Asianet Suvarna News Asianet Suvarna News

ಮಕ್ಕಳು ಅಮ್ಮನ ಸೆರಗು ಬಿಟ್ಟು ಈಚೆ ಬರೋದೆ ಇಲ್ಲ, ಈ ನಾಚಿಕೆ ಹೋಗಲಾಡಿಸೋದು ಹೇಗೆ ?

ನಿಮ್ಮ ಮಗುವಿಗೆ ವಿಪರೀತ ನಾಚಿಕೆ ಸ್ವಭಾವನಾ ? ಮನೆಯಿಂದ ಹೊರಗಡೆ ಹೋದ್ರೆ ಯಾರ ಜೊತೇನೂ ಮಾತನಾಡಲ್ವಾ ? ಸಮಾನ ಪ್ರಾಯದ ಮಕ್ಕಳೊಂದಿಗೆ ಬೆರೆಯೋಕೆ ಸಹ ಇಷ್ಟಪಡಲ್ವಾ ? ಅದಕ್ಕೇನು ಕಾರಣ ತಿಳ್ಕೊಳ್ಳೋಣ.

Shy Behaviour in Kids, Ways for every mother to support a shy child Vin
Author
First Published Jan 5, 2023, 11:52 AM IST

ನಿಮ್ಮ ಮಗುವಿಗೆ ಸಾಮಾಜಿಕ ಕೂಟಗಳಲ್ಲಿ ಅನಾನುಕೂಲವಾಗಿದೆಯೇ ಅಥವಾ ಪಾರ್ಟಿಗಳ ಸಮಯದಲ್ಲಿ ಮೂಲೆಯಲ್ಲಿ ಕುಳಿತುಕೊಳ್ಳುತ್ತದೆಯೇ? ನಿಮ್ಮ ಉತ್ತರ ಹೌದು ಎಂದಾದರೆ, ನೀವು ಸ್ಪಷ್ಟವಾಗಿ ನಾಚಿಕೆಪಡುವ ಮಗುವನ್ನು ಹೊಂದಿದ್ದೀರಿ. ಅವರ ಶೈಕ್ಷಣಿಕ, ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನೀವು ಬಯಸಿದರೆ ಅವರಲ್ಲಿನ ನಾಚಿಕೆ ಸ್ವಭಾವವನ್ನು ಬಿಡಿಸಬೇಕು. ಅದ್ಹೇಗೆ ಸಾಧ್ಯ. ಇಲ್ಲಿದೆ ಮಾಹಿತಿ.

1. ಮಕ್ಕಳು ಏನು ಹೇಳ್ತಿದ್ದಾರೆ ಎಂಬುದನ್ನು ಗಮನಿಸಿ: ನೀವು ಮಕ್ಕಳು (Children) ಮಾತನಾಡುವುದನ್ನು ನಿರಾಕರಿಸಿದಾಗ ಅವರು ಸಹಜವಾಗಿಯೇ ಸಂಕೋಚದ ಸ್ವಭಾವ (Behaviour)ವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ನಿಮ್ಮ ಮಗುವಿಗೆ ಏನಾದರೂ ಹೇಳಲು ಇದ್ದಾಗ ಮಾತನಾಡಲು ಅವಕಾಶ ನೀಡಿ. ಮಕ್ಕಳು ನಿಮ್ಮಲ್ಲಿ ಬಹಳ ಆಸಕ್ತಿದಾಯಕವಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳಲು ಯತ್ನಿಸುತ್ತಿದ್ದರೆ ಅದಕ್ಕೆ ಪ್ರೋತ್ಸಾಹ ನೀಡಿ. ಸಮಯದ ಅಭಾವದ ನೆಪವನ್ನೊಡ್ಡಿ ಅವರಿಂದ ದೂರ ಹೋಗಬೇಡಿ. ಹೀಗೆ ಮಾಡುವುದರಿಂದ ಮಕ್ಕಳು ಇತರರೊಂದಿಗೂ ಮುಕ್ತಾವಾಗಿ ಬೆರೆಯಲು ಕಷ್ಟಪಡುತ್ತಾರೆ.

ನಕಾರಾತ್ಮಕದಿಂದ ಸಕಾರಾತ್ಮದ ಕಡೆಗೆ ಚಿಂತಿಸಲು ಮಕ್ಕಳನ್ನು ಹೀಗೆ ಟ್ರೈನ್ ಮಾಡಿ

2. ಮಗುವಿಗೆ ತುಂಬಾ ನಾಚಿಕೆ ಎಂದು ಹೇಳುವುದನ್ನು ನಿಲ್ಲಿಸಿ: ಯಾವುದೇ ವಿಷಯವನ್ನು ಮಕ್ಕಳಿಗೆ ಲೇಬಲ್ ಮಾಡಿದರೆ ಅದುವೇ ಶಾಶ್ವತವಾಗಿ ಹಾಗೆಯೇ ಉಳಿದುಬಿಡುತ್ತದೆ. ನನ್ನ ಮಗನಿಗೆ ತುಂಬಾ ಭಯ, ನನ್ನ ಮಗನಿಗೆ ತುಂಬಾ ಅಳು, ನನ್ನ ಮಗನಿಗೆ ತುಂಬಾ ನಾಚಿಕೆ (Shy) ಎಂದು ಹೇಳಿರುವುದನ್ನು ಮಕ್ಕಳು ನೆನಪಿನಲ್ಲಿಟ್ಟಕೊಟ್ಟುತ್ತಾರೆ. ಮತ್ತೆ ಅದರಂತೆಯೇ ವರ್ತಿಸಲು ತೊಡಗುತ್ತಾರೆ. ಹೀಗಾಗಿ ಮಕ್ಕಳು ಮನೆಗೆ ಯಾರಾದರೂ ಬಂದಾಗ ಮಾತನಾಡಲು ಹಿಂಜರಿದರೆ ನೀವೇ ಮುಂದೆ ನಿಲ್ಲಿಸಿ ಮಾತನಾಡಲು ಪ್ರೋತ್ಸಾಹಿಸಿ, ಅವರ ಹಿಂಜರಿಕೆಯನ್ನು ದೂರ ಮಾಡಿ.

3. ತಾಳ್ಮೆ ಅತೀ ಅಗತ್ಯ: ಎಲ್ಲಾ ವಿಷಯಗಳಲ್ಲೂ ತಾಳ್ಮೆ (Patience) ಅಗತ್ಯ. ಮಕ್ಕಳ ವಿಷಯಕ್ಕೆ ಬಂದಾಗ ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಮಗು ನಾಚಿಕೆ ಸ್ವಭಾವವನ್ನು ಹೊಂದಿದ್ದರೆ ಪಾರ್ಟಿ, ಮದುವೆ ಮೊದಲಾದೆಡೆ ಕರೆದುಕೊಂಡು ಹೋದಾಗ ಅವರು ಆ ವಾತಾವರಣಕ್ಕೆ ಒಗ್ಗಿಕೊಳ್ಳುವ ವರೆಗೆ ಅವರೊಂದಿಗಿರಿ. ಬದಲಿಗೆ ಒಂದೇ ಸಾರಿ ಅಪರಿಚಿತರನ್ನು ಮಾತನಾಡುವಂತೆ ಒತ್ತಾಯಿಸಬೇಡಿ. ಕ್ರಮೇಣ ಮಕ್ಕಳನ್ನು ಅಲ್ಲಿನ ಗದ್ದಲಕ್ಕೆ ಹೊಂದಿಕೊಂಡು ಲವಲವಿಕೆಯನ್ನು ರೂಢಿಸಿಕೊಳ್ಳುತ್ತಾರೆ. ಅದಕ್ಕಾಗಿ ನೀವು ತಾಳ್ಮಯಿಂದ ಕಾಯಬೇಕು ಅಷ್ಟೆ.

4. ಮಗುವಿನ ಬಗ್ಗೆ ವಿಶ್ವಾಸವನ್ನು ಪ್ರದರ್ಶಿಸಿ: ಮಗುವಿನೆದುರು ವಿಶ್ವಾಸದಿಂದ ಮಾತನಾಡಿ.  ನಿಮ್ಮ ಬಾಲ್ಯದಲ್ಲಿ ಸಂಕೋಚವನ್ನು ನೀವು ಹೇಗೆ ಜಯಿಸಿದಿರಿ ಎಂಬುದರ ನಿರ್ದಿಷ್ಟ ಉದಾಹರಣೆಗಳನ್ನು ಅವರಿಗೆ ನೀಡಿ ಮತ್ತು ನಿಮ್ಮ ಇತರ ಮನಸ್ಥಿತಿಗಳು ಮತ್ತು ಭಾವನೆಗಳನ್ನು ನಿಭಾಯಿಸಲು ನೀವು ಏನು ಮಾಡಿದ್ದೀರಿ ಎಂಬುದನ್ನು ವಿವರಿಸಿ. ಇದರಿಂದ ಮಕ್ಕಳು ಸಹ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಕೊಳ್ಳುತ್ತಾರೆ. ಮತ್ತೊಬ್ಬರ ಜೊತೆ ಹಿಂಜರಿಯದೆ ಮಾತನಾಡ್ತಾರೆ.

ಮೊಬೈಲ್ ಕೈಯಲ್ಲಿ ಇಲ್ಲದಾಗರೂ, ಕೆಲವು ಮಕ್ಕಳು ಮಾತೇ ಆಡೋಲ್ಲ! ಯಾಕೀ ಮೌನ?

5. ಮಗುವಿನ ಭಯವನ್ನು ಪ್ರೋತ್ಸಾಹಿಸಬೇಡಿ: ಮಕ್ಕಳು ನಾವು ಹೇಳುವುದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಮಾತ್ರವಲ್ಲ ನಮ್ಮ ನಡವಳಿಕೆಯನ್ನು ಸಹ ಅಬ್ಸರ್ವ್‌ ಮಾಡುತ್ತಾರೆ. ಹೀಗಾಗಿ ಮಕ್ಕಳ ಮುಂದೆ ಯಾವಾಗಲೂ ಭಯ (Fear)ದಿಂದ ಮಾತನಾಡಬೇಡಿ. ಬದಲಿಗೆ ಧೈರ್ಯವಾಗಿ ವರ್ತಿಸಿ. ಮಕ್ಕಳಿಗೆ ಯಾವುದೇ ಅಹಿತಕರ ಸಂವೇದನೆಗಳು ಅಥವಾ ಭಾವನೆಗಳನ್ನು ಉಂಟಾಗುವುದನ್ನು ತಪ್ಪಿಸಲು ಪದಗಳನ್ನು ಎಚ್ಚರಿಕೆಯಿಂದ ಬಳಸಿ. ಎಲ್ಲರೊಂದಿಗೂ ಧೈರ್ಯವಾಗಿ ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳಿ. ಇದನ್ನು ನೋಡಿ ಮಕ್ಕಳು ಸಹ ಕಲಿಯುತ್ತಾರೆ.

6. ಮಕ್ಕಳ ಮೇಲೆ ರೇಗಾಡಬೇಡಿ: ಹೆಚ್ಚು ಒತ್ತಡವುಂಟಾದಾಗ ನೀವು ಮಕ್ಕಳ ಮೇಲೆ ರೇಗಾಡಿ ಬಿಡುತ್ತೀರಿ. ಇದು ತಾಯಿ ಮತ್ತು ಮಕ್ಕಳಿಬ್ಬರಿಗೂ ಕೆಟ್ಟದ್ದಾಗಿದೆ. ಇದು ಮಕ್ಕಳಲ್ಲಿ ಏಕಾಂಗಿ ಭಾವನೆಯನ್ನು ಉಂಟು ಮಾಡಬಹುದು. ಇನ್ನೊಬ್ಬರ ಜೊತೆ ಮಾತನಾಡಲು ಹಿಂಜರಿಯುವಂತೆ ಮಾಡಬಹುದು.

7. ಹೋಲಿಸುವುದನ್ನು ನಿಲ್ಲಿಸಿ: ಮಗುವನ್ನು ಎಂದಿಗೂ ಒಡಹುಟ್ಟಿದವರಿಗೆ ಅಥವಾ ಪರಿಚಯಸ್ಥರ ಮಕ್ಕಳಿಗೆ ಹೋಲಿಸಬೇಡಿ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ, ತಾಯಂದಿರು ತಮ್ಮ ಮಕ್ಕಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಾಗ ಸ್ನೇಹಿತರು ಅಥವಾ ಒಡಹುಟ್ಟಿದವರನ್ನು ಮಾದರಿಯಾಗಿ ಬಳಸಿಕೊಳ್ಳುತ್ತಾರೆ. ಆದರೆ ಇದು  ಮಕ್ಕಳನ್ನು ಪ್ರೋತ್ಸಾಹಿಸುವ ಬದಲು ಇನ್ನಷ್ಟು ನಿರುತ್ಸಾಹಗೊಳಿಸುತ್ತದೆ.

Follow Us:
Download App:
  • android
  • ios