Asianet Suvarna News Asianet Suvarna News

ಸ್ಪೋರ್ಟ್ಸ್ ಬೈಕ್ ಮೇಲೆ ತಾಯಿ-ಮಗನ ರೋಮ್ಯಾಂಟಿಕ್ ರೀಲ್ಸ್, ನೆಟ್ಟಿಗರಿಂದ ತಪರಾಕಿ!

ಸ್ಪೋರ್ಟ್ಸ್ ಬೈಕ್ ಮೇಲೆ ಯುವಕ ಹಾಗೂ ಮಹಿಳೆ ರೋಮ್ಯಾಂಟಿಕ್ ರೀಲ್ಸ್ ಶೂಟ್ ಮಾಡಿದ್ದಾರೆ. ಆದರೆ ಇವರಿಬ್ಬರು ಜೋಡಿಗಳಲ್ಲ. ಬದಲಾಗಿದೆ ತಾಯಿ-ಮಗ. ಆದರೆ ಈ ರೀಲ್ಸ್ ಮೆಚ್ಚುಗೆ ಬದಲು ನೆಟ್ಟಿಗರಿಂದ ಟೀಕೆ ಎದುರಿಸಿದೆ.
 

Mother and son Romantic reels on sports bike gets negative comments on Relationship ckm
Author
First Published Jun 21, 2024, 9:03 AM IST

ಇದು ರೀಲ್ಸ್ ಜಮಾನ. ಏನಿದ್ದರೂ ರೀಲ್ಸ್ ಇಲ್ಲದೆ ದಿನ ಆರಂಭವಾಗುವುದಿಲ್ಲ, ಅಂತ್ಯವೂ ಆಗಲ್ಲ. ಬಹುತೇಕರು ರೀಲ್ಸ್ ಹಿಂದೆ ಬಿದ್ದು ಬಾರಿ ದಂಡ ತೆತ್ತಿದ್ದಾರೆ. ರೀಲ್ಸ್ ಗೀಳಿನಿಂದ ಅಪಾಯಕ್ಕೆ ಸಿಲುಕಿದರವರ ಸಂಖ್ಯೆಯೂ ಹಚ್ಚಿದೆ. ಇದೀಗ ಸ್ಪೋರ್ಟ್ಸ್ ಬೈಕ್ ಮೇಲೆ ಯುವಕ ಹಾಗೂ ಮಹಿಳೆಯೊಬ್ಬರು ರೀಲ್ಸ್ ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಆದರೆ ಇವರಿಬ್ಬರ ರೋಮ್ಯಾಂಟಿಕ್ ವಿಡಿಯೋಗೆ ನೆಟ್ಟಿಗಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ತಾಯಿ ಮಗನೊಂದಿಗೆ ಈ ರೀತಿ ವಿಡಿಯೋ ಮಾಡುತ್ತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಮೀರಾ ಮೆಹ್ತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕೆಟಿಎಂ ಸ್ಪೋರ್ಟ್ಸ್ ಬೈಕ್ ಮೇಲೆ ಈ ವಿಡಿಯೋ ಶೂಟ್ ಮಾಡಲಾಗಿದೆ. ಶಾರ್ಟ್ ರೀಲ್ಸ್‌ನಲ್ಲಿ ನಾವಿಬ್ಬರು ತಾಯಿ ಮಗ ಎಂದಿದ್ದಾರೆ. ಇಷ್ಟೇ ಅಲ್ಲ ವಿಡಿಯೋ ಹಂಚಿಕೊಂಡು ತಾಯಿ ಮಗ ಎಂದು ಬರೆದುಕೊಂಡಿದ್ದಾರೆ. ಇಷ್ಟೇ ತಾನು ಸಂತೂರ್ ಮಮ್ಮಿ ಎಂದು ಹೇಳಿಕೊಂಡಿದ್ದಾರೆ. 

ಸಖಿಯೇ ಸಖಿಯೇಗೆ ಆ್ಯಂಕರ್ಸ್​ ಶ್ವೇತಾ-ಅಕುಲ್​ ಭರ್ಜರಿ ಸ್ಟೆಪ್​: ಜಗ್ಗಣ್ಣ ಕಂಡುಬಿಟ್ರು ಎಂದ ಫ್ಯಾನ್ಸ್​

ಈ ವಿಡಿಯೋದಲ್ಲಿ ಮೀರಾ ಮೆಹ್ತಾ ಶಾರ್ಟ್ಸ್ ಹಾಕಿದ್ದಾರೆ. ಇತ್ತ ಆಕೆಯ ಮಗ ಜಾಕೆಟ್ ಧರಿಸಿದ್ದಾನೆ. ರೋಮ್ಯಾಂಟಿಕ್ ಪೋಸ್ ನೀಡಿದ ಈ ತಾಯಿ ಮಗನ ವಿಡಿಯೋಗೆ ಮೆಚ್ಚುಗೆಗಿಂತ ಟೀಕೆಗಳೇ ಹೆಚ್ಚಾಗಿದೆ. ಮಗನ ಜೊತೆಗೆ ರೋಮ್ಯಾಂಟಿಕ್ ರೀಲ್ಸ್‌ಗೆ ಕಿಡಿ ಕಾರಿದ್ದಾರೆ. ತಾಯಿ-ಮಗನ ಸಂಬಂಧ ಕುರಿತು ಹಲವರು ಪ್ರಶ್ನಿಸಿದ್ದಾರೆ. ಆದರೆ ಈ ವಿಡಿಯೋ ಬರೋಬ್ಬರಿ 40  ಲಕ್ಷ ವೀಕ್ಷಣೆ ಕಂಡಿದೆ. 2,000ಕ್ಕೂ ಹೆಚ್ಚು ಮಂದಿ ಕಮೆಂಟ್ಸ್ ಮಾಡಿದ್ದಾರೆ. ರೀಲ್ಸ್‌ಗಾಗಿ ಈ ರೀತಿ ಸಂಬಂಧಕ್ಕೆ ಅರ್ಥವೇ ಇಲ್ಲದ ರೀತಿ ಮಾಡಬೇಡಿ. ಭಾರತದಲ್ಲಿ ತಾಯಿ-ಮಗ ಮಾತ್ರವಲ್ಲ, ಪ್ರತಿಯೊಂದು ಸಂಬಂಧಕ್ಕೂ ಅಷ್ಟೇ ಪಾವಿತ್ರ್ಯತೆ ಇದೆ. ಆದರೆ ರೀಲ್ಸ್ ಗೀಳಿಗೆ ಈ ಸಂಬಂಧಕ್ಕೆ ಕಪ್ಪು ಚುಕ್ಕೆ ತರಬೇಡಿ ಎಂದು ಸಲಹೆ ನೀಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Meera Mehta (@_mehta_meera_)

 

ಇದೇ ವೇಳ ಕೆಲವರು ಸಂತೂರ್ ಮಾಮ್ ಎಂದು ಹೊಗಳಿದ್ದಾರೆ. ತಾಯಿ ಮಗ ಎಂದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪರ ವಿರೋಧದ ನಡುವೆ ಈ ವಿಡಿಯೋ ಭಾರಿ ವೈರಲ್ ಆಗಿದೆ. ಮೀರಾ ಮೆಹ್ತಾ ಇನ್‌ಸ್ಟಾಗ್ರಾಂ ಮೂಲಕ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮೀರಾ ಮೆಹ್ತಾ ಇನ್‌ಸ್ಟಾದಲ್ಲಿ 25,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಆಕಸ್ಮಿಕವಾಗಿ ಬಿಗಿದ ಕುಣಿಕೆ: ಸಾವಿನ ರೀಲ್ಸ್ ಮಾಡಲು ಹೋಗಿ ಸತ್ತೇ ಹೋದ ಯುವಕ
 

Latest Videos
Follow Us:
Download App:
  • android
  • ios