ಕಂಫರ್ಟ್ ಝೋನ್ ಬಿಟ್ಟು ಹೊರ ಬನ್ನಿ, ಜೀವನದಲ್ಲಿ ಏನೆಲ್ಲಾ ಬದಲಾಗುತ್ತೆ ನೋಡಿ!

ಕಂಫರ್ಟ್ ಆಗಿರಲು ಎಲ್ಲರೂ ಬಯಸುತ್ತೇವೆ. ಆದರೆ, ಆ ವಲಯದಲ್ಲಿ ಎಷ್ಟು ಮುಳುಗಿಹೋಗಿದ್ದೇವೆ ಎನ್ನುವುದನ್ನು ಆಗಾಗ ನೋಡಿಕೊಳ್ಳಬೇಕು. ಏಕೆಂದರೆ, ಕಂಫರ್ಟ್ ಆಗಿದ್ದೇವೆ ಎಂದುಕೊಳ್ಳುತ್ತ ನಮ್ಮ ಜೀವನವನ್ನು ಖಾಲಿ ಮಾಡಿಕೊಳ್ಳುತ್ತ ಸಾಗುತ್ತೇವೆ. ಅದರಿಂದಾಗಿ ನಿಷ್ಕ್ರಿಯತೆ, ಜಡಭರಿತ ಮನೋಭಾವ ನಮ್ಮದಾಗುತ್ತದೆ.  

Some signs that you are stuck in comfort zone and lesson you learn when you come out of it

ಸುಖವಾಗಿದ್ದೇನೆಂದುಕೊಳ್ಳುತ್ತ ದಿನ, ವಾರಗಳ ಅರಿವಿಲ್ಲದೇ ತಮ್ಮದೇ ಕೆಲಸಗಳಲ್ಲಿ ಮುಳುಗುವವರಿದ್ದಾರೆ. ಅವರು ಜೀವನದಲ್ಲಿ ಕಂಫರ್ಟ್ ಆಗಿರುತ್ತಾರೆ. ಕೆಲವೊಮ್ಮೆ ಜೀವನದ ಎಲ್ಲ ಒತ್ತಡಗಳೂ ಮುಗಿದು ಹೋಗಿವೆ ಎನಿಸಲು ಶುರುವಾಗುತ್ತದೆ. ಒತ್ತಡ ಕಡಿಮೆಯಾಗಿದೆ ಎನಿಸುತ್ತದೆ. ಅತ್ಯಂತ ಸುರಕ್ಷಿತವಾಗಿರುವ ಭಾವನೆ ಮೂಡುತ್ತದೆ. ದೀರ್ಘ ಕಾಲ ಕಂಫರ್ಟ್ ವಲಯದಲ್ಲಿರುವಾಗ ಇಂಥ ಭಾವನೆಗಳು ಮೂಡುವುದು ಸಹಜ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ, ಕಂಫರ್ಟ್ ವಲಯದಲ್ಲಿದ್ದು ಅಭ್ಯಾಸವಾದವರಿಗೆ ಹೊಸ ಅವಕಾಶಗಳನ್ನು ಸ್ವೀಕರಿಸುವ ಮನಸ್ಥಿತಿ ಕಡಿಮೆಯಾಗುತ್ತದೆ. ವಜ್ರದ ಹರಳುಗಳು ರೂಪುಗೊಳ್ಳುವುದೇ ಹೆಚ್ಚಿನ ಒತ್ತಡವಿದ್ದಾಗ ಎನ್ನುವುದನ್ನು ಕೇಳಿದ್ದೇವೆ. ಜೀವನಕ್ಕೆ ಕಂಫರ್ಟ್ ಬೇಕೆಂದು ವ್ಯಕ್ತಿಗತ ಪ್ರಗತಿಯನ್ನು ಕುಂಠಿತಗೊಳಿಸಿಕೊಳ್ಳಬಾರದು. ಕಂಫರ್ಟ್ ವಲಯದಲ್ಲಿರಲು ಇಷ್ಟಪಡುವುದು ಮನುಷ್ಯ ಸಹಜ ಗುಣ. ಯಾರೂ ಸಹ ಹಿತವಲ್ಲದ ಸನ್ನಿವೇಶಗಳನ್ನು  ಇಷ್ಟಪಡುವುದಿಲ್ಲ. ಆದರೆ, ಇದೇ ಅಭ್ಯಾಸವಾದರೆ ನಿಷ್ಕ್ರಿಯತೆಯೂ ಉಂಟಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ಅಗತ್ಯ. ನೀವು ಕಂಫರ್ಟ್ ವಲಯದಲ್ಲಿ ಸಿಲುಕಿ ಕ್ರಮೇಣ ನಿಷ್ಕ್ರಿಯರಾಗುತ್ತಾ ಸಾಗಿದ್ದೀರಾ ಇಲ್ಲವಾ ಎನ್ನುವುದನ್ನು ಕೆಲವು ಅಂಶಗಳ ಮೂಲಕ ಅರಿತುಕೊಳ್ಳಬಹುದು. 

•    ನಿಶ್ಚಲತೆ (Stagnant)
ನಿಮ್ಮ ದೈನಂದಿನ ವ್ಯವಹಾರ (Routine) ಎಷ್ಟು ನಿಶ್ಚಲವಾಗಿರಲು ಸಾಧ್ಯ ಎಂದರೆ, ನಿಮಗೆ ದಿನಾಂಕ ಮತ್ತು ವಾರಗಳೂ ಮರೆಯಬಹುದು. ದಿನವೂ ಬೆಳಗ್ಗೆ ಒಂದೇ ಸಮಯಕ್ಕೆ ಏಳುವುದು, ಅದೇ ಅಡುಗೆ, ಮನೆಯ ಕೆಲಸ...ಇಷ್ಟರಲ್ಲೇ ಜೀವನ (Life) ಕಳೆಯುತ್ತಿದೆಯಾ? ಹಾಗಿದ್ದರೆ ನಿಮ್ಮಲ್ಲಿ ನಿಷ್ಕ್ರಿಯತೆ ಉಂಟಾಗಿರಬಹುದು.

ನಾನೇ ಮೇಲು ಅಂತ ಸಾಯ್ತಿದ್ದರೆ ಇವತ್ತೇ ನಿಮ್ಮನ್ನು ತಿದ್ದಿಕೊಳ್ಳಿ!

•    ಸಮಯ (Time) ವೇಗವಾಗಿ ಸರಿದುಹೋಗುವ ಅನುಭವ
ಪ್ರತಿದಿನವೂ ಎಕ್ಸೈಟ್ ಮೆಂಟ್ (Exite) ಆಗಿರಲು ಅಥವಾ ಹೊಸತೇನೋ ಇರಲು ಸಾಧ್ಯವಿಲ್ಲ. ಆದರೆ, “ನಾವು ನಿಂತಲ್ಲೇ ಇದ್ದೇವೆ, ಸಮಯ ಮಾತ್ರ ವೇಗವಾಗಿ ಸರಿದುಹೋಗುತ್ತಿದೆ’ ಎನ್ನುವ ಭಾವನೆ (Feel) ಕಾಡಿದರೆ ನೀವು ಕಂಫರ್ಟ್ ವಲಯದಲ್ಲಿ (Comfort Zone) ಮುಳುಗಿ ಕ್ರಿಯಾಶೀಲವಾಗಿರುವುದನ್ನು (Active) ಮರೆತುಬಿಟ್ಟಿದ್ದೀರಿ ಎಂದರ್ಥ. ಅಧ್ಯಯನಗಳ ಪ್ರಕಾರ, ಒಂದೇ ರೀತಿಯ ಕೆಲಸವನ್ನು ದೀರ್ಘಕಾಲ ಮಾಡುತ್ತಿದ್ದರೆ ನಮ್ಮ ಮಿದುಳು (Brain) ಅಷ್ಟಕ್ಕೇ ಸೀಮಿತವಾಗಿ ಬಿಡುತ್ತದೆ. ಮಿದುಳು ಕ್ರಿಯಾಶೀಲವಾಗಿ ಇರಬೇಕೆಂದರೆ, ಹೊಸ ವಿಷಯಗಳನ್ನು ಕಲಿಯಬೇಕು, ಹೊಸ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸಕ್ರಿಯವಾಗಿರಬೇಕು. 

•    ಹೊಸ ಕಲಿಕೆ ಥ್ರಿಲ್ (Thrill) ಎನಿಸೋಲ್ಲ!
ಮಕ್ಕಳನ್ನು ನೋಡಿ, ಯಾವುದಾದರೂ ಹೊಸ ವಸ್ತುವಿನ ಬಗ್ಗೆ ತಿಳಿದರೆ ಸಾಕಷ್ಟು ಎಕ್ಸೈಟ್ ಆಗುತ್ತಾರೆ. ಅಂಥದ್ದೊಂದು ಥ್ರಿಲ್ ಜೀವನದ ಎಲ್ಲ ಹಂತದಲ್ಲೂ ಅಗತ್ಯ. ಅದಿಲ್ಲವಾದರೆ, ನೀವು ಕಂಫರ್ಟ್ ವಲಯದಲ್ಲಿ ಹೂತು ಹೋಗಿದ್ದೀರಿ ಎಂದರ್ಥ. ಹೊಸ ಕ್ರೀಡೆ, ಹೊಸ ವಸ್ತು, ಯಾವುದೇ ಹೊಸ ಕಲಿಕೆ ನಿಮ್ಮಲ್ಲಿ ಉತ್ಸಾಹ (Enthusiasm) ಮೂಡಿಸಬೇಕು, ಜೀವಂತಿಕೆ ಹೆಚ್ಚಿಸಬೇಕು.

•    ನಿರ್ಧಾರ (Decision) ಕೈಗೊಳ್ಳಲು ಹಿಂಜರಿಕೆ
ಜೀವನ ಬದಲಿಸುವಂತಹ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ನಿಮಗೆ ಹಿಂಜರಿಕೆಯೇ? ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ? ಅದರಿಂದಾಗಿ ಉತ್ತಮ ಅವಕಾಶಗಳನ್ನೂ ಕೈ ಚೆಲ್ಲಿ ಕುಳಿತಿದ್ದೀರಾ? ಇದಂತೂ ಎಚ್ಚರಿಕೆಯ ಹಂತ. ನೀವು ಈಗಿರುವ ಹಂತದಲ್ಲೇ ನಿಷ್ಕ್ರಿಯರಾಗಿದ್ದೀರಿ ಎನ್ನುವುದನ್ನು ಇದು ತೋರಿಸುತ್ತದೆ.

ವರ್ಷ 40 ಆಯ್ತು, ಮದ್ವೆ ಆಗ್ತಿಲ್ಲವೆಂದರೆ ಹೀಗ್ ಮಾಡಿ ನೋಡಿ, ಡೇಟಿಂಗ್ ಟಿಪ್ಸ್

•    ಜನರ ಒಡನಾಟದಿಂದ (Interaction) ದೂರ
ನಿಮ್ಮ ಮನೆಯ ಕೆಲಸಗಳಲ್ಲಿ ನೀವೆಷ್ಟು ಮುಳುಗಿದ್ದೀರಿ ಎಂದರೆ, ನಿಮಗೆ ಯಾರದ್ದೇ ಒಡನಾಟವೂ ಬೇಡವಾಗಿದೆ. ಸಮಾರಂಭ, ಕಾರ್ಯಕ್ರಮಗಳಿಗೂ ಹೋಗದೆ ಇರುತ್ತೀರಿ ಎಂದಾದರೆ, ನೀವು ಕಂಫರ್ಟ್ ವಲಯದಲ್ಲಿ ಸಿಕ್ಕಿಬಿದ್ದಿದ್ದೀರಿ ಎಂದರ್ಥ. ಹೊಸ ಜನರನ್ನು ಭೇಟಿಯಾಗುವ ಉತ್ಸಾಹ ಇಲ್ಲದಿರುವುದು, ಹೊಸ ಅನುಭವಗಳು ಬೇಕಿಲ್ಲದಿರುವುದು ನಿಶ್ಚಲತೆಗೆ ಕಾರಣವಾಗುತ್ತವೆ. ಸಾಮಾಜಿಕ ಜೀವನ ಯಾರಿಗಾದರೂ ಅಗತ್ಯ. ಸಾಮಾಜಿಕ ಜೀವನದಲ್ಲಿ (Social Life) ಸಕ್ರಿಯರಾಗಿರಲು ಯತ್ನಿಸಿ.

•    ಜೀವನ ಚೆನ್ನಾಗಿದೆ, ಆದರೆ ಏನೋ ಮಿಸ್ಸಿಂಗ್ (Missing) 
ಬಹಳಷ್ಟು ಮಹಿಳೆಯರ (Woman) ಸಮಸ್ಯೆ ಇದೇ. ಅವರ ಜೀವನ ಚೆನ್ನಾಗಿರುತ್ತದೆ. ಏನೋ ಸಮಸ್ಯೆ ಇರುವುದಿಲ್ಲ. ಆದರೆ, ಏನೋ ಎಲ್ಲೋ ಮಿಸ್ಸಿಂಗ್ ಅನಿಸುತ್ತ ಬೋರಾಗುತ್ತಾರೆ. ಸುಖಾಸುಮ್ಮನೆ ಮನಸ್ಸನ್ನು ಕೆಡಿಸಿಕೊಳ್ಳುತ್ತಾರೆ. ಸಾಮಾಜಿಕ ಸಕ್ರಿಯವಾಗಿಲ್ಲದಿರುವುದು ಅಥವಾ ಸೀಮಿತ ಬಳಗದ ಸ್ನೇಹವನ್ನಾದರೂ ಹೊಂದದಿರುವುದು ಇದಕ್ಕೆ ಕಾರಣ. 
 

Latest Videos
Follow Us:
Download App:
  • android
  • ios