Why Smriti Mandhana Called Off Wedding? Friend Alleges Palash Muchhal Cheated ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿದ್ಯಾನ್ ಮಾನೆ ಅವರ ಪ್ರಕಾರ, ಪಲಾಶ್ ಮುಚ್ಚಲ್ ಸ್ಮೃತಿಗೆ ಮೋಸ ಮಾಡಿದ್ದಲ್ಲದೆ, ಬೆಡ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.
ಮುಂಬೈ (ಜ.24): ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರನ್ನು ನವೆಂಬರ್ 2025 ರಲ್ಲಿ ವಿವಾಹವಾಗಲು ನಿರ್ಧಾರ ಮಾಡಿದ್ದರು. ಆದರೆ, ದಿಢೀರ್ ಆಗಿ ವಿವಾಹ ರದ್ದಾಗಿತ್ತು. ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ವಿವಾಹ ರದ್ದಾದ ಕೆಲವು ತಿಂಗಳುಗಳ ಬಳಿಕ, ಈ ಸಮಾರಂಭಗಳಲ್ಲಿ ಹಾಜರಿದ್ದ ಮಂಧಾನಾಳ ಬಾಲ್ಯದ ಸ್ನೇಹಿತೆ ವಿದ್ಯಾನ್ ಮಾನೆ, ಪಲಾಶ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮಾನೆ ಪ್ರಕಾರ, ಪಲಾಶ್ ಸ್ಮೃತಿಗೆ ಮೋಸ ಮಾಡಿದ್ದು ನಿಜ. ಮದುವೆಯ ಹಿಂದಿನ ದಿನ ಆತ ತನ್ನ ಬೆಡ್‌ರೂಮ್‌ನಲ್ಲಿ ಇನ್ನೊಂದು ಮಹಿಳೆಯ ಜೊತೆ ಹಾಸಿಗೆ ಹಂಚಿಕೊಂಡಿದ್ದ ಎನ್ನಲಾಗಿದೆ.
ಕಳೆದ ವರ್ಷದ ನ.23 ರಂದು ನಡೆಯಬೇಕಿದ್ದ ವಿವಾಹ ಕಾರ್ಯಕ್ರಮದಲ್ಲಿ ನಾನೂ ಇದ್ದೆ. ಇದೇ ವೇಳೆ ಆತ ಇನ್ನೊಂದು ಮಹಿಳೆಯ ಜೊತೆ ಬೆಡ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಆ ದೃಶ್ಯವೇ ಭಯಾನಕವಾಗಿತ್ತು. ಅಲ್ಲಿಯೇ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಅವನಿಗೆ ಸರಿಯಾಗಿ ಬಾರಿಸಿದರು. ಅವರ ಇಡೀ ಕುಟುಂಬವೇ ಕಳ್ಳರ ಸಂತೆ. ನನ್ನ ಪ್ರಕಾರ ಆತ ಮದುವೆಯಾಗಿ ಸಾಂಗ್ಲಿಯಲ್ಲೇ ಸೆಟಲ್ ಆಗೋ ಪ್ಲ್ಯಾನ್‌ನಲ್ಲಿದ್ದ. ಆದರೆ, ನನಗೆ ಎಲ್ಲವೂ ಇದು ತಿರುಗುಬಾಣವಾಯಿತು' ಎಂದು ವಿದ್ಯಾನ್ ಮಾನೆ ಹೇಳಿದ್ದಾರೆ.
ಮಾನೆ ಹೇಳುವ ಪ್ರಕಾರ, ನಾನು ಸ್ಮೃತಿಯ ಬಾಲ್ಯದ ಸ್ನೇಹಿತ. ಪಲಾಶ್ ಮುಚ್ಚಾಲ್‌ನನ್ನು ನನಗೆ ಪರಿಚಯಿಸಿದ್ದೇ ಸ್ಮೃತಿ ಕುಟುಂಬ. ಪಲಾಶ್ ಮುಚ್ಚಾಲ್ 40 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸಾಂಗ್ಲಿಯಲ್ಲಿ ವಿದ್ಯಾನ್ ಮಾನೆ ದೂರು ಕೂಡ ದಾಖಲಿಸಿದ್ದಾರೆ.
ಪಲಾಶ್ ತಾಯಿಯನ್ನು ಭೇಟಿಯಾಗಿದ್ದೆ
"ಕಳೆದ ತಿಂಗಳು ನಾನು ಅವರ ತಾಯಿ (ಅಮಿತಾ ಮುಚ್ಚಲ್) ಅವರನ್ನು ಭೇಟಿಯಾದಾಗ, ಚಿತ್ರ ಬಿಡುಗಡೆ ಮಾಡಲು ಬಜೆಟ್ ಈಗ ₹1.5 ಕೋಟಿಗೆ ಏರಿದೆ ಎಂದು ಹೇಳಿದರು. ಅವರು ಇನ್ನೂ ₹10 ಲಕ್ಷ ಹೂಡಿಕೆ ಮಾಡುವಂತೆ ಹೇಳೀದ್ದರು. ಇಲ್ಲದಿದ್ದರೆ ನನಗೆ ಯಾವುದೇ ಹಣ ಹಿಂತಿರುಗುವುದಿಲ್ಲ ಎಂದಿದ್ದಲ್ಲದೆ, ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು ಮತ್ತು ನನ್ನನ್ನು ಚಿತ್ರದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದರು, ಆದ್ದರಿಂದ ನಾನು ದೂರು ದಾಖಲಿಸಬೇಕಾಯಿತು" ಎಂದು ವಿದ್ಯಾನ್ ಮಾನೆ ತಿಳಿಸಿದ್ದಾರೆ.
"ಮದುವೆ ರದ್ದಾದ ನಂತರ, ಕುಟುಂಬವು ನನ್ನನ್ನು ಎಲ್ಲಾ ಕಡೆ ಬ್ಲಾಕ್ ಮಾಡಿತು.ಚಿತ್ರದ ಇತರ ಕಲಾವಿದರಿಗೂ ಅವರಿಗೆ ಸಿಗಬೇಕಾದ ಸಂಭಾವನೆ ಸಿಕ್ಕಿಲ್ಲ. ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕರಿಗೆ ಮೋಸ ಮಾಡುವ ನಿರ್ದೇಶಕರ ಬಗ್ಗೆ ಕೇಳಿದ್ದೆ. ಆದರೆ, ಇದು ಸಂಪೂರ್ಣವಾಗಿ ಕಳ್ಳತನ' ಎಂದು ಮಾನೆ ಆರೋಪಿಸಿದ್ದಾರೆ.
ಅವರ ಪ್ರಕಾರ, ಪಲಾಶ್ ವಿರುದ್ಧ ಎಲ್ಲಾ ಪುರಾವೆಗಳು ತಮ್ಮ ಬಳಿ ಇವೆ ಮತ್ತು ಮುಚ್ಚಲ್ ಕುಟುಂಬದ ನಿಜಬಣ್ಣ ಬಹಿರಂಗಪಡಿಸಲು ಅವುಗಳನ್ನು ಪೊಲೀಸರು ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಅವರು ಸಿದ್ಧರಿದ್ದಾರೆ. "ನನ್ನ ಚಾಟ್‌ಗಳು ಮತ್ತು ಫೋನ್ ಸಂಭಾಷಣೆಗಳು ಸೇರಿದಂತೆ ಎಲ್ಲಾ ಪುರಾವೆಗಳನ್ನು ನಾನು ಉಳಿಸಿಕೊಂಡಿದ್ದೇನೆ ಮತ್ತು ಅವುಗಳನ್ನು ಪೊಲೀಸರು ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ನಾನು ಸಿದ್ಧನಿದ್ದೇನೆ' ಎಂದಿದ್ದಾರೆ.
ಆರೋಪ ನಿರಾಕರಿಸಿದ ಪಲಾಶ್ ಮುಚ್ಚಾಲ್
ಶುಕ್ರವಾರದಂದು ಮುಚ್ಚಲ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ, ಅದರ ಮೂಲಕ ಅವರು ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. "ಸಾಂಗ್ಲಿ ಮೂಲದ ವಿದ್ಯಾನ್ ಮಾನೆ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಆರೋಪಗಳನ್ನು ಪರಿಗಣಿಸಿ, ನನ್ನ ವಿರುದ್ಧದ ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ತಪ್ಪಾಗಿವೆ ಎಂದು ನಾನು ಹೇಳಲು ಬಯಸುತ್ತೇನೆ. ನನ್ನ ಖ್ಯಾತಿಗೆ ಕಳಂಕ ತರುವ ದುರುದ್ದೇಶಪೂರಿತ ಉದ್ದೇಶದಿಂದ ಅವುಗಳನ್ನು ಮಾಡಲಾಗಿದೆ ಮತ್ತು ಅವುಗಳಿಗೆ ಯಾವುದೇ ಸವಾಲು ಹಾಕದೆ ಉಳಿಯಲು ಸಾಧ್ಯವಿಲ್ಲ. ನನ್ನ ವಕೀಲ ಶ್ರೇಯಾಂಶ್ ಮಿಥಾರೆ ಎಲ್ಲಾ ಕಾನೂನು ಮಾರ್ಗಗಳನ್ನು ಅನ್ವೇಷಿಸುತ್ತಿದ್ದಾರೆ ಮತ್ತು ಈ ವಿಷಯವನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಕಟ್ಟುನಿಟ್ಟಾಗಿ ನಿಭಾಯಿಸಲಾಗುವುದು' ಎಂದು ಬರೆದುಕೊಂಡಿದ್ದಾರೆ.


