Asianet Suvarna News

#Feelfree: ಅರವತ್ತರ ಅಂಕಲ್, ಇಪ್ಪತ್ತೈದರ ಯುವಕ, ಯಾರು ಹಿತವರು ನನಗೆ?

ಅರುವತ್ತು ವರ್ಷದ ಶ್ರೀಮಂತ ಬಾಸ್ ಹಾಗೂ ಹದಿಹರೆಯದ ಗೆಳೆಯ- ಇವರ ನಡುವೆ ಸಿಕ್ಕಿ ನುಗ್ಗಾದ ಮಹಿಳೆಯ ಕತೆಯಿದು.

Sexual dilemma between aged and young males among youngsters
Author
Bengaluru, First Published Jun 17, 2021, 4:56 PM IST
  • Facebook
  • Twitter
  • Whatsapp

ಪ್ರಶ್ನೆ: ನನ್ನ ಸಮಸ್ಯೆ ವಿಚಿತ್ರವಾಗಿದೆ. ನಾನು ಇಪ್ಪತ್ತೆರಡು ವರ್ಷದ ಯುವತಿ, ಕಾಲೇಜು ಮುಗಿಸಿ ಒಂದು ಸಣ್ಣ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಸಾಧಾರಣ ಕೆಲಸದಲ್ಲಿ ಇದ್ದೇನೆ. ನನ್ನ ಬಾಸ್‌ಗೆ ಅರುವತ್ತು ವರ್ಷ. ಅವರಿಗೆ ಹೆಂಡತಿಯಿಲ್ಲ, ಮಕ್ಕಳೂ ಇಲ್ಲ. ಆದರೆ ಅಪಾರ ಆಸ್ತಿಯಿದೆ. ಅವರಿಗೆ ನನ್ನನ್ನು ಕಂಡರೆ ಆಸೆ. ಒಂದೆರಡು ಬಾರಿ ತಮ್ಮ ಮನೆಗೆ ಕರೆಸಿಕೊಂಡರು. ಆಗ ನಮ್ಮ ಸಂಗವೂ ನಡೆದುಹೋಯಿತು. ಅಲ್ಲಿಂದೀಚೆಗೆ ಆಗಾಗ ಕರೆಯುತ್ತಿರುತ್ತಾರೆ. 'ನಿನ್ನನ್ನು ಬಿಟ್ಟು ಇರೋಕೆ ಆಗ್ತಾ ಇಲ್ಲ, ನನ್ನ ಮದುವೆ ಆಗ್ತೀಯಾ?' ಅಂತ ಕೇಳ್ತಾರೆ. ನಾನು ಸದ್ಯ ಯಾವ ಉತ್ತರವನ್ನೂ ನೀಡಿಲ್ಲ. ಸ್ವಭಾವತಃ ಒಳ್ಳೆಯವರೇ. ಆದರೆ ಇದರ ನಡುವೆ ಇನ್ನೊಂದು ಸಂಗತಿ ನಡೆದುಹೋಗಿದೆ. ನನ್ನ ಹಳೆಯ ಗೆಳಯನೊಬ್ಬ ಭೇಟಿಯಾಗಿದ್ದಾನೆ. ಅವನು ಪ್ರತಿಭಾವಂತ, ಆದರೆ ಬಡವ. ಈಗಿನ್ನೂ ಕಾಲೇಜು ಮುಗಿಸಿ, ಕೆಲಸ ಹುಡುಕುತ್ತಿದ್ದಾನೆ. ಅವನ ಮನೆ ಅವನ ಸಂಬಳದಲ್ಲೇ ನಡೆಯಬೇಕು. ಅವನ ಜೊತೆಗೂ ನಾನು ಕೆಲವು ಬಾರಿ ಖಾಸಗಿಯಾಗಿ ಕಳೆದಿದ್ದೇನೆ. ಅವನೂ ತುಂಬಾ ಒಳ್ಳೆಯವನು. 'ಒಳ್ಳೆಯ ಕೆಲಸ ಸಿಕ್ಕ ಕೂಡಲೇ ನಿನ್ನನ್ನು ಮದುವೆಯಾಗುತ್ತೇನೆ' ಎಂದು ಹೇಳಿದ್ದಾನೆ. ನಾನು ಉತ್ತರಿಸಿಲ್ಲ. ಸೆಕ್ಸ್‌ ಮತ್ತು ಸಾಂಗತ್ಯದ ವಿಷಯದಲ್ಲಿ ನನಗೆ ಸಂಪೂರ್ಣ ತೃಪ್ತಿ ಸಿಗುವುದು ನನ್ನ ಗೆಳೆಯನ ಜೊತೆಗೆ. ಆದರೂ ಬಾಸ್‌ನ ಶ್ರೀಮಂತಿಕೆ ಕೈಬೀಸಿ ಕರೆಯುತ್ತಿದೆ. ನಾನು ಇಬ್ಬರ ಜೊತೆಗೂ ಒಡನಾಟ ಹೊಂದಿರುವುದು ಪರಸ್ಪರರಿಗೆ ಗೊತ್ತಿಲ್ಲ. ಈಗ ಇಬ್ಬರ ನಡುವೆ ಸಿಕ್ಕಿ ನಾನು ಡೋಲಾಯಮಾನ ಆಗಿದ್ದೇನೆ. ಯಾರನ್ನು ಆಯ್ದುಕೊಳ್ಳಲಿ? ದಾರಿ ತೋರಿಸಿ. 

FeelFree: ಪಕ್ಕದ ಮನೆಯವಳ ಒಳ ಉಡುಪು ನೋಡಿದರೆ ಗಂಡನಿಗೆ ಉದ್ರೇಕ! ...

ಉತ್ತರ: ನಾನು ತೋರಿಸಿದ ದಾರಿ ನಿಮಗೆ ರುಚಿಸದೇ ಹೋಗಬಹುದು. ಆದರೂ ಹೇಳುತ್ತೇನೆ. ನೀವು ಎರಡು ದೋಣಿಗಳಲ್ಲಿ ಏಕಕಾಲಕ್ಕೆ ಕಾಲಿಡುವ ಕೆಲಸ ಮಾಡುತ್ತಿದ್ದೀರಿ. ಇದು ಒಳ್ಳೆಯದಲ್ಲ. ನಿಮ್ಮ ಬಾಸ್‌ ಒಳ್ಳೆಯವರಿರಬಹುದು; ಅವರಲ್ಲಿ ತುಂಬಾ ಶ್ರೀಮಂತಿಕೆಯೂ ಇರಬಹುದು. ಆದರೆ ಅವರು ನಿಮ್ಮ ಜೀವನಪೂರ್ತಿ ನಿಮ್ಮ ಜೊತೆಗೆ ಇರಲಾರರು. ಅವರ ಆಯುಷ್ಯ ಇನ್ನು ಹೆಚ್ಚೆಂದರೆ, ಆರೋಗ್ಯ ಚೆನ್ನಾಗಿದ್ದರೆ, ಇಪ್ಪತ್ತು ವರ್ಷವಿದ್ದೀತು. ಆದರೆ ಈಗಿನ್ನೂ ನಿಮಗೆ ನಿಗಿನಿಗಿ ಪ್ರಾಯ. ನಿಮ್ಮ ದೇಹಕ್ಕೂ ನಿಮ್ಮ ಮನಸ್ಸಿಗೂ ತುಂಬು ಸಾಂಗತ್ಯ ಬೇಕು. ಸೆಕ್ಸ್ ಅನ್ನು ಶ್ರೀಮಂತಿಕೆಯ ಮುಂದೆ ಕಡೆಗಣಿಸಬೇಡಿ. ಕೆಲವು ಮಂದಿ ಮುದಿ ಶ್ರೀಮಂತರನ್ನು ಮದುವೆಯಾದವರು, ಒಂದೇ ವರ್ಷದಲ್ಲಿ ತರುಣ ಜೊತೆಗೆ ಓಡಿಹೋದದ್ದೂ ಇದೆ. ಯಾಕೆಂದರೆ ಸೆಕ್ಸ್ ಕೂಡ ದಾಂಪತ್ಯವನ್ನು ಉಳಿಸುವಲ್ಲಿ ಪ್ರಮುಖವೇ. ನಿಮಗೆ ಮೂವತ್ತು ತುಂಬುವಾಗ, ಇನ್ನೂ ಸೆಕ್ಸ್ ಬೇಕು ಬೇಕು ಎನ್ನಿಸುವ ಹಂತದಲ್ಲೇ ನಿಮ್ಮ ಬಾಸ್‌ ವೃದ್ಧರಾಗುತ್ತಾರೆ; ಆಗ ಅವರು ನಿಮಗೆ ಯಾವ ಬಗೆಯ ಸುಖವನ್ನೂ ನೀಡಲಾರರು. ನೀವೇ ಅವರ ಆರೈಕೆ ಮಾಡಬೇಕಾದೀತು. ಇದಿಷ್ಟು ಸೆಕ್ಸ್‌ಗೆ ಸಂಬಂಧಿಸಿದಂತೆ.


ಒಂದು ವೇಳೆ ನೀವು ಬಾಸ್‌ ಅನ್ನು ಮದುವೆಯಾಗಿ, ನಿಮ್ಮ ಗೆಳೆಯನ ಜತೆಗೆ ಸಂಪರ್ಕ ಇಟ್ಟುಕೊಂಡಿರಲು ಬಯಸಿದ್ದರೂ ಅದೂ ತಪ್ಪೇ. ನಮ್ಮ ಕೌಟುಂಬಿಕ ರೀತಿರಿವಾಜುಗಳಲ್ಲಾಗಲೀ, ಕಾನೂನಿನಲ್ಲಾಗಲೀ ಇಂಥ ನಡವಳಿಕೆಗೆ ಸ್ಥಾನವಿಲ್ಲ; ಇದಕ್ಕೆ ಒಳ್ಳೆಯ ಹೆಸರೂ ಇಲ್ಲ. ಕದ್ದು ಮುಚ್ಚಿ ನೀವು ಈ ಗೆಳೆತನವನ್ನು ಮುಂದುವರಿಸಬೇಕಾಗುತ್ತದೆ; ಮನಶ್ಶಾಂತಿ ನೆಮ್ಮದಿಗಳು ಹಾಳಾಗುತ್ತವೆ. ಬಾಸ್‌ಗೆ ಗೊತ್ತಾದರೆ ಇನ್ನೊಂದು ಬಗೆಯ ಕಠಿಣ ಪರಿಸ್ಥತಿ. 

ನೀವು ಗೆಳೆಯನನ್ನು ಮದುವೆಯಾಗಲು ನಿರ್ಧರಿಸಿದ್ದು, ಆದರೆ ಇನ್ನೂ ಬಾಸ್‌ಗೆ ಜೊತೆಗೆ ದೈಹಿಕ ಸಂಪರ್ಕವನ್ನು ಮುಂದುವರಿಸಿದ್ದರೆ ಅದೂ ತಪ್ಪೇ. ಅದಕ್ಕೂ ಸಮಾಜದಲ್ಲಿ ಒಳ್ಳೆಯ ಹೆಸರು ಇಲ್ಲ. ಇಂಥ ಎರಡು ದೋಣಿಯ ಪ್ರಯಾಣವನ್ನು ಮುಂದುವರಿಸಬೇಡಿ. ಯಾವುದಾದರೂ ಒಂದು ನಿರ್ಧಾರಕ್ಕೆ ಕೂಡಲೇ ಬನ್ನಿ; ಹಾಗೂ ಇನ್ನೊಂದು ಕಡೆಯ ಸಂಪರ್ಕವನ್ನು ಕೂಡಲೇ ಕಡಿದುಕೊಳ್ಳಿ. ಇದು ನಿಮ್ಮ ದೇಹ- ಮನಸ್ಸುಗಳೆರಡಕ್ಕೂ ಒಳ್ಳೆಯದು. ನಾನು ನಿಮ್ಮ ಜಾಗದಲ್ಲಿ ಇದ್ದಿದ್ದರೆ, ನನ್ನದೇ ಪ್ರಾಯದ ಯುವಕನ ಜೊತೆಗೆ ಸಂಸಾರಕ್ಕೆ ಮುಂದಾಗುತ್ತಿದ್ದೆ. 

#Feelfree: ವೀರ್ಯದ್ರವ ಸಾಕಷ್ಟಿದೆ, ಆದರೆ ವೀರ್ಯವಿಲ್ಲ! ...
 

ಪ್ರಶ್ನೆ: ನಾನು ಅವಿವಾಹಿತ, ವಯಸ್ಸು ಮೂವತ್ತು. ದಿನಕ್ಕೆ ಎರಡು ಬಾರಿ ಹಸ್ತಮೈಥುನ ಮಾಡುತ್ತೇನೆ. ಇದರಿಂದ ಸಮಸ್ಯೆ ಇದೆಯೇ?
ಉತ್ತರ: ಉದ್ರೇಕಗೊಂಡಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ. ಅದನ್ನೊಂದು ಚಟವಾಗಿಸಿಕೊಳ್ಳಬೇಡಿ.  

#Feelfree: ಅವಳಿಗೆ ಸಡನ್ನಾಗಿ ಮೂಡ್ ಹೋಗುತ್ತೆ, ಏನ್ಮಾಡ್ಲೀ... ...
 

Follow Us:
Download App:
  • android
  • ios