ಪತಿ ತೊಡೆ ಮೇಲೆ ಕೂತು ನಾದಿನಿ ಮಾಡುತ್ತಿದ್ದ ಕೆಲಸ ನೋಡಿದ ಪತ್ನಿ ನಿದ್ರೆ ಹಾಳಾಗಿದೆ!
ಈಗಿನ ವಾತಾವರಣದಲ್ಲಿ ಒಂದು ಗಂಡು – ಹೆಣ್ಣು ಒಟ್ಟಿಗೆ ಹೋಗ್ತಿದ್ರೆ ಸಾಕು ಅವರನ್ನು ಅನುಮಾನಿಸುವವರೇ ಹೆಚ್ಚು. ಅವರು ಅಣ್ಣ – ತಂಗಿಯಾಗಿದ್ರೂ ಸರಿ. ಕೆಲವೊಮ್ಮೆ ಕೆಟ್ಟ ದೃಷ್ಟಿ ಬೀಳಲು ನಮ್ಮ ವರ್ತನೆ ಕೂಡ ಕಾರಣವಾಗುತ್ತದೆ. ಎಲ್ಲ ಸಂಬಂಧಕ್ಕೂ ಒಂದು ಸೂಕ್ಷ್ಮ ಗೆರೆ ಇರುತ್ತದೆ. ಅದನ್ನು ದಾಟಿದ್ರೆ ಅನುಮಾನ ಸಹಜ.
ಅನೇಕ ಬಾರಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳೋದು ಕಷ್ಟವಾಗುತ್ತದೆ. ಇಬ್ಬರ ಮಧ್ಯೆ ಇರುವ ಸಂಬಂಧವನ್ನು ತಪ್ಪಾಗಿ ತಿಳಿದುಕೊಂಡು ಯಡವಟ್ಟು ಮಾಡಿಕೊಳ್ಳುವವರು ಸಾಕಷ್ಟು ಮಂದಿಯಿದ್ದಾರೆ. ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಅವರಿಬ್ಬರ ಮಧ್ಯೆ ಯಾವ ಬಾಂಧವ್ಯವಿದೆ ಎಂಬುದನ್ನು ಅರಿಯಬೇಕು. ಸ್ನೇಹಿತರ ಮಧ್ಯೆ ಮಾತ್ರವಲ್ಲ ಸಹೋದರ – ಸಹೋದರಿ ಮಧ್ಯೆ ಇರುವ ಬಾಂಡಿಂಗ್ ಕೆಲವೊಮ್ಮೆ ಅರ್ಥವಾಗುವುದಿಲ್ಲ. ಕೆಲ ಅಣ್ಣ – ತಂಗಿ ಅತಿ ಆಪ್ತರಾಗಿರ್ತಾರೆ. ಅದು ನೋಡುವವರ ಕಣ್ಣಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಇಲ್ಲೊಬ್ಬ ಮಹಿಳೆಗೂ ಅದೇ ಆಗಿದೆ. ನಾದನಿ ಹಾಗೂ ಪತಿ ಮಧ್ಯೆ ಇರುವ ಅತಿಯಾದ ಆಪ್ತತೆ ಆಕೆಯನ್ನು ಗೊಂದಲಕ್ಕೀಡು ಮಾಡಿದೆ. ಮುಂದೇನು ಮಾಡ್ಬೇಕೆಂಬ ಚಿಂತೆಯಲ್ಲಿ ಆಕೆಯಿದ್ದಾಳೆ.
ಆಕೆ ವಿವಾಹಿತ (Married) ಮಹಿಳೆ. ಕೆಲ ಸಮಯದಿಂದ ಆಕೆ ದೊಡ್ಡ ಸಮಸ್ಯೆ ಎದುರಿಸ್ತಿದ್ದಾಳಂತೆ. ನಾದಿನಿ (Sister In Law) ಹಾಗೂ ಪತಿಯ (Husband) ಆಪ್ತತೆ ಈಕೆಯನ್ನು ಅನುಮಾನಕ್ಕೆ ನೂಕಿದೆಯಂತೆ. ನಾದಿನಿಗೆ 20 ವರ್ಷವಾದ್ರೆ ಪತಿ (Husband) ಗೆ 28 ವರ್ಷ. ವರ್ಷಗಳ ಅಂತರವಿದ್ರೂ ಇಬ್ಬರು ಹೆಚ್ಚು ಕ್ಲೋಸ್ ಆಗಿದ್ದಾರಂತೆ. ಪತಿ ಹಾಗೂ ನಾದಿನಿ ಎಲ್ಲ ವಿಷ್ಯವನ್ನು ಶೇರ್ ಮಾಡ್ತಾರೆ ಎನ್ನುವ ಮಹಿಳೆ ಒಂದು ದಿನ ಅವರಿಬ್ಬರು ಮಾಡ್ತಿದ್ದ ಕೆಲಸ ನೋಡಿ ನಾನು ದಂಗಾಗಿದ್ದೇನೆ ಎನ್ನುತ್ತಾಳೆ ಮಹಿಳೆ.
ಪತಿ ತೊಡೆ ಮೇಲೆ ಕುಳಿತಿದ್ದ ನಾದಿನಿ, ಇಂಗ್ಲೀಷ್ ಸಿನಿಮಾ ನೋಡ್ತಿದ್ದಳಂತೆ. ಇಬ್ಬರು ಬೇಸಿಕ್ ಇನ್ಸ್ಟೆಂಟ್ (Basic Instinct') ಚಿತ್ರ ವೀಕ್ಷಣೆ ಮಾಡಿದ್ದರು. ಅದ್ರಲ್ಲಿ ಅಶ್ಲೀಲ ದೃಶ್ಯಗಳು (Porn Scenes) ಬರ್ತಿದ್ವು. ಅದನ್ನು ನೋಡಿ ನಾನು ಶಾಕ್ ಆದೆ. ಏನ್ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ಒಬ್ಬರೂ ಉತ್ತರ ನೀಡಲಿಲ್ಲ ಎನ್ನುತ್ತಾಳೆ ಮಹಿಳೆ.
Sex Education: ಅವಳು ಸೆಕ್ಸ್ ವೇಳೆ ಹಿಂಸೆ ಕೊಡೋಕೆ ಹೇಳ್ತಾಳೆ, ಏನ್ ಮಾಡಲಿ?
ಈ ಬಗ್ಗೆ ಪತಿ ಕುಟುಂಬಸ್ಥರ ಜೊತೆ ಮಾತನಾಡುವುದು ಕಷ್ಟವಾಗಿದೆ. ಪತಿಗೆ ಹೇಳಲು ಪ್ರಯತ್ನಿಸಿ ಸೋತಿದ್ದೇನೆ ಎನ್ನುತ್ತಾಳೆ ಮಹಿಳೆ. ಆಕೆ ಈ ವಿಷ್ಯ ಪ್ರಸ್ತಾಪಿಸಿದ್ರೆ ಪತಿ ಕೂಗಾಡ್ತಾನಂತೆ. ನಾವಿಬ್ಬರು ವಯಸ್ಕರಾಗಿದ್ದೇವೆ. ನಮಗೆ ಏನು ಮಾಡ್ಬೇಕು, ಏನು ಮಾಡ್ಬಾರದು ಎಂಬುದು ಗೊತ್ತಿದೆ ಎನ್ನುತ್ತಾನಂತೆ ಪತಿ. ಇದ್ರಿಂದ ನನ್ನ ನೆಮ್ಮದಿ ಕಳೆದಿದೆ. ನನಗೆ ಅವರಿಬ್ಬರ ಮೇಲೆ ಅನುಮಾನ ಶುರುವಾಗಿದೆ ಎನ್ನುತ್ತಾಳೆ ಮಹಿಳೆ.
ತಜ್ಞರ(Expert) ಸಲಹೆ : ನಾದಿನಿ ಹಾಗೂ ಪತಿ ಬಲವಾದ ಬಾಂಧವ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರಿಬ್ಬರು ತುಂಬಾ ಆತ್ಮೀಯರಾಗಿದ್ದಾರೆ ಎನ್ನುತ್ತಾರೆ ತಜ್ಞರು. ಸಹೋದರ – ಸಹೋದರಿ ಸಂಬಂಧವನ್ನು ಅನುಮಾನಿಸುವುದು ತಪ್ಪು. ಮೊದಲು ನೀವು ನಿಮ್ಮ ಪತಿಯ ಮೇಲೆ ಭರವಸೆ ಇಡಿ ಎನ್ನುತ್ತಾರೆ ತಜ್ಞರು.
ಪ್ರತಿಯೊಂದು ಮನೆ ವಾತಾವರಣ ಬೇರೆ ಬೇರೆಯಾಗಿರುತ್ತದೆ. ಸಹೋದರ – ಸಹೋದರಿ ಬಾಂಡಿಂಗ್ ಕೂಡ ಭಿನ್ನವಾಗಿರುತ್ತದೆ. ಕೆಲ ಮನೆಯಲ್ಲಿ ಹಗ್ ಮಾಡಿ, ಐ ಲವ್ ಯು ಹೇಳುವ ಮೂಲಕ ಕುಟುಂಬಸ್ಥರು ತಮ್ಮ ಮಧ್ಯೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಹಾಗಾಗಿ ಅನುಮಾನಪಡುವ ಬದಲು ನಿಮ್ಮ ಪತಿ ಜೊತೆ ಈ ಬಗ್ಗೆ ಮಾತನಾಡಿ ಎಂದಿದ್ದಾರೆ ತಜ್ಞರು. ಅಭದ್ರತೆ ಹಾಗೂ ನಿಮಗೆ ಕಾಡ್ತಿರುವ ಖಿನ್ನತೆ ಬಗ್ಗೆ ಮುಕ್ತವಾಗಿ ಚರ್ಚಿಸಿ ಎನ್ನುತ್ತಾರೆ ತಜ್ಞರು.
Sexual Wellness: ವಯಾಗ್ರ ಜೊತೆ ನಿಂಬೆ ರಸ ಸೇರಿಸಿದ್ರೆ ಲೈಂಗಿಕ ಕ್ರಿಯೆಯಲ್ಲಿ ಸ್ವರ್ಗ ಸುಖ
ನಿಮ್ಮಿಬ್ಬರ ಮಧ್ಯೆ ಒಳ್ಳೆ ಬಾಂಧವ್ಯವಿದೆ ಎನ್ನುವುದು ನನಗೆ ತಿಳಿದಿದೆ. ಆದ್ರೆ ನಿಮ್ಮಿಬ್ಬರ ಆಪ್ತತೆಯನ್ನು ಸಮಾಜ ಬೇರೆ ದೃಷ್ಟಿಯಿಂದ ನೋಡಬಹುದು. ಇದ್ರಿಂದ ನಿಮ್ಮ ಇಮೇಜ್ ಹಾಳಾದ್ರೆ ಎಂಬ ಭಯ ನನಗಿದೆ. ನಿಮ್ಮಿಬ್ಬರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎನ್ನುವ ಮೂಲಕ ನೀವು ನಿಮ್ಮ ಸಮಸ್ಯೆಯನ್ನು ಅವರ ಮುಂದಿಡಿ ಎನ್ನುತ್ತಾರೆ ತಜ್ಞರು. ಆತುರದಲ್ಲಿ ವಿಷ್ಯವನ್ನು ದೊಡ್ಡದು ಮಾಡಿ, ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ತಜ್ಞರು ಹೇಳಿದ್ದಾರೆ.