ವಿಚ್ಛೇದನಕ್ಕೆ ಮುಂದಾಗಿದ್ದ ಅಪ್ಪ ಅಮ್ಮನನ್ನು ಒಂದು ಮಾಡಿದ ಮಗ

  • ಮೂರು ವರ್ಷಗಳಿಂದ ದೂರಾಗಿದ್ದ ದಂಪತಿ
  • ಮನಸ್ತಾಪದಿಂದ ವಿಚ್ಚೇದನಕ್ಕೆ ಮುಂದಾಗಿದ್ದರು 
  • ಮಗನಿಂದಾಗಿ ಮತ್ತೆ ಒಂದಾದ ದಂಪತಿ
shivamogga Son reunited his parents who planned to get divorced akb

ಶಿವಮೊಗ್ಗ: ವಿಚ್ಚೇದನಕ್ಕೆ ಮುಂದಾಗಿದ್ದ ತಂದೆ ತಾಯಿಯನ್ನು ಮಗನೇ ಮುಂದೆ ನಿಂತು ಒಂದು ಮಾಡಿದ ಘಟನೆ ಶಿವಮೊಗ್ಗದ ಹೊಸನಗರದಲ್ಲಿ ನಡೆದಿದೆ. ಹೊಸನಗರ(Hosanagara)  ತಾಲೂಕಿನ ಕಡೆಗದ್ದೆಯ (Kadegadde) ಗಣೇಶಮೂರ್ತಿ (Ganesha Moorthy)ಮತ್ತು ಪೂರ್ಣಿಮಾ (Poornima) 17 ವರ್ಷಗಳ ಹಿಂದೆ ಮದುವೆಯಾಗಿ 14 ವರ್ಷ ಸುಖ ಸಂಸಾರ ನಡೆಸಿದ್ದರು. ಆದರೆ ಮೂರು ವರ್ಷಗಳ ಹಿಂದೆ ಮನಸ್ತಾಪಗೊಂಡು ಇವರಿಬ್ಬರು ದೂರಾಗಿದ್ದರು. ಮೂರು ವರ್ಷದ ಹಿಂದೆ ಪೂರ್ಣಿಮಾ ಅವರು ಶಿವಮೊಗ್ಗದ (Shivamogga) ತನ್ನ ತವರು ಮನೆಗೆ ಹೋದ ಸಂದರ್ಭದಲ್ಲಿ ಬಿರುಕು ಉಂಟಾಗಿತ್ತು. ನಂತರ ಇದೇ ಬಿರುಕು ದೊಡ್ಡದಾಗಿ ವಿಚ್ಛೇದನಕ್ಕೆ (Divorce)ಅರ್ಜಿ ಸಲ್ಲಿಸಿ ಕೋರ್ಟ್ ಮೆಟ್ಟಿಲೇರಿದ್ದರು . 

ಇವರ ಮಗ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಇಷ್ಟು ದಿನ ತಂದೆಯ ಜತೆಗಿದ್ದ. ಆದರೆ ತಾಯಿ ಇದ್ದರೂ ಅನಾಥವಾಗಿದ್ದೇನೆ ಎಂದು ವಕೀಲರ ಬಳಿ ನೋವು ತೋಡಿಕೊಂಡಿದ್ದ. ಈ ಬಗ್ಗೆ ತಂದೆ ತಾಯಿಯೊಂದಿಗೆ ಮಾತನಾಡಿದ ವಕೀಲರು ಒಂದು ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರು. ಹೀಗಾಗಿ ಮಗನಿಂದಾಗಿ ತಮ್ಮ ಮನಸ್ಸು ಬದಲಾಯಿಸಿಕೊಂಡ ದಂಪತಿ (couple)ಕೇಸ್‌ ವಾಪಸ್ ಪಡೆದು ಮತ್ತೆ ಒಂದಾಗಲು ನಿರ್ಧರಿಸಿದರು. ಕೋರ್ಟ್‌ನ ಲೋಕ ಅದಾಲತ್‌ನಲ್ಲಿ (Loka Adalat) ಮಗನೇ ಈ ಜೋಡಿಯನ್ನು ಒಂದು ಮಾಡಿದ್ದಾನೆ .ಹೀಗಾಗಿ ಹೊಸನಗರದ  ಜೆಎಂಎಫ್‌ಸಿ (JMFC)ಹಿರಿಯ ನ್ಯಾಯಾಧೀಶೆ ಪುಷ್ಪಲತಾ (Pushpalata) ಮತ್ತು ಪ್ರಧಾನ ವ್ಯವಹಾರ ನ್ಯಾಯಾಧೀಶ ರವಿಕುಮಾರ್ (Ravikumar)  ಸಮ್ಮುಖದಲ್ಲಿ ಗುರುಮೂರ್ತಿ ಮತ್ತು ಪೂರ್ಣಿಮಾ ದಂಪತಿ ಮತ್ತೆ ಹಾರ ಬದಲಾಯಿಸಿಕೊಳ್ಳುವ ಮೂಲಕ ಮತ್ತೆ ಒಂದಾಗಿದ್ದಾರೆ. ಇದರಿಂದ ವಿಚ್ಛೇದನದ ಮೂಲಕ ಅಂತ್ಯ ಕಾಣುತ್ತಿದ್ದ ಸಂಸಾರವೊಂದು ಮಗನಿಂದಾಗಿ ಮತ್ತೆ ಒಂದಾಗಿದೆ. 

Divorce: ವಿಚ್ಛೇದನದ ಹಾದಿಯಲ್ಲಿ ಈ ಎಚ್ಚರಿಕೆ ಇರಲಿ 
 

ಇತ್ತೀಚಿನ ದಿನಗಳಲ್ಲಿ ವಿದೇಶ (Abroad)ಗಳಲ್ಲಿ ಮಾತ್ರವಲ್ಲ ಭಾರತ (India) ದಲ್ಲೂ  ವಿಚ್ಛೇದನ (Divorce)ದ ಪ್ರವೃತ್ತಿ ಹೆಚ್ಚಾಗಿದೆ. ಭಾರತದಲ್ಲಿ ಮದುವೆಗೆ ಹೆಚ್ಚಿನ ಆದ್ಯತೆಯಿತ್ತು. ಆದ್ರೆ ಈಗ ಭಾರತದಲ್ಲೂ ಮದುವೆ ಸಂಬಂಧಕ್ಕೆ ಅರ್ಥವೇ ಬದಲಾಗುತ್ತಿದೆ. ಹಿರಿಯ ದಂಪತಿ ತಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ ತಮ್ಮ ದಾಂಪತ್ಯ ಕೆಡದಂತೆ ನೋಡಿಕೊಳ್ಳುತ್ತಿದ್ದರು. ಅನೇಕ ಬಾರಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೂ ಮಕ್ಕಳಿಗಾಗಿ ಒಟ್ಟಿಗೆ ಬಾಳ್ವೆ ಮಾಡ್ತಿದ್ದರು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಪ್ರೀತಿ ನೀಡುವ ಹಿನ್ನಲೆಯಲ್ಲಿ ಒಂದಾಗಿ ಬಾಳ್ವೆ ನಡೆಸಲು ಮಹತ್ವ ನೀಡುತ್ತಿದ್ದರು. ಈಗಿನ ದಂಪತಿ ಕೂಡ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಲು ಬಯಸುತ್ತಾರೆ. ಅವರಿಗೆ ತಾಯಿ ಮತ್ತು ತಂದೆಯ ಪ್ರೀತಿಯನ್ನು ನೀಡಲು ಬಯಸುತ್ತಾರೆ. ಆದರೆ ಅದೇ ಸಮಯದಲ್ಲಿ ಅವರ ಸ್ವಂತ ಸಂತೋಷವು ಅವರಿಗೆ ಮುಖ್ಯವಾಗಿದೆ. ಹಾಗಾಗಿ ಈಗ ಕೋ-ಪೇರೆಂಟಿಂಗ್ ಟ್ರೆಂಡ್ ಹೆಚ್ಚಾಗಿದೆ.

ಅನೇಕ ಕಾರಣಗಳಿಗೆ ದಂಪತಿ ವಿಚ್ಛೇದನದ ನಿರ್ಧಾರ ತೆಗೆದುಕೊಳ್ತಾರೆ. ಇಬ್ಬರೂ ಬೇರೆ ವಾಸಕ್ಕೆ ಮುಂದಾಗ್ತಾರೆ. ಆದ್ರೆ ಒಟ್ಟಿಗೆ ಮಗುವನ್ನು ಬೆಳೆಸಲು ನಿರ್ಧರಿಸುತ್ತಾರೆ. ಮಗುವಿಗೆ ತಾಯಿ ಹಾಗೂ ತಂದೆ ಇಬ್ಬರ ಪ್ರೀತಿ ಸಮನಾಗಿ ಸಿಗಬೇಕೆಂದು ಬಯಸ್ತಾರೆ. ಅದನ್ನು ಕೋ ಪೇರೆಂಟಿಂಗ್ ಎಂದು ಕರೆಯಲಾಗುತ್ತದೆ. 

ಪ್ರಣಯವಿಲ್ಲದ Co-Parenting ಜೀವನ ಹೇಗಿರುತ್ತೆ ಗೊತ್ತಾ?
 

ಅನೇಕ ಸೆಲೆಬ್ರಿಟಿಗಳು ಇದನ್ನು ಅನುಸರಿಸುತ್ತಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸುಸೇನ್  ಖಾನ್ ಹೆಸರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಆದರೆ ಮಕ್ಕಳೊಂದಿಗೆ ಒಟ್ಟಿಗೆ ಪ್ರವಾಸಕ್ಕೆ ಹೋಗುತ್ತಾರೆ ಮತ್ತು ಕುಟುಂಬದಂತೆ ಮನೆಯಲ್ಲಿ ಗುಣಮಟ್ಟದ ಸಮಯವನ್ನು ಕಳೆಯುತ್ತಾರೆ. ಲಾಕ್‌ಡೌನ್‌ನಲ್ಲಿಯೂ ಸಹ, ಸುಸೇನ್  ತನ್ನ ಮಕ್ಕಳಿಗಾಗಿ ಹೃತಿಕ್ ಮನೆಯಲ್ಲಿ ಉಳಿದಿದ್ದರು. 

Latest Videos
Follow Us:
Download App:
  • android
  • ios