MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?

ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?

ಆಭರಣ ಮಳಿಗೆಯೊಂದರ ಜಾಹೀರಾತಿನಲ್ಲಿ ನಟಿ ತಾರಾ ಆಡಿದ ಮಾತಿನಿಂದ, ನಟಿ ಪ್ರೇಮಾ ಅವರ ಎರಡನೇ ಮದುವೆಯ ಬಗ್ಗೆ ಚರ್ಚೆ ಶುರುವಾಗಿದೆ. ಈ ಹಿಂದೆ ತಮ್ಮ ವಿಚ್ಛೇದನ, ಮದುವೆಯ ಬಗೆಗಿನ ಅಭಿಪ್ರಾಯ ಮತ್ತು ಒಂಟಿ ಜೀವನದ ಬಗ್ಗೆ ಮಾತನಾಡಿದ್ದ ಪ್ರೇಮಾ, ಈಗ ನಿಜವಾಗಿಯೂ ಮರುಮದುವೆ ಆಗುತ್ತಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

2 Min read
Author : Suchethana D
Published : Mar 07 2026, 04:30 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರೇಮಾ ಮದುವೆ?
Image Credit : Social Media

ಪ್ರೇಮಾ ಮದುವೆ?

ಸ್ಯಾಂಡಲ್​ವುಡ್​ ನಟಿ ಪ್ರೇಮಾ ಅವರಿಗೆ ಈಗ 49 ವರ್ಷ ವಯಸ್ಸು. ಸದ್ಯ ಅವರು ಸಿಂಗಲ್​ ಆಗಿದ್ದಾರೆ. ಸಿನಿಕರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ ಜೀವನ್ ಅಪ್ಪಚ್ಚು ಎಂಬುವವರ ಜೊತೆ ಪ್ರೇಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಇದಾಗಲೇ ನಟಿ ತಮ್ಮ ಎರಡನೆಯ ಮದುವೆಯ ಬಗ್ಗೆ ಹಿಂದೆಯೂ ಮಾತನಾಡಿದ್ದರು. ಆದರೆ ಅವರು ಈಗ ಮರು ಮದುವೆ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.

26
ಆಭರಣ ಮಳಿಗೆ ಜಾಹೀರಾತು
Image Credit : Twitter

ಆಭರಣ ಮಳಿಗೆ ಜಾಹೀರಾತು

ಇದಕ್ಕೆ ಕಾರಣ, ಹಿರಿಯ ನಟಿ ತಾರಾ ಅನುರಾಧ (Tara Anuradha). ಆಭರಣ ಮಳಿಗೆಯೊಂದರ ಜಾಹೀರಾತಿನ ಹಿನ್ನೆಲೆಯಲ್ಲಿ ತಾರಾ ಮತ್ತು ಪ್ರೇಮಾ ಅವರು ಮಳಿಗೆಗೆ ಭೇಟಿ ಕೊಟ್ಟಿದ್ದರು. ಆ ಸಮಯದಲ್ಲಿ, ಆಭರಣಗಳ ಬಗ್ಗೆ ಮಾತನಾಡುವಾಗ ನಟಿ ತಾರಾ, ಇದು ನಿನ್ನ ಮದುವೆಗೆ ಚೆನ್ನಾಗಿ ಕಾಣಿಸುತ್ತದೆ. ಮದುವೆ ದಿನ ಹಾಕಿಕೋ ಎಂದು ಹೇಳಿದ್ದಾರೆ. ಅಲ್ಲಿಗೆ, ಪ್ರೇಮಾ ಅವರು ಇನ್ನೊಂದು ಮದುವೆಯಾಗುತ್ತಿದ್ದಾರೆ ಎನ್ನುವ ಹಿಂಟ್​ ಕೊಟ್ಟರಾ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದಾರೆ.

Related Articles

Related image1
ನಟಿ ಭವ್ಯಾ ಗೌಡಗೆ ರಕ್ತದ ಭಾವಚಿತ್ರ ಉಡುಗೊರೆ: Karna Serial ನಿಧಿ ಭಾವುಕ- ಅಬ್ಬಾ! ಇದೆಂಥ ಅಭಿಮಾನ
Related image2
Rakshit Shetty ಫೇಸ್​ಬುಕ್​ ಕವರ್​ ಫೋಟೋ 3 ವರ್ಷದ ಬಳಿಕ ಚೇಂಜ್! ಒಂದು ಚಿತ್ರ, ನೂರೆಂಟು ಅರ್ಥ
36
ವೈಯಕ್ತಿಕ ಬೇರೆ, ವೃತ್ತಿ ಜೀವನ ಬೇರೆ
Image Credit : Twitter

ವೈಯಕ್ತಿಕ ಬೇರೆ, ವೃತ್ತಿ ಜೀವನ ಬೇರೆ

ಈ ಹಿಂದೆ ಪ್ರೇಮಾ ಅವರು, ತಮ್ಮ ಮತ್ತೊಂದು ಮದುವೆಯ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು, ವೈಯಕ್ತಿಕ ಜೀವನ ಬೇರೆ, ವೃತ್ತಿ ಜೀವನ ಬೇರೆ. ನನಗೆ ಇಷ್ಟ ಇಲ್ಲ ಅಂದರೆ ನಾನು ನೇರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ವೈಯಕ್ತಿಕ ವಿಚಾರದ ಬಗ್ಗೆ ತಂದೆ-ತಾಯಿ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ತೀನಿ. ಅನೇಕರು ಜೀವನದಲ್ಲಿ ಸಮಸ್ಯೆ ಬಂತು ಅಂತ ಆತ್ಮಹತ್ಯೆ ಮಾಡಿಕೊಳ್ತಾರೆ, ಆದರೆ ಅವರಿಗೆಲ್ಲ ಸವಾಲನ್ನು ಎದುರಿಸಬೇಕು ಎಂದು ಹೇಳ್ತೀನಿ. ಮದುವೆಯೇ ಜೀವನ ಅಲ್ಲ, ನಿಮಗೂ ಬೇರೆ ಬದುಕಿದೆ. ವಿಶ್ವ ದೊಡ್ಡದಿದೆ, ಸಮಸ್ಯೆ ಇದ್ದರೆ ಕೆಲಸದ ಕಡೆ ಗಮನ ಕೊಡಿ, ಇಲ್ಲವೇ ನಿಮ್ಮ ಗಮನವನ್ನು ಬೇರೆ ಕಡೆ ನೀಡಿ ಎಂದಿದ್ದರು.

46
ಡಿಢೀರ್​ ನಿರ್ಧಾರಕ್ಕೆ ಬರಬೇಡಿ
Image Credit : Twitter

ಡಿಢೀರ್​ ನಿರ್ಧಾರಕ್ಕೆ ಬರಬೇಡಿ

'ನನ್ನ ಮದುವ ನಿರ್ಧಾರ ಸರಿ ಇರಲಿಲ್ಲ ಅನಿಸುತ್ತದೆ ಆತುರದಲ್ಲಿ ನಿರ್ಧಾರಕ್ಕೆ ಬಂದೆ ಎನಿಸುತ್ತದೆ. ಮದುವೆ ಅನ್ನೋದು ಒಂದು ಕಮೀಟ್‌ಮೆಂಟ್. ಜವಾಬ್ದಾರಿ. ನನ್ನದೇ ತಪ್ಪು ಅಂತಲ್ಲ. ಇಬ್ಬರದ್ದು ತಪ್ಪು ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು ಯಾಕೋ ನನಗೆ ಮದುವೆ ಬಳಿಕ ಆ ಸ್ವಾತಂತ್ರ ಇರಲಿಲ್ಲ ಅನಿಸುತ್ತಿತ್ತು. ನಾನು ಎಲ್ಲಾ ಹೆಣ್ಣು ಮಕ್ಕಳಿಗೆ ಹೇಳುವುದು ಅದೇ ಸಮಯ ತೆಗೆದುಕೊಂಡು ಯೋಚಿಸಿ. ಸುಖಾಸುಮ್ಮನೆ ದಿಢೀರ್‌ ನಿರ್ಧಾರಕ್ಕೆ ಬರಬೇಡಿ. ಮದುವೆ ಅನ್ನೋದು ಒಂದು ಜವಾಬ್ದಾರಿ ಆತುರ ಬೇಡ' ಎಂದಿದ್ದರು ಪ್ರೇಮಾ.

56
ಪ್ರೇಮಾ ಪ್ರಶ್ನೆ
Image Credit : Twitter

ಪ್ರೇಮಾ ಪ್ರಶ್ನೆ

'ಡಿವೋರ್ಸ್‌ ನಿರ್ಧಾರ ಅವತ್ತು ಬಹಳ ಕಷ್ಟವಾಗಿತ್ತು. ತಂದೆ ತಾಯಿ ಹೇಳುವುದು ಕಷ್ಟ ಅನಿಸಿತ್ತು ನಂತರ ಎಲ್ಲರೂ ಬೆಂಬಲವಾಗಿ ನಿಂತರು. ಬಳಿಕ ನಾನು ಹೆಜ್ಜೆ ಮುಂದಿಟ್ಟೆ. ಮದುವೆ ಆಗದೆಯೇ ಒಂಟಿಯಾಗಿಯೂ ಜೀವಿಸಬಹುದು. ಯಾಕಂದರೆ ಕೊನೆಗೆ ಹೋಗುವುದು ಒಬ್ಬರೇ ಅಲ್ಲವೆ? ಇನ್ನೊಬ್ಬರ ಮೇಲೆ ಯಾಕೆ ಅವಲಂಬಿತವಾಗಬೇಕು? ಇನ್ನೊಬ್ಬರ ಮೇಲೆ ಯಾಕೆ ನಿರೀಕ್ಷೆ ಇಟ್ಟುಕೊಳ್ಳಬೇಕು' ಎಂದು ಪ್ರಶ್ನಿಸಿದ್ದರು ನಟಿ.

66
ನಟಿಯ ಸಿನಿಮಾ
Image Credit : Social Media

ನಟಿಯ ಸಿನಿಮಾ

ನಟಿಯ ಕುರಿತು ಹೇಳುವುದಾದರೆ, 18ನೇ ವರ್ಷಕ್ಕೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಪ್ರೇಮಾ ಅವರು ಶಿವರಾಜ್‌ಕುಮಾರ್ ಜೊತೆಗೆ 'ಓಂ' ಚಿತ್ರದಲ್ಲಿ ನಟಿಸಿ ಅದ್ಭುತವಾದ ನಟನೆಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ತುಂಬ ಕಡಿಮೆ ಸಮಯದಲ್ಲಿ ಕನ್ನಡ, ತೆಲುಗು ಚಿತ್ರರಂಗದ ಸ್ಟಾರ್ ನಟರಿಗೆ ಪ್ರೇಮಾ ಅವರು ನಾಯಕಿಯಾಗಿ ಮಿಂಚಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ನಟಿ
ಮದುವೆ
ಸಂಬಂಧಗಳು

Latest Videos
Recommended Stories
Recommended image1
ಹೊಸ ಲುಕ್​ನಲ್ಲಿ ಪತ್ನಿ ಜೊತೆ ಮುಂಬೈ ಸುತ್ತಿದ ಯಶ್​: ಕಾರು ಇಳಿಯುತ್ತಿದ್ದಂತೆಯೇ ಫ್ಯಾನ್ಸ್​ ಗದ್ದಲ ನೋಡಿ!
Recommended image2
ಸಿನಿಮಾ ಪ್ರಚಾರಕ್ಕೆ ಇಂತಹ ಗಿಮಿಕ್ ಬೇಕಾ, ಏನಾಗಿದೆ ಈ ಚತ್ರರಂಗಕ್ಕೆ? ನಟ ಶರತ್ ಪ್ರಕಾಶ್ ಮೇಲೆ FIR!
Recommended image3
ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್‌ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್‌ ದೇಶಪಾಂಡೆ
Related Stories
Recommended image1
ನಟಿ ಭವ್ಯಾ ಗೌಡಗೆ ರಕ್ತದ ಭಾವಚಿತ್ರ ಉಡುಗೊರೆ: Karna Serial ನಿಧಿ ಭಾವುಕ- ಅಬ್ಬಾ! ಇದೆಂಥ ಅಭಿಮಾನ
Recommended image2
Rakshit Shetty ಫೇಸ್​ಬುಕ್​ ಕವರ್​ ಫೋಟೋ 3 ವರ್ಷದ ಬಳಿಕ ಚೇಂಜ್! ಒಂದು ಚಿತ್ರ, ನೂರೆಂಟು ಅರ್ಥ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved