ಶುರುವಾದ ಬಳಿಕ ಅಸಲಿ ಪ್ರೀತಿಗಿಂತ ತೋರ್ಪಡಿಕೆ ಪ್ರೀತಿಗಳು, ಪೋಷಕರೆ ಮಕ್ಕಳನ್ನು ತಪ್ಪು ದಾರಿಯತ್ತ ಸೆಳೆಯುತ್ತಿರುವ ಘಟನೆಗಳು ನಡೆಯುತ್ತಿದೆ. ಇದೀಗ ತಾಯಿ ಹಾಗೂ ಮಗನ ವಿಡಿಯೋ ಒಂದು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಮಕ್ಕಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ತಾಯಂದಿರು, ಪೋಷಕರು ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕೂಡ ಅಸಂಬದ್ಧ ರೀಲ್ಸ್. ಇದೀಗ ತಾಯಿ ಹಾಗೂ ಮಗನ ರೊಮ್ಯಾಂಟಿಕ್ ವಿಡಿಯೋ ಒಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಏನಿದೆ ಆ ವಿಡಿಯೋದಲ್ಲಿ?
ಸಂತೂರ್ ಮಮ್ಮಿ ರಾಚಾ ಅನ್ನೋ ಮಹಿಳೆ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮಗನ ಜೊತೆ ರೊಮ್ಯಾಂಟಿಕ್ ಆಗಿರುವ ವಿಡಿಯೋ ಇದಾಗಿದೆ. ತಾಯಿ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಕೈಯಲ್ಲೊಂದು ರೋಸ್ ಹಿಡಿದಿದ್ದಾರೆ. ಮಗನ ಕೈ ಕೈ ಹಿಡಿದು ನಡೆದಿದ್ದಾರೆ. ಇದರಲ್ಲೇನಿದೆ ಮಹಾ ಅಂತಾ ನಿಟ್ಟುಸಿರು ಬಿಡಬೇಡಿ. ಇದರ ಮುಂದುವರಿದ ವಿಡಿಯೋ ಭಾಗಗಳನ್ನು ಪೋಸ್ಟ್ ಮಾಡಲಾಗಿದೆ. ತಾಯಿ ಹಾಗೂ ಮಗ ರೊಮ್ಯಾಂಟಿಕ್ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ತಾಯಿಗೆ ಮುತ್ತಿಕ್ಕುತ್ತಿರುವ ದೃಶ್ಯಗಳನ್ನು ಪೋಸ್ಟ್ ಮಾಡಲಾಗಿದೆ. ರೊಮ್ಯಾಂಟಿಕ್ ಕಪಲ್ ರೀತಿಯಲ್ಲಿ ಈ ವಿಡಿಯೋಗಳನ್ನು ಚಿತ್ರಿಸಲಾಗಿದೆ.
ಸ್ಪೋರ್ಟ್ಸ್ ಬೈಕ್ ಮೇಲೆ ತಾಯಿ-ಮಗನ ರೋಮ್ಯಾಂಟಿಕ್ ರೀಲ್ಸ್, ನೆಟ್ಟಿಗರಿಂದ ತಪರಾಕಿ!
ವಿಡಿಯೋದಲ್ಲಿ ತಾಯಿ ಮಗ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ವಿಡಿಯೋಗಳಿಗೆ ವಿರೋಧ ವ್ಯಕ್ತವಾಗಿದೆ. ತಾಯಿ ಹಾಗೂ ಮಗನ ಸಂಬಂಧ ಪವಿತ್ರವಾಗಿದೆ. ಆದರೆ ಇಲ್ಲಿ ಸಂಬಂಧ ಪ್ರಶ್ನಿಸುವಂತಿದೆ. ಅಸಂಬದ್ದವಾಗಿದೆ. ತಾಯಿ ಮಗನ ಜೊತೆಗಿನ ಸಂಬಂಧಕ್ಕಿಂತ ಇದು ರೊಮ್ಯಾಂಟಿಕ್ ಜೋಡಿ ರೀತಿ ಸಂಬಂಧವಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಟೀಕೆ, ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆ ಇನ್‌ಸ್ಟಾಗ್ರಾಂ ಕಮೆಂಟ್ ನಿಷೇಧಿಸಲಾಗಿದೆ.
ಈ ವಿಡಿಯೋ ಭಾರಿ ವೈರಲ್ ಆಗಿದೆ. ಲೈಕ್ಸ್ ಹಾಗೂ ಕಮೆಂಟ್ಸ್ ಜೋರಾಗಿದೆ. ಕೆಲವರು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ವಿವಾದ ಮಾತ್ರ ಜೋರಾಗುತ್ತಲೆ. ರಾಚಾ ಈ ರೀತಿ ಮಗನ ಜೊತೆ ವಿಡಿಯೋ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿಯ ರೊಮ್ಯಾಂಟಿಕ್ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮಗನ ಜೊತೆ ಅತ್ಮೀಯತೆಯಿಂದ ಇರುವುದು ಸೇರಿದಂತೆ ಯುವ ಜೋಡಿಗಳಂತೆ ಫೋಸ್ ಕೊಟ್ಟಿರುವ ವಿಡಿಯೋಗಳನ್ನು, ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ರಾಚಾ ಪೋಸ್ಟ್ ಮಾಡಿರುವ ಹಲವು ವಿಡಿಯೋಗಳಿಗೆ ವಿರೋಧಗಳು, ಆಕ್ರೋಶಗಳು ವ್ಯಕ್ಕವಾಗಿದೆ.
ಪ್ರತಿಕ್ರಿಯೆ, ಟೀಕೆ ಏನೇ ಬಂದರೂ ರಾಚಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಬಂದಿದ್ದಾರೆ. ಇದೀಗ ಹೊಸ ವಿಡಿಯೋ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೆ ಕೆಲವರು ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಸಮಸ್ಯೆ ಇಲ್ಲಾ ಎಂದ ಮೇಲೆ ಕಮೆಂಟ್ ಮಾಡಿ ನಿಮ್ಮ ಸಮಸ್ಯೆಯನ್ನು ಯಾಕೆ ಬೊಟ್ಟು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಬೆನ್ನಲ್ಲೇ ಇದೀಗ ತಾಯಿ ಹಾಗೂ ಮಗನ ಸಂಬಂಧ ಕುರಿತು ಚರ್ಚೆಗಳು ನಡೆಯುತ್ತದೆ. ಭಾರತದಲ್ಲಿ ಸಂಬಂಧಕ್ಕೆ ಅತ್ಯಂತ ಹೆಚ್ಚಿನ ಬೆಲೆ ಹಾಗೂ ಗೌರವ ನೀಡಲಾಗುತ್ತದೆ. ಗುರು-ಶಿಷ್ಯರ ಸಂಬಂಧ, ತಾಯಿ ಮಗನ ಸಂಬಂಧ ಈ ರೀತಿಯ ಕೆಲ ಘಟನೆಗಳಿಂದ ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿದೆ ಅನ್ನೋ ವಾದವೂ ಹೆಚ್ಚಾಗುತ್ತಿದೆ. ರಾಚಾ ಪೋಸ್ಟ್ ಮಾಡಿದ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮಗನಿಗೆ ಮಾತ್ರವಲ್ಲ, ಅವನ ಫ್ರೆಂಡ್‌ಗೂ ಲಂಚ್ ಬಾಕ್ಸ್ ಕಳುಹಿಸೋ ಅಮ್ಮನಿಗೆ ಚಪ್ಪಾಳೆ!
