ಈ ಕ್ರಿಕೆಟಿಗನಿಗೆ ಕೇವಲ 275 ರುಪಾಯಿ ಸ್ಕೂಲ್ ಫೀ ಕಟ್ಟಲೂ ದುಡ್ಡಿರಲಿಲ್ಲ..!
ರೋಹಿತ್ ಶರ್ಮಾ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ನಾವಿಂದು ಹಿಟ್‌ಮ್ಯಾನ್ ಬಾಲ್ಯದ ಬದುಕಿನ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಡುತ್ತೇವೆ ಬನ್ನಿ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಏಪ್ರಿಲ್ 30ರಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇದೀಗ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಭಾರತ ತಂಡ ಮುನ್ನಡೆಸಲಿದ್ದಾರೆ.
ಇನ್ನು ರೋಹಿತ್ ಶರ್ಮಾ ಅವರ ಒಟ್ಟಾರೆ ಸಂಪತ್ತು ಸರಿಸುಮಾರು 214 ಕೋಟಿ ರುಪಾಯಿ ಎಂದು ವರದಿಯಾಗಿದೆ. ಈ ಮೂಲಕ ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡದ ಶ್ರೀಮಂತ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಒಂದು ಕಾಲ ಹೇಗಿತ್ತು ಅಂದ್ರೆ, ರೋಹಿತ್ ಶರ್ಮಾ ಬಾಲ್ಯದ ಜೀವನ ಸಾಕಷ್ಟು ಕಡುಬಡತನದಿಂದ ಕೂಡಿತ್ತು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ರೋಹಿತ್ ಶರ್ಮಾ ಕುಟುಂಬ ಹಿಟ್‌ಮ್ಯಾನ್‌ಗೆ 275 ರುಪಾಯಿ ಶಾಲಾ ಫೀ ಕಟ್ಟಲೂ ಹಣವಿರಲಿಲ್ಲ.
ರೋಹಿತ್ ಶರ್ಮಾ ಅವರ ಬಾಲ್ಯದ ಕೌಟುಂಬಿಕ ಪರಿಸ್ಥಿತಿ ತುಂಬಾ ಕೆಳಮಟ್ಟದಲ್ಲಿತ್ತು. ಹೀಗಾಗಿಯೇ ರೋಹಿತ್ ಶರ್ಮಾ ತಮ್ಮ ಬಾಲ್ಯದ ಜೀವನವನ್ನು ಅವರ ಅಂಕಲ್ ಮನೆಯಲ್ಲಿ ಕಳೆದರು.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ರೋಹಿತ್ ಶರ್ಮಾ ಪ್ರತಿಭೆಯನ್ನು ಗುರುತಿಸಿದ ಕೋಚ್ ದಿನೇಶ್ ಲಾಡ್, ಹಿಟ್‌ಮ್ಯಾನ್ ಅವರನ್ನು ಬೇರೆ ಶಾಲೆಗೆ ದಾಖಲು ಮಾಡಲು ಅವರ ಪೋಷಕರಿಗೆ ಸೂಚಿಸಿದರು.
ಆದರೆ ಸಿದ್ದೇಶ್ ಲಾಡ್ ಅವರು ಸೂಚಿಸಿದ್ದ ಶಾಲೆಯ ಫೀ 275 ರುಪಾಯಿಗಳಾಗಿತ್ತು. ಆ ಶಾಲೆಯಲ್ಲಿ ಕ್ರೀಡೆಗೆ ಒಳ್ಳೆಯ ವಾತಾವರಣವಿತ್ತು. ಆದರೆ ರೋಹಿತ್ ಶರ್ಮಾ ಕುಟುಂಬದ ಪರಿಸ್ಥಿತಿ 275 ರುಪಾಯಿ ಕೊಡುವಷ್ಟು ಶ್ರೀಮಂತವಾಗಿರಲಿಲ್ಲ.
ಆದರೆ ರೋಹಿತ್ ಶರ್ಮಾ ಪ್ರತಿಭೆಯನ್ನು ಗಮನಿಸಿದ್ದ ಸಿದ್ದೇಶ್ ಲಾಡ್, ಆ ಶಾಲೆಯ ಪ್ರಿನ್ಸಿಪಾಲ್ ಜತೆ ರೋಹಿತ್ ಶರ್ಮಾ ಬಗ್ಗೆ ವಿಶೇಷವಾಗಿ ಮಾತನಾಡಿ ಶಾಲಾ ಫೀ ನಲ್ಲಿ ಕೊಂಚ ರಿಯಾಯಿತಿ ನೀಡುವಂತೆ ಮನವಿ ಮಾಡಿಕೊಂಡರು.
ಆ ನಂತರ ಆ ಶಾಲೆ ಸೇರಿದ ರೋಹಿತ್ ಶರ್ಮಾ, ದಿನೇಶ್ ಲಾಡ್ ಮಾರ್ಗದರ್ಶನದಲ್ಲಿಯೇ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಪರಿಣಾಮ ರೋಹಿತ್ ಶರ್ಮಾ ಇಂದು ಭಾರತದ ಯಶಸ್ವಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಇನ್ನು ದಿನೇಶ್ ಲಾಡ್ ಅವರಿಗೆ ಭಾರತ ಸರ್ಕಾರ ನೀಡುವ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿದೆ.
Rohit Sharma
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಚಾಂಪಿಯನ್ ಆಗಿ ಹೊರಹೊಮ್ಮಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ
Team India Squad
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಜೂನ್ 01ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಜರುಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಸಜ್ಜಾಗಿದೆ.