ಭಾರತೀಯ ರೈಲ್ವೆ ದೇಶದ ವಿವಿಧ 100 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ ಕೋಚ್‌ಗಳ ಬಳಿ ಕಡಿಮೆ ದರಲ್ಲಿ ಉತ್ತಮ ಆಹಾರ ನೀಡುವ ಕೌಂಟರ್‌ಗಳನ್ನು ತೆರೆದಿದೆ. 20 ರು ನಿಂದ ಆರಂಭವಾಗಲಿದೆ.
ಮಂಗಳೂರು (ಮೇ.1): ಭಾರತೀಯ ರೈಲ್ವೆ ಮಂಡಳಿ ದೇಶದ ವಿವಿಧ 100 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ (ಜಿಎಸ್) ಕೋಚ್‌ಗಳ ಬಳಿ ಕಡಿಮೆ ದರಲ್ಲಿ ಉತ್ತಮ ಆಹಾರ ನೀಡುವ ಕೌಂಟರ್‌ಗಳನ್ನು ತೆರೆದಿದೆ. ಅದರಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಏಳು ನಿಲ್ದಾಣಗಳು ಸೇರಿವೆ.
ಯಾವೆಲ್ಲ ಜಿಲ್ಲೆಯಲ್ಲಿ ಇದೆ: ದಕ್ಷಿಣ ರೈಲ್ವೆ ವ್ಯಾಪ್ತಿಯ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳು, ನೈರುತ್ಯ ರೈಲ್ವೆ ವ್ಯಾಪ್ತಿಯ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ಕೌಂಟರ್ ತೆರೆಯಲಾಗಿದ್ದು, ಆಹಾರ ನೀಡಲಾಗುತ್ತಿದೆ. ಒಟ್ಟಾರೆ ದೇಶದ 100 ರೈಲ್ವೆ ನಿಲ್ದಾಣಗಳ 150 ಪ್ಲಾಟ್‌ಫಾರಂಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಇತರ ಮೂಲದ ಆದಾಯ ಗಳಿಸಲು BMRCL ಪ್ಲಾನ್, ಮೆಟ್ರೋ ನಿಲ್ದಾಣಕ್ಕೆ ಕಾರ್ಪೋರೆಟ್ ಕಂಪನಿಗಳ ಹೆಸರಿಡಲು ಒಪ್ಪಂದ
ಇಂಡಿಯನ್ ರೈಲ್ವೇಸ್ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (ಐಆರ್‌ಸಿಟಿಸಿ) ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಕ್ರಮ ಕೈಗೊಂಡಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿಗಳನ್ನು ನೀಡುವ ಹೊಸ ಉಪಕ್ರಮ ಇದಾಗಿದೆ.
ದೇಶದ ಮೊದಲ ವಂದೇ ಭಾರತ್ ಮೆಟ್ರೋ ರೈಲು, ಸ್ಲೀಪರ್ ಆವೃತ್ತಿ ಪ್ರಾಯೋಗಿಕ ಸಂಚಾರ ಜುಲೈನಲ್ಲಿ ಆರಂಭ
‘ಜನತಾ ಊಟ’ ಎಂದು ನಿಲ್ದಾಣಗಳಲ್ಲಿ ಅಡುಗೆ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸಲಾಗಿತ್ತು. ಈಗ ಪ್ಲಾಟ್‌ಫಾರಂನಲ್ಲಿಯೇ ಕೌಂಟರ್ ತೆರೆಯಲಾಗಿದೆ. 100 ರೈಲ್ವೆ ನಿಲ್ದಾಣಗಳ 150 ಪ್ಲಾಟ್‌ಫಾರಂಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಉಪಾಹಾರ 20 ರು., ಲಘು ಊಟ 50 ರು., 3 ರು.ಗೆ 200 ಎಂಎಲ್ ನೀರು ನೀಡಲಾಗುತ್ತದೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸದ್ಯ ರೈಲ್ವೆ ನಿಲ್ದಾಣಗಳಲ್ಲಿ ನೀರು ಹಾಗೂ ಉಪಹಾರ, ಊಟ ಸೇರಿ ಹಲವು ಅಗತ್ಯ ವಸ್ತಿಗಳಿಗೆ ದುಬಾರಿ ದರವಿದೆ. ಬೇಸಿಗೆಯಲ್ಲಿ ನೀರಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಒಂದು ಲೀ. ನೀರು 20 ರಿಂದ 25 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಉಪಹಾರ 40 ರಿಂದ 50 ರೂ., ಊಟ 80 ರಿಂದ 100 ರೂ. ದರವಿದೆ. ಆದರೆ ದೂರದ ಊರಿಗೆ ಪ್ರಯಾಣ ಮಾಡುವ ಪ್ರಯಾಣಿಕರು ಖರೀದಿಸುವುದು ಅನಿವಾರ್ಯವಾಗಿತ್ತು.
